Kodagu
ವಿರಾಜಪೇಟೆ ರೋಟರಿ ವತಿಯಿಂದ ಶನಿವಾರ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ
ಮಡಿಕೇರಿ : ವಿರಾಜಪೇಟೆ ರೋಟರಿ ಸಂಸ್ಥೆಯ ವತಿಯಿಂದ ಮೇ 18 ರಂದು ಶನಿವಾರದಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ
ವಿರಾಜಪೇಟೆ ರೋಟರಿ ಶಾಲೆಯಲ್ಲಿ ( ವಿರಾಜಪೇಟೆ ತಾಲೂಕು ಕಚೇರಿ ಬಳಿ) ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಿಬಿರ ನಡೆಯಲಿದೆ, ಪರಿಣಿತ ವೈದ್ಯರಾದ ಡಾ. ರಘುನಾಥ್ , ಎಂ. ಎಸ್. ಬೆಳ್ಯಪ್ಪ, ಡಾ. ರವಿ, ಡಾ. ಸುನಿತಾ, ಡಾ. ಸಾಗರಿಕ, ಡಾ. ನಿತ್ಯಾನಂದ ತಪಾಸಣೆ ಮತ್ತು ಚಿಕಿತ್ಸಾ ಸಲಹೆ ನೀಡಲಿದ್ದಾರೆ ಎಂದು ವಿರಾಜಪೇಟೆ ರೋಟರಿ ಅಧ್ಯಕ್ಷರಾದ ಎಂ. ಎಂ. ಬನ್ಸಿ ಪೂವಣ್ಣ, ಬೆಂಗಳೂರು ಗ್ಲೋಬಲ್ ಫೌಂಡೇಶನ್ ಟ್ರಸ್ಟಿ ಕನ೯ಲ್ ಸಿ. ಎ. ಅಯ್ಯಪ್ಪ ತಿಳಿಸಿದ್ದಾರೆ.

ಕ್ಯಾನ್ಸರ್ ತಪಾಸಣೆ ಅಥವಾ ಚಿಕಿತ್ಸೆಗಾಗಿ ಶಿಬಿರಕ್ಕೆ ಬರುವವರು ಅವರಿಗೆ ಸಂಬಂಧಿಸಿದ ವೈದ್ಯಕೀಯ ಮಾಹಿತಿ ಕಡತ ತರುವಂತೆ ಕೋರಲಾಗಿದೆ, ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಸಂಪಕ೯ ಸಂಖ್ಯೆ 7022924860,
9448448780
Kodagu
ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಪುಸ್ತಕ ಆಹ್ವಾನ
ಮಡಿಕೇರಿ : ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರ ವತಿಯಿಂದ 2024 ಹಾಗೂ 2025 ಸಾಲಿನಲ್ಲಿ ರಚಿಸಲ್ಪಟ್ಟ ಅಯ್ದ ಉತ್ತಮ ಪುಸ್ತಕಗಳಿಗೆ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿಯನ್ನು ಪ್ರಧಾನ ಮಾಡುವ ಉದ್ದೇಶದಿಂದ 2024-25ನೇ ಸಾಲಿನ ಅವಧಿಯಲ್ಲಿ ಜನವರಿ ರಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥ ಸಂಕಲನ, ನಾಟಕ, (ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ ಅನುವಾಧಿತ ಕೃತಿ ಮಕ್ಕಳ ಸಾಹಿತ್ಯ ವಿಮರ್ಷ ಕೃತಿ ಒಟ್ಟು ಏಳು ಪ್ರಕಾರದ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರ ಒಳಗೊಂಡ ಮನವಿಯೊಂದಿಗೆ ಫೆಬ್ರುವರಿ 20 ರೊಳಗೆ ಅಕಾಡೆಮಿಯ ಕೇಂದ್ರ ಕಚೇರಿ ವಿಳಾಸಕ್ಕೆ ಪೋಸ್ಟ್ ಮುಖಾಂತರ ತಲುಪುವಂತೆ ಕಳುಹಿಸುವುದು. ನಂತರ ಬಂದ ಪುಸ್ತಕ ಪರಿಗಣಿಸಲಾಗುವುದಿಲ್ಲ.
ಉಪ ನಿರ್ದೇಶಕರ ಕಚೇರಿ, ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-228010ಗೆ ಸಂಪರ್ಕಿಸಬಹುದು. ಕೇಂದ್ರ ಕಚೇರಿ ವಿಳಾಸ: ಮಾನ್ಯ ಯೋಜನಾಧಿಕಾರಿಗಳು, ಚಂದ್ರಿಕಾ ಲೇಔಟ್ ಹಿಂಭಾಗ ಕೆ.ಎಚ್.ಬಿ ಕಾಲೋನಿ, ಲಕಮನಹಳ್ಳಿ ಧಾರವಾಡ-580004 ದೂರವಾಣಿ ಸಂಖ್ಯೆ 0836-2465490 ಹೆಚ್ಚಿನ ಮಾಹಿತಿಗೆ ದೂ.ಸಂ.8050392209, 7204396275, 9448981944 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
Kodagu
ಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಡಿಕೇರಿ : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ 2025-26ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಂದ “ಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ಕ್ರೀಡೆ, ಸಂಗೀತ, ನೃತ್ಯ, ಬಹುಮುಖ ಪ್ರತಿಭೆ, ನಟನೆ, ಚಿತ್ರಕಲೆ, ಹಾಗೂ ವಿಜ್ಞಾನ ಮತ್ತು ಸಂಶೋಧನೆಗಳಾದ ಯಾವುದಾದರು ಒಂದು ವಿಶೇಷ ಕ್ಷೇತ್ರಗಳಲ್ಲಿ ಅಸಾಧಾರಣಾ ಸಾಧನೆ ಮಾಡಿ ಪ್ರಶಸ್ತಿ ಪಡೆದ ಪುರಸ್ಕೃತ ಮಗುವಾಗಿರಬೇಕು. ಇಂತಹ ಮಕ್ಕಳು ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರ ಒಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಫೆ. 20 ರೊಳಗೆ ಅಕಾಡೆಮಿಯ ಕೇಂದ್ರ ಕಚೇರಿ ವಿಳಾಸಕ್ಕೆ ಪೋಸ್ಟ್ ಮುಖಾಂತರ ತಲುಪುವಂತೆ ಕಳುಹಿಸುವುದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಈಗಾಗಲೇ ಬಾಲಗೌರವ ಪ್ರಶಸ್ತಿ ಪಡೆದವರ ಅರ್ಜಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಈ ಪ್ರಶಸ್ತಿಯ ಅರ್ಜಿ ನಮೂನೆ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08272-228010ಗೆ ಸಂಪರ್ಕಿಸಬಹುದು.
ಕೇಂದ್ರ ಕಚೇರಿ ವಿಳಾಸ: ಯೋಜನಾಧಿಕಾರಿಗಳು ಚಂದ್ರಿಕಾ ಲೇಔಟ್ ಹಿಂಭಾಗ ಕೆ.ಎಚ್.ಬಿ ಕಾಲೋನಿ ಲಕಮನಹಳ್ಳಿ ಧಾರವಾಡ-580004, ದೂರವಾಣಿ ಸಂಖ್ಯೆ 0836-2465490, ಹೆಚ್ಚಿನ ಮಾಹಿತಿಗೆ ದೂ.ಸಂ. 8050392209, 7204396275, 9448981944 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
Kodagu
ಮಾ. 29ರಂದು ಎಡಪಕ್ಷಗಳ ಐಕ್ಯವೇದಿಕೆ ಜಿಲ್ಲಾ ಸಮಾವೇಶ
ಸಿದ್ದಾಪುರ: ಮಡಿಕೇರಿ ಜಿಲ್ಲೆಯ ಎಡಪಕ್ಷಗಳ ಐಕ್ಯವೇದಿಕೆ ಜಿಲ್ಲಾ ಸಮಾವೇಶವನ್ನು ಮಾರ್ಚ್ 29ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಎಡಪಕ್ಷಗಳ ಜಿಲ್ಲಾ ನಾಯಕರು ತಿಳಿಸಿದ್ದಾರೆ.
ಭಾನುವಾರ ಪಟ್ಟಣದ ಸಿದ್ದಾಪುರದಲ್ಲಿ ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್ ಪಕ್ಷಗಳ ಜಿಲ್ಲಾ ನಾಯಕರಿಂದ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಲಾಯಿತು.

ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಕೆ.ವಿ. ಸುನೀಲ್ ಮಾತನಾಡಿ, ಬಡಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಎಡಪಕ್ಷಗಳ ಪರ್ಯಾಯ ಐಕ್ಯ ರಾಜಕೀಯ ವೇದಿಕೆ ರೂಪಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದರು.
ಸಿಪಿಐಎಂಎಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಿರ್ವಾಣಪ್ಪ ಮಾತನಾಡಿ, ಜಿಲ್ಲೆಯ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ನಿವೇಶನ ಕಲ್ಪಿಸುವಲ್ಲಿ ಹಾಗೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಡಪಕ್ಷಗಳು ಒಗ್ಗಟ್ಟಾಗಿ ಸಮಾವೇಶ ನಡೆಸಿ ಜಂಟಿ ಹೋರಾಟಕ್ಕೆ ಮುಂದಾಗಲಿವೆ ಎಂದು ತಿಳಿಸಿದರು.

ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ. ರಮೇಶ್ ಮಾತನಾಡಿ, ಎಡಪಕ್ಷಗಳ ಐಕ್ಯವೇದಿಕೆ ರಚನೆಗೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಪ್ರಯತ್ನ ಇದೀಗ ಸಫಲವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ವೇದಿಕೆ ಕಾರ್ಯನಿರ್ವಹಿಸಲಿದೆ. ಮುಂಬರುವ ಚುನಾವಣೆ ಹಾಗೂ ರಾಜಕೀಯ ನಡೆಗಳನ್ನು ಐಕ್ಯವೇದಿಕೆಯ ನೇತೃತ್ವದಲ್ಲಿಯೇ ನಿರ್ಧರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ರಮೇಶ್ ಮಾಯಮುಡಿ, ಎನ್. ಮಣಿ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾಮಂಡಳಿ ಸದಸ್ಯ ಎ.ಸಿ. ಸಾಬು, ಸಿಪಿಐಎಂಎಲ್ ಪಕ್ಷದ ಪ್ರಕಾಶ್, ರವಿ, ಅಣ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು
-
National8 hours agoದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ದೇಶ ಬಿಟ್ಟು ತೊಲಗಿ: ವಾಟ್ಸಪ್ಗೆ ಸುಪ್ರೀಂ ಎಚ್ಚರಿಕೆ
-
Special12 hours agoಪೋಸ್ಟ್ ಆಫೀಸ್ ಉದ್ಯೋಗ ಅವಕಾಶ: ನೇರ ನೇಮಕಾತಿ
-
Hassan2 hours agoಎಸ್ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್ಡಿಪಿಐ ಮುಖಂಡ
-
Special2 hours agoಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ
-
Kodagu14 hours agoಹೂಡಿಕೆ ಹೆಸರಲ್ಲಿ ಸೈಬರ್ ವಂಚನೆ : 1.14 ಕೋಟಿ ರೂ. ಕಳೆದುಕೊಂಡ ಸಿದ್ದಾಪುರದ ವ್ಯಕ್ತಿ
-
State3 hours agoಕಮಿಷನ್ಗಾಗಿ ಡೀಲ್ ಆರೋಪದ ಆಡಿಯೋ ವೈರಲ್: ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಿ.ಜಗನ್ನಾಥ್ ಅಮಾನತು
-
Kodagu4 hours agoಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ
-
Mandya6 hours agoಅದ್ದೂರಿಯಾಗಿ ಜರುಗಿದ ಶ್ರೀ ಮಾರಮ್ಮ ದೇವಿ ಅಮ್ಮನವರ 3 ನೇ ವರ್ಷದ ವಾರ್ಷಿಕೋತ್ಸವ
