Connect with us

Mysore

ತಾಲೂಕು ಕೇಂದ್ರದಲ್ಲಿ   ಅಗ್ನಿ ಶಾಮಕ  ಠಾಣೆ ಆರಂಬಿಸಲು ಒತ್ತಾಯ : ಜಿಲ್ಲಾಧ್ಯಕ್ಷ ಮಂಜುನಾಥ್ 

Published

on

ಸಾಲಿಗ್ರಾಮ ಪಟ್ಟಣದಲ್ಲಿ ಅಗ್ನಿ ಶಾಮಕ ಠಾಣೆಯನ್ನು ಆರಂಭಿಸುವಂತೆ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಎಸ್.ಮಂಜುನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವರು ನಂತರ ಮಾತನಾಡಿ  ಸಾಲಿಗ್ರಾಮವು ನೂತನ ತಾಲ್ಲೂಕು ಕೇಂದ್ರವಾಗಿದ್ದು, ಈ ಭಾಗದಲ್ಲಿ ಅಗ್ನಿ ಶಾಮಕ ಠಾಣೆ ಇರುವುದಿಲ್ಲ. ಇದರಿಂದ ಈ ಭಾಗದಲ್ಲಿ ಬೆಂಕಿ ಅವಘಡಗಳು ನಡೆದರೆ  26  ಕಿ. ಮೀ. ದೂರದ ಕೆ.ಆರ್.ನಗರದಲ್ಲಿರುವ ಅಗ್ನಿ ಶಾಮಕ ಠಾಣೆಯವರಿಗೆ ಮಾಹಿತಿಯನ್ನು ನೀಡಬೇಕು. ಅವರು ಅಲ್ಲಿಂದ ಸಾಲಿಗ್ರಾಮ ಭಾಗಕ್ಕೆ ಬರಲು ಅಂತರವು ಹೆಚ್ಚಿದ್ದು ಅದಕ್ಕಾಗಿ ಹೆಚ್ಚು ಸಮಯವಾಗುವುದರಿಂದ ಅವರು ಬರುವ ಹೊತ್ತಿಗೆ ಇಲ್ಲಿ ಅವಘಡಗಳು ನಡೆದುಹೋಗಿರುತ್ತವೆ.ಹಾಗೂ ಸಾಲಿಗ್ರಾಮ ಸುತ್ತ ಮುತ್ತ ಗ್ರಾಮಗಳಲ್ಲಿ ಬೆಂಕಿಯ ಘಟನೆಗಳು ನಡೆದಾಗ ಮತ್ತೆ ಇಲ್ಲಿಂದ ಕೊನೆಯ ಭಾಗಕ್ಕೆ  ಹೋಗಲು ಅಂದಾಜು   15 ರಿಂದ 20 ಕಿ. ಮೀ ಆಗುತ್ತದೆ ಅಷ್ಟರಲ್ಲಿ ಮುಗಿದಿರುತ್ತದೆ,  ಇದರಿಂದ ಅಪಾರ ನಷ್ಟಉಂಟಾಗುತ್ತಿದೆ.  ಇಂತಹ ಹಲವು ಘಟನೆಗಳು ಸಾಲಿಗ್ರಾಮ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ನಡೆದಿರುವ ಉದಾಹರಣೆಗಳು ಇವೆ. ಈ ಭಾರೀ ಬಿಸಿಲಿನ ತಾಪಮಾನ ಅತೀ ಹೆಚ್ಚಾಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟವು ಕುಸಿದಿದೆ. ಇದರಿಂದ ರೈತರು ಬೆಳೆದಿರುವ ಬೆಳೆಗಳಿಗೆ ನೀರಿಲ್ಲದೆ ರೈತರು ಸಾಲಸೋಲ ಮಾಡಿ ಹಾಕಿರುವ ಬೆಳೆಗಳು ಹಾಳಾಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೆಲ್ಲದರ ನಡುವೆ ತಮ್ಮ ದನಕರುಗಳಿಗಾಗಿ ಸಾವಿರಾರು ರೂಪಾಯಿ ನೀಡಿ ಮೇವು ಸಂಗ್ರಹಣೆ ಮಾಡಿಕೊಂಡು ಹೇಗೋ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ಬಿಸಿಲಿನ ತಾಪ ಹೆಚ್ಚಿನಿಂದ ಆಕಸ್ಮಿಕ ಬೆಂಕಿ ಅವಘಡ ನಡೆದು ಮೇವಿಗಾಗಿ ಇದ್ದ ಹುಲ್ಲಿನ ಮೆದೆಗಳು ಸುಟ್ಟುಹೋಗಿವೆ. ಇದರಿಂದ ರೈತರು ಕಷ್ಟದ ಮೇಲೆ ಕಷ್ಟಕ್ಕೆ ಸಿಲುಕಿ ನಲುಗುವಂತಾಗಿದೆ.

ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ನಡೆದು ಹೆಚ್ಚಿನ ಅನಾಹುತಗಳು ಆಗದಂತೆ  ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕಾಗಿದೆ. ತಾಲ್ಲೂಕು ಮತ್ತು ಜಿಲ್ಲಾಡಳಿತ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಇತ್ತ ಗಮನಹರಿಸಿ ಸಾಲಿಗ್ರಾಮದಲ್ಲಿ ನೂತನವಾಗಿ ಅಗ್ನಿ ಶಾಮಕ ಠಾಣೆಯನ್ನು ಪ್ರಾರಂಭಿಸಬೇಕೆಂದು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್ ಮನವಿ ಮಾಡಿದ್ದಾರೆ

ವರದಿ : ಎಸ್ ಬಿ. ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ

Published

on

ನಂಜನಗೂಡು: ಹಂದಿಗಳ ಬೇಟೆಗೆ ಹಾಕಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ ಛಿದ್ರವಾಗಿರುವ ಮನಕಲಕುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಜಮೀನಿನಲ್ಲಿ ಮೇವು ಮೇಯುತ್ತಿರುವಾಗ ಘಟನೆ ಸಂಭವಿಸಿದೆ. ಕಾಡು ಹಂದಿಗಳನ್ನು ಬೇಡೆಯಾಡಲು ಕಿಡಿಗೇಡಿಗಳು ಸಿಡಿಮದ್ದನ್ನು ಅಳವಡಿಸಿದ್ದಾರೆ ಎಂಬುದನ್ನು ತಿಳಿಯದೇ ರೈತ ಚನ್ನನಂಜೇಗೌಡ ಅವರು ಗ್ರಾಮದ ವಾಟರ್ ಟ್ಯಾಂಕ್‌ನ ಬಳಿ ಜಾನುವಾರುಗಳು ಮೇವು ಮೇಯಲು ಬಿಟ್ಟಿದ್ದಾರೆ. ಈ ವೇಳೆ ಸಿಡಿಮದ್ದು ಹಠಾತ್ತನೇ ಸಿಡಿದ ಪರಿಣಾಮ ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಹಸು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ರೈತ ಚನ್ನನಂಜೇಗೌಡ ಕಂಗಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಗಂಭೀರ ಗಾಯಗೊಂಡಿರುವ ಹಸುವಿಗೆ ಸೂಕ್ತ ಪರಿಹಾರ ನೀಡಬೇಕು. ಸಿಡಿಮದ್ದನ್ನು ಅಳವಡಿಸಿದ್ದ ಕಿಡಿಗೇಡಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Continue Reading

Mysore

ಎಚ್‌ಸಿಎಂ ಮನೆಗೆ ದಸಂಸ ಮುಖಂಡರಿಂದ ಮುತ್ತಿಗೆ ಯತ್ನ

Published

on

ಮೈಸೂರು: ಸಚಿವ ಡಾ. ಹೆಚ್ ಸಿ ಮಹದೇವಪ್ಪ ನಿವಾಸಕ್ಕೆ ದಲಿತ ಸಂಘರ್ಷ ಸಮಿತಿ ಮುಖಂಡರಿಂದ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಮೈಸೂರಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ದಸಂಸ ಕಾರ್ಯಕರ್ತರು ರಾಜ್ಯ ಸರ್ಕಾರರವನ್ನು ಎಷ್ಟೇ ಮನವಿ ಮಾಡಿದರೂ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಬೇಸತ್ತು ಸಚಿವ ಮಹದೇವಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸಚಿವ‌ ಮಹದೇವಪ್ಪ ನಿವಾಸಕ್ಕೆ ಕೂಡಲೇ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ.

ದಲಿತ ಸಂಘರ್ಷ ಸಮಿತಿ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಬೆಟ್ಟಯ್ಯ ಕೋಟೆ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿದ್ದು ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.

Continue Reading

Mysore

ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಪುನಾರಂಭಿಸಲು ಕೆ.ಐ.ಎ.ಡಿ.ಬಿ.ಗೆ ಆದೇಶಿಸಲು ವಿನಂತಿ

Published

on

ಮೈಸೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್,ಸದಸ್ಯರಾದ ಗೌತಮ್ ಸಾಲೇಚ ಮತ್ತು ರಿತೇಶ್ ಗೌಡ ಭೇಟಿ ಮಾಡಿ ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಬೇಸ್ ಮೆಂಟ್ನಲ್ಲಿ ನಿಲ್ಲಿಸಿದ್ದು ಪುನಾರಂಭಿಸಲು ಕೆ.ಐ.ಎ.ಡಿ.ಬಿ.ಗೆ ಆದೇಶಿಸಲು ವಿನಂತಿಸಿದರು .

ಕಾಮಗಾರಿ 2019 ರಲ್ಲಿ ಆದೇಶ ಪಡೆದ ಗುತ್ತಿಗೆದಾರರು 2021 ರಲ್ಲಿ ಬೇಸ್ ಮೆಂಟ್ ವರೆಗೆ ಮಾತ್ರ ಮಾಡಿ ನಿಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಟ್ಟಡ ಮಳೆಗೆ ಶಿಥಿಲವಾಗುತ್ತಿದೆ. ಕೇಂದ್ರ ಸರ್ಕಾರದ 3 ಕೋಟಿ ರೂಪಾಯಿ
ರಾಜ್ಯ ಸರ್ಕಾರದ 1 ಕೋಟಿ ರೂಪಾಯಿ ಮೈಸೂರು ಕೈಗಾರಿಕೆಗಳ ಸಂಘದ 50 ಲಕ್ಷ ರೂಪಾಯಿ ಕೆ.ಐ.ಎ.ಡಿ.ಬಿ.ಗೆ ವಿ.ಐ.ಪಿ.ಸಿ ಮೂಲಕ ನೀಡಿ 20020 ರಲ್ಲಿ ಕಟ್ಟಡ ಪೂರ್ಣ ಗೊಳಿಸುವ ಭರವಸೆ ಹುಸಿಯಾಗಿದೆ.

ಕೂಡಲೇ ಕಾಮಗಾರಿ ಪುನಾರಂಬಿಸುವಂತೆ ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯ ನಿರ್ವಾಹಕ ಮಹೇಶ್ ಅವರಿಗೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ದೂರವಾಣಿಯಲ್ಲಿ ಸೂಚಿಸಿದರು.

ಜಿತೋ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಸ್ಟಾರ್ ಏರ್ ಲೈನ್ಸ್ ಮಾಲೀಕ ಶ್ರೀ ಸಂಜಯ್ ಗೋದಾವತ್ ಮೈಸೂರಿನಲ್ಲಿ ಅವರ ವಿಮಾನ ಸೇವೆಯನ್ನು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಪೂರ್ಣಗೊಂಡ ಬಳಿಕ ಒದಗಿಸಲಾಗುವುದು ಎಂದು ತಿಳಿಸಿದ ವಿಷಯವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಇತು.

ಇದಕ್ಕೆ ಪ್ರಕ್ರಿಯಿಸಿದ ಮುಖ್ಯ ಕಾರ್ಯದರ್ಶಿಗಳು ವಿಮಾನಗಳ ಸದ್ಭಳಕೆ ದಿಕ್ಕಿನಲ್ಲಿ ಮೈಸೂರು ಕೈಗಾರಿಕೆಗಳ ಸಂಘ ಸೂಕ್ತ ಪ್ರಚಾರ ಮಾಡಬೇಕೆಂದರು.

Continue Reading

Trending

error: Content is protected !!