Connect with us

Kodagu

ಬಾಡಗ ಬಾಣಂಗಾಲ ಕಾಫಿ ತೋಟದಲ್ಲಿ ೩೦ಕ್ಕೊ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ

Published

on

==========
ಸಿದ್ದಾಪುರ : ಬಾಡಗ ಬಾಣಂಗಾಲ ಕಾಫಿ ತೋಟದಲ್ಲಿ ಹಾಡಹಗಲಿನಲ್ಲೇ ೩೦ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದು, ಕಾರ್ಮಿಕರು ಭಯಬೀತರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಮಾಲ್ದಾರೆ, ಮೈಲಾಪುರ, ಕರಡಿಗೋಡು, ಬಾಡಗ ಬಾಣಂಗಾಲ, ಹುಂಡಿ, ಮಟ್ಟಂ, ಬಜೆಕೊಲ್ಲಿ ಸೇರಿದಂತೆ ಹಲವಡೆ ಕಾಡಾನೆಗಳ ಹಿಂಡು ದಿನನಿತ್ಯ ಕಾಣಿಸಿಕೊಳ್ಳುತ್ತಿದ್ದು ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನೆಮ್ಮದಿಯಾಗಿ ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಣಂಗಾಲ ಆರ್ಗನಿಕ್ ತೋಟದಲ್ಲಿ ಪ್ರತ್ಯಕ್ಷಗೊಂಡ ಮೂವತ್ತಕ್ಕೂ ಹೆಚ್ಚು ಕಾಡಾನೆಗಳನ್ನ ಕಂಡು ಕಾರ್ಮಿಕರು ಭಯಬೀತರಾಗಿ ಮನೆಗೆ ಹಿಂತಿರಿಗಿದ್ದಾರೆ.
ಕಾಫಿ ತೋಟಗಳಲ್ಲಿ ಮರಿಯಾನೆಗಳೊಂದಿಗೆ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನಿAದ ಅಪಾರ ಪ್ರಮಾಣದ ಕೃಷಿ ಪಸಲುಗಳು ನಾಶವಾಗುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡಿವೆ. ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಶಿಕ್ಷಣದಿಂದ ವಂಚಿರಾಗಿ ಮನೆಯಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ.
ಹೊಟ್ಟೆಪಾಡಿನ ಜೀವನಕ್ಕಾಗಿ ತೋಟಕೆಲಸಕ್ಕೆ ತೆರಳುವ ಕಾರ್ಮಿಕರು ಕಾಡು ಪ್ರಾಣಿಗಳ ಭಯದ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಹಾಡಹಗಲಿನಲ್ಲೇ ಮಟ್ಟ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಬಲಿ ತೆಗೆದುಕೊಂಡ ನಂತರ ಇದೀಗ ಕಾಡಾನೆಗಳು ಗುಂಪುಗಳಾಗಿ ಕಾಣಿಸಿಕೊಳ್ಳುತ್ತೇವೆ.
ಕೆಲ ದಿನಗಳಿಂದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆಯಾದರೂ, ಆನೆಗಳು ಕಾಡಿಗೆ ಹೋದರು ಮತ್ತೆ ವಾಪಸ್ ಬರುತ್ತೆ. ಕಾಡಾನೆಗಳನ್ನ ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೊಪಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಪಾಲೂರಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ ಬದಿಯ ಮರದ ಕೊಂಬೆ

Published

on

ನಾಪೋಕ್ಲು :ನಾಪೋಕ್ಲುವಿನಿಂದ ಬೆಟ್ಟಗೇರಿ ಮಾರ್ಗವಾಗಿ ಮಡಿಕೇರಿಗೆ ತೆರಳುವ ಮುಖ್ಯ ರಸ್ತೆಯ ಪಾಲೂರು ಗ್ರಾಮದ ಬಳಿಯ ರಸ್ತೆಯ ತಿರುವಿನಲ್ಲಿ ಮರದ ಗೊಂಬೆಯೊಂದು ರಸ್ತೆಗೆ ಬಿದ್ದು ಅಪಾಯಕ್ಕೆ ಆಹ್ವಾನ ನೀಡುವಂತೆ ಕಾಣುತ್ತಿದೆ.

ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರಿ ಗಾಳಿ ಮಳೆಗೆ ನಾಪೋಕ್ಲು ಬೆಟ್ಟಗೇರಿ ಮುಖ್ಯರಸ್ತೆಯ ಪಾಲೂರು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಈ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಆದರೆ ಮರ ತೆರವುಗೊಳಿಸುವ ಸಂದರ್ಭ ಪೂರ್ಣ ಪ್ರಮಾಣದಲ್ಲಿ ತೆರೆವುಗೊಳಿಸದೆ ಅರ್ಧದಷ್ಟು ರಸ್ತೆಯಲ್ಲೇ ಬಿಟ್ಟಿದ್ದು ಇದರಿಂದ ವಾಹನ ಸಂಚಾರದ ವೇಳೆ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಹಗಲು ರಾತ್ರಿ ನೂರಾರು ವಾಹನಗಳು ಸಂಚರಿಸುತ್ತಿದ್ದು ರಸ್ತೆ ಬದಿಯಲ್ಲಿ ಬಿದ್ದ ಮರದ ಕೊಂಬೆ ರಸ್ತೆಯ ಅರ್ಧಕ್ಕೆ ವಾಲಿಕೊಂಡಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತೆ ಎದ್ದು ಕಾಣುತ್ತಿದೆ.ಸಂಬಂಧಪಟ್ಟವರು ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತು ಕೊಂಡು ಮರದ ಕೊಂಬೆಯನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಹಾಗೂ ವಾಹನ ಚಾಲಕರು ಒತ್ತಾಯಿಸಿದ್ದಾರೆ.

ವರದಿ :ಝಕರಿಯ ನಾಪೋಕ್ಲು

Continue Reading

Kodagu

ಬೆಂಗಳೂರಿನಲ್ಲಿ 22/7/2024 ರಂದು ವಿಧಾನಸೌಧ ಚಲೋ ಚಳುವಳಿ – ಕೊಡಗು ರೈತ ಸಂಘದ ಜಿಲ್ಲಾಧ್ಯಕ್ಷ ಶರತ್ ಕುಮಾರ್

Published

on

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ನೇತೃತ್ವದಲ್ಲಿ 22/7/2024 ಸೋಮವಾರದಂದು ವಿಧಾನಸೌಧ ಚಲೋ ಚಳುವಳಿಯನ್ನ ಬೆಂಗಳೂರಿನಲ್ಲಿ ಮಾಡಲಾಗುವುದು ಎಂದು ಕೊಡಗು ಜಿಲ್ಲಾಧ್ಯಕ್ಷ ಶರತ್ ಕುಮಾರ್ HJ ಹೇಳಿದ್ದಾರೆ.


ವಿಧಾನಸಭಾ ಅಧಿವೇಶನದಲ್ಲಿ ರೈತರ ಕುಂದು ಕೊರತೆಗಳನ್ನು ಆಲಿಸದೆ . ತಮ್ಮ ಮನಸೋ ಇಚ್ಛೆ . ಜನತೆಯಿಂದ ಗೆದ್ದ ರಾಜಕಾರಣಿಗಳು. ರೈತರ ಬೇಡಿಕೆಗಳು ಮತ್ತು ಅತಿ ಹೆಚ್ಚು ಮಳೆ ಇಂದ ಆದಂತಹ ಜಿಲ್ಲೆಗಳ ಸ್ಥಳ ಪರಿಶೀಲನೆ ಮಾಡಿ ರೈತರಿಗೆ ಮತ್ತೆ ಜನರಿಗೆ ಆದಂತಹ ಕಷ್ಟಗಳಿಗೆ ನೆರವಾಗದೆ ಬದಲು. ಬೇಡವಾದ ವಿಚಾರಗಳನ್ನು ವಿಧಾನಸಭೆಯ ದೇವಾಲಯದಲ್ಲಿ ಡೊಂಬರಾಟ ನಡೆಸುತ್ತಿದ್ದಾರೆ. ಎಂದು ಶರತ್ ಕುಮಾರ್ ಆರೋಪಿಸಿದ್ದಾರೆ


ಕೊಡಗು ಮತ್ತು ಮೈಸೂರು ಜಿಲ್ಲೆ ಸಂಚಾಲಕಡಾ ಅರುಣ್ ಕುಮಾರ್ ಮಾತಾಡಿ ಮಳೆ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಆದಂತಹ ಅನಾಹುತಗಳನ್ನು ಪರಿಶೀಲನೆ ಮಾಡಿ ರೈತರಿಗೆ ಪರಿಹಾರವನ್ನು ಕೊಡಬೇಕು ಮತ್ತುಮೈಸೂರು.ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ರೈತರಿಗೆ ಆಗಿರುವ ನಷ್ಟವನ್ನು ಕೊಡಬೇಕು. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನೆ ಮತ್ತೆ ಮಾನವ ಸಂಘರ್ಷವನ್ನು ಕಟ್ಟು ನಿಟ್ಟಾಗಿ ತಡೆಯಬೇಕು.

ಕೊಡಗಿನಲ್ಲಿ ಸರ್ಕಾರದ ಭೂಮಿಯನ್ನು ಒತ್ತುವರಿಯನ್ನು ತೆರೆವು ಗೊಳಿಸಬೇಕು .ಬಹುಕರ್ ಸಾಗುವಳಿಯನ್ನು ಪ್ರತಿಯೊಬ್ಬ ರೈತನಿಗೆ ಕೊಡಬೇಕು ಹಾಗಾಗಿ ಇಡೀ ರಾಜ್ಯಾದ್ಯಂತ ನಮ್ಮ ರೈತ ಸಂಘಟನೆ ವಿಧಾನಸೌಧ ಮುತ್ತಿಗೆ ಚಳುವಳಿಯನ್ನು ಆರಂಭಿಸಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಕೊಡಗು ಗೌರವಾಧ್ಯಕ್ಷ ಚಂದ್ರಣ್ಣ. ಉಪಾಧ್ಯಕ್ಷ ಪ್ರಸನ್ನ ರೆಡ್ಡಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ. ತಾಲೂಕು ಸಂಘಟನಾ ಕಾರ್ಯದರ್ಶಿ ತೊರೆನೂರು. ಅರುಣ. ತೊರೆನೂರು ಘಟಕದ ಅಧ್ಯಕ್ಷ ಅಮೃತ್. ಹೆಬ್ಬಾಲೆ ಘಟಕದ ಅಧ್ಯಕ್ಷ ಬಾಂಬೆಪುಟ್ಟ. ಹುಲಸೆ ಘಟಕದ ಅಧ್ಯಕ್ಷ ದಿನೇಶ್.ಇದ್ದರು

Continue Reading

Kodagu

ನಾಪೋಕ್ಲು ವ್ಯಾಪ್ತಿಯಲ್ಲಿ ತಗ್ಗಿದ ಮಳೆ

Published

on

ರಸ್ತೆಗೆ ಅವರಿಸಿದ್ದ ಕಾವೇರಿ ನದಿ ಪ್ರವಾಹದಲ್ಲಿ ಇಳಿಕೆ ಸಂಚಾರಕ್ಕೆ ಮುಕ್ತವಾಗಿದೆ.

ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹ ಇಳಿಕೆ ವಾಹನ ಸಂಚಾರ ಆರಂಭ.

ನಾಪೋಕ್ಲು ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ಪ್ರವಾಹದಲ್ಲಿ ಇಳಿಕೆ ಕಂಡಿದ್ದು ಇಂದು ಮದ್ಯಾಹ್ನದ ಹೊತ್ತಿಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ.

ನಾಪೋಕ್ಲು ಕೊಟ್ಟಮುಡಿ, ಬೆಟ್ಟಗೇರಿ,ಕೈಕಾಡು ಪಾರಾಣೆ, ಕಕ್ಕಬ್ಬೆ ಮಾರ್ಗವಾಗಿ ವಿರಾಜಪೇಟೆ ತೆರಳುವ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಮೈದುಂಬಿ ಹರಿದು ಕಳೆದ ಎರಡು ಮೂರು ದಿನಗಳಿಂದ ರಸ್ತೆಗಳು ಜಲಾವೃತ ಗೊಂಡು ಸಂಚಾರ ಸ್ಥಗಿತಗೊಂಡಿತ್ತು.

Continue Reading

Trending

error: Content is protected !!