National - International
ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮಾಜಿ ಪ್ರಧಾನಿ ಎಚ್‌ಡಿಡಿ ಪ್ರಧಾನಿ ಮೋದಿಗೆ ಪತ್ರ
ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಲೆ ಕೊರತೆ ಪಾವತಿ ಯೋಜನೆ ಮತ್ತು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿಯಲ್ಲಿ ರಾಜ್ಯದ ಮಾವು ಸಂಗ್ರಹಿಸಲು ಕೇಂದ್ರ ಸರ್ಕಾರವೂ ನಾಫೆಡ್‌ಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
ರೈತರಿಂದ ನೇರ ಖರೀದಿ ಅಥವಾ ರೈತ ಉತ್ಪಾದನಾ ಸಂಸ್ಥೆಗಳಿಂದ ನೇರವಾಗಿ ಖರೀದಿಸುವುದರಿಂದ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಏನಿದೆ?


National - International
ಫಿಫಾ ವಿಶ್ವಕಪ್ 2026: ಪ್ರಿ-ಕ್ವಾರ್ಟರ್ ಫೈನಲ್ ಆರಂಭ; ಕ್ವಾರ್ಟರ್ ಫೈನಲ್‌ಗೆ 16 ತಂಡಗಳ ಹೋರಾಟ ತೀವ್ರ
National - International
ವಿಶ್ವಕಪ್ ಬಳಿಕ ನಿವೃತ್ತಿ: ಸಹೋದರಿ ಹೇಳಿಕೆ ನಿರಾಕರಿಸಿದ ಕ್ರಿಸ್ಟಿಯಾನೊ ರೊನಾಲ್ಡೋ
ನ್ಯೂಯಾರ್ಕ್: ಈ ಬಾರಿಯ ಫಿಫಾ ವಿಶ್ವಕಪ್ ರೊನಾಲ್ಡೋಗೆ ಕೊನೆಯ ಟೂರ್ನಿಯಾಗಬಹುದು ಎಂದಿದ್ದ ಸಹೋದರಿ ಕಟಿಯಾ ಅವೆರೋ ಹೇಳಿಕೆಯನ್ನು ಪೋರ್ಚುಗಲ್‌ನ ಸ್ಟಾರ್ ಫುಟ್‌ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ ನಿರಾಕರಿಸಿದ್ದಾರೆ.
ಪೋರ್ಚುಗಲ್ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ರೊನಾಲ್ಡೊ ಸಹೋದರಿ ಕಟಿಯಾ ಅವೇರೋ, ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇದು ರೊನಾಲ್ಡೊ ಅವರ ಕೊನೆಯ ಟೂರ್ನಿ. ಹಾಗಾಗಿ ಅವರು ಮೈದಾನದಲ್ಲಿ ಆಡುತ್ತಿರುವುದನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂದು ಹೇಳಿದ್ದರು. ಇದೀಗ ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರೊನಾಲ್ಡೊ, ನಿವೃತ್ತಿಯ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ.
“ಯಾವುದೇ ಕಾರಣಕ್ಕೂ ಆತುರದಲ್ಲಿ ನಿವೃತ್ತಿಯ ನಿರ್ಧಾರ ಕೈಗೊಳ್ಳುವುದಿಲ್ಲ. ವಿಶ್ವಕಪ್‌ನಲ್ಲಿ ಗೆಲುವು ಅಥವಾ ಸೋಲು ಏನೇ ಆದರೂ, ಅದರ ಬಳಿಕ ನಿವೃತ್ತಿಯ ಬಗ್ಗೆ ಯೋಚಿಸಲು ಸಾಕಷ್ಟು ಸಮಯವಿದೆ. ನನ್ನ ಕುಟುಂಬದ ಸದಸ್ಯರ ಜೊತೆ ಚರ್ಚಿಸಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
National - International
‘ಸಿಎಂ ವಿಜಯ್ ಸರ್ಕಾರ 5 ವರ್ಷ ಉಳಿಯಲ್ಲ; 3-6 ತಿಂಗಳಲ್ಲಿ ಪತನವಾಗುತ್ತೆ’- ಎಂ.ಕೆ ಸ್ಟಾಲಿನ್ ಭವಿಷ್ಯ
ಚೆನ್ನೈ: ಸಿಎಂ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ 5 ವರ್ಷಗಳ ವರೆಗೆ ಉಳಿಯುವುದಿಲ್ಲ. 3 ರಿಂದ 6 ತಿಂಗಳಲ್ಲಿ ಪತನವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ.
ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ವಿಜಯ್ ಅವರ ಸರ್ಕಾರ ಮೈತ್ರಿ ಪಕ್ಷಗಳ ಬೆಂಬಲದಿಂದಷ್ಟೇ ಬದುಕುಳಿದಿದೆ. ಈ ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಿಲ್ಲ. ವಿಜಯ್ ಅವದ್ದು ಅಲ್ಪಸಂಖ್ಯಾತ ಸರ್ಕಾರವಾಗಿದ್ದು, ಮುಂದಿನ 3 ರಿಂದ 6 ತಿಂಗಳ ಒಳಗೆ ಪತನಗೊಳ್ಳಬಹುದು” ಎಂದಿದ್ದಾರೆ.
“ಆಡಳಿತಾರೂಢ ಟಿವಿಕೆ ಸ್ವತಂತ್ರವಾಗಿ ಆಡಳಿತ ನಡೆಸಲು ಪೂರ್ಣ ಜನಾದೇಶ ಹೊಂದಿಲ್ಲ. ಅಗತ್ಯ 118 ಬಹುಮತದ ಪೈಕಿ 108 ಸ್ಥಾನಗಳನ್ನ ಮಾತ್ರ ಗಳಿಸಿದೆ. ಈ ಚುನಾವಣೆಯಲ್ಲಿ ಜನ ಡಿಎಂಕೆ ಸರ್ಕಾರ ರಚಿಸಬೇಕೆಂದೇ ಮತ ಚಲಾಯಿಸಿದ್ದರು. ಆದ್ರೆ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಕೆಲ ಪಕ್ಷಗಳ ತಂತ್ರ ಹಾಗೂ ಅವರ ಜೊತೆಗಿನ ಹೊಂದಾಣಿಕೆಯಿಂದ ಟಿವಿಕೆ ಸರ್ಕಾರ ಜೀವಂತವಾಗಿದೆ” ಎಂದು ತಿಳಿಸಿದ್ದಾರೆ.
“ಇದೊಂದು ಅಲುಗಾಡುವ ಸೆಟಪ್, ಈ ವಾಹನ ಯಾವ ಜಂಕ್ಷನ್ ಅಥವಾ ತಿರುವಿನಲ್ಲಿ ತನ್ನ ಸಮತೋಲನ ಕಳೆದುಕೊಂಡು ಹಠಾತ್ ಸ್ಥಗಿತಗೊಳ್ಳುತ್ತೋ ಗೊತ್ತಿಲ್ಲ. ಆದ್ದರಿಂದ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು. 5 ವರ್ಷಗಳ ಕಾಲ ಕಾಯುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
-
State18 hours agoಕರಾವಳಿಯಲ್ಲಿ ವರುಣನ ಆರ್ಭಟ: ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ!
-
National7 hours agoಸಶಸ್ತ್ರ ಪಡೆಗಳ ಬಲವರ್ಧನೆಗೆ ₹52,000 ಕೋಟಿ ಯೋಜನೆಗೆ ಗ್ರೀನ್ ಸಿಗ್ನಲ್
-
Mysore12 hours agoಮರದ ದಿಮ್ಮಿ ಸಾಗಿಸುವ ವೇಳೆ ಅಂಬಾರಿ ಆನೆ ಅಭಿಮನ್ಯು ದಂತ ಭಗ್ನ
-
Sports6 hours ago15ನೇ ವಯಸ್ಸಿನಲ್ಲೇ ಇತಿಹಾಸ ಬರೆದ ವೈಭವ್ ಸೂರ್ಯವಂಶಿ
-
Hassan16 hours agoಮಲೆನಾಡಿನಲ್ಲಿ ವರುಣನ ಆರ್ಭಟ: ಸರಗಳ್ಳಿ ಬಳಿ ರಸ್ತೆಗೆ ಉರುಳಿದ ಬೃಹತ್ ಮರ
-
Chamarajanagar5 hours agoಚಿರತೆ ದಾಳಿ ಐದು ವರ್ಷದ ಬಾಲಕಿಗೆ ಗಾಯ
-
Politics7 hours agoಅಡ್ಡ ಮತದಾನ ಪ್ರಕರಣ: ವರದಿ ಸಿಕ್ಕರೂ ಶಿಸ್ತುಕ್ರಮಕ್ಕೆ ಬಿಜೆಪಿ ಹೈಕಮಾಂಡ್ ವಿಳಂಬ
-
Kodagu12 hours agoಸುಂದರನಗರದಲ್ಲಿ ಐದು ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ


