Connect with us

Mysore

ರೈತ ಸಂಘದ ಹರಿಕಾರ ಪ್ರೊ. ನಂಜುಂಡಸ್ವಾಮಿ ಪ್ರತಿಮೆ ಸ್ಥಾಪನೆಗೆ ರೈತ ಮುಖಂಡರ ಆಗ್ರಹ

Published

on

ಪಟ್ಟಣದ ಯಾವುದಾದರೂ ವೃತ್ತದಲ್ಲಿ ಪ್ರೊಫೆಸರ್ ಪುತ್ಥಳಿ ಮತ್ತು ವೃತ್ತಕ್ಕೆ ಹೆಸರಿಡುವಂತೆ ಒತ್ತಾಯ.

ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಣಯ

ನಂಜನಗೂಡು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರೈತರ ಸಭೆಯನ್ನು ನಡೆಸಲಾಯಿತು.
ಡಾ. ಸ್ವಾಮಿನಾಥನ್ ಭಾವಚಿತ್ರಕ್ಕೆ ತಹಶೀಲ್ದಾರ್ ಶಿವಕುಮಾರ್ ಪುಷ್ಪಾಚನೆ ಮಾಡಿದರು.
ನಂತರ ಮಾತನಾಡಿದ ಅವರು, ಇತಿಹಾಸ ಪೂರ್ವದಲ್ಲಿ ತಿನ್ನುವ ಆಹಾರಕ್ಕೆ ತೊಂದರೆಯಾಗ ಡಾ. ಸ್ವಾಮಿನಾಥನ್ ರವರು ಸಾಕಷ್ಟು ಕೊಡುಗೆ ನೀಡಿ ಶ್ರಮಿಸಿದವರು. ನಾವು ಅವರನ್ನು ಸ್ಮರಿಸಬೇಕು. ಮುಂದಿನ ಯುವ ಪೀಳಿಗೆಗೆ ಡಾ. ಸ್ವಾಮಿನಾಥನ್ ರವರ ಇತಿಹಾಸವನ್ನು ತಿಳಿಸಬೇಕು ಎಂದು ಹೇಳಿದರು.
ನಂತರ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮತ್ತು ರೈತ ಮುಖಂಡರು ನಂಜನಗೂಡು ಪಟ್ಟಣದ ಯಾವುದಾದರೂ ಪ್ರಮುಖ ವೃತ್ತಕ್ಕೆ ರೈತ ಸಂಘದ ಹರಿಕಾರ ಪ್ರೊಫೆಸರ್ ನಂಜುಂಡಸ್ವಾಮಿ ರವರ ಪುತ್ಥಳಿಯನ್ನು ಅನಾವರಣ ಮಾಡಬೇಕು ಎಂದು ಆಗ್ರಹಪಡಿಸಿದರು.
ನಂಜನಗೂಡು ಪಟ್ಟಣದ ನಗರ ಸಭೆಯ ಆಯುಕ್ತರ ಜೊತೆ ಚರ್ಚಿಸಿ ನಾನು ಸ್ಪಷ್ಟ ಮಾಹಿತಿಯನ್ನು ನೀಡುತ್ತೇನೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸತೀಶ್, ಮಂಜುನಾಥ್, ಮಹದೇವನಾಯಕ, ಸಂಚಾಲಕ ಪೈಲ್ವಾನ್ ವೇಣು, ಶಿವಣ್ಣ, ಮಾದೇಗೌಡ, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ವಿಧಿವಶ

Published

on

ಮೈಸೂರು: ಹೆಸರಾಂತ ಜಾನಪದ ಶಾಸ್ತ್ರಜ್ಞೆ ಡಾ.ಜಯಲಕ್ಷ್ಮೀ ಸೀತಾಪುರ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ವಾರ ಅವರು ಬೆಂಗಳೂರಿಗೆ‌ ಕಾರಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದವರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ ‘ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು’ ಕುರಿತು ಪಿಎಚ್.ಡಿ ಪದವಿ ಪಡೆದರು. ಅಮೆರಿಕದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು.

ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಅವರು ಮಾರ್ಗದರ್ಶಕರಾಗಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಿಶಂಪ ಪ್ರಶಸ್ತಿ, ಮುದ್ದು ಮಾದಪ್ಪ ಪುರಸ್ಕಾರ, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾಗಿದ್ದರು.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಆದಿಶಕ್ತಿ ಮುತ್ತುತಾಳಮ್ಮ‌ ದೇವರ ರಥೋತ್ಸವ

Published

on

ಸಾಲಿಗ್ರಾಮ  : ತಾಲೂಕಿನ‌ ಚಿಕ್ಕಕೊಪ್ಪಲು ‌ಗ್ರಾಮದಲ್ಲಿ‌ ಬಂಡಿಹಬ್ಬದ ಪ್ರಯುಕ್ತ ಶ್ರೀ ಆದಿಶಕ್ತಿ ಮುತ್ತುತಾಳಮ್ಮ‌ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನಡೆಯಿತು.
11 ವರ್ಷದ ನಂತರ ನಡೆದ ಈ ಹಬ್ಬದ ಹಿನ್ನಲೆಯಲ್ಲಿ ಚಿಕ್ಕಕೊಪ್ಪಲು ಗ್ರಾಮದ ದೇವರಹಟ್ಟಿ ಬಳಿ ಹೂವಿನ ಅಲಂಕಾರ ದಿಂದ ಶೃಂಗಾರಗೊಂಡಿದ್ದ ರಥದಲ್ಲಿ ಆದಿಶಕ್ತಿ ಮುತ್ತುತಾಳಮ್ಮ‌ ದೇವರನ್ನ ಪ್ರತಿಷ್ಠಾಪಿಸಿದ ಬಳಿದ ಅರ್ಚಕ ಮಂಜುನಾಯಕ್ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ನಂತರ ಹಾಜರಿದ್ದ ಭಕ್ತರು ದೇವರಿಗೆ ಚಪ್ಪಾಳೆ- ಜಯಕಾರ ದೊಂದಿಗೆ ರಥವನ್ನು ಗ್ರಾಮದಿಂದ ಕುಪ್ಪೆ ಗ್ರಾಮಕ್ಕೆ ಎಳೆದು ತಂದು ದೂಳ್ ಮರಿ ಬಲಿ ಕೊಟ್ಟ ನಂತರ ಮತ್ತೆ ಚಿಕ್ಕಕೊಪ್ಪಲು ಗ್ರಾಮದ ಹೊರವಲಯದ ಬಳಿ ಇರುವ ಶ್ರೀ ಆದಿಶಕ್ತಿ ಮುತ್ತುತಾಳಮ್ಮ ದೇವರ ದೇವಸ್ಥಾನಕ್ಕೆ ತಂದು ಸಂಭ್ರಮಿಸಿದರು.

21 ಕ್ಕೆ ಮಡೆ ಹಬ್ಬ
14 ಶುಕ್ರವಾರ ದಿಂದ ಗ್ರಾಮದಲ್ಲಿ ಆಂಭಗೊಂಡ ಬಂಡಿ ಹಬ್ಬವು 21 ರ ಶುಕ್ರವಾರ ಸಂಜೆ 7 ಗಂಟೆಗೆ ಗ್ರಾಮದ‌ ಮಲ್ಲಮ್ಮನ ಕೊಳದ ಬಳಿಯಿಂದ ತಂ ಬ್ಬಿಟ್ಟಿನ ಆರತಿಯನ್ನು ಗ್ರಾಮದ ಹೆಬ್ಬಾಗಿಲಿನ ವರಿಗೆ ಮೆರವಣಿಗೆ ಮಾಡುವ ಮೂಲಕ ಮಡೆ ಹಬ್ಬ ನಡೆದು, 8 ದಿನಗಳ ಕಾಲ ನಡೆದ ಮುತ್ತುತಾಳಮ್ನ‌ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಕ್ತಾಯವಾಗಲಿದೆ.

ಆನಂತರ ಭಕ್ತಾಧಿಗಳು ಮತ್ತು ಗ್ರಾಮಸ್ಥರು ಆದಿ ಶಕ್ತಿ ಮುತ್ತುತಾಳಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹಬ್ಬದ ಹಿನ್ನಲೆಯಲ್ಲಿ ದೇವಾಲಯದ ಬಳಿ ಹಾಕಲಾಗಿದ್ದ ಕೊಂಡ ಹಾದು ತಮ್ಮ‌ಇಷ್ಟಾರ್ಥಗಳು  ನೇರವೇರಿಸುವಂತೆ ಮತ್ತು ಗ್ರಾಮಕ್ಕೆ ಒಳಿತಾಗುವಂತೆ ಪ್ರಾರ್ಥಿಸಿಕೊಂಡರು.
ಬಂಡಿ ಹಬ್ಬ ಮತ್ತು ರಥೋತ್ಸವದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಹಾಕಲಾಗಿದ್ದ ವಿದ್ಯುತ್ ಆಲಂಕಾರ ಮತ್ತು ವಿವಿಧ ಬಗೆಯ ಪಟಾಕಿಗಳ ಆರ್ಭಟ ವೀರಗಾಸೆಯ ನೃತ್ಯಗಳು ಜೊತೆಗೆ ನಗಾರಿ ಶಬ್ದ ಅಲ್ಲದೇ ಯುವಕರ ಭರ್ಜರಿ ನೃತ್ಯ ಮನಸೂರೆಗೊಂಡಿತು. ಬೆಳಿಗ್ಗೆ 6 ಗಂಟೆಯಿಂದಲೇ ಮುತ್ತುತಾಳಮ್ಮ ದೇವಾಲಯದಲ್ಲಿ ಹೋಮ ಮತ್ತು ವಿಶೇಷ ಪೂಜಾಕಾರ್ಯ ನಡೆದವು.
ರಥೋತ್ಸವದಲ್ಲಿ ಯಜಮಾನರಾದ ಟಿ.ಪುರುಷೋತ್ತಮ್, ಸತ್ಯಪ್ಪ,ಸಿ.ಬಿ.ಸಂತೋಷ್, .ಸ್ವಾಮಿಗೌಡ,ಸಿ.ಎಲ್.ಬಸವರಾಜು,ಡಿ.ಕುಮಾರಸ್ವಾಮಿ, ಸಿ.ಆರ್.ಉಮೇಶ್, ಪ.ಸ್ವಾಮಿಗೌಡ, ಸಿ.ಕೆ.ರಾಮಸ್ವಾಮಿ,ರವೀಶ,ಅಪ್ಪಾಜಿಗೌಡ,ಬಡ್ಡಪ್ಪ ಜವರನಾಯಕ, ಸೇರಿದಂತೆ ಸಾವಿರಾರು ಮಂದಿ  ಭಕ್ತರು ಭಾಗವಹಿಸಿದ್ದರು.

ವರದಿ : ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading

Mysore

ಮೈಸೂರು ಮೃಗಾಲಯವನ್ನು ಅಭಿವೃದ್ಧಿಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಲಾಗುವುದು ಈಶ್ವರ್ ಬಿ ಖಂಡ್ರೆ

Published

on

ಮೈಸೂರು: ಜೂನ್.15 ಮೈಸೂರುಮೃಗಾಲಯವನ್ನು ಅಭಿವೃದ್ಧಿಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣ ವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವ ಶಾಸ್ತ್ರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ಮೈಸೂರು ಮೃಗಾಲಯದಲ್ಲಿ ವಾಟ್ಸ್ ಅಪ್ ಟಿಕೆಟ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಮೃಗಾಲಯದ ವೀಕ್ಷಣೆಗೆ ಸಾಲಿನಲ್ಲಿ ಕಾಯುವುದೇ ಏಕೆ, ಈಗ ವಾಟ್ಸಪ್ ನಲ್ಲಿ ಮೃಗಾಲಯದ ವೀಕ್ಷಣೆ ಟಿಕೆಟ್ ಪಡೆಯಬಹುದಾಗಿದ್ದು ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ನಂತರ ಮೃಗಾಲಯದ ಸಾವಯವ ತ್ಯಾಜ್ಯವನ್ನು ಎರೆಹುಳು ಗೊಬ್ಬರ ವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿ, ಮೃಗಾಲಯದಲ್ಲಿ ಜನಿಸಿದ ಜಿರಾಫೆ ಮರಿಗೆ ದಕ್ಷ ಎಂದು ನಾಮಕರಣ ಮಾಡಿದರು

Continue Reading

Trending

error: Content is protected !!