Connect with us

Mandya

ಗಂಧದ ಮರ ಕಡಿದು ಕದ್ದೊಯ್ದ ಖದೀಮರು

Published

on

ಮಂಡ್ಯ : ಖದೀಮರ ತಂಡವೊಂದು ಶಾಲಾ ಆವರಣದಲ್ಲಿ ಬೆಳೆಸಲಾಗಿದ್ದ ಗಂಧದ ಮರಗಳನ್ನು‌ ಕಡಿದು ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಚಾಮುಂಡೇಶ್ವರಿ ಬಡಾವಣೆಯ 22 ಸೆಕೆಂಡ್ ಸೆಂಚುರಿ ಪಬ್ಲಿಕ್ ಶಾಲಾ ಆವರಣದಲ್ಲಿ ಬೆಳೆಸಲಾಗಿದ್ದ ಸುಮಾರು 5 ಗಂಧದ ಮರಗಳನ್ನು‌ ರಾತ್ರೋ ರಾತ್ರಿ ಕಡಿದು ಕದ್ದೊಯ್ದಿದ್ದಾರೆ.

ಸುಮಾರು ಐದಾರು ಮಂದಿಯ ಖದೀಮರ ತಂಡ ಶಾಲಾ ಕಾವಲುಗಾರರನ್ನ ಬೆದರಿಸಿ ಗಂಧಧ ಮರಗಳ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಗಂಧದ ಮರಗಳು ಸುಮಾರು 10 ವರ್ಷದ ಮರಗಳಾಗಿದ್ದು, ಈ‌ ಸಂಬಂಧ ಮಂಡ್ಯ ಪಶ್ಚಿಮ ಠಾಣಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Mandya

ಮದ್ದೂರು ಬಳಿ ಭೀಕರ ಅಪಘಾತ :  ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Published

on

ಮದ್ದೂರು : ಮದ್ದೂರು ಬಳಿ ಭೀಕರ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ಪಲ್ಟಿ ಹೊಡೆದು 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ಜರುಗಿದೆ.

ಮಳವಳ್ಳಿಯ ಶ್ರೀ ಕ್ಷೇತ್ರ ಶಿಂಷಾ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುವಾಗ ಮದ್ದೂರು ತಾಲೂಕಿನ ತೈಲೂರು ಕೆರೆ ಸಮೀಪ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ತೇರಳುವಾಗ ರಸ್ತೆ ಬದಿ ಇದ್ದ ಸಿಮೆಂಟ್ ಬ್ಲಾಕ್ ಗೆ ಡಿಕ್ಕಿ ಹೊಡೆದು ಬಸ್ ನ ಹಿಂಬದಿ ಆಕ್ಸಲ್ ಕಟ್ಟಾಗಿ ಪಲ್ಟಿ ಹೊಡೆದಿದೆ.

ಬಸ್ ನಲ್ಲಿದ್ದ 30 ಕ್ಕೂ ಹೆಚ್ಚು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತಕ್ಷಣವೇ ಹೆದ್ದಾರಿ ವಾಹನ ಸವಾರರು, ಸ್ಥಳೀಯರು ಹಾಗೂ ಮದ್ದೂರು ಸಂಚಾರ ಪೊಲೀಸರು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆದು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 

Continue Reading

Mandya

ಕಾವ್ಯಗಳ ಮಹತ್ವವನ್ನು ಯುವ ಜನಾಂಗ ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸಬೇಕು : ಪ್ರೊ.ಶಂಕರೇ ಗೌಡ

Published

on

ಮಂಡ್ಯ: ಪ್ರಾಚೀನ ಶ್ರೇಷ್ಠ ಕಲೆಯಾದ ಗಮಕ ಸಾಹಿತ್ಯ ದ ಮಹತ್ವವನ್ನು ಇವತ್ತು ಜನರಿಗೆ, ವಿದ್ಯಾರ್ಥಿ ಗಳಿಗೆ ತಲುಪಿಸುವ ಕ್ರಮದ ಬಗ್ಗೆ ಕನ್ನಡ ಪರ ಹೋರಾಟ ಸಂಘಟನೆಗಳು ಮತ್ತು ಸಾಹಿತ್ಯ ಪ್ರೇಮಿಗಳು ತಮ್ಮನ್ನು ಕಾಳಜಿಯಿಂದ ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಹೆಚ್ಚಾಗಿದೆ ಎಂದು ನಿವೃತ್ತ ಪ್ರಾಶುಪಾಲ ಪ್ರೊ. ಎಸ್. ಬಿ. ಶಂಕರೇ ಗೌಡ ಅಭಿಪ್ರಾಯಪಟ್ಟರು

 

ನಗರದ ಕರ್ನಾಟಕ ಸಂಘದ ಕೆ. ವಿ. ಶಂಕರೇಗೌಡ ಸಭಾಂಗಣ ದಲ್ಲಿ ಹಿರಿಯ ಗಮಕಿ ಗಾಯಕ ಕಲಾಶ್ರೀ ವಿದ್ಯಾಶಂಕರ್ ನೇತೃತ್ವದ ಶ್ರೀ ರಂಜಿನಿ ಕಲಾವೇದಿಕೆ, ಕರ್ನಾಟಕ ಸಂಘ, ಪುತಿನ ಟ್ರಸ್ಟ್, ಜೈ ಕರ್ನಾಟಕ ಪರಿಷತ್, ಎಲ್ಲರೂಳಗೊಂದಾಗೂ, ಮಂಕುತಿಮ್ಮ ಟ್ರಸ್ಟ್, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ನ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ ವಿಶಿಷ್ಟ ಕಾವ್ಯಗಳ ಗಮಕ ಸಂಭ್ರಮ ಕಾರ್ಯಕ್ರಮ ದ ಸಮಾರೋಪ ಭಾಷಣ ದಲ್ಲಿ ಅಭಿಪ್ರಾಯಿಸಿದರು.

ಕರ್ನಾಟಕ ಕದ ಸಾಹಿತ್ಯ ಸಂಪತ್ತು, ಸಂಸ್ಕೃತಿ ಅತ್ಯಂತ ಶ್ರೇಷ್ಠ ವಾಗಿದ್ದು ಗಮಕ ಕಲೆಯ ಮೂಲಕ ಸಾಹಿತ್ಯದ ಸೊಬಗು, ಮಹತ್ವದ ಕುರಿತು ಎಲ್ಲರನ್ನು ತಲುಪಿ ಎಲ್ಲಸ್ರು ಕನ್ನಡ ಭಾಷೆಯ ಬಗ್ಗೆ ಜಾಗೃತಿ, ಅಭಿಮಾನ ಬೆಳೆಸಿಕೊಳ್ಳಬೇಕಾಗಿದೆ.

ಮುಂದುವರಿದ ತಾಂತ್ರಿಕ ಯುಗದಲ್ಲಿ ಓದುವ, ಆಲಿಸುವ ಆಸ್ವಾದಿಸುವ.ಪ್ರವೃತ್ತಿ, ತಾಳ್ಮೆ ಇಂದಿನ ಯುವ ಜನಾಂಗಕ್ಕೆ ವಿದ್ಯಾರ್ಥಿಗಳಿಗೆ ಇಲ್ಲವಾಗಿದೆ ಎಂದು ಬೇಸರಿಸಿದ ಅವರು ಇದನ್ನು ಹೋಗಲಾಡಿಸಲು ಮನೆ ಮನೆಗಳ್ಳಲ್ಲಿ ಗಮಕ, ಹಾಗೂ ಸಾಹಿತ್ಯ ಸಂಬಂಧಿತ ಕಾರ್ಯಕ್ರಮ ಗಳನ್ನು ಆಯೋಜಿಸಿ ಪೋಷಕರನ್ನು ಮತ್ತು ವಿದ್ಯಾರ್ಥಿ ಗಳಲ್ಲಿ ಆಸಕ್ತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರೀ ರಂಜಿನಿ ಕಲಾ ವೇದಿಕೆ ಯ ಕಾಳಜಿ ಮೆಚ್ಚುವಂತದ್ದು ಇಂತಹ ಕಾರ್ಯಕ್ರಮ ಗಳಿಗೆ ಕರ್ನಾಟಕ ಸಂಘ ಒತ್ತಾಸೆ ಯಾಗಿ ನಿಲ್ಲ ಲಿದೆ ಎಂದರು.

 

ಸಮಾರಂಭದ ಅಧ್ಯಕ್ಷತೆಯನ್ನು ಜೈ ಕರ್ನಾಟಕ ಪರಿಷತ್ ನ ರಾಜ್ಯಾಧ್ಯಕ್ಷ ಡಾ.ಎಸ್. ನಾರಾಯಣ್ ವಹಿಸಿದ್ದರು.

ಎರಡನೇ ದಿನವಾದ ಶನಿವಾರ ರಾಜ್ಯದ 5 ಜಿಲ್ಲೆಗಳಿಂದ ಆಗಮಿಸಿದ್ದ ಖ್ಯಾತ ಗಮಕಿಗಳಿಂದ ತುಳಸಿ ರಾಮಾಯಣ, ಯುಗ ಸಂಧ್ಯಾ,ದಶಾವತಾರ, ಮಂಕುತಿಮ್ಮ ನ ಕಗ್ಗ ರನ್ನ ನ ಗದಾ ಯುದ್ಧ, ಕನಕದಾಸರ ಕೃತಿ ಗಾಯನ, ಗಿಟಾರ್ ವಾ ದನ, ವಿದ್ಯಾರ್ಥಿ ಗಳು ನಡೆಸಿಕೊಟ್ಟ ಜೈಮಿನಿ ಭಾರತದ ವೀರ ಲವ ವಾಚನ ವ್ಯಾ ಖ್ಯಾನ ಕಾರ್ಯಕ್ರಮ ಗಳು ಸೇರಿದ್ದ ಅಪಾರ ಸಂಖ್ಯೆಯ ರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಇದೇ ಸಂದರ್ಭದಲ್ಲಿ ಖ್ಯಾತ ಗಮಕಿ ವ್ಯಾಖ್ಯಾನ ಕಾರ ಡಾ. ಕೃ. ಪಾ. ಮಂಜುನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

 

ವೇದಿಕೆಯ ಅಧ್ಯಕ್ಷ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿದರು. ನಾರಾಯಣ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Continue Reading

Mandya

 ಜೈವಿಕ ಇಂಧನ ಪ್ರಾತ್ಯಕ್ಷಿಕೆ ಮಳಿಗೆ ಉದ್ಘಾಟಿಸಿದ ಡಾ.ನಿರ್ಮಲಾನಂದ ಸ್ವಾಮೀಜಿ

Published

on

ಮಂಡ್ಯ : ಅದಿಚುಂಚನಗಿರಿ ಮಠದ ಜಗದ್ಗುರು ಡಾ.ನಿರ್ಮಲಾನಂದ ಸ್ವಾಮೀಜಿ ಅವರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಮಂಡ್ಯ ದಲ್ಲಿ ಆಯೋಜಿಸಲಾಗಿರುವ ಕೃಷಿ ಮೇಳ-2025, ಮಂಡಳಿ, ಜೈವಿಕ ಇಂಧನ ಉದ್ಯಾನ, ಹಾಸನ, ಜೈವಿಕ ಇಂಧನ ಮಾಹಿತಿ, ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ, ಪಿಇಎಸ್ ಮಂಡ್ಯ ಸಹಯೋಗದಲ್ಲಿ ನಿರ್ಮಿಸಿರುವ ಜೈವಿಕ ಇಂಧನ ಪ್ರಾತ್ಯಕ್ಷಿಕೆ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಗಳು ತಮ್ಮ ಆಶೀರ್ವಚನದಲ್ಲಿ ಮಾತನಾಡಿ, ಆಹಾರ ಮತ್ತು ಇಂಧನ ಭದ್ರತೆಯು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು ಕೃಷಿಯು ಜೈವಿಕ ಇಂಧನಗಳ ಉತ್ಪಾದನೆಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುತ್ತಿದೆ ಎಂದು ತಿಳಿಸುತ್ತಾ ಕೃಷಿ ಹೇಗೆ ಲಾಭದಾಯಕವಾಗಿದೆ ಎಂಬುದಕ್ಕೆ ಬೆಂಗಳೂರಿನ ಒರ್ವ ಐಪಿಎಸ್‌ ಅಧಿಕಾರಿಯ ತಾಯಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು  ನಿರೂಪಿಸಿರುವುದನ್ನು ಉದಾಹರಿಸಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ   ಎಸ್ ಈ  ಸುಧೀಂದ್ರ ಅವರು ನೂತನ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಪ್ರಪ್ರಥಮ ಕೃಷಿ ಮೇಳ – 2025 ರ ಘೋಷವಾಕ್ಯ ‘ ಸಮಗ್ರ ಕೃಷಿಯಿಂದ ಸುಸ್ಥಿರತೆ’ ಈ ಘೋಷ ವಾಕ್ಯವು ಕೃಷಿಯು ಜೈವಿಕ ಇಂಧನ ಕ್ಷೇತ್ರದ  ಬೆಳವಣಿಗೆಯಲ್ಲಿ ಪೂರಕವಾಗಿರುವುದರ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು. ರಾಷ್ಟ್ರದ ಜೈವಿಕ ಇಂಧನ ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆಯು 1939 ರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟಿಷ್ ವಸಾಹತುವಾಗಿದ್ದ ಬಾಂಬೆ ಪ್ರೆಸಿಡೆನ್ಸಿ ಎಂದು ಕರೆಯಲ್ಪಡುತ್ತಿದ್ದ ಮುಂಬೈ ಯಲ್ಲಿನ ಸಾರ್ವಜನಿಕ ಸಾರಿಗೆ ರೆಡ್ ಬಸ್ ಗಳಿಗೆ ಎಥನಾಲ್ ಪೂರೈಕೆ ಮಾಡಿದ್ದನ್ನು ಪ್ರಸ್ಥಾಪಿಸಿ ಇಂದು ರಾಷ್ಟ್ರಮಟ್ಟದಲ್ಲಿ ಪೆಟ್ರೋಲ್ ನಲ್ಲಿ ಶೇ 20ರ ಮಿಶ್ರಣ ಗುರಿಯನ್ನು 2025 ರಲ್ಲಿ ಸಾಧಿಸಿರುವುದಕ್ಕೆ  ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೊಡುಗೆಯು ಅಮೂಲ್ಯವಾಗಿದೆ ಎಂದು ತಿಳಿಸಿದರು.

ಜೈವಿಕ ಇಂಧನಗಳ ಕುರಿತ ಪ್ರಾತ್ಯಕ್ಷಿಕೆ ಮಳಿಗೆಯು ಮಂಡಳಿಯ ಪ್ರಸ್ತುತ ಚಾಲ್ತಿಯಲ್ಲಿರುವ ಜೈವಿಕ ಇಂಧನ ಕಾರ್ಯ ಯೋಜನೆಗಳು ಹಾಗೂ ಉದ್ದೇಶಿತ ನೂತನ ಜೈವಿಕ ಇಂಧನ ನೀತಿ ಮತ್ತು ಕಾರ್ಯಯೋಜನೆಗಳ ಅನುಷ್ಠಾನದ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು. ಮಂಡಳಿಯ ಅಧ್ಯಕ್ಷರು ಮಂಡಳಿ ಕೈಗೊಂಡಿರುವ ಜೈವಿಕ ಇಂಧನ ಕಾರ್ಯಕ್ಷೇತ್ರಗಳ ಕುರಿತು ಅರಿವು, ಜಾಗೃತಿ ಮತ್ತು ಪ್ರಾತ್ಯಕ್ಷಿಕೆಗಳು ಮುಂದಿನ ದಿನಗಳಲ್ಲಿ ಜೈವಿಕ ಇಂಧನಗಳ ಉತ್ಪಾದನೆಯಲ್ಲಿ ಪ್ರಮುಖವಾಗಿ ಅಗತ್ಯ ಸಂಪನ್ಮೂಲಗಳ ಶೇಖರಣೆ, ಸಂಗ್ರಹಣೆ, ಸಾಗಣೆಯಲ್ಲಿ ರೈತರು, ಉತ್ಪಾದನಾ ಘಟಕಗಳ ನಿರ್ಮಾಣದಲ್ಲಿ ಬಂಡವಾಳ ಹೂಡಿಕೆದಾರರು ಮತ್ತು ಬಳಕೆದಾರರ ನಡುವೆ ಸಹಯೋಗ ಏರ್ಪಡಿಸುವ ಸೇತುವೆಗಳಾಗಲಿವೆ ಎಂದು ಅಭಿಪ್ರಾಯ ಪಟ್ಟರು.

ಈ ಪ್ರಪ್ರಥಮ ಕೃಷಿ ಮೇಳದಲ್ಲಿ ಆಯೋಜಿಸಲಾಗಿರುವ ಜೈವಿಕ ಇಂಧನ ಮಳಿಗೆಯು ಇಡೀ ರಾಜ್ಯದ ರೈತರು ಹಾಗೂ ದೇಶ ವಿದೇಶಗಳಲ್ಲಿನ ಬಂಡವಾಳ ಹೂಡಿಕೆದಾರರಿಗೆ ಈ ಹಸಿರು ಇಂಧನ ಕ್ಷೇತ್ರದಲ್ಲಿ ಭಾಗಿಯಾಗಿ, ಈ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣದಲ್ಲಿ ಪಾಲುದಾರರಾಗಲಿ ಎಂದು ಆಶಿಸುತ್ತಾ, ಈ ಕೃಷಿ ಮೇಳ ಹಾಗೂ ಜೈವಿಕ ಇಂಧನ ಮಳಿಗೆಯ ಉದ್ದೇಶಗಳು ಸಫಲವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್‌, ಸೂಪರಿಟೆಂಡೆಂಟ್ ಆಫ್‌ ಪೋಲಿಸ್‌‌ ಮಲ್ಲಿಕಾರ್ಜುನ್‌ ಬಲದಂಡಿ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್.ಎಲ್‌, ಕ.ಸ.ಸೇ, ಜೈವಿಕ ಇಂಧನ ಉದ್ಯಾನದ ಸಂಯೋಜಕ ಡಾ.ಎ.ಸಿ.ಗಿರೀಶ್‌,  ಬಿಆರ್‌ ಐಡಿಸಿ ಸಂಯೋಜಕರಾದ ಡಾ.ರೂಪೇಶ್‌ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Continue Reading

Trending

error: Content is protected !!