Hassan
ಹಾಸನದಲ್ಲಿ ಬಾರಿ ಅಗ್ನಿ ಅವಘಡ
ಹಾಸನ : ಹಾಸನದಲ್ಲಿ ಬಾರಿ ಅಗ್ನಿ ಅವಘಡ
ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿ
ಧಗದಗಿಸಿ ಹೊತ್ತಿ ಉರಿಯುತ್ತಿರುವ ಫ್ಯಾಕ್ಟರಿ
ಲಕ್ಷಾಂತರ ರೂ ಮೌಲ್ಯದ ಫ್ಲೈವುಡ್‌ಗಳು ಬೆಂಕಿಗಾಹುತಿ
ಹಾಸನ ಹೊರವಲಯದ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಘಟನೆ
ಗಾರ್ಡನ್ ಫ್ಲೈವುಡ್‌ನಲ್ಲಿ ಭಾರಿ ಬೆಂಕಿ ಅವಘಡ
ಸಂಕೇತ್ ಎಂಬುವವರಿಗೆ ಸೇರಿದ ಫ್ಲೈವುಡ್ ಫ್ಯಾಕ್ಟರಿ
ಏಳು ಅಗ್ನಿಶಾಮಕದಳದ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ
ಹತೋಟಿಗೆ ಬಾರದ ಬೆಂಕಿ
ಬೆಂಕಿ ರಭಸಕ್ಕೆ ಕುಸಿದ ಫ್ಯಾಕ್ಟರಿ ಒಂದು ಭಾಗ
ಮರಗಳನ್ನು ಹೊರಗೆ ಹೊತ್ತು ಹಾಕುತ್ತಿರುವ ಸಿಬ್ಬಂದಿ
ಸಕಲೇಶಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು, ತಾಲ್ಲೂಕುಗಳಿಂದ ಬಂದಿರುವ ಅಗ್ನಿಶಾಮಕ ದಳ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Hassan
ಸೊಪ್ಪಿನಹಳ್ಳಿಯಲ್ಲಿ ಪ. ಜಾತಿ ಕುಟುಂಬಗಳಿಗೆ ರಸ್ತೆ ತಡೆ: ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ಭೀಮ್ ಆರ್ಮಿ ತಹಸೀಲ್ದಾರ್ ಗೆ ಮನವಿ
ಹಾಸನ: ಸೊಪ್ಪಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ಮನೆಗೆ ಹೋಗಿ ಬರುವುದಕ್ಕೆ ತಿರುಗಾಡಲು ಸವರ್ಣಿಯವರಿಂದ ಅಡ್ಡಿಪಡಿಸುತ್ತಿದ್ದು, ತಿರುಗಾಡಲು ರಸ್ತೆ ಬಿಡಿಸಿಕೊಡುವಂತೆ ಆಗ್ರಹಿಸಿ ಬಿಡಿಸಿಕೊಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯಿಂದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಪ್ರದೀಪ್ ಮಾತನಾಡಿ, ತಾಲ್ಲೂಕಿನ ಸಾಲಗಾಮೆ ಹೋಬಳಿಯ ಸೊಪ್ಪಿನಹಳ್ಳಿ ಗ್ರಾಮದಲ್ಲಿ ಸುಮಾರು 25-30 ವರ್ಷಗಳಿಂದ ಸರ್ಕಾರಿ ಅನುದಾನದಲ್ಲಿ ನಿರ್ಮಿತ ಮನೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಸ್ವಾಮಿ ರಾಮಯ್ಯ ಮತ್ತು ರಮೇಶ್ ರಾಮಯ್ಯ ಅವರ ಕುಟುಂಬಗಳು ಗಂಭೀರ ತೊಂದರೆ ಎದುರಿಸುತ್ತಿವೆ. ಇವರ ಮನೆಗಳಿಗೆ ಹೋಗುವ ದಾರಿಯನ್ನು ಗ್ರಾಮದ ಶಿವಪ್ರಕಾಶ್ ಶಂಕರೇಗೌಡ ಹಾಗೂ ಶಿವಲಿಂಗ ದೊಡ್ಡಗೌಡ ಮತ್ತು ಅವರ ಕುಟುಂಬದವರು ತಡೆ ಮಾಡುತ್ತಿರುವುದನ್ನು ಆರೋಪಿಸಿದರು.

ಮಕ್ಕಳು ಶಾಲೆಗೆ ಹೋಗಲು ದಾರಿ ಬಿಡದೇ ತೊಂದರೆ ನೀಡಿದ್ದು, ಹಲವಾರು ಬಾರಿ ಮಕ್ಕಳಿಗೆ ಹೊಡೆದಿರುವ ಘಟನೆ ನಡೆದಿದೆ. ಮಹಿಳೆಯರ ಮೇಲೂ ಅವಾಚ್ಯ ನಿಂದನೆ ಮಾಡಲಾಗಿದೆ ಎನ್ನಲಾಗಿದೆ. ಮನೆ ಹತ್ತಿರದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸಾಗಾಟ ಮಾಡಲು ಸಹ ಅಡ್ಡಿಪಡಿಸಿರುವುದರಿಂದ ಬೆಳೆ ಹಾನಿಯಾದ ಘಟನೆಗಳೂ ಸಂಭವಿಸಿವೆ. ಇದಲ್ಲದೆ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವುಗೊಂಡಿರುವುದಾಗಿ ದೂರಿದರು.
ದಿನನಿತ್ಯ ನಡೆಯುತ್ತಿರುವ ಈ ಅಡ್ಡಿಪಡಿವುದರಿಂದ ಕುಟುಂಬಗಳು ತಮ್ಮ ಮನೆಗಳಿಗೆ ಹೋಗುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವೇ ನಂ. 02ರಲ್ಲಿ ಇರುವ ಸುಮಾರು ಒಂದು ಗುಂಟೆ ಖಾರಾಬು ಜಾಗವನ್ನು ರಸ್ತೆಗಾಗಿ ಬಳಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಸಂಘಟನೆಯ ಉಪಾಧ್ಯಕ್ಷ ನವೀನ್ ಕುಮಾರ್, ವರುಣ್ ಕುಮಾರ್, ಚನ್ನರಾಯಪಟ್ಟಣ ತಾಲೂಕು ಉಪಾಧ್ಯಕ್ಷ ಸಂತೋಷ್, ತಾಲೂಕು ಅಧ್ಯಕ್ಷ ರವಿ, ಸಿದ್ದೇಶ್, ಕಿರಣ್ ಹಾಗೂ ಸಂಬಂಧಪಟ್ಟ ಕುಟುಂಬದವರು ಉಪಸ್ಥಿತರಿದ್ದರು.
Hassan
ಹಾಸನ ಸಂಸದರ ಬೇಡಿಕೆಗೆ ಕೇಂದ್ರದ ನಿರಾಶಾದಾಯಕ ಉತ್ತರ : ತೆಂಗು ರೈತರಿಗೆ ಪರಿಹಾರ ರಾಜ್ಯದ ಹೊಣೆ ಎಂದು ಕೇಂದ್ರ ಕೃಷಿ ಮಂತ್ರಿ
ನವದೆಹಲಿ: ಹಾಸನ ಜಿಲ್ಲೆಯಲ್ಲಿ ಬೆಳೆದಿರುವ ಲಕ್ಷಾಂತರ ಹೆಕ್ಟೇರ್ ತೆಂಗು ಬೆಳೆ ನಾಶವಾಗಿ ತೀವ್ರ ಸಂಕಷ್ಟದಲ್ಲಿರುವ ಹಾಸನ ಜಿಲ್ಲೆಯ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ತಕ್ಷಣವೇ ‘ವಿಶೇಷ ಪರಿಹಾರ’ ನೀಡಬೇಕೆಂದು ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೇರ ಉತ್ತರ ನೀಡಿದ್ದು, ಕೃಷಿ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯಗಳ ಜವಾಬ್ದಾರಿ ಎಂದು ಹೇಳುವ ಮೂಲಕ ಕೈತೊಳೆದುಕೊಂಡಿದೆ.

ಮಂಗಳವಾರ ಲೋಕಸಭೆಯಲ್ಲಿ ರೈತ ಪರ ದನಿ ಎತ್ತಿದ ಸಂಸದ ಶ್ರೇಯಸ್ ಪಟೇಲ್ ಅವರು ಜಿಲ್ಲೆಯ ಪ್ರಮುಖ ತೆಂಗು ಬೆಳೆಯುವ ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಒಟ್ಟು 1.18 ಲಕ್ಷ ಹೆಕ್ಟೇರ್ ಪ್ರದೇಶವು ರುಗೋಸ್ ವೈಟ್‌ಫ್ಲೈ ಮತ್ತು ಇತರ ರೋಗಗಳಿಂದ ತೀವ್ರ ಹಾನಿಗೊಳಗಾಗಿದೆ ಎಂಬುದನ್ನು ಸದನದ ಗಮನಕ್ಕೆ ತಂದರು. ಈ ನಷ್ಟದಿಂದ ರೈತರು ಬದುಕು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಕೇಂದ್ರ ಸರ್ಕಾರದಿಂದ ವಿಶೇಷ ಹಣಕಾಸಿನ ನೆರವು ನೀಡಬೇಕಿದೆ ಎಂದು ಅವರು ಒತ್ತಾಯಿಸಿದರು.
ಸಂಸದರ ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಕ್ಷೇತ್ರ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರವು ತನ್ನಲ್ಲಿ ಲಭ್ಯವಿರುವ ಎಸ್.ಡಿ.ಆರ್.ಎಫ್. (ರಾಜ್ಯ ವಿಪತ್ತು ಪರಿಹಾರ ನಿಧಿ) ಹಣವನ್ನೇ ಬಳಸಿ ಮೊದಲು ರೈತರಿಗೆ ನೆರವಾಗಬೇಕು. ನಷ್ಟವು ಅತಿ ದೊಡ್ಡದಾಗಿದ್ದರೆ, ಅದನ್ನು ‘ತೀವ್ರ ಸ್ವರೂಪದ ವಿಪತ್ತು’ ಎಂದು ಪರಿಗಣಿಸಿ ಎನ್.ಡಿ.ಆರ್.ಎಫ್. (ರಾಷ್ಟ್ರೀಯ ವಿಪತ್ತು ನಿಧಿ) ಅಡಿಯಲ್ಲಿ ಸಹಾಯ ಕೋರಿ ರಾಜ್ಯವೇ ಕೇಂದ್ರಕ್ಕೆ ಸರಿಯಾದ ಪ್ರಸ್ತಾವನೆಯನ್ನು ಕಳುಹಿಸಬೇಕು. ಅಂತಹ ಪ್ರಸ್ತಾವನೆ ಬಂದಾಗ ಮಾತ್ರ ಕೇಂದ್ರ ಸರ್ಕಾರವು ಸಹಾಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.

ಸಂಸದ ಶ್ರೇಯಸ್ ಪಟೇಲ್ ಅವರ ಪ್ರಯತ್ನದ ನಡುವೆಯೂ, ಕೇಂದ್ರ ಸರ್ಕಾರವು ನೇರವಾಗಿ ‘ವಿಶೇಷ ಪರಿಹಾರ’ ಘೋಷಣೆ ಮಾಡಲು ನಿರಾಕರಿಸಿದ ಕಾರಣ, ತಕ್ಷಣದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದ ಹಾಸನದ ತೆಂಗು ಬೆಳೆಗಾರರಿಗೆ ಕೇಂದ್ರದ ಈ ಉತ್ತರದಿಂದ ನಿರಾಸೆಯಾಗಿದೆ. ಪರಿಹಾರ ಸಿಗಬೇಕಾದರೆ, ರಾಜ್ಯ ಸರ್ಕಾರವು ತುರ್ತಾಗಿ ಸೂಕ್ತ ಪ್ರಸ್ತಾವನೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಒಟ್ಟಿನಲ್ಲಿ ಹಾಸನ ಜಿಲ್ಲೆಯ ಅನ್ನದಾತರ ಬಗ್ಗೆ ಕೇಂದ್ರದ ಗಮನ ಸೆಳೆದ ಸಂಸದ ಶ್ರೇಯಸ್ ಪಟೇಲ್ ಅವರ ಬದ್ಧತೆಯನ್ನು ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
Hassan
ತಿರುಪತಿಹಳ್ಳಿ ಬೆಟ್ಟದಲ್ಲಿ ಉಲ್ಕಾಪಾತ ವೀಕ್ಷಣೆ — ಸಾರ್ವಜನಿಕರಿಗೆ ವಿಶೇಷ ವ್ಯವಸ್ಥೆ
ಹಾಸನ: ಜೆಮಿನಿಡ್ ಉಲ್ಕಾಪಾತ ವೀಕ್ಷಣೆಯ ನಿಮಿತ್ತ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆ, ನಿಟ್ಟೂರು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಡಿಸೆಂಬರ್ 13ರ ರಾತ್ರಿ ಮತ್ತು 14ರ ಮುಂಜಾನೆ ವೀಕ್ಷಣಾ ಕಾರ್ಯಕ್ರಮವನ್ನು ತಿರುಪತಿಹಳ್ಳಿ ಬೆಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಡಿಸೆಂಬರ್ ತಿಂಗಳಲ್ಲಿ ಜೆಮಿನಿ ನಕ್ಷತ್ರಪುಂಜದ ದಿಕ್ಕಿನಿಂದ ಬೀಳುವ ಜೆಮಿನಿಡ್ ಉಲ್ಕಾಪಾತ ಈ ಬಾರಿ ಡಿಸೆಂಬರ್ 13ರ ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಹೆಚ್ಚು ಗೋಚರಿಸಲಿದೆ. ನಗರ ಪ್ರದೇಶಗಳಲ್ಲಿ ಬೆಳಕು ಹೆಚ್ಚು ಇರುವುದರಿಂದ ವೀಕ್ಷಣೆ ಅಸಾಧ್ಯವಾಗುವ ಕಾರಣ, ಹಾಸನದಿಂದ 20 ಕಿಮೀ ದೂರದಲ್ಲಿರುವ ತಿರುಪತಿಹಳ್ಳಿ ಬೆಟ್ಟವನ್ನು ವೀಕ್ಷಣಾ ಸ್ಥಳವಾಗಿ ಗುರುತಿಸಲಾಗಿದೆ.

ಕಾರ್ಯಕ್ರಮದಲ್ಲಿ ಆಕಾಶಶಾಸ್ತ್ರ ಹಾಗೂ ಸೌರವ್ಯೂಹದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಸ್. ರವಿಕುಮಾರ್, ಕೆ.ವಿ. ಕವಿತ, ರವಿ ಶಂಕರ್, ಅಖಿಲೇಶ್ ಪಾಟೀಲ್, ಅಹಮದ್ ಹಗರೆ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಟೆಲಿಸ್ಕೋಪ್ ಸಹಾಯದಿಂದ ಗ್ರಹ–ಉಪಗ್ರಹಗಳು, ಗೆಲಾಕ್ಸಿ, ನಕ್ಷತ್ರಗಳು ಹಾಗೂ ರಾಶಿಚಕ್ರಗಳನ್ನು ಪರಿಚಯಿಸಲಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಅಧ್ಯಕ್ಷ ಚಂದ್ರಶೇಖರ್, ಪಿಡಿಒ ಅಶ್ವತ್ಥನಾರಾಯಣ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಹಾಸನದಿಂದ ಭಾಗವಹಿಸುವ ನೋಂದಾಯಿತರಿಗೆ ಪ್ರಯಾಣ, ಲಘು ಉಪಹಾರ ಮತ್ತು ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಟ್ಟ ಪ್ರದೇಶವಾದುದರಿಂದ ಮೊತ್ತಮೊದಲ 100 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು: 9900735212, 6363907441, 944890018.
ಸುದ್ದಿಗೋಷ್ಠಿಯಲ್ಲಿ ಅಹಮದ್ ಅಗರೇ, ಜಾನಕಿ, ಮೋನಿಕಾ ಇತರರು ಹಾಜರಿದ್ದರು.
-
Mandya21 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mysore20 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Hassan23 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Mysore1 hour agoಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು
-
Kodagu24 hours agoಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ವಿಮೆ ಸೌಲಭ್ಯ
-
Hassan19 hours agoಡಿ.21ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ: ಎಸ್.ವರಲಕ್ಷ್ಮೀ
-
Mandya3 hours agoಮುತುವರ್ಜಿ ವಹಿಸಿ ಹಾಸ್ಟೆಲ್ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಡಾ.ಕುಮಾರ
-
Hassan6 hours agoವಾಲಿಬಾಲ್ ಪಂದ್ಯಾವಳಿಯಲ್ಲಿ ಜಗ್ಗಿಬಾಯ್ಸ್ ಪ್ರಥಮ ಸ್ಥಾನ
