Connect with us

Mysore

ತಂದ್ರೆ ಕೊಪ್ಪಲು ಗ್ರಾಮದಲ್ಲಿ ತಂಬಾಕು ಹದಗೊಳಿಸುವ ಬ್ಯಾರೇನ್‌ಗೆ ಬೆಂಕಿ: ಸುಮಾರು 5 ಲಕ್ಷ ರೂ ನಷ್ಟ

Published

on

ವರದಿ: ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: ತಂಬಾಕು ಹದಗೊಳಿಸುವ ವೇಳೆ ಆಕಸ್ಮಿಕಬೆಂಕಿ ತಗುಲಿ ಬ್ಯಾರೇನ್ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ತಂದ್ರೆ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಗ್ರಾಮದ ಪೂಜಾರಿ ರವಿ ಎಂಬುವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರೆನ್ ಸುಟ್ಟು ಹೋಗಿದ್ದು ಸುಮಾರು 5 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಭಾನುವಾರ ಸಂಜೆ 6 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು ತಕ್ಷಣವೇ ಪೂಜಾರಿ ರವಿ ಕುಟುಂಬಸ್ಥರು, ಗ್ರಾಮಸ್ಥರು ಎತ್ತೆಚ್ಚು ಕೊಂಡು ಬೆಂಕಿ ಆರಿಸಿ ಮುಂದೆ ಅಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ.ಆದರೂ ಅಷ್ಟರಲ್ಲಿ ಒಳಗಡೆ ಹಾಕಿದ್ದ ಹೊಗೆಸೊಪ್ಪು ಸಂಪೂರ್ಣ ವಾಗಿ ಸುಟ್ಟ ಹೋಗಿರುತ್ತದೆ.


ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ ಎಷ್ಟೋ ಕುಟುಂಬಗಳು ಹೊಗೆಸೊಪ್ಪು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ, ಜೀವನ ನಡೆಸಲು ಬೇರೆ ರೀತಿಯ ಉದ್ಯೋಗ ಇರುವುದಿಲ್ಲ ಆದ್ದರಿಂದ ಸರ್ಕಾರ ಗಮನ ಹರಿಸಿ ತಂಬಾಕು ಮಂಡಳಿಯಿಂದ ಸಿಗುವ ಪರಿಹಾರವನ್ನು ನೀಡಬೇಕೆಂದು ಒತ್ತಾಯ ಮಾಡಿದ್ದಾರೆ

Continue Reading

Mysore

ಸವಿತ ಸಮಾಜ ಸಂಘಟನೆಗೆ ಒತ್ತು: ಸರ್ಕಾರಿ ಸೌಲಭ್ಯ ಮನೆಬಾಗಿಲಿಗೆ – ಬಿ. ಸಿದ್ದೇಶ್

Published

on

ತಿ.ನರಸೀಪುರ: ಸರ್ಕಾರದ ಸೌಲಭ್ಯಗಳನ್ನು ಮನೆ-ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತದೆ ಹಾಗೂ ತಾಲ್ಲೂಕಿನಾದ್ಯಂತ ಸವಿತ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ನೂತನ ಸವಿತ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಸಿದ್ದೇಶ್ ತಿಳಿಸಿದರು.

ಪತ್ರಕರ್ತರ ಜೊತೆ ಮಾತನಾಡಿ ಈ ಹಿಂದೆ ಸವಿತ ಸಮಾಜದ ಹೋಬಳಿ ಶಾಖೆಯಾಗಿ ಕಾರ್ಯನಿರ್ವಹಿಸುತ್ತ ಬಂದಿದೆ ಈಗ ಸದಸ್ಯರ ಸಂಖ್ಯೆ ಹೆಚ್ಚಾದ ಕಾರಣ ತಾಲ್ಲೂಕು ಸಂಘವಾಗಿ ಪರಿವರ್ತಿಸಲಾಗಿದೆ ಈ ಆದೇಶದ ಪ್ರತಿಯನ್ನು ತಿ.ನರಸೀಪುರ ತಾಲ್ಲೂಕು ದಂಡಾಧಿಕಾರಿಯವರಿಗೂ ಸಲ್ಲಿಸಲಾಗಿದೆ ಎಂದರು.


ಮುಂದುವರೆದು ಮಾತನಾಡಿ ನಮ್ಮಲ್ಲಿ ಕಡಿಮೆ ಜನಸಂಖ್ಯೆ ಇರುವುದರಿಂದ ಆರ್ಥಿಕವಾಗಿ ರಾಜಕೀಯವಾಗಿ ಗುರುತಿಸಿಕೊಳ್ಳಬೇಕಾದರೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟಿತರಾಗಬೇಕಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿಗೆ ಸಮಾಜದ ಏಳಿಗೆಗೆ ಶ್ರಮಿಸಲು ನಿಮ್ಮಗಳ ಸಹಕಾರ ಬಹಳ ಮುಖ್ಯವಾಗಿದೆ ಎಂದು ತಾಲ್ಲೂಕು ಸವಿತ ಸಮಾಜದವರಿಗೆ ಕರೆ ನೀಡಿದರು.

Continue Reading

Mysore

ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆದ ಕಾರ್ಗಿಲ್ ವಿಜಯೋತ್ಸವ

Published

on

ಮೈಸೂರು: ಕಾರ್ಗಿಲ್ ಯುದ್ಧದ ವೀರ ಯೋಧರ ಸ್ಮರಣಾರ್ಥ ಮೈಸೂರಿನಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಅತ್ಯಂತ ಹುಮ್ಮಸ್ಸಿನಿಂದ ಆಚರಿಸಲಾಯಿತು.

ನಗರದ ಪ್ರಸಿದ್ಧ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಸೈನಿಕ್ ಅಕಾಡೆಮಿ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜಗಳನ್ನು ಹಿಡಿದು ದೇಶಭಕ್ತಿಯನ್ನು ಮೆರದರು.

ವೃತ್ತದ ಸುತ್ತಲೂ ಜಮಾಯಿಸಿದ ವಿದ್ಯಾರ್ಥಿಗಳು ‘ಭಾರತ್ ಮಾತಾ ಕಿ ಜೈ’ ಹಾಗೂ ವೃದ್ಧಿಸಲಿ ದೇಶಪ್ರೇಮ ಎಂದು ಜೋರಾಗಿ ಘೋಷಣೆಗಳನ್ನು ಕೂಗುವ ಮೂಲಕ ಕಾರ್ಗಿಲ್ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ತ್ಯಾಗ-ಬಲಿದಾನವನ್ನು ಈ ವೇಳೆ ಸ್ಮರಿಸಲಾಯಿತು.

Continue Reading

Mysore

ಸೌದೆ ಮರ ಮಾರಾಟ ವಿವಾದ: ವೃದ್ಧೆಗೆ ಮೊಚ್ಚಿನಿಂದ ಮಾರಣಾಂತಿಕ ಹಲ್ಲೆ, ಮೂವರ ವಿರುದ್ಧ ಪ್ರಕರಣ

Published

on

ನಂಜನಗೂಡು : ಸೌದೆ ಮರ ಮಾರಾಟ ವಿಚಾರದಲ್ಲಿ ಕಿರಿಕ್ ತೆಗೆದ ಮೂವರು ಯುವಕರು ವೃದ್ದೆಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕು ಬಿಳುಗಲಿ ಗ್ರಾಮದಲ್ಲಿ ನಡೆದಿದೆ.ತೀವ್ರ ಹಲ್ಲೆಗೆ ಒಳಗಾದ ವೃದ್ದೆ ಭಾಗ್ಯಮ್ಮ(66) ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಯಂತ್,ಮಾದೇಶ ಹಾಗೂ ನಟರಾಜು ಹಲ್ಲೆ ಮಾಡಿದ ಯುವಕರಾಗಿದ್ದು ಇವರ ಮೇಲೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜುಲೈ 22 ರಂದು ಭಾಗ್ಯಮ್ಮ ರವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸೌದೆ ಮರಗಳನ್ನ ಸುಂದ್ರಪ್ಪ ಎಂಬುವರಿ ಮಾರಾಟ ಮಾಡಿದ್ದರು.ಮರಗಳನ್ನ ಸುಂದ್ರಪ್ಪ ರವರು ತುಂಬಿಕೊಂಡು ಹೋಗುವ ವೇಳೆ ಬಂದ ಜಯಂತ್ ಹಾಗೂ ಇತರರು ಭಾಗ್ಯಮ್ಮ ರವರ ಮೇಲೆ ಕ್ಯಾತೆ ತೆಗೆದು ನಮಗೆ ಸೇರಿದ ಮರಗಳನ್ನ ಮಾರಾಟ ಮಾಡಿರುವುದಾಗಿ ಆರೋಪಿಸಿ ಮೊಚ್ಚಿನಿಂದ ಹಲ್ಲೆ ನಡೆಸಿದ್ದಾರೆ.ಹಲ್ಲೆಗೊಂಗಾದ ಭಾಗ್ಯಮ್ಮ ಮೂವರು ಆರೋಪಿಗಳ ವಿರುದ್ದ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Continue Reading

Trending

error: Content is protected !!