Connect with us

Mysore

ದುರಹಂಕಾರಿಗೆ  ಬುದ್ದಿ ಕಲಿಸಲು, ಬುಡ ಸಮೇತ ಪಕ್ಷ ವನ್ನು ಕಿತ್ತು ಹಾಕಲು ಮನವಿ : ಮಾಜಿ ಸಚಿವ ಸಾರಾ ಮಹೇಶ್ 

Published

on

ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ:ದುರಹಂಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ದಿ ಕಲಿಸಲು ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತಿ ಹಾಕಲು ಮಂಡ್ಯ ಲೋಕಸಭಾ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಮಾಜಿ ಸಚಿವ ಸಾ ರಾ ಮಹೇಶ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.                                                         ಪಟ್ಟಣದ ಎಚ್ ಡಿ ದೇವೇಗೌಡ ಸಮುದಾಯ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ 15 ವರ್ಷದ ಶಾಸಕರ ಅವಧಿಯಲ್ಲಿ ಯಾವತ್ತೂ ಯಾವುದೇ ಒಬ್ಬ ಅಧಿಕಾರಿಯ ವರ್ಗಾವಣೆಯಿಂದ ಹಾಗೂ ಗುತ್ತಿಗೆದಾರ ಮತ್ತು ಆಶ್ರಯ ಮನೆಗಳ ಹಂಚಿಕೆಯಲ್ಲಿ ಹಣ ಪಡೆದಿಲ್ಲ, ಇವರಿಂದ ಹಣ ಪಡೆಯುವ ಬದಲು ಬೀದಿಯಲ್ಲಿ ನಿಂತು ಬಿಕ್ಷ ಬೇಡುವುದು ಲೇಸು ಎಂದು ಹಾಲಿ ಶಾಸಕ ಡಿ ರವಿಶಂಕರ್ ವಿರುದ್ಧ ಆಕ್ರೋಶ ಹೊರ ಹಾಕಿದರು.                                                          15 ವರ್ಷ ಶಾಸಕನಾಗಿ ಕೆಲಸ ಮಾಡಲಿಲ್ಲ, ಜನಸೇವೆ ಮಾಡಿದ್ದೇನೆ. ನನ್ನ ಸ್ವಂತ ಹಣ 400 ಕೋಟಿಯನ್ನು ಬಡವರ ಧ್ವನಿ ಇಲ್ಲದವರ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದ ಅಭಿವೃದ್ಧಿಗಾಗಿ ಜನಸೇವೆ ಮಾಡಿದ್ದು ಮನೆಯಿಂದ ಊಟವನ್ನು ತಂದು ತಿಂದಿದ್ದೇನೆ. ಈಗಿನ ಶಾಸಕರ ಹಾಗೆ ಅಧಿಕಾರಿಗಳು ಮತ್ತು ಕಾರ್ಯಕರ್ತರನ್ನು ನಮ್ಮ ತಂದೆಯನ್ನು ಹೋಗಿ ನೋಡಿ ತೋಟದ ಮನೆಗೆ ಹೋಗಿ ಎಂದು ಯಾರಿಗೂ ಕಳಿಸಿರಲಿಲ್ಲ, ಇಂಥವರಿಗೆ ಬುದ್ಧಿ ಕಲಿಸಲು ಜೆಡಿಎಸ್ ಪಕ್ಷದ ಅಭ್ಯರ್ಥಿ ಕುಮಾರಸ್ವಾಮಿಯವರಿಗೆ ಮತ ನೀಡುವಂತೆ ತಿಳಿಸಿದರು.                                                         ಕೆ ಆರ್ ನಗರ ತಾಲ್ಲೂಕಿನ 60 ಹಳ್ಳಿಗಳಿಗೆ ರೈತರ ಬೆಳೆ ಬೆಳೆಯಲು ಕಾಲುವೆಯ ಕಾಮಗಾರಿ ಮಾಡಿಸುವ ಮೂಲಕ ನೀರಾವರಿಯನ್ನು ತಂದು ಕೊಟ್ಟಂತ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಕೆ ಆರ್ ನಗರಕ್ಕೆ ಕೇಂದ್ರದಿಂದ ರೈಲ್ವೆ ಸ್ಟೇಷನ್ ತಂದು, ಹಲವು ಯೋಜನೆಗಳನ್ನು ಜಾರಿಗೆ ತಂದಂತಹ ಈ ಮಣ್ಣಿನ ಮಗ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಹಾಗೂ 28000 ಕೋಟಿ ರೈತರ ಸಾಲ ಮನ್ನಾ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವಂತೆ ತಿಳಿಸಿದರು.

2018 ರಲ್ಲಿ ಕಾಂಗ್ರೆಸ್ ಜೆಡಿಎಸ್ ನ ನಾಯಕರು ಹೊಂದಾಣಿಕೆ ಮಾಡಿಕೊಂಡು ಒಳಗಡೆ ಚೂರಿ ಹಾಕಿದ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಕಲಿಸಲು ಕಳೆದ ಬಾರಿ ಸೋತ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಬುದ್ಧಿ ಭ್ರ ಮಣೆಯಂತೆ ಮಾತನಾಡುತ್ತಿರುವ ಶಾಸಕರಿಗೆ ಬುದ್ಧಿ ಕಲಿಸಲು, ಈ ಚುನಾವಣೆ ಪ್ರತಿಯೊಬ್ಬ ಜೆಡಿಎಸ್ ಬಿಜೆಪಿ ಕಾರ್ಯಕರ್ತರಿಗೆ ಒಂದು ಅವಕಾಶವಿದೆ. ಪ್ರತಿಯೊಬ್ಬ ಕಾರ್ಯಕರ್ತನು ಅಭ್ಯರ್ಥಿಯೆಂಬ ಮನೋಭಾವದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.                                                        ಪಕ್ಷ ತಾಯಿ ಇದ್ದಂತೆ ಪಕ್ಷದ ನಾಯಕರು ತಂದೆ ಇದ್ದಂತೆ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುವ ಬದಲು ವಿಷ ಹಾಕುವುದು ಮೇಲೂ ಎಂದು ತಿಳಿಸಿದ ಮಾಜಿ ಸಚಿವರು ನಾನು ಮನಸ್ಸು  ಮಾಡಿದರೆ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಆಗಬಹುದಿತ್ತು, ಆದರೆ ನನ್ನನ್ನು ಕರೆದು ಶಾಸಕನಾಗಿ ಮಾಡಿದ ನಾಯಕರಿಗೆ ಮತ್ತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲವೆಂದು ತಿಳಿಸಿದರು.                          ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಮಾತನಾಡಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಕೇಂದ್ರದ ಕೃಷಿ ಸಚಿವರಾಗಿ ರಾಜ್ಯದ ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಮೂಲಕ ಈ ರಾಜ್ಯದ ಮಣ್ಣಿನ ಮಗ ರೈತರ ಪರವಾಗಿ ಆಡಳಿತ ನೀಡುವ ನಾಯಕನೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಲಿದ್ದಾರೆ. ಅಂತ ನಾಯಕನನ್ನು ಆಯ್ಕೆ ಮಾಡುವ ನಾವೇ ಪುಣ್ಯವಂತರು ಎಂದು ತಿಳಿಸಿದರು.                         ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿರುವುದರಿಂದ ಭಯಭೀತರಾದ ಕಾಂಗ್ರೆಸ್ ಪಕ್ಷದ ಮುಖಂಡರು ಸಚಿವರು ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಲಿದ್ದು, ಆಡಳಿತ ವ್ಯವಸ್ಥೆ ಕುಸಿದಿರುವುದರಿಂದ ಅಧಿಕಾರ ನಡೆಸಲು ಸಾಧ್ಯವಾಗದೇರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.                                                 ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ  ಎ ಎಸ್ ಚೆನ್ನಬಸಪ್ಪ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ ಎನ್ ಬಸಂತ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಂ ಟಿ ಕುಮಾರ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್ಕೆ, ಕೆ  ಆರ್ ನಗರ ಮೋರ್ಚಾ ಅಧ್ಯಕ್ಷ ಧರ್ಮ,ಪುರಸಭಾ ಸದಸ್ಯ ಉಮೇಶ್ ಮಾತನಾಡಿದರು.                                  ಕಾರ್ಯಕ್ರಮದಲ್ಲಿ ಎರಡು ತಾಲೂಕ್ ಜೆಡಿಎಸ್ ಅಧ್ಯಕ್ಷರಾದ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ಜೆಡಿಎಸ್ ವಕ್ತಾರ ಕೆಎಲ್ ರಮೇಶ್, ಪುರಸಭಾ ಸದಸ್ಯರಾದ ಕೆ ಎಲ್ ಜಗದೀಶ್ ,  ಸಂ ತೋಷ್ ಗೌಡ, ಹರ್ಷ ಕುಮಾರ್ ಗೌಡ,  ಹನಸೋಗೆ ನಾಗರಾಜ್, ವೈ ಆರ್ ಪ್ರಕಾಶ್, ಅರ್ಜುನಳ್ಳಿ ಗಣೇಶ್, ತಮ್ಮಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ವಿಧಿವಶ

Published

on

ಮೈಸೂರು: ಹೆಸರಾಂತ ಜಾನಪದ ಶಾಸ್ತ್ರಜ್ಞೆ ಡಾ.ಜಯಲಕ್ಷ್ಮೀ ಸೀತಾಪುರ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ವಾರ ಅವರು ಬೆಂಗಳೂರಿಗೆ‌ ಕಾರಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದವರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ ‘ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು’ ಕುರಿತು ಪಿಎಚ್.ಡಿ ಪದವಿ ಪಡೆದರು. ಅಮೆರಿಕದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು.

ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಅವರು ಮಾರ್ಗದರ್ಶಕರಾಗಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಿಶಂಪ ಪ್ರಶಸ್ತಿ, ಮುದ್ದು ಮಾದಪ್ಪ ಪುರಸ್ಕಾರ, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾಗಿದ್ದರು.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಆದಿಶಕ್ತಿ ಮುತ್ತುತಾಳಮ್ಮ‌ ದೇವರ ರಥೋತ್ಸವ

Published

on

ಸಾಲಿಗ್ರಾಮ  : ತಾಲೂಕಿನ‌ ಚಿಕ್ಕಕೊಪ್ಪಲು ‌ಗ್ರಾಮದಲ್ಲಿ‌ ಬಂಡಿಹಬ್ಬದ ಪ್ರಯುಕ್ತ ಶ್ರೀ ಆದಿಶಕ್ತಿ ಮುತ್ತುತಾಳಮ್ಮ‌ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನಡೆಯಿತು.
11 ವರ್ಷದ ನಂತರ ನಡೆದ ಈ ಹಬ್ಬದ ಹಿನ್ನಲೆಯಲ್ಲಿ ಚಿಕ್ಕಕೊಪ್ಪಲು ಗ್ರಾಮದ ದೇವರಹಟ್ಟಿ ಬಳಿ ಹೂವಿನ ಅಲಂಕಾರ ದಿಂದ ಶೃಂಗಾರಗೊಂಡಿದ್ದ ರಥದಲ್ಲಿ ಆದಿಶಕ್ತಿ ಮುತ್ತುತಾಳಮ್ಮ‌ ದೇವರನ್ನ ಪ್ರತಿಷ್ಠಾಪಿಸಿದ ಬಳಿದ ಅರ್ಚಕ ಮಂಜುನಾಯಕ್ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ನಂತರ ಹಾಜರಿದ್ದ ಭಕ್ತರು ದೇವರಿಗೆ ಚಪ್ಪಾಳೆ- ಜಯಕಾರ ದೊಂದಿಗೆ ರಥವನ್ನು ಗ್ರಾಮದಿಂದ ಕುಪ್ಪೆ ಗ್ರಾಮಕ್ಕೆ ಎಳೆದು ತಂದು ದೂಳ್ ಮರಿ ಬಲಿ ಕೊಟ್ಟ ನಂತರ ಮತ್ತೆ ಚಿಕ್ಕಕೊಪ್ಪಲು ಗ್ರಾಮದ ಹೊರವಲಯದ ಬಳಿ ಇರುವ ಶ್ರೀ ಆದಿಶಕ್ತಿ ಮುತ್ತುತಾಳಮ್ಮ ದೇವರ ದೇವಸ್ಥಾನಕ್ಕೆ ತಂದು ಸಂಭ್ರಮಿಸಿದರು.

21 ಕ್ಕೆ ಮಡೆ ಹಬ್ಬ
14 ಶುಕ್ರವಾರ ದಿಂದ ಗ್ರಾಮದಲ್ಲಿ ಆಂಭಗೊಂಡ ಬಂಡಿ ಹಬ್ಬವು 21 ರ ಶುಕ್ರವಾರ ಸಂಜೆ 7 ಗಂಟೆಗೆ ಗ್ರಾಮದ‌ ಮಲ್ಲಮ್ಮನ ಕೊಳದ ಬಳಿಯಿಂದ ತಂ ಬ್ಬಿಟ್ಟಿನ ಆರತಿಯನ್ನು ಗ್ರಾಮದ ಹೆಬ್ಬಾಗಿಲಿನ ವರಿಗೆ ಮೆರವಣಿಗೆ ಮಾಡುವ ಮೂಲಕ ಮಡೆ ಹಬ್ಬ ನಡೆದು, 8 ದಿನಗಳ ಕಾಲ ನಡೆದ ಮುತ್ತುತಾಳಮ್ನ‌ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಕ್ತಾಯವಾಗಲಿದೆ.

ಆನಂತರ ಭಕ್ತಾಧಿಗಳು ಮತ್ತು ಗ್ರಾಮಸ್ಥರು ಆದಿ ಶಕ್ತಿ ಮುತ್ತುತಾಳಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹಬ್ಬದ ಹಿನ್ನಲೆಯಲ್ಲಿ ದೇವಾಲಯದ ಬಳಿ ಹಾಕಲಾಗಿದ್ದ ಕೊಂಡ ಹಾದು ತಮ್ಮ‌ಇಷ್ಟಾರ್ಥಗಳು  ನೇರವೇರಿಸುವಂತೆ ಮತ್ತು ಗ್ರಾಮಕ್ಕೆ ಒಳಿತಾಗುವಂತೆ ಪ್ರಾರ್ಥಿಸಿಕೊಂಡರು.
ಬಂಡಿ ಹಬ್ಬ ಮತ್ತು ರಥೋತ್ಸವದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಹಾಕಲಾಗಿದ್ದ ವಿದ್ಯುತ್ ಆಲಂಕಾರ ಮತ್ತು ವಿವಿಧ ಬಗೆಯ ಪಟಾಕಿಗಳ ಆರ್ಭಟ ವೀರಗಾಸೆಯ ನೃತ್ಯಗಳು ಜೊತೆಗೆ ನಗಾರಿ ಶಬ್ದ ಅಲ್ಲದೇ ಯುವಕರ ಭರ್ಜರಿ ನೃತ್ಯ ಮನಸೂರೆಗೊಂಡಿತು. ಬೆಳಿಗ್ಗೆ 6 ಗಂಟೆಯಿಂದಲೇ ಮುತ್ತುತಾಳಮ್ಮ ದೇವಾಲಯದಲ್ಲಿ ಹೋಮ ಮತ್ತು ವಿಶೇಷ ಪೂಜಾಕಾರ್ಯ ನಡೆದವು.
ರಥೋತ್ಸವದಲ್ಲಿ ಯಜಮಾನರಾದ ಟಿ.ಪುರುಷೋತ್ತಮ್, ಸತ್ಯಪ್ಪ,ಸಿ.ಬಿ.ಸಂತೋಷ್, .ಸ್ವಾಮಿಗೌಡ,ಸಿ.ಎಲ್.ಬಸವರಾಜು,ಡಿ.ಕುಮಾರಸ್ವಾಮಿ, ಸಿ.ಆರ್.ಉಮೇಶ್, ಪ.ಸ್ವಾಮಿಗೌಡ, ಸಿ.ಕೆ.ರಾಮಸ್ವಾಮಿ,ರವೀಶ,ಅಪ್ಪಾಜಿಗೌಡ,ಬಡ್ಡಪ್ಪ ಜವರನಾಯಕ, ಸೇರಿದಂತೆ ಸಾವಿರಾರು ಮಂದಿ  ಭಕ್ತರು ಭಾಗವಹಿಸಿದ್ದರು.

ವರದಿ : ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading

Mysore

ಮೈಸೂರು ಮೃಗಾಲಯವನ್ನು ಅಭಿವೃದ್ಧಿಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಲಾಗುವುದು ಈಶ್ವರ್ ಬಿ ಖಂಡ್ರೆ

Published

on

ಮೈಸೂರು: ಜೂನ್.15 ಮೈಸೂರುಮೃಗಾಲಯವನ್ನು ಅಭಿವೃದ್ಧಿಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣ ವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವ ಶಾಸ್ತ್ರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ಮೈಸೂರು ಮೃಗಾಲಯದಲ್ಲಿ ವಾಟ್ಸ್ ಅಪ್ ಟಿಕೆಟ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಮೃಗಾಲಯದ ವೀಕ್ಷಣೆಗೆ ಸಾಲಿನಲ್ಲಿ ಕಾಯುವುದೇ ಏಕೆ, ಈಗ ವಾಟ್ಸಪ್ ನಲ್ಲಿ ಮೃಗಾಲಯದ ವೀಕ್ಷಣೆ ಟಿಕೆಟ್ ಪಡೆಯಬಹುದಾಗಿದ್ದು ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ನಂತರ ಮೃಗಾಲಯದ ಸಾವಯವ ತ್ಯಾಜ್ಯವನ್ನು ಎರೆಹುಳು ಗೊಬ್ಬರ ವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿ, ಮೃಗಾಲಯದಲ್ಲಿ ಜನಿಸಿದ ಜಿರಾಫೆ ಮರಿಗೆ ದಕ್ಷ ಎಂದು ನಾಮಕರಣ ಮಾಡಿದರು

Continue Reading

Trending

error: Content is protected !!