Kodagu
ಮಿನಿ ಒಲಿಂಪಿಕ್ಸ್ ಅಂಡರ್ 14 ಫುಟ್ಬಾಲ್ : ಕೊಡಗು ತಂಡಕ್ಕೆ ಭಾನುವಾರ ಆಯ್ಕೆ ಪ್ರಕ್ರಿಯೆ.
ಮಡಿಕೇರಿ: ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ನಡೆಯಲಿರುವ “ಮಿನಿ ಒಲಿಂಪಿಕ್ಸ್” ಫುಟ್ಬಾಲ್ ಅಂಡರ್-14 ಬಾಲಕ ಮತ್ತು ಬಾಲಕಿಯರ ಕೊಡಗು ಫುಟ್ಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಜುಲೈ 14ರ ಭಾನುವಾರದಂದು ಅಮ್ಮತ್ತಿಯ ಫ್ರೌಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ ನಾಗೇಶ್ (ಈಶ್ವರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2010ರ ನಂತರ ಜನಿಸಿರುವ ಯುವ ಫುಟ್ಬಾಲ್ ಆಟಗಾರರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಟಗಾರರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ತರಬೇಕು. ಭಾನುವಾರ ಬೆಳಗ್ಗೆ 09 ಗಂಟೆಗೆ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆಯು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ

ಕ್ರಿಸ್ಟೋಫರ್ ಅವರ ನೇತೃತ್ವದಲ್ಲಿ ನಡೆಯಲಿದೆ.ಕೊಡಗು ಜಿಲ್ಲೆಗೆ ಇದೇ ಮೊದಲ ಬಾರಿಗೆ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ನಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು,ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ನಾಗೇಶ್ (ಈಶ್ವರ್ ತಿಳಿಸಿದ್ದಾರೆ).
Kodagu
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಿ – ಶಾಸಕ ಪೊನ್ನಣ್ಣ ಸೂಚನೆ
ವಿರಾಜಪೇಟೆ : ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಇಂದು ತಮ್ಮ ವಿರಾಜಪೇಟೆಯ ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮುಖ್ಯ ಸಭೆ ನಡೆಸಿದರು.
ಲೋಕೋಪಯೋಗಿ ಇಲಾಖೆ, ಐಟಿಡಿಪಿ, ಕೆಆರ್ಐಡಿಎಲ್, ಸಮಾಜ ಕಲ್ಯಾಣ ಇಲಾಖೆ, ತಾಲೂಕ್ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ವರದಿ ಪಡೆದ ಶಾಸಕರು, ಅಭಿವೃದ್ಧಿಯ ಬಗ್ಗೆ ಸಮಗ್ರವಾಗಿ ಚರ್ಚಿಸಿದರು.
ಇಲಾಖೆಯವರು ಪೂರ್ಣಗೊಂಡಿರುವ ಕಾಮಗಾರಿಗಳು ಹಾಗೂ ಮುಂಬರುವ ಕಾಮಗಾರಿಗಳಿಗೆ ಮಾಡಿಕೊಂಡಿರುವ ತಯಾರಿ ಬಗ್ಗೆ ವಿವರ ಪಡೆದ ಶಾಸಕರು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.
Kodagu
ಬ್ರದರ್ಸ್ ಕ್ರಿಕೆಟ್ ತಂಡ ಚಾಂಪಿಯನ್: ಸ್ಟ್ರೈಕರ್ಸ್ ಅಂಬಟ್ಟಿ ತಂಡ ರನ್ನರ್-ಅಪ್ ನ್ಯಾನೋ ಕ್ರಿಕೆಟ್ ಲೀಗ್ – ಸೀಸನ್ 1
ವಿರಾಜಪೇಟೆ : ಪಿಎಸ್ಎ ಪ್ರಾಯೋಜಕತ್ವದಲ್ಲಿ ಆರ್ಜಿ ಆಶೀರ್ವಾದ್ ಟರ್ಫ್ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ನ್ಯಾನೋ ಕ್ರಿಕೆಟ್ ಲೀಗ್ – ಸೀಸನ್ 1 ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಲೀಗ್ನ ರೋಚಕ ಅಂತಿಮ ಪಂದ್ಯದಲ್ಲಿ ಮೊಹಮ್ಮದ್ ಮುಸ್ತಫ ರವರ ಮಾಲೀಕತ್ವದ ಬ್ರದರ್ಸ್ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಸಿಯಾಬ್ ರವರ ಮಾಲೀಕತ್ವದ ಸ್ಟ್ರೈಕರ್ಸ್ ಅಂಬಟ್ಟಿ ತಂಡ ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡು ಪ್ರಶಂಸೆಗೆ ಪಾತ್ರವಾಯಿತು.

ಟೂರ್ನಮೆಂಟ್ನ ವೈಯಕ್ತಿಕ ಪ್ರಶಸ್ತಿಗಳಲ್ಲಿ ಸಜೀರ್ ಎ.ಎಸ್ ಟೂರ್ನಮೆಂಟ್ ಅವಧಿಯಲ್ಲಿನ ಶ್ರೇಷ್ಠ ಸರ್ವಾಂಗೀಣ ಪ್ರದರ್ಶನಕ್ಕಾಗಿ ‘ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಜೊತೆಗೆ ಅತ್ಯುತ್ತಮ ಬ್ಯಾಟ್ಸ್ಮನ್, ಅತ್ಯುತ್ತಮ ಬೌಲರ್ ಹಾಗೂ ಅತ್ಯಧಿಕ ಫೋರ್ಗಳನ್ನು ಬಾರಿಸಿದ ಆಟಗಾರ ಎಂಬ ಮೂರು ಪ್ರಮುಖ ಪ್ರಶಸ್ತಿಗಳನ್ನೂ ಅವರು ಪಡೆದುಕೊಂಡರು. ಇದೇ ವೇಳೆ ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ಆಶಿಕ್ ಪಡೆದರೆ, ಉತ್ತಮ ಫೀಲ್ಡರ್ ಪ್ರಶಸ್ತಿಯನ್ನು ನಿಹಾಲ್ ಎಂ.ಎಸ್. ತಮ್ಮ ಪಾಲಾಗಿಸಿಕೊಂಡರು.

ಸ್ಥಳೀಯ ಕ್ರೀಡಾಭಿಮಾನಿಗಳ ಬೆಂಬಲದೊಂದಿಗೆ ನಡೆದ ಈ ನ್ಯಾನೋ ಕ್ರಿಕೆಟ್ ಲೀಗ್, ಗ್ರಾಮೀಣ ಹಾಗೂ ಸ್ಥಳೀಯ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಈ ಟೂರ್ನಮೆಂಟ್ ಆಯೋಜಿಸಲಾಗುವುದು ಎಂದು ಆಯೋಜಕರಾದಂತಹ ಪ್ರಮೋದ್, ಸುಮಂತ್, ಆಶಿಕ್ ತಿಳಿಸಿದ್ದಾರೆ.
Kodagu
ಮಡಿಕೇರಿಯ ಟಿ.ಪಿ ರಮೇಶ್ ರವರಿಗೆ ಮಾತೃ ವಿಯೋಗ
ಕೊಡಗು : ಕೊಡಗು ಪತ್ರಿಕಾ ಭವನದ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಹಿರಿಯ ಪತ್ರಕರ್ತರು, ಕೊಡಗು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರು, ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ ಟಿ.ಪಿ ರಮೇಶ್ ರವರ ಮಾತೃಶ್ರೀ ರವರಾದ ತೆಲುಗು ಬಲಜಿಗರ ಸರೋಜಮ್ಮ(90) ಇಂದು ರಾತ್ರಿ 9 ಗಂಟೆಗೆ (ಭಾನುವಾರ) ಮಡಿಕೇರಿಯಲ್ಲಿ ಅನಾರೋಗ್ಯದಿಂದ ನಿದನರಾಗಿರುತ್ತಾರೆ.

ಮಡಿಕೇರಿಯ ಸೇಂಟ್ ಜೋಸೆಫ್ ಕಾನ್ವೆಂಟ್ ಸಮೀಪವಿರುವ ಟಿ.ಪಿ ರಮೇಶ್ ರವರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಮೃತ ದೇಹ ಇಡಲಾಗಿದ್ದು, ಮೃತರ ಅಂತಿಮ ಸಂಸ್ಕಾರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಿಂದು ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
-
Mysore22 hours agoಮೈಸೂರಲ್ಲೇ ದಲಿತ ಸಿಎಂ ಕೂಗು, ದಲಿತ ಮುಖಂಡರ ಸಭೆಗೆ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹ
-
Mandya4 hours agoತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನ
-
Mandya22 hours agoರೋಟರಿ ಕ್ಲಬ್ ವತಿಯಿಂದ ಶ್ರೀರಂಗಪಟ್ಟಣ ಸ್ಮಾರಕಗಳ ರಕ್ಷಣೆಗಾಗಿ ಜಾಗೃತಾ ನಡೆ
-
Mysore4 hours agoತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ: ಪ್ರಕಾಶ್ ಪ್ರಿಯಾದರ್ಶನ್
-
Hassan15 hours agoಮಹೀಂದ್ರಾ ಇನ್ವಿಟೇಷನ್ ಕಪ್ ಕ್ರಿಕೆಟ್ ಪಂದ್ಯಾವಳಿ: ಅದ್ವೈತ್ ಹ್ಯುಂಡೈ ತಂಡ ಚಾಂಪಿಯನ್
-
Chamarajanagar21 hours agoರೋಟರಿ ಸಂಸ್ಥೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ
-
Hassan2 hours agoನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರ ವಿರುದ್ಧ ಸೈಟ್ ಒತ್ತುವರಿ ಆರೋಪ ಪ್ರಕರಣ ದಾಖಲು
-
Mysore4 hours agoಮೈಸೂರಿನಲ್ಲಿ ‘ಪರಿಸರ ರೀಲ್ಸ್’ ಸ್ಪರ್ಧೆ: ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವ ಯತ್ನ
