Uncategorized
ಗ್ರಾಮೀಣ ಶಾಲೆಗಳ ಬೆಳವಣಿಗೆಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ : ಎಸಿ ಶ್ರೀನಿವಾಸ್ ಕರೆ

ನಾಗಮಂಗಲ : ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಕಡ್ಡಾಯವಾಗಿ ಮಕ್ಕಳನ್ನು ಸರ್ಕಾರಿಗೆ ಶಾಲೆಗೆ ಸೇರಿಸುವಂತೆ ಉಪವಿಭಾಗಾಧಿಕಾರಿ ಶ್ರೀನಿವಾಸ್ ಕರೆ ನೀಡಿದರು.
ಅವರು ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಿರಿ ಸಂಭ್ರಮ -25 ಶಾಲಾ ವಾರ್ಷಿಕೋತ್ಸವದ ನಗಾರಿ ಬಾರಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಕೊಡಿಸುವ ಮುಖಾಂತರ, ಶಿಕ್ಷಣ ಆಸ್ತಿ ನೀಡುವ ಜೊತೆಗೆ ಜ್ಞಾನ ಸಂಪತ್ತು ಕೂಡ ಮೈಗೂಡಿಸಿಕೊಂಡು ಸಮಾಜ ಕಟ್ಟಲು ಅವರುಗಳು ಮಾದರಿಯಾಗಲು ಸಹಕಾರವಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ವಿಧ್ಯಾರ್ಜನೆಯ ಕೊಡಿಸಲು ಖಾಸಗಿ ಶಾಲೆಯ ವ್ಯಾಮೋಹಗಳನ್ನ ಬಿಟ್ಟು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸೇರಿಸಿ ಅವರುಗಳ ಉಜ್ವಲ ಭವಿಷ್ಯಕ್ಕೆ ಹೊಸ ಮುನ್ನುಡಿ ಬರೆಯಲು ಪೋಷಕರು ಸಹಕರಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಮಂಡ್ಯ ಡಯಟ್ ಪ್ರಾಚಾರ್ಯ ಮಹೇಶ್, ತಾಲೂಕು ಶಿಕ್ಷಣಾಧಿಕಾರಿ ಯೋಗೇಶ್, ಸಂಪನ್ಮೂಲ ಸಮನ್ವಯಧಿಕಾರಿ ರವೀಶ್. ಜಿಲ್ಲಾ ಮತ್ತು ತಾಲೂಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ ವೈ ಮಂಜುನಾಥ್ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಉಪಸ್ಥಿತರಿದ್ದರು
Uncategorized
ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ ಪತ್ತೆ ಹಚ್ಚಿದ ಕೋಜಿಕೋಡ್ ನ ವಿಜ್ಞಾನಿಗಳು

ಮಡಿಕೇರಿ : ಕರ್ನಾಟಕದ ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಂಠಿ ಬೆಳೆಯನ್ನು ತೀವ್ರವಾಗಿ ಭಾದಿಸಿದ ಹೊಸ ಶಿಲೀಂಧ್ರ ರೋಗವನ್ನು ಐ.ಸಿ.ಎ.ಆರ್. – ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ (ICAR-IISR),ಕೋಜಿಕೋಡ್ ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಶುಂಠಿಯಲ್ಲಿ ಕಂಡುಬಂದಿರುವ ಈ ರೋಗವು ಪೈರಿಕ್ಯುಲೇರಿಯಾsp.ಎಂಬ ಶಿಲೀಂಧ್ರದಿಂದ ಹರಡುತ್ತದೆ. ಪೈರಿಕ್ಯುಲೇರಿಯಾವು ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಬ್ಲಾಸ್ಟ್ ರೋಗವನ್ನು ಉಂಟುಮಾಡುತ್ತದೆ, ಶುಂಠಿಯಲ್ಲಿ ಇದು ಮೊದಲ ಬಾರಿಗೆ ವರದಿಯಾಗಿದೆ.ಈ ರೋಗಬಂದ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಕಾಣಿಸಿಕೊಳ್ಳುತ್ತವೆಮತ್ತು ಆರಂಭಿಕ ಹಂತದಲ್ಲಿ ಕಪ್ಪುಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಜೊತೆಗೂಡಿರುತ್ತದೆ (ಚಿತ್ರ 1 ಮತ್ತು 2).ಒಮ್ಮೆ ಸೋಂಕು ತಗುಲಿದರೆ, ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ, ಇದು ತೀವ್ರವಾದ ಬೆಳೆ ನಷ್ಟ ಮತ್ತು ಶುಂಠಿಯಎಲೆ ಮತ್ತು ಕಾಂಡದ ಒಣಗುವಿಕೆಗೆಕಾರಣವಾಗುತ್ತದೆ (ಚಿತ್ರ 3).ರೋಗಪೀಡಿತ ಸಸ್ಯಗಳ ಗೆಡ್ಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಖಚಿತಪಡಿಸಿರುತ್ತಾರೆ.ಸಮಸ್ಯೆಯು ಎಲೆಗಳ ಅಕಾಲಿಕ ಹಳದಿ ಮತ್ತು ಒಣಗಿಸುವಿಕೆಯಲ್ಲಿದೆ, ಇದು ಶುಂಠಿ ಗೆಡ್ಡೆಗಳಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.ಈ ರೋಗದಿಂದಾಗಿ, ಕೊಡಗಿನ ರೈತರು ಗೆಡ್ಡೆಗಳ ತೂಕದಲ್ಲಿ ಶೇ 30 ರಷ್ಟು ನಷ್ಟವನ್ನು ಅನುಭವಿಸಿದ್ದಾರೆ.
ರೋಗ ಹರಡುವಿಕೆಗೆ ಕಾರಣೀಭೂತವಾದ ಹವಾಮಾನದ ಅಂಶಗಳು : ಸಂಶೋಧಕರ ಪ್ರಕಾರ, ಕೊಡಗಿನಲ್ಲಿರುವ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದ ರೋಗ ಹರಡುವಿಕೆ ಹೆಚ್ಚಾಗಿ ಉಂಟಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ, ಈ ಪ್ರದೇಶದಲ್ಲಿ ಬೆಳಿಗ್ಗೆ ಇಬ್ಬನಿ ಬೀಳುತ್ತದೆ, ಇದು ಶಿಲೀಂಧ್ರದ ಅಭಿವೃದ್ಧಿ ಹೊಂದಲು ಮತ್ತು ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ.ಇದು ಕೊಡಗಿನಮತ್ತು ಸುತ್ತಮತ್ತಲಿನ ಕೆಲವು ಪ್ರದೇಶದ ಶುಂಠಿ ಹೊಲಗಳಲ್ಲಿ ರೋಗವು ವೇಗವಾಗಿ ಹರಡಲು ಕಾರಣವಾಗಿದೆ, ಆದರೆ ಕರ್ನಾಟಕ ಮತ್ತು ಕೇರಳದ ಇತರ ಭಾಗಗಳಲ್ಲಿನ ವಿಭಿನ್ನ ಹವಾಮಾನದಿಂದಬೆಳೆಯು ಹಾನಿಗೊಳಗಾಗಿಲ್ಲ.ಐ.ಸಿ.ಎ.ಆರ್. – ಐ. ಐ. ಎಸ್. ಆರ್., ಕೋಜಿಕೋಡ್ಮತ್ತು ಅದರ ಪ್ರಾದೇಶಿಕ ಕೇಂದ್ರವಾದ ಅಪ್ಪಂಗಳ ತಂಡವು ನಡೆಸಿದ ಸಂಶೋಧನೆಯು ಕೊಡಗಿನ ಹವಾಮಾನ ಪರಿಸ್ಥಿತಿಗಳು-ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಬ್ಬನಿ ಬೀಳುವಿಕೆ-ರೋಗ ಹರಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಸೂಚಿಸಿದೆ.
ಐ.ಸಿ.ಎ.ಆರ್. – ಐ. ಐ. ಎಸ್. ಆರ್. ನಲ್ಲಿನ ಸಂಶೋಧನಾ ತಂಡವು ರೋಗವನ್ನು ಅಧ್ಯಯನ ಮಾಡುವಾಗ ಗಮನಾರ್ಹ ಸವಾಲುಗಳನ್ನು ಎದುರಿಸಿತು, ಏಕೆಂದರೆ ರೋಗದ ಮಾದರಿಗಳು ಕೋಜಿಕೋಡ್ನ ಪ್ರಯೋಗಾಲಯವನ್ನು ತಲುಪುವ ವೇಳೆಗೆ ಹೆಚ್ಚಾಗಿ ಒಣಗಿರುತ್ತಿದ್ದವು.ಆದಾಗ್ಯೂ, ತಿಂಗಳುಗಳ ಸತತಸಂಶೋಧನೆಯಿಂದರೋಗದ ಹಿಂದಿನ ಕಾರಣವಾದ ಪೈರಿಕ್ಯುಲೇರಿಯಾsp. ಅನ್ನು ವಿಜ್ಞಾನಿಗಳು ದೃಢೀಕರಿಸಲು ಸಾಧ್ಯವಾಯಿತು.
ನಿಯಂತ್ರಣ ಕ್ರಮಗಳು
ರೋಗವನ್ನು ನಿರ್ವಹಿಸಲು, ವಿಜ್ಞಾನಿಗಳು ಶಿಲೀಂಧ್ರನಾಶಕಗಳಾದ ಪ್ರೊಪಿಕೊನಜೋಲ್ ಅನ್ನು1 ml/Lಅಥವಾ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಸಂಯೋಜನೆಯನ್ನು 2 ಗ್ರಾಂ/ಲೀ ಅನುಪಾತದಲ್ಲಿ ಶಿಫಾರಸು ಮಾಡುತ್ತಾರೆ.ಬೀಜದ ಗೆಡ್ಡೆಗಳನ್ನು ಶೇಖರಿಸುವ ಮೊದಲು ಈ ಶಿಲೀಂಧ್ರನಾಶಕದಲ್ಲಿ 30 ನಿಮಿಷಗಳ ಕಾಲಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸುವುದು.ರೋಗನಿರೋಧಕ ಕ್ರಮವಾಗಿ ಪ್ರೊಪಿಕೊನಜೋಲ್ ಅಥವಾ ಟೆಬುಕೊನಜೋಲ್ @ 1ml/L ಅನ್ನು ನಾಟಿ ಮಾಡಿದ ನಾಲ್ಕು ತಿಂಗಳ ನಂತರ ಸಿಂಪಡಿಸುವುದು.ರೋಗಲಕ್ಷಣವಾದ ಎಲೆಗಳ ಮೇಲೆಕಪ್ಪುಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಹಳದಿಭಾಗದಿಂದ ಸುತ್ತುವರಿಯುವುದನ್ನು ಗಮನಿಸಿದರೆ, ರೋಗದ ತ್ವರಿತ ಹರಡುವಿಕೆಯನ್ನು ತಡೆಯಲು ತಕ್ಷಣ ಶಿಲೀಂಧ್ರನಾಶಕವನ್ನು ಸಿಂಪಡಿಸುವುದು. ಪೈರಿಕ್ಯುಲೇರಿಯ ಶಿಲೀಂಧ್ರವು ಅತಿ ವೇಗವಾಗಿ ಹರಡುವುದರಿಂದ ರೈತರು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವುದು ಅಗತ್ಯನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಈ ರೋಗವು ಕೇವಲ 10 ಗಂಟೆಗಳಅವಧಿಯಲ್ಲಿ ದೊಡ್ಡ ಪ್ರದೇಶಗಳಲ್ಲಿ ಹರಡಬಹುದು, ಕೆಲವು ರೋಗ ಪೀಡಿತ ತೋಟಗಳು20 ಕಿಲೋಮೀಟರ್ ಅಂತರದಲ್ಲಿದ್ದರು ಸಹರೋಗ ಹರಡುತ್ತದೆ.
ಬೆಳೆ ಹಾನಿಗೊಳಗಾದ ರೈತರಿಗೆ ಶಿಫಾರಸು
ಈ ರೋಗದಿಂದ ಬೆಳೆ ಹಾನಿಗೊಳಗಾದ ರೈತರು ರೋಗಪೀಡಿತ ಪ್ರದೇಶಗಳಲ್ಲಿ ಶುಂಠಿ ಕೃಷಿ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲುಸಲಹೆ ನೀಡಲಾಗಿದೆ.
ರೋಗಕಾರಕಶಿಲೀಂಧ್ರದ ವರ್ತನೆಮತ್ತು ಪರಿಸರ ಪ್ರಚೋದಕಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧನಾ ತಂಡವು ಹೆಚ್ಚಿನ ಅಧ್ಯಯನಗಳನ್ನು ನಡೆಸುತ್ತಿದೆ ಎಂದು ಐ.ಸಿ.ಎ.ಆರ್. – ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಳದ ಮುಖ್ಯಸ್ಥರು ತಿಳಿಸಿದ್ದಾರೆ.
Uncategorized
ರಸ್ತೆ ಮೇಲೆ ನಿರ್ಮಸಿರುವ ಅನಧಿಕೃತವಾಗಿ ಕಾಂಪೌಂಡ್ ತೆರವುಗೊಳಿಸಿ: ಎಂ.ಪ್ರವೀಣ್

ತಿ.ನರಸೀಪುರ: ವ್ಯಕ್ತಿಯೊಬ್ಬರು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡಿರುವುದನ್ನು ತೆರವು ಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ಕಾರ್ಯದರ್ಶಿ ಎಂ.ಪ್ರವೀಣ್ ಒತ್ತಾಯಿಸಿದರು.
ನಗರದಲ್ಲಿಂದು (ಫೆ.04) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಟಿ.ನರಸೀಪುರ ಪುರಸಭೆ ವ್ಯಾಪ್ತಿಗೊಳಪಡುವ ಉಪ್ಪಲಗೇರಿ ಬಡಾವಣೆಯ ಖಾತೆ ನಂಬರ್ 1278/1283/1199 ರ 25×60 ರ ಖಾಲಿ ನಿವೇಶನವನ್ನು ಗ್ಯಾರೇಜ್ ಮಹೇಶ್ ಎಂಬುವರಿಗೆ 2007 ರಲ್ಲಿ 75 ಸಾವಿರ ರೂ.ಗಳಿಗೆ ಲೇಟ್ ಸಿದ್ದು ರವರ ಪತ್ನಿ ಮಾದಮ್ಮಎಂಬುವರು ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿದ್ದರಾದರೂ ನಂತರದಲ್ಲಿ ಪುರಸಭೆಯವರು ಅಕ್ರಮವಾಗಿ ತಿದ್ದುಪಡಿ ಮಾಡಿ 25×60 ಅಳತೆಯ ನಿವೇಶನವನ್ನು 43×60 ಎಂದು ಅಕ್ರಮವಾಗಿ ತಿದ್ದುಪಡಿ ಮಾಡಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಅವರು ದೂರಿದರು.
ಪ್ರಸಕ್ತ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿರುವ ಜಾಗ ಸಾರ್ವಜನಿಕ ಆಸ್ತಿಯಾಗಿದ್ದು,ತಲಕಾಡು-ನರಸೀಪುರ ಮೂಲಕ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿರುವ ಜಾಗದ ಮೂಲಕವೇ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವುದಾಗಿದೆ.ಈಗ ಅಕ್ರಮ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿ ಸದರಿ ಸ್ಥಳದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದು,ಅತಿಕ್ರಮವನ್ನು ಪ್ರಶ್ನಿಸುವವರ ಮೇಲೆಯೇ ಆಂತರಿಕ ಬೆದರಿಕೆ ಒಡ್ಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಬಸವರಾಜು ಎಂಬುವರು 2022 ರಲ್ಲಿ ಗ್ಯಾರೇಜ್ ಮಹೇಶ್ ಎಂಬುವರಿಗೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಕೊಟ್ಟಿರುವುದಕ್ಕೆ ಅನೇಕ ದಾಖಲಾತಿಗಳಿವೆ.25×60 ಅಳತೆಯ ನಿವೇಶನವನ್ನು ಅಕ್ರಮವಾಗಿ 43 ×60 ಎಂದು ತಿದ್ದುಪಡಿ ಮಾಡಿ ಸರ್ಕಾರಿ ರಜಾ ದಿನವಾದ ಭಾನುವಾರ ಕಂದಾಯ ಕಟ್ಟಿದ ರಶೀದಿ ನೀಡಲಾಗಿದೆ ಅಲ್ಲದೇ 23/04/2022 ರ ನಾಲ್ಕನೇ ಶನಿವಾರ ಸರ್ಕಾರಿ ರಜಾ ದಿನದಂದು ಇಸ್ವತ್ತನ್ನು ಪ್ರಿಂಟ್ ತೆಗೆದು ಅಪ್ರೂವಲ್ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು ದಾಖಲಾತಿಗಳನ್ನು ಕಚೇರಿ ಯಲ್ಲಿ ಸಿದ್ದಪಡಿಸುತ್ತಾರೊ ಅಥವಾ ತಮ್ಮಮನೆಯಲ್ಲಿ ಕುಳಿತು ಸಿದ್ದಪಡಿಸುತ್ತಾರೋ ಎಂದು ಪುರಸಭೆ ಕಾರ್ಯ ವೈಖರಿಯನ್ನು ತೀವ್ರವಾಗಿ ಖಂಡಿಸಿದರು.
ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಸಾರ್ವ ಜನಿಕ ರಸ್ತೆಯಲ್ಲಿ ಕಾಂಪೌಂಡ್ ನಿರ್ಮಿಸುತ್ತಿರುವ ವ್ಯಕ್ತಿ ಈಗ ನನ್ನ ಮೇಲೆ ಕಾಂಪೌಂಡ್ ನಿರ್ಮಾಣಕ್ಕೆ ಅಡ್ಡಿ ಪಡಿಸುವ ಆರೋಪ ಹೊರಿಸುವ ಮೂಲಕ ಅಕ್ರಮವನ್ನು ಪ್ರಶ್ನಿಸುವುದನ್ನು ತಡೆಗಟ್ಟಲು ಹಾಗು ನನ್ನ ಎದೆಗುಂದಿಸುವ ಕಾರ್ಯದಲ್ಲಿ ನಿರತನಾಗಿದ್ದಾನೆ.ಆದರೆ ಡಾ.ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಅಕ್ರಮವನ್ನು ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ.ಅವರ ಬಳಿ ದಾಖಲಾತಿಗಳಿದ್ದರೆ ಅದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕೊಟ್ಟು ಖಾತೆ ಮಾಡಿಸಿಕೊಳ್ಳಲಿ ಎಂದರು.
ಮುಂದುವರೆದು ಮಾತನಾಡಿದ ಅವರು ಈ ಸಂಬಂಧ ಪುರಸಭೆ ಈಗಿನ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿಯವರಿಗೆ ದಾಖಲಾತಿಗಳನ್ನು ಸಲ್ಲಿಸಲಾಗಿದೆ.ಸ್ಥಳ ಪರಿಶೀಲನೆ ಮಾಡಿರುವ ಅವರು ಕಾಂಪೌಂಡ್ ತೆರವುಗೊಳಿಸುವ ಭರವಸೆ ನೀಡಿದ್ದಾರೆ.ತ್ವರಿತವಾಗಿ ತೆರವು ಕಾರ್ಯಾಚರಣೆ ಮಾಡುವ ಮೂಲಕ ಪುರಸಭೆಯವರು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು.ಹಾಗು ಸರ್ಕಾರಿ ಜಾಗದ ರಕ್ಷಣೆಯಾಗಬೇಕು, ತಿ.ನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ ಇಂತಹ ಅನೇಕ ಅಕ್ರಮ ಪ್ರಕರಣಗಳು ನಡೆಯುತ್ತಿದ್ದು ನಮ್ಮ ಗಮನಕ್ಕೆ ಬಂದರೆ ಯಾವ ಮುಲಾಜಿಗೂ ಬಗ್ಗದೆ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಹಾಗು ಚೇತನ್ ಹಾಜರಿದ್ದರು.
Hassan
ಹಾಲು ಉತ್ಪಾದಕರ ಸಂಘದ ಕಚೇರಿಗೆ ನುಗ್ಗಿ ವಾಟರ್ ಮ್ಯಾನ್ ರಂಪಾಟ ,ಹ*ಲ್ಲೆ

HSN: ಹಾಲು ಉತ್ಪಾದಕರ ಸಂಘದ ಕಚೇರಿಗೆ ನುಗ್ಗಿ ವಾಟರ್ ಮ್ಯಾನ್ ರಂಪಾಟ ,ಹಲ್ಲೆ
ಹಾಸನ ತಾಲ್ಲೂಕಿನ ಉಪ್ಪಳ್ಳಿಯಲ್ಲಿ ಘಟನೆ
ನಾಗೇಶ್, ಹಾಲು ಉತ್ಪಾದಕರ ಮೇಲೆ ಹಲ್ಲೆ ಮಾಡಿದ ವಾಟರ್ ಮ್ಯಾನ್
ಕಂದಲಿ ಗ್ರಾ.ಪಂ ಯಲ್ಲಿ ಕೆಲಸ ಮಾಡುತ್ತಿರೋ ವಾಟರ್ ಮ್ಯಾನ್
ಡೈರಿಯಲ್ಲಿ ಹಾಲು ಅಳೆಸುತ್ತಿದ್ದಾಗ ಏಕಾಏಕಿ ಒಳನುಗ್ಗಿ ಗಲಾಟೆ
ಹಾಲಿನ ಕ್ಯಾನ್ ಉರುಳಿಸಿ 200 ಲೀಟರ್ ಹಾಲು ಚೆಲ್ಲಿ ರಂಪಾಟ
ನಾಗೇಶ್, ರಂಪಾಟ , ಹಲ್ಲೆ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮಹಿಳೆಯರ ಮೇಲೂ ಹಲ್ಲೆಗೂ ಯತ್ನ
ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರೋ ಗ್ರಾಮಸ್ಥರು
-
State13 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu10 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar10 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu10 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Kodagu14 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Hassan8 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ
-
Hassan9 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports11 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್