Mysore
ಇಂದು ಗಜಪಡೆಗೆ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು

ಮೈಸೂರು:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲಿಯೂ ಭರ್ಜರಿ ಸಿದ್ಧತೆಗಳು ನಡೆದಿದ್ದು, ಇಂದು ಗಜಪಡೆಗೆ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಿತು.
ವಸ್ತುಪ್ರದರ್ಶನ ಮೈದಾನದ ವಾಹನ ನಿಲುಗಡೆ ಜಾಗದಲ್ಲಿ ಇಂದು ತಾಲೀಮು ನಡೆಸಲಾಯಿತು. ಏಳು ಫಿರಂಗಿ ಗಾಡಿಗಳಿಂದ ಸಿಆರ್ ಸಿಬ್ಬಂದಿಗಳು ಕುಶಾಲತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21ಕುಶಾಲತೋಪು ಸಿಡಿಸಿ ತಾಲೀಮು ನಡೆಸಲಾಯಿತು. ದಸರಾ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ಈ ಫಿರಂಗಿ ಸಿಡಿಸುವ ಕಾರ್ಯಕ್ರಮ ನಡೆಯಲಿದ್ದು, ಆನೆಗಳು, ಕುದುರೆಗಳು ಬೆದರದೆ ಸುಗಮವಾಗಿ ಸಾಗಲಿ, ಅವುಗಳಿಗೆ ಸಿಡಿಮದ್ದಿನ ಶಬ್ದ ಅಭ್ಯಾಸವಾಗಲಿ ಎಂಬ ದೃಷ್ಟಿಯಿಂದ ತಾಲೀಮು ನಡೆಸಲಾಗುತ್ತದೆ.
Mysore
ಎಚ್.ಎನ್. ವಿಜಯ್ ರವರ 51 ನೇ ವರ್ಷದ ಹುಟ್ಟುಹಬ್ಬ ಸಂತಸ ತಂದಿದೆ: ಲಕ್ಕಿಕುಪ್ಪೆ ಸುಬ್ಬೇಗೌಡ

ವರದಿ: ಎಸ್. ಬಿ.ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: ಹರದನಹಳ್ಳಿ ಎನ್. ವಿಜಯ್ ರವರ 51 ನೇ ವರ್ಷದ ಹುಟ್ಟು ಹಬ್ಬ, ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಲಕ್ಕಿಕುಪ್ಪೆ ಸುಬ್ಬೇಗೌಡ ತಿಳಿಸಿದ್ದಾರೆ.
ಮೈಸೂರು ಮುಡಾ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಅವರು ಹಾಂಗ್ ಕಾಂಗ್ ನಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕೃಷಿಕ ಪ್ರಶಸ್ತಿಗೆ ಭಾಜನ ರಾಗಿರುವುದು ಹೆಮ್ಮೆಯ ವಿಷಯವಾಗಿದೆ. 500 ಕ್ಕೂ ಅಧಿಕ ನಿರುದ್ಯೋಗ ಯುವಕ, ಯುವತಿಯರಿಗೆ ಕೆಲಸ ನೀಡಿ, ಅವರ ಕುಟುಂಬ ನಿರ್ವಹಣೆಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.
ಬಡ ಜನತೆಗೆ ಹಣ ಸಹಾಯ ಮಾಡಿ ಬಡವರ ಬಂದು ಆಗಿರುವ ಎಚ್.ಎನ್. ವಿಜಯ್ ಅವರು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡಿ ಈ ಊರಿನ ಕೀರ್ತಿಯನ್ನು ರಾಜ್ಯವೇ ಮೆಚ್ಚುವಂತೆ ಮಾಡಲಿ ಎಂದರು.
ಜುಲೈ .16 ರಂದು ನಡೆಯಲಿರುವ ಅವರ ಜನ್ಮ ದಿನದ ಪ್ರಯುಕ್ತ ಹರದನಹಳ್ಳಿ ಗ್ರಾಮದಲ್ಲಿ ಸೀಮಂತ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ ಅನ್ನ ಸಂತರ್ಪಣೆ, ಆರೋಗ್ಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದು ವಿಶೇಷ ವಾಗಿದೆ ಎಂದು ತಿಳಿಸಿದರು.
Mysore
ಎಚ್.ಎನ್.ವಿಜಯ್ ಹುಟ್ಟು ಹಬ್ಬ: ಹೊಸದುರ್ಗ ಶ್ರೀ ಭಗೀರಥ ಪೀಠದ ಡಾ. ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಪರಿಶೀಲನೆ

ವರದಿ: ಎಸ್. ಬಿ. ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: ಮೈಸೂರುನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಅವರ 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ಧತೆಯನ್ನು ಹೊಸದುರ್ಗ ಶ್ರೀ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಅವರು ಶನಿವಾರ ಪರಿಶೀಲಿಸಿದರು.
ವಿಜಯ್ ಅವರ ಹುಟ್ಟೂರು ತಾಲ್ಲೂಕಿನ ಹರದನಹಳ್ಳಿಯಲ್ಲಿ ನಡೆಯುತ್ತಿರುವ ಜನ್ಮದಿನೋತ್ಸವ ಕಾರ್ಯಕ್ರಮದ ಪೆಂಡಾಲ್, ಪಾರ್ಕಿಂಗ್, ಊಟದ ಸ್ಥಳ, ವೇದಿಕೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಬರುವಂತಹ ಎಲ್ಲರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ಮುಖಂಡರಾದ ಮಿರ್ಲೆ ರಾಜೀವ್, ಎಲ್ಐಸಿ ನಿಂಗಪ್ಪ, ವೆಂಕಟೇಶ್, ಕೆ.ಟಿ.ಮೋಹನ್ ಕುಮಾರ್, ಹೆಚ್.ಜೆ.ಗೋಪಾಲ್, ಪೊಲೀಸ್ ಬಸವೇಗೌಡ, ತಿಮ್ಮೇಗೌಡ, ಡಾಲ್ಪಿ, ಎಸ್. ಆರ್.ರವಿಕುಮಾರ, ಲಕ್ಷ್ಮೀಶ ಸೇರಿದಂತೆ ಹಲವರು ಇದ್ದರು.
Mysore
ಜು.14ಕ್ಕೆ ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ 200 ನೂತನ ಬಸ್ ಲೋಕಾರ್ಪಣೆ: ಡಾ.ಪುಷ್ಪಾ ಅಮರನಾಥ್

ಮೈಸೂರು: ನಮ್ಮ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೂ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಇದೊಂದು ದೊಡ್ಡ ಮೈಲಿಗಲ್ಲಾಗಿದ್ದು, ಈ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಜು.14 ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ 200 ನೂತನ ಬಸ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ನಮ್ಮ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರ ಜಿಲ್ಲಾ ತಾಲೂಕು ಮಟ್ಟದಲ್ಲಿ 5 ಶತಕ ಮಹಿಳಾ ಸಂಭ್ರಮ ಆಚರಿಸುತ್ತಿದೆ. ನಮ್ಮದು ಮೊದಲೇ ಬಡವರ ಪರ ಮಹಿಳೆಯರ ಪರವಾದ ಸರ್ಕಾರ. ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ಸ್ವಾತಂತ್ರ್ಯ ಅನುಭವಿಸುವ ಅವಕಾಶವನ್ನು ನಮ್ಮ ಸರ್ಕಾರ ನೀಡಿದೆ. ಹಾಗಾಗಿ ಇದೇ ಸೋಮವಾರ(ಜು.14) ದಂದು ಈ ಯಶಸ್ಸನ್ನು ಸಿಹಿ ಹಂಚಿ ಮಹಿಳೆಯರೊಂದಿಗೆ ಪ್ರಯಾಣಿಸಿ ಸಂಭ್ರಮಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮೈಸೂರಲ್ಲಿ ಶಕ್ತಿ ಯೋಜನೆಗೆ 776.8 ಕೋಟಿ ರೂ. ಹಣ ವ್ಯವವಾಗಿದೆ. ರಾಜ್ಯದಲ್ಲಿ 12000,733.80 ಕೋಟಿ ರೂ. ಹಣ ವ್ಯಯವಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಇಡೀ ದೇಶದಲ್ಲೇ ಯಾವ ಸರ್ಕಾರವೂ ನೀಡಿಲ್ಲ. ಈ ಸಂಭ್ರಮದ ಹಿನ್ನೆಲೆಯಲ್ಲಿ ಜುಲೈ. 14 ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ ನೂತನ ಸಾರಿಗೆ ಬಸ್‌ಗಳನ್ನು ಸಚಿವ ರಾಮಲಿಂಗ ರೆಡ್ಡಿ ಅವರು ಮೈಸೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮ ನಗರ ಬಸ್ ನಿಲ್ದಾಣದಲ್ಲಿ ಮೊದಲ ಹಂತದಲ್ಲಿ 200 ಬಸ್ ಲೋಕಾರ್ಪಣೆ ಆಗಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
-
Special11 hours ago
ಸೃಷ್ಟಿಯ ನಿಯಮವನ್ನು ಮೀರುವುದೆಂದರೆ ಇದೇ….?
-
Chamarajanagar5 hours ago
ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ
-
Chamarajanagar11 hours ago
ಮಹಿಳಾ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ
-
Hassan6 hours ago
ಮುಸುಕಿನ ಜೋಳಕ್ಕೆ ಬಿಳಿ ಸುಳಿ ರೋಗ: ರೈತರಿಗೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ ಎ.ಎಸ್.ಪಾಟೀಲ್ ನಡಹಳ್ಳಿ
-
Mysore7 hours ago
ಮುಖ್ಯಮಂತ್ರಿ ಬದಲಾವಣೆ ವಿಚಾರ| ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ: ಎಚ್.ಸಿ.ಮಹದೇವಪ್ಪ
-
Mysore7 hours ago
ಸರ್ಕಾರದ ಸಾಧನೆಗಳ ಸಮಾವೇಶ, ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ ಎಚ್.ಸಿ.ಮಹದೇವಪ್ಪ
-
Kodagu4 hours ago
ಬಂದೂಕು ವಿನಾಯಿತಿ ಪ್ರಮಾಣ ಪತ್ರ : ಕೊಡವ ಜನಾಂಗೀಯ ಪ್ರಮಾಣ ಪತ್ರ ಪಡೆಯಲು ಸಿಎನ್ಸಿ ಸಲಹೆ
-
Hassan5 hours ago
ಹೆಣ್ಣಿನ ವ್ಯಕ್ತಿತ್ವ ಪ್ರತಿಪಾದಿಸುವ ವಕ್ತಿತ್ವದವರು ನಮ್ಮ ಜೊತೆ ಇರುವುದೇ ಒಂದು ಹೆಮ್ಮೆಯ ವಿಷಯ: ಕೆ.ಎಸ್. ಲತಾ ಕುಮಾರಿ