Hassan
ಹುರುಡಿ ಶೈಲಾ ಅವರ ಮನೆಯಂಗಳದಲ್ಲಿ ಅರಳಿದ ರಾತ್ರಿ ರಾಣಿ ಬ್ರಹ್ಮ ಕಮಲ
ಸಕಲೇಶಪುರ : ನಮ್ಮ ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮ ಕಮಲವು ಒಂದು ವರ್ಷದಲ್ಲಿ ಒಂದು ರಾತ್ರಿ ಮಾತ್ರ ಅರಳುವ ಆಕಾಶದಹೂವು. ಹುರುಡಿ ಶೈಲಾ ಅವರ ಮನೆಯಂಗಳದಲ್ಲಿ ನೆನ್ನೆ ರಾತ್ರಿ ರಾಣಿ ಎಂದು ಹೆಸರಾಗಿರುವ ಬ್ರಹ್ಮ ಕಮಲವು ಅರಳಿದೆ.
ಈ ಬ್ರಹ್ಮ ಕಮಲವು ಹೂವು ನೋಡಲು ಮಾತ್ರ ಸುಂದರವಲ್ಲ ಆರೋಗ್ಯಕ್ಕೂ ಒಳಿತು. ಬ್ರಹ್ಮ ಕಮಲವು ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು. ಇದು ವಿಶೇಷವಾಗಿ ಉತ್ತರಕಾಂಡದ ಸ್ಥಳೀಯ ಹೂವು. ಬ್ರಹ್ಮ ಕಮಲ ಒಂದು ಅನನ್ಯ ಮತ್ತು ಅಪರೂಪದ ಹೂವು ಬಿಡುವ ಸಸ್ಯವಾಗಿದ್ದು ಇದನ್ನು ಮುಖ್ಯವಾಗಿ ಭಾರತದ ಪ್ರದೇಶಗಳಲ್ಲಿ ಕಂಡು ಬರುತ್ತದೆ ಇದನ್ನು ಹೂಗಳ ರಾಜ ಎಂದು ಕರೆಯುತ್ತಾರೆ.

ಹಿಂದೂ ಧಾರ್ಮಿಕ ಪುಸ್ತಕಗಳ ಪ್ರಕಾರ ಬ್ರಹ್ಮನು ವಿಷ್ಣುವಿನ ಹೊಕ್ಕಳದಿಂದ ಹೊರಹೊಮ್ಮವ ಕಮಲದಿಂದ ಜನಿಸಿದನು. ಆದ್ದರಿಂದ ಈ ಕಮಲಕ್ಕೆ ಬ್ರಹ್ಮ ಕಮಲ ಎಂದು ಕರೆಯುತ್ತಾರೆ. ಹುರುಡಿ ಶೈಲಾ ಅವರ ಮನೆಯಂಗಳದಲ್ಲಿ ಬೆಳದ ಈ ಹೂವು ನೆನ್ನೆ ರಾತ್ರಿ ಮಾತ್ರ ಅರಳಿ ಮುಂಜಾನೆಯಾಗುತ್ತಿದ್ದಂತೆ ಒಣಗಿ ಹೋಗುತ್ತದೆ. ಮತ್ತೊಂದು ಕುತೂಹಲಕಾರಿ ವಿಷಯ ಏನೆಂದರೆ ಈ ಬ್ರಹ್ಮ ಕಮಲ ಹೂವು ಅರಳುವ ಸಮಯದಲ್ಲಿ ಯಾರು ತಮ್ಮ ಆಸೆಯನ್ನು ಹೇಳಿಕೊಳ್ಳುತ್ತಾರೊ ಅವರ ಆಸೆಗಳೆಲ್ಲವೂ ಈಡೇರುತ್ತವೆ ಎನ್ನುವ ವಾಡಿಕೆ ಇದೆ ಎಂದು ಜನಮಿತ್ರ ಪತ್ರಿಕೆ ವರದಿಗಾರರಿಗೆ ತಿಳಿಸಿದರು.
ವರದಿ
ಸಿ. ಎಲ್ ಪೂರ್ಣೇಶ್ ಚಕ್ಕೂಡಿಗೆ
Hassan
ಪದವೀಧರರಿಂದ 6, 7 ನೇ ತರಗತಿಗೆ ಪಾಠ: ಸಚಿವ ಸಂಪುಟ ಅನುಮೋದನೆ ಸ್ವಾಗತಾರ್ಹವೆಂದ ದೇವೇಗೌಡ, ಮಹೇಶ್
ಅರಸೀಕೆರೆ: ಪದವೀಧರ ಶಿಕ್ಷಕರುಗಳು ಆರು ಮತ್ತು ಏಳನೇ ತರಗತಿಗೂ ಬೋಧಿಸಲು ಸಚಿವ ಸಂಪುಟ ಅನುಮೋದಿಸಿರುವುದನ್ನು ತಾಲೂಕ್ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ದೇವೇಗೌಡ ಮತ್ತು ಕಾರ್ಯದರ್ಶಿ ಮಹೇಶ್ ಸ್ವಾಗತಾರ್ಹವೆಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.

ನಗರದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಆರು ಮತ್ತು ಏಳನೇ ತರಗತಿಗೆ ಬೋಧಿಸಲು ಟಿಇಟಿ ಕಡ್ಡಾಯ ಎಂಬ ನಿಯಮವನ್ನು ಸಡಿ ಲಿಸುವ ಮೂಲಕ ಸುಮಾರು 1. 50 ಲಕ್ಷ ಶಿಕ್ಷಕರಿಗೆ ನಿರಾಳ ದೊರೆತಂತೆ ಆಗಿದೆ ಸಚಿವ ಸಂಪುಟದಲ್ಲಿ ಮಹತ್ವ ನಿರ್ಧಾರವನ್ನು ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸಚಿವ ಸಂಪುಟಕ್ಕೂ ನಮ್ಮ ಸಂಘವು ಆಭಾರಿಯಾಗಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.
6 ಮತ್ತು 7ನೇ ತರಗತಿಗೆ ಬೋಧಿಸುವ ಶಿಕ್ಷಕರುಗಳಿಗೆ ಇತರ ಶಿಕ್ಷಕರುಗಳಂತೆ ಸೌಲಭ್ಯಗಳು ಸಹ ಒದಗಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರಸ್ತುತ ಈವರೆಗೂ ಒಂದರಿಂದ ಏಳನೇ ತರಗತಿಯವರೆಗೆ ಬೋಧಿಸುತ್ತಲೇ ಬಂದಿರುವ ಶಿಕ್ಷಕರುಗಳು 15, 20 ವರ್ಷಗಳ ಸೇವೆಯ ಅನುಭವ ಹೊಂದಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಲೇ ಬಂದಿದ್ದೇವೆ. ಸಚಿವ ಸಂಪುಟದ ಈ ನಿರ್ಧಾರ ಶಿಕ್ಷಕರಿಗೆ ಬೋಧಾನ ಪೂರಕ ವಾತಾವರಣವನ್ನು ಕಲ್ಪಿಸಿದಂತಾಗಿದೆ ಎಂದು ಹೇಳಿದರು.
Hassan
ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಭಕ್ತಿಯ ಮಾತ್ರವಲ್ಲ ಜ್ಞಾನ, ಶರಣ ಸಂಸ್ಕೃತಿಯ ಮಹಾ ಭಂಡಾರ: ಎಡೆಹಳ್ಳಿ ಮಂಜುನಾಥ್
ಸಕಲೇಶಪುರ : ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಭಕ್ತಿಯ ಮಾತ್ರವಲ್ಲ ಜ್ಞಾನ ಮತ್ತು ಶರಣ ಸಂಸ್ಕೃತಿಯ ಮಹಾ ಭಂಡಾರ ಎಂದು ಮಲೆನಾಡು ವೀರಶೈವ ಸಮಾಜದ ಕಾರ್ಯದರ್ಶಿ ಎಡೆಹಳ್ಳಿ ಮಂಜುನಾಥ್ ಹೇಳಿದರು.
ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಸ್ವಾಗತಿಸಿ ಮಾತನಾಡಿ,ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ತಪಸ್ಸಿನಿಂದ ಸಂಸ್ಥಾಪಿತವಾದ ಸುತ್ತೂರು ಶ್ರೀಕ್ಷೇತ್ರದಲ್ಲಿ 2026ರ ಜನವರಿ 15ರಿಂದ 20ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.

ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಯೋಜಿಸಲಾಗಿವೆ. ನಾಟಕಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಗಳೂ ನಡೆಯಲಿವೆ ಎಂದರು.
ಭಾರತದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಗಳಿಗೆ ಮಠಾಧೀಶರು, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ-ರಾಜ್ಯದ ಸಚಿವರು, ಸಂಸದರು, ಶಾಸಕರು, ಕಲಾವಿದರು ಹಾಗೂ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹ, ಕುಸ್ತಿ ಪಂದ್ಯಾವಳಿ, ರಂಗೋಲಿ, ಗಾಳಿಪಟ ಮತ್ತು ಚಿತ್ರಕಲೆ ಸ್ಪರ್ಧೆಗಳ ವಿವರಗಳಿಗೆ ಸುತ್ತೂರು ಶ್ರೀಕ್ಷೇತ್ರ ಅಥವಾ ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠದ ಜಾತ್ರಾ ಕಚೇರಿಯಲ್ಲಿ ಸಂಪರ್ಕಿಸಬಹುದು. ಪೂಜಾ ಕೈಂಕರ್ಯಗಳಿಗೆ ಆಸಕ್ತಿ ಇರುವ ಭಕ್ತರಿಗೂ ಇದೇ ಕಚೇರಿಯಲ್ಲಿ ಮಾಹಿತಿ ಲಭ್ಯ ಎಂದು ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ತಾಲ್ಲೂಕು ಅಧ್ಯಕ್ಷೆ ಕೋಮಲ ದಿನೇಶ್ ಮಾತನಾಡಿ, ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಸಮಾಜಸೇವಾ ಕಾರ್ಯಗಳು ಯುವಕರಿಗೆ ಮಾದರಿಯಾಗಿವೆ ಎಂದು ಹೇಳಿದರು.

ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಭಕ್ತರಿಗೆ ಕೋರಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಕೌಡಹಳ್ಳಿ ಲೋಹಿತ್, ಚಂದ್ರಶೇಖರ್, ಸುರೇಶ್, ಗಾಯತ್ರಿ, ರೇಖಾ ಸುರೇಶ್, ಚಂದ್ರಶೇಖರ್, ಜೆಎಸ್ಎಸ್ ವಿದ್ಯಾ ಸಂಸ್ಥೆಯ ರೇಣುಕಾರಾಧ್ಯ, ಶಿವಕುಮಾರ್, ನಂಜುಂಡಸ್ವಾಮಿ, ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Hassan
ಬೆಳಗಾವಿ ಅಧಿವೇಶನದಲ್ಲಿ ಆನ್ ಲೈನ್ ಗೇಮ್, ಸೈಬರ್ ಕ್ರೈಮ್ ವಿರುದ್ದ ಧ್ವನಿ ಎತ್ತಿದ ಶಾಸಕ ಸಿಮೆಂಟ್ ಮಂಜು
ಬೆಳಗಾವಿ/ಸಕಲೇಶಪುರ: ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್, ಆನ್ ಲೈನ್ ಗೇಮ್ಸ್ ಗಳನ್ನು ನಿಷೇಧ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಮಾತನಾಡಿದ ಅವರು , ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಹಾಗೂ ಆನ್ ಲೈನ್ ಗೇಮಿಂಗ್ ಆ್ಯಪ್‌ಗಳ ವ್ಯಸನಕ್ಕೆ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಹಲವೆಡೆ ಯುವಕರು ಈ ವ್ಯಸನಕ್ಕೆ ಬಲಿಯಾಗಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸೈಬರ್ ಕ್ರೈಂ ಗಳಿಗೆ ಒಳಗಾಗಿ ಸಾವಿರಾರು ಯುವಕರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರಸ್ತುತ ಇಡೀ ದೇಶದಲ್ಲಿ ಸೈಬರ್ ಅಪರಾಧಗಳ ಕುರಿತು ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಸರ್ಕಾರ ಗಮನ ಹರಿಸಿ ಸೂಕ್ತ ರೀತಿಯ ಕಾನೂನು ರೂಪಿಸಬೇಕು ಹಾಗೂ ಕೇಂದ್ರ ಸರ್ಕಾರದ ಸೈಬರ್ ಕ್ರೈಂ ಸಹಾಯವಾಣಿ (1930) ರ ಮಾದರಿ ರಾಜ್ಯ ಸರ್ಕಾರದ ವತಿಯಿಂದಲೂ ಸಹಾಯವಾಣಿ ಸ್ಥಾಪಿಸುವ ಮೂಲಕ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕೆಂದು ಗೃಹಸಚಿವರಿಗೆ ತಿಳಿಸಿದರು.
-
Hassan10 hours agoಎಲೈಟ್ ಸಂಸ್ಥೆಯ ನಾಗರಾಜ್ಗೆ ’ಕರ್ನಾಟಕ ಗುರುರತ್ನ ಪ್ರಶಸ್ತಿ-2025’
-
Mysore17 hours agoಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಏಕವಚನ ಬಳಕೆ: ಸಿಎಂ ವಿರುದ್ಧ ಹೇಮಾ ನಂದೀಶ್ ಅಸಮಾಧಾನ
-
Mandya9 hours agoಭತ್ತ ಮತ್ತು ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗಧಿ
-
Manglore8 hours agoದ.ಕ.ಜಿಲ್ಲೆಯಲ್ಲಿ ಪ್ರತೀಕಾರದ ಕೊಲೆಗೆ ಕುಮ್ಮಕ್ಕು: 16 ಇನ್ಸ್ಟ್ಗ್ರಾಮ್ ಪೇಜ್ಗಳ ವಿರುದ್ಧ FIR ದಾಖಲು
-
Hassan11 hours agoಈ ಶಿಕ್ಷಕ ಎಣ್ಣೆದಾಸ, ಆತನ ಹೆಂಡತಿ ಮಕ್ಕಳ ಪಾಲಿಗೆ ರಾಕ್ಷಸಿ: ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರಿಂದ ಆಗ್ರಹ
-
Hassan11 hours agoNOC ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಿ: ಆರ್. ಮರಿಜೋಸೆಫ್ ಆಗ್ರಹ
-
Sports7 hours agoInd v/s SA 1st T-20: ಸೌತ್ ಆಫ್ರಿಕಾ ಆಲೌಟ್, ಟೀಂ ಇಂಡಿಯಾಗೆ 101 ರನ್ಗಳ ಭರ್ಜರಿ ಜಯ
-
Hassan13 hours agoಸೊಪ್ಪಿನಹಳ್ಳಿಯಲ್ಲಿ ಪ. ಜಾತಿ ಕುಟುಂಬಗಳಿಂದ ರಸ್ತೆ ತಡೆ: ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ಭೀಮ್ ಆರ್ಮಿ ತಹಸೀಲ್ದಾರ್ ಗೆ ಮನವಿ
