Hassan
ಕಾಡಾನೆ ದಾಳಿಯಿಂದ ತಂದೆ–ಮಗ ಅದೃಷ್ಟವಶಾತ್ ಪಾರು
ಸುಮಾರು 100 ಮೀಟರ್‌ವರೆಗೆ ಹಿಂಬಾಲಿಸಿದ ಕಾಡಾನೆ – ಗ್ರಾಮದಲ್ಲಿ ಭೀತಿ ವಾತಾವರಣ
ಬೇಲೂರು: ತಾಲೂಕಿನ ಕುಶವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಕ್ರವಳ್ಳಿ ಗ್ರಾಮದ ಸಮೀಪ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಭಾನುವಾರ ಮಧ್ಯಾಹ್ನ ತಂದೆ ಹಾಗೂ ಮಗನ ಮೇಲೆ ಕಾಡಾನೆಯೊಂದು ದಾಳಿ ನಡೆಸಲು ಮುಂದಾದ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.
ಬಕ್ರವಳ್ಳಿ ಗ್ರಾಮದ ನಿವಾಸಿಗಳಾದ ನಾಗರಾಜು ಹಾಗೂ ಅವರ ಪುತ್ರ ವೇದರಾಜು ಅವರಿಗೆ ಸೇರಿದ ತೋಟದಬಳಿ ತಮ್ಮ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ತೋಟದ ಸಮೀಪ ಅಡಗಿಕೊಂಡಿದ್ದ ಒಂಟಿ ಕಾಡಾನೆಯೊಂದು ಏಕಾಏಕಿ ಅವರ ಮುಂದೆ ಬಂದು ದಾಳಿ ನಡೆಸಲು ಸಜ್ಜಾಯಿತು.

ಅಪಾಯವನ್ನು ಗಮನಿಸಿದ ನಾಗರಾಜು ಹಾಗೂ ವೇದರಾಜು ತಕ್ಷಣವೇ ತಮ್ಮ ದ್ವಿಚಕ್ರ ವಾಹನವನ್ನು ಹಿಂದಕ್ಕೆ ತಿರುಗಿಸಿ ವೇಗವಾಗಿ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಕಾಡಾನೆಯೂ ಅದೇ ವೇಗದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಸುಮಾರು 100 ಮೀಟರ್ ದೂರವರೆಗೆ ಅಟ್ಟಾಡಿಸಿದೆ. ಇದನ್ನು ಗಮನಿಸಿದ ತಂದೆ–ಮಗನಿಗೆ ತುಂಬಾ ಭಯ ಕೊಂಡಿದ್ದ ಅವರು ಅದೃಷ್ಟವಶಾತ್, ಸ್ವಲ್ಪ ಸಮಯದ ಬಳಿಕ ಕಾಡಾನೆ ಹಿಂದಿರುಗಿದ್ದು, ನಾಗರಾಜು ಹಾಗೂ ವೇದರಾಜು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಹುಸ್ಕೂರ್ ಕೋಗಿಲೆ ಮನೆ ಬಕ್ರವಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 20 ಕಾಡಾನೆಗಳ ಓಡಾಟ ಹೆಚ್ಚಾಗಿದ್ದು, ರೈತರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ತೋಟಗಳಿಗೆ ಕೆಲಸಕ್ಕೆ ಹೋಗುವ ರೈತರು ಜೀವಭಯದಿಂದ ಕೆಲಸ ಮಾಡುವಂತಾಗಿದೆ. ಕಾಡಾನೆಗಳಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಗಸ್ತು ಹೆಚ್ಚಿಸಬೇಕು ಹಾಗೂ ಎಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Hassan
ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್‌ಎ -2 ಕಾರ್ಯಾಗಾರವನ್ನು ಉದ್ಘಾಟಿಸಿದ ಸಿ.ಎನ್.ಬಾಲಕೃಷ್ಣ
ವರದಿ: ದಯಾನಂದ ಶೆಟ್ಟಿಹಳ್ಳಿ
ಚನ್ನರಾಯಪಟ್ಟಣ: ಎಸ್‌ಐಆರ್ ಪ್ರಕ್ರಿಯೆಯ ಕುರಿತು ಸುಳ್ಳು ಜನಾಭಿಪ್ರಾಯ ಮೂಡಿಸಲು, ಪ್ರಜಾಪ್ರಭುತ್ವವನ್ನು ಅಪಖ್ಯಾತಿಗೊಳಿಸಲು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಆರೋಪಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರದಂದು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ದ
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್‌ಎ -2 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

, ಮತದಾರರ ಪಟ್ಟಿಯನ್ನು ಶುದ್ಧ, ಹೆಚ್ಚು ಪಾರದರ್ಶಕ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುವುದು ಎಸ್‌ಐಆರ್‌ನ ಗುರಿಯಾಗಿದೆ. ಈ ಮಹತ್ವದ ಪ್ರಕ್ರಿಯೆಯ ಬಗ್ಗೆ ಗೊಂದಲವನ್ನು ಹರಡುವುದು ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾತ್ರವಲ್ಲದೆ ನಾಗರಿಕರ ಹಕ್ಕುಗಳಿಗೆ ಮಾಡಿದ ಅವಮಾನವೂ ಆಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ನಕಾರಾತ್ಮಕ ರಾಜಕೀಯವನ್ನು ತ್ಯಜಿಸಿ, ಕಾನೂನು ಪ್ರಕ್ರಿಯೆಯನ್ನು ಗೌರವಿಸಿ ರಚನಾತ್ಮಕ ಸಲಹೆಗಳನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.
ವಿರೋಧ ಪಕ್ಷಗಳು ತಮ್ಮ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ. ಪಾರದರ್ಶಕ ಮತದಾರರ ಪಟ್ಟಿಯು ಅವಕಾಶವಾದಿ ರಾಜಕೀಯವನ್ನು ದುರ್ಬಲಗೊಳಿಸುವುದರಿಂದ ವಿರೋಧ ಪಕ್ಷಗಳು ಚುನಾವಣಾ ಸ್ವಚ್ಛತೆಗೆ ಹೆದರುತ್ತಿವೆ. ಮೊದಲ ದಿನದಿಂದಲೇ SIR ಬಗ್ಗೆ ಗೊಂದಲ, ಭಯ ಮತ್ತು ಸುಳ್ಳುಗಳನ್ನು ಬಿತ್ತುವ ಮೂಲಕ ಸಾರ್ವಜನಿಕರನ್ನು ದಾರಿತಪ್ಪಿಸಿವೆ. ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದೆ.

ವಿರೋಧ ಪಕ್ಷಗಳು ಮತ್ತು ಅದರ ಮಿತ್ರಪಕ್ಷಗಳ ರಾಜಕೀಯವು ಸತ್ಯಗಳ ಮೇಲೆ ಅಲ್ಲ, ವದಂತಿಗಳು, ಅಪನಂಬಿಕೆ ಮತ್ತು ಮತಬ್ಯಾಂಕ್ ಲೆಕ್ಕಾಚಾರಗಳ ಮೇಲೆ ಆಧಾರಿತವಾಗಿದೆ.
ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಯಾರು ಬಯಸುತ್ತಾರೆ ಮತ್ತು ರಾಜಕೀಯ ಲಾಭಕ್ಕಾಗಿ ಯಾರು ಗೊಂದಲವನ್ನು ಹರಡುತ್ತಾರೆ ಎಂಬುದನ್ನು ಸಾರ್ವಜನಿಕರು ಈಗ ಅರ್ಥಮಾಡಿಕೊಂಡಿದ್ದಾರೆ, ಗೊಂದಲವನ್ನು ಹರಡುವವರಿಗೆ ಸೂಕ್ತ ಉತ್ತರ ನೀಡುತ್ತಾರೆ. ಎಲ್ಲಾ ಮತದಾರರು ವದಂತಿಗಳಿಗೆ ಗಮನ ಕೊಡಬಾರದು ಮತ್ತು ತಮ್ಮ ಮತದಾನದ ಹಕ್ಕುಗಳನ್ನು ರಕ್ಷಿಸಲು ಜಾಗೃತರಾಗಿರಬೇಕು ಎಂದು ಅವರು ಮನವಿ ಮಾಡಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬೂತ್‌ಗಳಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸುವ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಎಚ್ಚರವಹಿಸಬೇಕೆಂದರು. ಕ್ಷೇತ್ರದ ಪ್ರತಿಯೊಂದು ಬೂತ್‌ಗಳಲ್ಲಿ ಬಿಎಲ್‌ಎಗಳು ಪರಿಷ್ಕರಣೆಗಾಗಿ ಹೋದಾಗ ಜೆಡಿಎಸ್ ಕಾರ್ಯಕರ್ತರು ಜತೆಯಲ್ಲಿದ್ದುಕೊಂಡು ಸಹಕಾರ ನೀಡಬೇಕು. ಮೃತರಾದವರು, ಗ್ರಾಮ,ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು ಮತ್ತು ಎರಡು ಕಡೆಗಳಲ್ಲಿ ಬರುವ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡಬೇಕು. 18 ವರ್ಷ ತುಂಬಿದವರನ್ನು ಹೊಸ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು.ಜತೆಗೆ ಮುಂಬರುವ ಚುನಾವಣೆಗಳಿಗೆ ಅರ್ಹ ಮತದಾರರು ಮಾತ್ರ ಮತದಾನ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಬೂತ್ ಏಜೆಂಟರದ್ದಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸಮಪರ್ಕವಾಗಿ ಕಾರ್ಯ ನಿರ್ವಹಿಸಬೇಕೆಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿಗೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕ್ಷೇತ್ರದ ಕಾರ್ಯಕರ್ತರು ಎಲ್ಲರನ್ನು ಒಗ್ಗೂಡಿಸಿ ಪಕ್ಷವನ್ನು ಸಂಘಟಿಸಬೇಕು. ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ, ಅರ್ಹ ಮತದಾರರನ್ನು ಗುರುತಿಸಿ, ನೇರವಾಗಿ ಅರ್ಜಿಗಳನ್ನು ಪಡೆದು ಪರಿಷ್ಕರಣೆ ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಬಿಎಲ್‌ಎಗಳು ನಿರಂತರ ಪರಿಶ್ರಮದಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಕೈಗೊಂಡು, ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿಂದಲೇ ಕ್ರಿಯಾಶೀಲರಾಗಬೇಕು ಎಂದು ಅವರು ಸಲಹೆ ನೀಡಿದರು.

ಬಿಎಲ್ಎ ಕಾರ್ಯಗಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವೆಂಕಟೇಶ್ ಮತ್ತು ಅಶ್ವಿನ್ ಎಸ್ಐಆರ್ ಕುರಿತಂತೆ ಎಸ್ಐಆರ್‌ನ ಹಂತಗಳು ಮತ್ತು ಪ್ರತಿ ಹಂತದಲ್ಲಿನ ಪ್ರಕ್ರಿಯೆಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.
ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಜೆಡಿಎಸ್ ಮುಖಂಡರಾದ,ಪರಮ ಕೃಷ್ಣೇಗೌಡ, ಬಿ.ಎಚ್.ಶಿವಣ್ಣ, ವಿ.ಎನ್.ರಾಜಣ್ಣ. ಚಂದ್ರಪ್ಪ, ಚಿಕ್ಕಬಿಳ್ತಿ ಪ್ರವೀಣ್, ರವೀಶ್, ವಿಕ್ಟರ್, ಧರ್ಮ, ಉಮೇಶ್, ವಡ್ಡರ ಹಳ್ಳಿ ರಾಜಣ್ಣ, ದಿಡಗ ವಾಸು, ಮೂಡನಹಳ್ಳಿ ಚಂದ್ರಣ್ಣ, ಬಾಗೂರು ಶಿವಣ್ಣ, ಕಾರೇಹಳ್ಳಿ ನಟೇಶ್, ಮಖಾನ್ ಶಿವು, ಡಿಶ್ ಕುಮಾರ್, ಪೂರ್ಣಿಮಾ ಟಿಎಪಿಸಿಎಂಎಸ್ ನ ಅಧ್ಯಕ್ಷ ಎಚ್.ಆರ್. ವೆಂಕಟೇಶಮೂರ್ತಿ, ನಿರ್ದೇಶಕ ಅನಿಲ್ ಮರಗೂರು ಪುರಸಭಾ ಮಾಜಿ ಅಧ್ಯಕ್ಷ ಕೋಟೆಮೋಹನ್ ಸೇರಿದಂತೆ ಪುರಸಭಾ ಸದಸ್ಯರುಗಳು ಹಾಗೂ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಎಲ್ಲಾ ಹೋಬಳಿಗಳ ಜೆಡಿಎಸ್ ಸದಸ್ಯರು ಭಾಗವಹಿಸಿದ್ದರು.
Hassan
ಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ ಶ್ರೇಯಸ್ ಪಟೇಲ್
ಹಾಸನ: ಸಂಸದ ಶ್ರೇಯಸ್ ಪಟೇಲ್ ಅವರು ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು, ಅರಸೀಕೆರೆ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಕರ್ನಾಟಕ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಅವರು ಹೇಳಿರುವಂತೆ, ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಲಿಂಗೇಗೌಡರು ಪ್ರಸ್ತುತ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದು, ಪಕ್ಷವನ್ನು ಕಠಿಣ ಪರಿಸ್ಥಿತಿಗಳಲ್ಲಿಯೂ ತಳಮಟ್ಟದಿಂದ ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಅನುಭವಸಂಪನ್ನ ನಾಯಕನಾಗಿದ್ದು, ಸದನದಲ್ಲಿ ತಮ್ಮ ವಾಕ್ಚಾತುರ್ಯ ಮತ್ತು ಪಕ್ಷದ ನಿಲುವುಗಳನ್ನು ಗಟ್ಟಿಯಾಗಿ ಪ್ರತಿಪಾದಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ.


ಶ್ರೇಯಸ್ ಪಟೇಲ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶಿವಲಿಂಗೇಗೌಡರ ಕೊಡುಗೆ ಪ್ರಮುಖವಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದರೆ ಹಾಸನ ಜಿಲ್ಲೆಯ ಅಭಿವೃದ್ಧಿ ವೇಗಗೊಳ್ಳುತ್ತದೆ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮನವಿಯು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಗಮನಸೆಳೆಯುತ್ತಿದೆ.
Hassan
ಸಿಡಿಲು ಬಡಿದು ಗಾಯಗೊಂಡಿದ್ದ ಹಾಸನದ ರೈತ ಮಂಜರಾಜ್ ಆಸ್ಪತ್ರೆಯಲ್ಲಿ ಸಾ*ವು
-
Special21 hours agoಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ: ಅರ್ಜಿ ಆಹ್ವಾನ!
-
Hassan24 hours agoಹಾಸನ ಜಿಲ್ಲೆಯಲ್ಲಿ ಭಾರೀ ಮಳೆ: ಕೆರೆ–ಕಟ್ಟೆಗಳು ತುಂಬಿ ರೈತರಲ್ಲಿ ಸಂತಸ
-
Special10 hours agoLPG ಸಿಲಿಂಡರ್ ಹೊಸ ನಿಯಮಗಳು: ಈ ತಪ್ಪು ಮಾಡಿದ್ರೆ ಗ್ಯಾಸ್ ಕನೆಕ್ಷನ್ ಬ್ಲಾಕ್ ಆಗಬಹುದು!
-
State23 hours agoಕರ್ನಾಟಕದಲ್ಲಿ ಗುಡುಗು–ಸಿಡಿಲು ಮಳೆ ಎಚ್ಚರಿಕೆ: ಆರೆಂಜ್, ಯೆಲ್ಲೋ ಅಲರ್ಟ್ IMDಯಿಂದ ಘೋಷಣೆ
-
Mandya49 minutes agoಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿತ: ಸುಮಲತಾ ಅಂಬರೀಷ್
-
National23 hours agoಈ ಬಾರಿ ಕೋಲ್ಕತ್ತಾದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
-
Politics22 hours agoಜೈಪುರದಲ್ಲಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
-
Hassan1 hour agoಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ ಶ್ರೇಯಸ್ ಪಟೇಲ್

