Kodagu
10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ಮಡಿಕೇರಿ : 2024 25 ನೇ ಸಾಲಿನ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶುಕ್ರವಾರದಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲೆ ಸವಿತ ಎಂ.ಜಿ ಹಾಗೂ ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಅಧಿಕಾರಿ ಎನ್.ಎ ಪೊನ್ನಮ್ಮ ವಹಿಸಿಕೊಂಡರು.
9ನೇ ತರಗತಿ ಕುಮಾರಿ ನಿಧಿ ಟಿ.ಪಿ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರಾಂಶುಪಾಲೆ ಸವಿತ ಎಂ.ಜಿಹಾಗೂ ಆಡಳಿತ ಅಧಿಕಾರಿ ಎನ್.ಎ ಪೊನ್ನಮ್ಮ ಮಕ್ಕಳಿಗೆ ಶುಭ ಹಾರೈಸಿ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಿದರು.
ಕುಮಾರಿ ಲಿಷ್ಮಾ ಹಾಗೂ ಕುಮಾರಿ ಪುಣ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಮಾಸ್ಟರ್ ತರುಣ್ 9ನೇ ತರಗತಿ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Kodagu
ಫೆ.5 ರಿಂದ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
ಮಡಿಕೇರಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆಸುತ್ತಿರುವ 2026-27ನೇ ಸಾಲಿಗೆ ರಾಜ್ಯ ವಲಯದ ಕ್ರೀಡಾ ಶಾಲೆ, ಕ್ರೀಡಾ ವಸತಿ ನಿಲಯಗಳಿಗೆ (8ನೇ ತರಗತಿ ಹಾಗೂ ಪ್ರಥಮ ಪಿಯುಸಿ) ಮಡಿಕೇರಿ ತಾಲೂಕಿಗೆ ಫೆಬ್ರವರಿ, 05 ರಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿಗೆ ಫೆಬ್ರವರಿ, 06 ರಂದು ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆ ಹಾಗೂ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿಗೆ ಫೆಬ್ರವರಿ, 07 ರಂದು ಪೊನ್ನಂಪೇಟೆ ತಾಲೂಕು ಮಿನಿ ಕ್ರೀಡಾಂಗಣದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಿದ್ಯಾರ್ಥಿಗಳು ಫೆಬ್ರವರಿ, 05, 06 ಮತ್ತು 07 ರಂದು ಬೆಳಗ್ಗೆ 9 ಗಂಟೆ ಒಳಗೆ ಇಲಾಖಾ ತರಬೇತುದಾರರಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮಹಾಬಲ ಅಥ್ಲೆಟಿಕ್ಸ್ ತರಬೇತುದಾರರು ದೂ.ಸಂ.9980887499, ಮಂಜುನಾಥ್ 9342563014, ಬಿಂದ್ಯಾ ಹಾಕಿ ತರಬೇತುದಾರರು 9980887499, ವೆಂಕಟೇಶ್ 9844326007, ಸುಬ್ಬಯ್ಯ 8197792350, ಜಿಮ್ನಾಸ್ಟಿಕ್ಸ್ ಸುರೇಶ್ 9483629216 ನ್ನು ಸಂಪರ್ಕಿಸಬಹುದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.
Kodagu
ಹೂಡಿಕೆ ಹೆಸರಲ್ಲಿ ಸೈಬರ್ ವಂಚನೆ : 1.14 ಕೋಟಿ ರೂ. ಕಳೆದುಕೊಂಡ ಸಿದ್ದಾಪುರದ ವ್ಯಕ್ತಿ
ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಪಾಲಿಬೆಟ್ಟದ ಖಾಸಗಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕರಾಗಿರುವ ನಾರಾಯಣ ಎಂಬವರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರಿಂದ 1.14 ಕೋಟಿ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಯೂಟ್ಯೂಬ್‌ನಲ್ಲಿ ಹಣ ಹೂಡಿಕೆ ಸಂಬಂಧಿಸಿದ ಜಾಹೀರಾತನ್ನು ಕ್ಲಿಕ್ ಮಾಡಿದ ನಾರಾಯಣ ಅವರಿಗೆ ಬಳಿಕ ವಾಟ್ಸ್‌ಆಪ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಅಮೋಲ್ ರಮಕಾಂತ್ ಎಂದು ಪರಿಚಯಿಸಿಕೊಂಡು, ಆರ್‌ಬಿಕೆ ಪ್ರೋಕಿಂಗ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ನಂಬಿಸಿದ್ದಾನೆ. ಬಳಿಕ ಎಂ5 ಆರ್‌ಬಿಕೆ ಗ್ರೂಪ್‌ಗೆ ಸೇರಿಸಿ ಲಾಭಾಂಶದ ನಕಲಿ ವಿವರಗಳನ್ನು ತೋರಿಸಿ ಮೊದಲಿಗೆ 50 ಸಾವಿರ ರೂ. ಹೂಡಿಕೆ ಮಾಡಲು ಪ್ರೇರೇಪಿಸಿದ್ದಾನೆ.

ವಂಚಕರ ಮಾತು ನಂಬಿದ ನಾರಾಯಣ ಅವರು ತಮ್ಮ ಹಾಗೂ ಪತ್ನಿಯ ಬ್ಯಾಂಕ್ ಖಾತೆಗಳಿಂದ ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ 2025ರ ಡಿ.9ರಿಂದ 2026ರ ಜ.23ರವರೆಗೆ ಹಂತ ಹಂತವಾಗಿ ಆರ್‌ಟಿಜಿಎಸ್ ಮತ್ತು ನೆಫ್ಟ್ ಮೂಲಕ ಒಟ್ಟು 1.14 ಕೋಟಿ ರೂ. ವರ್ಗಾಯಿಸಿದ್ದಾರೆ.
ನಂತರ ಹಣವನ್ನು ಹಿಂತಿರುಗಿಸಿಕೊಳ್ಳಲು ಯತ್ನಿಸಿದಾಗ ಸೇವಾ ಶುಲ್ಕದ ಹೆಸರಿನಲ್ಲಿ ಮತ್ತಷ್ಟು ಹಣ ಪಾವತಿಸುವಂತೆ ವಂಚಕರು ಒತ್ತಡ ಹಾಕಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ನಾರಾಯಣ ಅವರು ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kodagu
ವಾಹನದ ಮೂಲ ಸ್ವರೂಪವನ್ನು ಬದಲು – ತನಿಖೆ
ಮಡಿಕೇರಿ : ನಗರದಲ್ಲಿ ಜಿಪ್ಸಿಯ ಮೂಲ ಸ್ವರೂಪವನ್ನು ಪರಿವರ್ತಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ: 281 2.2.2.-2023, 8/2. 52, 53(1), 192, 184, 189 ತನಿಖೆ ಕೈಗೊಳ್ಳಲಾಗಿದೆ.

ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಾಯಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿಕೊಂಡು ವಾಹನಗಳು ಸಂಚರಿಸುತ್ತಿರುವುದಾಗಿ ಹಾಗೂ ಸಂಖ್ಯೆ ಕೆಎ01ಎನ್ಜಿ2730ರ ಜಿಪ್ಸಿ ವಾಹನವು ಮಡಿಕೇರಿ ನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ರೇಸಿಂಗ್ ಸ್ಪೀಡ್‌ನಲ್ಲಿ ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು, ಅದರಂತೆ ಪಿ.ಎಸ್.ಐ. ಮಡಿಕೇರಿ ಸಂಚಾರಿ ಠಾಣೆಯವರು ಇಂದು ರಂದು ಬೆಳಿಗ್ಗೆ ಠಾಣಾ ಸಿಬ್ಬಂದಿಯವರಾದ ಬಾಬು ಎಲ್ ಹಾಗೂ ಸುನಿತ್ ಕುಮಾರ್ ರವರೊಂದಿಗೆ ಇಲಾಖಾ ಜೀಪಿನಲ್ಲಿ ಮಡಿಕೇರಿ ನಗರದಲ್ಲಿ ರೌಂಡ್ಸ್ ಮಾಡಿಕೊಂಡು ವಾಪಾಸ್ಸು ಠಾಣೆಯ ಕಡೆಗೆ ಬರುತ್ತಿರುವಾಗ್ಗೆ ಮೈತ್ರಿ ಜಂಕ್ಷನ್ ಬಳಿ ತಲುಪುವಾಗ್ಗೆ ಸಮಯ 9:00 ಗಂಟೆಗೆ ಎಫ್.ಎಂ.ಸಿ. ಕಾಲೇಜು ಕಡೆಯಿಂದ ನಗರದ ಕಡೆಗೆ ಕೆಎ01ಎನ್ಜಿ 2730 ರ ಜಿಪ್ಸಿ ವಾಹನವನ್ನು ಅದರ ಚಾಲಕ ಅತೀ ವೇಗವಾಗಿ ಸೈಲೆಸರ್‌ನಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಅಪಾಯಕರ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದು, ಕೂಡಲೇ ನಾವುಗಳು ಜೀಪನ್ನು ಬದಿಗೆ ನಿಲ್ಲಿಸಿ ಸದರಿ ವಾಹನವನ್ನು ತಡೆದು ಪರಿಶೀಲಿಸಿದಾಗ ಸದರಿ ಜಿಪ್ಪಿಯ ಮೂಲ ಸ್ವರೂಪವನ್ನು ಪರಿವರ್ತಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಚಾಲನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಸದರಿ ಜಿಪ್ಪಿ ಚಾಲಕ ಜಿಪ್ಪಿ ವಾಹನದ ಮೂಲ ಸ್ವರೂಪವನ್ನು ಬದಲಾಯಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಂಡಿರುತ್ತೀರಾ ಎಂದು ಕೇಳಿದಾಗ ಯಾವುದೇ ಅನುಮತಿಯನ್ನು ಪಡೆದುಕೊಂಡಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಮುಂದಿನ ಕ್ರಮದ ಬಗ್ಗೆ ಸದರಿ ವಾಹನವನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ: 281 2.2.2.-2023, 8/2. 52, 53(1), 192, 184, 189 . ತನಿಖೆ ಕೈಗೊಳ್ಳಲಾಗಿರುತ್ತದೆ.
ಯಾವುದೇ ವಾಹನಗಳ ಆರ್.ಸಿ. ನಿಯಮಗಳನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಲಾವಣೆ ಮಾಡುವುದು ಅಥವಾ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್, ಹಾರ್ನ್ ಗಳನ್ನು ಅಳವಡಿಸಿಕೊಳ್ಳುವುದು, ವೀಲಿಂಗ್ ಮಾಡಿಕೊಂಡು ಚಾಲನೆ ಮಾಡುವವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.
-
Manglore21 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Hassan20 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
-
Hassan21 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan22 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
State24 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
National23 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
Hassan24 hours agoಬಾರ್ನಲ್ಲಿ ಕುಡಿಯುವಾಗ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಗಲಾಟೆ
-
Mysore21 hours agoಡ್ರಗ್ಸ್ ಲ್ಯಾಬ್ ಪತ್ತೆ: ಕೈಗಾರಿಕೆಗಳ ತಪಾಸಣೆಗೆ 14 ತಂಡ ರಚನೆ
