Kodagu
ಕುಶಾಲನಗರ ಶಾಫಿ ಬಾಂಧವರಿಂದ ಈದುಲ್ ಫಿತರ್ ಆಚರಣೆ

ಕುಶಾಲನಗರ : ಸತತ ಒಂದು ತಿಂಗಳ ವ್ರತಾಚರಣೆಯ ನಂತರ ಮುಸ್ಲಿಂ ಸಮುದಾಯದ ಶಾಫಿ ಬಾಂಧವರಿಂದ ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾಗ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.
ಕುಶಾಲನಗರದ ಹಿಲಾಲ್ ಮಸೀದಿ, ಕೂಡಿಗೆ, ಶುಂಠಿಕೊಪ್ಪ, ನಂಜರಾಜಪಟ್ಟಣ ಸೇರಿದಂತೆ ಹಲವೆಡೆ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ನಮಾಜ಼್ ನೆರವೇರಿಸಲಾಯಿತು. ಊರಿನಲ್ಲಿ ಶಾಂತಿ ನೆಲೆಸಲು ಹಾಗೂ ಮಳೆಗಾಗಿ ಪ್ರಾರ್ಥಿಸಲಾಯಿತು.
ದಾನದ ಧರ್ಮವೆಂದೇ ಪ್ರಖ್ಯಾತವಾದ ಈದುಲ್ ಫಿತರ್ ಹಬ್ಬದಂದು ಶಾಫಿ ಬಾಂಧವರು ಬಡವರಿಗೆ ದಾನ, ಧರ್ಮಗಳನ್ನು ನೀಡಿದರು. ನಂತರ ಸರ್ವರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳನ್ನು ಸಾರಿದ ಮುಸ್ಲಿಂ ಭಾಂದವರು
ಈ ಸಂದರ್ಭ ಮಾತನಾಡಿದ ಕುಶಾಲನಗರ ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎಂ.ಎಸ್.ಹುಸೇನ್ ಮಾತನಾಡಿ, ಈದುಲ್ ಫಿತರ್ ನ ಶುಭಾಶಯಗಳನ್ನು ತಿಳಿಸಿದರು.
ಹಿಲಾಲ್ ಮಸೀದಿ ಧರ್ಮಗುರುಗಳಾದ ನಾಸರ್ ಫೈಜಿ಼ ಮಾತನಾಡಿ, ನಾಡಿನಲ್ಲಿ ಸರ್ವರೂ ಶಾಂತಿ, ಸಹೋದರತೆಯಿಂದ ಬಾಳಬೇಕಾಗಿದೆ ಎಂದರು.
ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ನಾಡಿನಲ್ಲಿ ಮಳೆಯಿಲ್ಲದೇ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದ ಅವರು, ಸರ್ವರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು ಹಾಗೂ ಹಿಂದೂ ಸಮುದಾಯದವರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭ ಕುಶಾಲನಗರದ ಹಿಲಾಲ್ ಮಸೀದಿ ಕಮಿಟಿ ಪದಾಧಿಕಾರಿಗಳು, ಅಲ್ ಇಹ್ಸಾನ್ ಅಸೋಸಿಯೇಷನ್ ಪ್ರಮುಖರು, ನುಸ್ರತುಲ್ ಇಸ್ಲಾಂ ನ ಪದಾಧಿಕಾರಿಗಳು ಹಾಗೂ ಊರಿನ ಪ್ರಮುಖರು ಇದ್ದರು.
ವರದಿ.ಟಿ.ಆರ್.ಪ್ರಭುದೇವ್
ಕುಶಾಲನಗರ
Kodagu
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ

ವರದಿ: ಸಿಂಗಿ ಸತೀಶ್
ಗೋಣಿಕೊಪ್ಪ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಅತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗೋಲ್ಲಿ ಸಮೀಪ ಭಾನುವಾರ ನಡೆದಿದೆ.
ಚೆನ್ನಂಗೋಲ್ಲಿ ಸಮೀಪ ಕೆ.ಕೆ ತಿಮ್ಮಯ್ಯ ಅವರ ಕೆರೆಗೆ ನಾಲ್ಕನೇ ತರಗತಿ ವಿದ್ಯಾರ್ಥಿನಿ ಬಿದ್ದು ಸಾವನ್ನಪ್ಪಿದ್ದಾಳೆ.
ತಿಮ್ಮಯ್ಯ ಅವರ ಕಾಫಿ ತೋಟದ ಕಾರ್ಮಿಕರಾದ ಭವಾನಿ ಅವರ ಮಗಳು ಲಾವಣ್ಯ ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಭಾನುವಾರ ಕೆರೆಯ ದಡದಲ್ಲಿ ಆರು ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಮೃತಪಟ್ಟ ಲಾವಣ್ಯ, ಮತ್ತು ಉಷಾ, ಶೋಭಿತಾ ಈ ಮೂವರು ವಿದ್ಯಾರ್ಥಿಗಳು ಆಟವಾಡುವ ಉತ್ಸಾಹದಲ್ಲಿ ಕೆರೆಗೆ ಹಾರಿದ್ದಾರೆ. ತೋಟಕ್ಕೆ ನೀರು ಹಾಯಿಸಿದ್ದರಿಂದ ಕೆರೆಯಲ್ಲಿ ನೀರು ಬತ್ತಿ ಹೋಗಿದ್ದು, ಕೇವಲ ಕೆಸರಿನಿಂದ ತುಂಬಿತ್ತು. ಇದಲ್ಲಿ ಮೂವರು ಮಕ್ಕಳು ಕೆಸರಿನಲ್ಲಿ ಸಿಲುಕಿಕೊಂಡು ಕಿರುಚಾಡಿದ್ದಾರೆ.
ದಡದ ಮೇಲಿದ್ದ ಮೂರು ಮಕ್ಕಳು ಸಮೀಪದ ಪೋಷಕರಿಗೆ ಮಾಹಿತಿ ಮುಟ್ಟಿಸಲು ಹೋದಾಗ, ಈ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ಕಾರ್ಮಿಕರು ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದಾರೆ.
ಕೆಸರಿನಲ್ಲಿ ಸಿಲುಕಿದ ಇಬ್ಬರು ಮಕ್ಕಳನ್ನ ರಕ್ಷಿಸಿದರೇ, ಲಾವಣ್ಯಳ ಜೀವ ಉಳಿಸಲು ಸಾಧ್ಯವಾಗಿಲ್ಲ.
ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಪವನ್, 3ನೇ ತರಗತಿ ಓದುತ್ತಿರುವ ಲೋಹಿತ್, ಶರಣ್, ಶೋಭಿತಾ ಹಾಗೂ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಉಷಾ ಮತ್ತು ಮೃತಪಟ್ಟ ಲಾವಣ್ಯ ಕಣ್ಣಮುಚ್ಚಾಲೆ ಆಟವಾಡುತ್ತಿದ್ದರು.
ಈ ಮಕ್ಕಳು ಚೆನ್ನಂಗೋಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು ಸೋಮವಾರ ವಾರ್ಷಿಕ ಪರೀಕ್ಷೆಯನ್ನು ಬರೆಯಬೇಕಾಗಿತ್ತು. ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆ ಸೋಮವಾರ ಶಾಲೆಗೆ ರಜೆ ನೀಡಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kodagu
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರೂರು ಗ್ರಾಮದ ಲೈನ್ ಮನೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆಯಾಗಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.
ಬಲ್ಲಮಾವಟಿ ಪೇರೂರು ಗ್ರಾಮದ ತೋಳಂಡ ಪೂಣಚ್ಚ ಎಂಬುವವರ ಲೈನ್ ಮನೆಯಲ್ಲಿ ಶನಿವಾರ ರಾತ್ರಿ (ದಿನಾಂಕ:15/03/2025/ 8.ಗಂಟೆಗೆ )ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿ ಬಳಿಕ ಬಿಟ್ಟುಪರಾರಿ ಯಾಗಿದ್ದಾಳೆ.
ಜನರು ವಾಸವಿಲ್ಲದ ಲೈನ್ ಮನೆಯಲ್ಲಿ ಮಗುವಿನ ಕೂಗು ಕೇಳಿದ ಸ್ಥಳೀಯರು ಮನೆ ಮಾಲೀಕ ಪೂಣಚ್ಚ ಎಂಬುವರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದ ಮಾಲಿಕ ಪೂಣಚ್ಚ ಎಂಬುವವರು ಮಗುವಿನ ಬಳಿ ಯಾರು ಇಲ್ಲದಿರುವುದನ್ನು ಕಂಡು 112 ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ
ಸ್ಥಳಕ್ಕೆ ಧಾವಿಸಿದ 112 ಸಿಬ್ಬಂದಿಗಳಾದ ಮುಖ್ಯಪೇದೆ ರಾಜೇಶ್, ಮತ್ತು ಮೊಣ್ಣಪ್ಪ ರವರು ಮಗುವನ್ನು ರಕ್ಷಿಸಿ ನಾಪೋಕ್ಲು ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಆಂಬುಲೆನ್ಸಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರಕ್ತದ ಮಡುವಿನಲ್ಲಿ ಇರುವೆಗಳೊಂದಿಗೆ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಸಂಬಂಧ ಮಡಿಕೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮಗುವಿನ ಅರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Kodagu
ಮಾನವ-ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ

ಮಡಿಕೇರಿ: ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಒಂದೆಡೆ ರೈತರು, ಮತ್ತೊಂದೆಡೆ ಅರಣ್ಯ ಸಿಬ್ಬಂದಿಗಳು ಸಾವನ್ನಪ್ಪುತ್ತಿದ್ದು ಈ ಸಂಬಂಧ ವೈಜ್ಞಾನಿಕವಾಗಿ ಕ್ರಮ ವಹಿಸುವ ಕೈಗೊಂಡ ಕ್ರಮಗಳನ್ನು ಕುರಿತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸ ಸಚಿವ ಅವರಿಂದ ಮಾಹಿತಿ ಪಡೆದಿದ್ದಾರೆ.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು ಭೌತಿಕ ಅಡೆತಡೆಗಳ ನಿರ್ಮಾಣ: ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ/ನಿರ್ವಹಣೆ, ಆನೆತಡೆ ಕಂದಕ ನಿರ್ಮಾಣ/ನಿರ್ವಹಣೆ ಮಾಡಲಾಗಿದ್ದು ಮತ್ತು ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಾನವ ಆನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 391.832 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದರು.
ಆನೆ ಕಾರ್ಯಪಡೆಗಳ ಸ್ಥಾಪನೆ: ಸರ್ಕಾರವು ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಾಗೂ ಚಾಮರಾಜನಗರ ಜಿಲ್ಲೆ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ 08 ಆನೆ ಕಾರ್ಯಪಡೆ ರಚಿಸಲಾಗಿದೆ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ವಿವರಿಸಿದ್ದಾರೆ.
ಚಿರತೆ ಕಾರ್ಯಪಡೆಗಳ ಸ್ಥಾಪನೆ: ಸರ್ಕಾರವು ಮೈಸೂರು ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಟಿ.ನರಸೀಪುರ, ಮಂಡ್ಯ, ಪಾಂಡವಪುರ ಹಾಗೂ ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚಿರತೆ ಹಾವಳಿ ನಿಭಾಯಿಸುವ ನಿಟ್ಟಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ, ಮೈಸೂರು ಇವರ ನೇತೃತ್ವದಲ್ಲಿ ಚಿರತೆ ಕಾರ್ಯಪಡೆ ರಚಿಸಲಾಗಿದೆ. ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ, ಸೆರೆಹಿಡಿದು ಆಗ್ಲಿಂದಾಗ್ಗೆ ಆನೆ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನಿಡಿದ್ದಾರೆ.
-
Chamarajanagar21 hours ago
ಕಾಂಗ್ರೆಸ್ ಗೆ ಭರ್ಜರಿ ಗೆಲುವು
-
Uncategorized20 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್
-
Chamarajanagar22 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Chikmagalur23 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
National - International13 hours ago
ಪಾಕ್ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ
-
Chamarajanagar16 hours ago
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ
-
Kodagu15 hours ago
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ
-
Mandya18 hours ago
ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್ಡಿಕೆ ಕಳವಳ