Connect with us

State

ಕಳೆದ 3ವರ್ಷಗಳಲ್ಲಿ ರಾಜ್ಯದಾದ್ಯಂತ 237 ಅನೆಗಳು ಮೃತಪಟ್ಟಿವೆ

Published

on

ಕರ್ನಾಟಕ : ಅರಣ್ಯದಲ್ಲಿರುವ ಆನೆಗಳ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಕಳೆದ 3ವರ್ಷಗಳಲ್ಲಿ ರಾಜ್ಯದಾದ್ಯಂತ 237 ಅನೆಗಳು ಮೃತಪಟ್ಟಿವೆ.

ನಾನಾ ಕಾರಣಗಳಿಂದ 2020-21ರಲ್ಲಿ 74 ಆನೆ ಮೃತಪಟ್ಟಿವೆ. 2021 -22ರಲ್ಲಿ 90 ಆನೆ, 2022-23ರಲ್ಲಿ 73 ಅನೆಗಳು ಬಲಿಯಾಗಿವೆ.

ಅದೇ ರೀತಿ, ಆನೆ ದಾಳಿಯಿಂದ 2020-21ರಲ್ಲಿ 26 ಜನ ಮೃತಪಟ್ಟಿದ್ದು, 195 ಲಕ್ಷ ರೂ. ಪರಿಹಾರ ನೀಡಲಾಗಿದೆ. 2021- 22ರಲ್ಲಿ ಮೃತಪಟ್ಟ 28 ಜನರಿಗೆ 232.50 ಲಕ್ಷ ರೂ., 2022-23ರಲ್ಲಿ ಮೃತಪಟ್ಟ 30 ಜನರಿಗೆ 267.50 ಲಕ್ಷ ಪರಿಹಾರ ವಿತರಿಸಲಾಗಿದೆ.

ರಾಜ್ಯದಲ್ಲಿವೆ 6395 ಆನೆಗಳು

2023ನೇ ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ನೇರ ವೀಕ್ಷಣೆಯಿಂದ ನಡೆದ ಆನೆ ಗಣತಿಯ ವರದಿಯಂತೆ ಕರ್ನಾಟಕ ರಾಜ್ಯದಲ್ಲಿ 6395 ಅನೆಗಳಿವೆ ಎಂದು ವರದಿಯಾಗಿದೆ. ಈ ಪೈಕಿ ವಿದ್ಯುತ್ ಸ್ಪರ್ಶ, ಕಾಡಾನೆ ಸೆರೆ ಕಾರ್ಯಾಚರಣೆ, ವಯೋ ಸಹಜ, ಗುಂಡಿಗೆ ಬಿದ್ದಿರುವುದು, ರೈಲಿಗೆ ಡಿಕ್ಕಿಯಾಗಿರುವುದು ಸೇರಿದಂತೆ ನಾನಾ ಕಾರಣಗಳಿಂದ 3 ವರ್ಷದಲ್ಲಿ ಬಲಿಯಾದ ಆನೆಗಳ ಸಂಖ್ಯೆ 237.

ಸಾಕಾನೆ ಅರ್ಜುನನ ಮೃತ್ಯು

ದೇಶ ವಿದೇಶದಿಂದ ಬಂದು ನೋಡುವ ನಾಡಹಬ್ಬ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತುಕೊಂಡು ಗಾಂಭೀರ್ಯದ ಹೆಜ್ಜೆ ಹಾಕಿದ್ದ ಅರ್ಜುನ ಇತ್ತೀಚೆಗೆ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆಯ ಯಸಳೂರು ಕುಂಡಿಗೆ ಅರಣ್ಯ ವಲಯದಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಅರ್ಜುನ ನಾವು ಕಾಣಬೇಕಾಯಿತು. ಈ ಸಾವಿನ ಸುದ್ದಿ ತಿಳಿದು ಜನರು ಕಣ್ಣೀರು ಹಾಕಿದ್ದಾರೆ.

ಆನೆ ಆವಾಸ ಸ್ಥಾನ ಉಳಿಸಲು ಜಾಗೃತಿ

ಆನೆ ಅವಾನ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಅವುಗಳ ಸಂರಕ್ಷಣೆ ಮತ್ತು ಸಂತತಿ ಉಳಿಸುವಿಕೆಯ ಬಗ್ಗೆ ಜಾಗೃತಿ ಮೊಡಿಸಲಾಗುತ್ತಿದೆ. ಅನೆಗಳ ಅವಾನ ಸ್ಥಾನಗಳ ಸಂರಕ್ಷಣೆಗಾಗಿ ಕಳೆದ ಮೂರು ವರ್ಷದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಹುಲಿ ಯೋಜನೆ ಮತ್ತು ಮನೆ ಯೋಜನೆಯಡಿ ಕೇಂದ್ರದಿಂದ 891.5675 ಲಕ್ಷ ರೂ. ನೀಡಿದರೆ, 804.516 ಲಕ್ಷ ರೂ. ರಾಜ್ಯದ ಪಾಲನ್ನು ನೀಡಲಾಗಿದೆ. ಅರಣ್ಯ ಪ್ರದೇಶಕ್ಕೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸೂಕ್ತ ತರಬೇತಿ ಕೂಡ ಸಿಬ್ಬಂದಿಗೆ ನೀಡಲಾಗುತ್ತಿದೆ ಎಂದು ಮಧು ಜಿ.ಮಾದೇಗೌಡ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅರಣ್ಯ ನಚಿವ ಈಶ್ವರ ಖಂಡ್ರೆ, ಲಿಖಿತ ಮೂಲಕ ಉತ್ತರ ನೀಡಿದ್ದಾರೆ.

Special

ಕರ್ನಾಟಕದಲ್ಲಿ 2.93 ಲಕ್ಷ ಹೊಸ BPL ಕಾರ್ಡ್ ಬಿಡುಗಡೆ : ನಿಮ್ಮ ಹೆಸರು ಹೊಸ ಪಟ್ಟಿಯಲ್ಲಿ ಇದೆಯೇ?

Published

on

ಕರ್ನಾಟಕ ಸರ್ಕಾರದಿಂದ ಬಡ ಕುಟುಂಬಗಳ ಸಹಾಯಕ್ಕಾಗಿ ಹೊಸ BPL (Below Poverty Line) ಕಾರ್ಡ್ ವಿತರಣೆ ಕಾರ್ಯ ನಡೆದಿದೆ. ರಾಜ್ಯದಾದ್ಯಂತ ಸುಮಾರು 2.93 ಲಕ್ಷ ಹೊಸ BPL ಕಾರ್ಡ್‌ಗಳು ಮಂಜೂರಾಗಿದ್ದು, ಅರ್ಜಿ ಸಲ್ಲಿಸಿದ ಕುಟುಂಬಗಳು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಈಗಲೇ ಪರಿಶೀಲಿಸಬಹುದು.

ಹೊಸ BPL ಕಾರ್ಡ್ ಪಡೆಯಲು ಅರ್ಹರು:
•ಆರ್ಥಿಕವಾಗಿ ದುರ್ಬಲ ಮತ್ತು ಬಡ ಕುಟುಂಬಗಳು
•ಆದಾಯ ಮಿತಿ ಸರ್ಕಾರ ನಿಗದಿಪಡಿಸಿರುವ ಮಾನದಂಡಕ್ಕೆ ಒಳಪಡುವವರು
•ಹಿಂದಿನಿಂದಲೂ BPL ಕಾರ್ಡ್ ಸಲ್ಲಿಸಿದರೂ ಮಂಜೂರಾಗದ ಕುಟುಂಬಗಳು
•ಪರಿಶೀಲನಾ ಹಂತದಲ್ಲಿ ತಪ್ಪಾಗಿ APL ಪಟ್ಟಿಗೆ ಸೇರಿಸಲ್ಪಟ್ಟ ಕುಟುಂಬಗಳು

ಪಟ್ಟಿ ಪರಿಶೀಲನೆ ಮಾಡುವುದು ಹೇಗೆ?
•ಅಧಿಕೃತ ಸಾರ್ವಜನಿಕ ಪೋರ್ಟಲ್‌ಗೆ ಭೇಟಿ ನೀಡಿ ನಿಮ್ಮ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಆಯ್ಕೆ ಮಾಡಿ
•ಕುಟುಂಬದ ಮುಖ್ಯಸ್ಥರ ಹೆಸರು ಅಥವಾ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ
•‘Search’ ಒತ್ತಿದರೆ ಪಟ್ಟಿಯಲ್ಲಿ ನಿಮ್ಮ ವಿವರಗಳು ಕಾಣಿಸುತ್ತವೆ

ಈ ಹೊಸ ಹಂತದ ಮಹತ್ವ:
ಮುನ್ನಡೆಯ ವರ್ಷಗಳಲ್ಲಿ BPL ಕಾರ್ಡ್‌ಗಳ ಸಂಖ್ಯೆಯಲ್ಲಿ ಗೊಂದಲ, ಅನರ್ಹರ ಸೇರ್ಪಡೆ, ಅರ್ಹರು ಹೊರಬೀಳುವ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಸಂಪೂರ್ಣ ವಿಮರ್ಶೆ ನಡೆಸಿ ಹೊಸ ವ್ಯವಸ್ಥೆ ತರಲಾಗಿದೆ.

BPL ಕಾರ್ಡ್ ಪಡೆಯುವ ಪ್ರಯೋಜನಗಳು:
•ಅನ್ನಭಾಗ್ಯ ಯೋಜನೆಯಡಿ ಉಚಿತ/ಕಡಿಮೆ ದರದ ಧಾನ್ಯ
•ಸಿಲಿಂಡರ್, ಆರೋಗ್ಯ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅನೇಕ ಸರ್ಕಾರಿ ಯೋಜನೆಗಳ ಸೌಲಭ್ಯ
•ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳಿಗೆ ಅರ್ಹತೆ

ಅರ್ಹ ಕುಟುಂಬಗಳು ಯಾವುದೇ ವಿಳಂಬವಿಲ್ಲದೆ ಪಡಿತರ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಬಹುದು.ಕರ್ನಾಟಕದ 2.93 ಲಕ್ಷ ಹೊಸ BPL ಕಾರ್ಡ್ ವಿತರಣೆಯು ಹಲವು ಬಡ ಕುಟುಂಬಗಳಿಗೆ ನಿಜವಾದ ಆಶಾಕಿರಣ.

Continue Reading

State

ನಾಳೆ KSCA ಚುನಾವಣಾ ಮತದಾನ: ವೆಂಕಟೇಶ್‌ ಪ್ರಸಾದ್ v/s ಬ್ರಿಜೇಶ್ ಪಟೇಲ್ ಬಣಗಳ ಮಧ್ಯೆ ಜಿದ್ದಾಜಿದ್ದಿ

Published

on

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್  ಚುನಾವಣಾ ಮತದಾನ ನಾಳೆ ನಡೆಯಲಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣ ಮ ಬ್ರಿಜೇಶ್ ಪಟೇಲ್  ಬಣಗಳ ಮಧ್ಯೆ  ಭಾರೀ ಹಣಾಹಣಿ ನಡೆದಿದೆ.
ಚುನಾವಣೆಯನ್ನು ಸುತ್ತುವರಿದ ವಿವಾದಗಳ ನಡುವೆ ಇಂದು ಪ್ರಸಾದ್ ಬಣವೂ ಕೆಎಸ್‌ಸಿಎ ಸದಸ್ಯರೊಂದಿಗೆ ಸಂವಾದ ನಡೆಸಿತು.

ಪ್ಯಾಲೇಸ್ ಮೈದಾನದಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂರಾರು ಕೆಎಸ್‌ಸಿಎ ಸದಸ್ಯರು ಪಾಲ್ಗೊಂಡಿದ್ದರು. ಟೀಂ ಗೇಮ್ ಚೇಂಜರ್ಸ್ ಪರವಾಗಿ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬ್ರಿಜೇಶ್ ಬಣದ ಆಡಳಿತದ ವೈಫಲ್ಯಗಳನ್ನು ಪ್ರಸಾದ್ ಬಣವು ಪಿಪಿಟಿ ಮೂಲಕ ಸದಸ್ಯರಿಗೆ ವಿವರಣೆ ನೀಡಿತ್ತು.

ಸಂವಾದದ ನಂತರ ಮಾತನಾಡಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಸ್ತುತ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವೆಂಕಟೇಶ್ ಪ್ರಸಾದ್ ತಂಡ ಗೆಲ್ಲಲೇಬೇಕು. ರಾಜ್ಯದಲ್ಲಿ ಕ್ರಿಕೆಟ್ ಉದ್ಧಾರ ಆಗಬೇಕಾದರೆ ಬದಲಾವಣೆ ಅನಿವಾರ್ಯ. ನಾವು ಅಧಿಕಾರದಲ್ಲಿದ್ದಾಗ ಎರಡು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಈಗ 10 ಹೆಜ್ಜೆ ಹಿಂದೆ ಹೋಗಿದ್ದೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಫ್ರಾಸ್ಟ್ರಕ್ಚರ್ ಬದಲಾಗಬೇಕು. ಪ್ರಸಾದ್ ತಂಡ ಇದನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ಕೆಎಸ್‌ಸಿಎನಲ್ಲಿ ದುಡ್ಡಿಗೆ ಕೊರತೆಯಿಲ್ಲ. ಆದರೆ ಕ್ರಿಕೆಟ್ ಬೆಳವಣಿಗೆ ಆಗಬೇಕು. ಮತ ಕೇವಲ ಕ್ಲಬ್‌ಗೆ ಅಲ್ಲ. ಕ್ರಿಕೆಟ್ ಕನಸು ಕಟ್ಟಿಕೊಂಡಿರುವ ಮಕ್ಕಳಿಗಾಗಿ ಎಂದು ಹೇಳಿದರು.

ಇನ್ನೂ ನಾಳೆ ನಿರ್ಣಾಯಕ ದಿನವಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮತದಾನ ಆರಂಭವಾಗಲಿದೆ. ಅಲ್ಲದೇ ನಾಳೆಯೇ ಕೆಎಸ್‌ಸಿಎ ಹೊಸ ಆಡಳಿತ ನಿರ್ಧಾರವಾಗಲಿದ್ದು, ಪ್ರಸಾದ್-ಬ್ರಿಜೇಶ್ ಬಣಗಳ ನಡುವೆ ಕಠಿಣ ಪೈಪೋಟಿ ಎದುರಾಗಲಿದೆ.

Continue Reading

State

ಡಿವೈಡರ್‌ಗೆ ಕಾರ್‌ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ

Published

on

ಧಾರವಾಡ: ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ರಸ್ತೆ ಅಪಘಾತದಲ್ಲಿ ಸಾವು ಕಂಡ ಸುದ್ದಿ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ಧಾರವಾಡದಲ್ಲಿ ವರದಿಯಾಗಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಅವರು ಪ್ರಯಾಣ ಮಾಡುತ್ತಿದ್ದ ಐ20 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹೊತ್ತಿ ಉರಿದ ಕಾರಿನಿಂದ ಹೊರಬರಲು ಸಾಧ್ಯವಾಗದೇ ಇನ್ಸ್‌ಪೆಕ್ಟರ್ ಕೂಡ ಅದರ ಒಳಗೆ ಸಜೀವವಾಗಿ ದಹನವಾಗಿದ್ದಾರೆ.

ಕಾರ್‌ನಲ್ಲಿ ಇನ್ಸ್‌ಪೆಕ್ಟರ್‌ ಸಾಲಿಮಠ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿಯೇ ಅವರ ದೇಹ ಸುಟ್ಟುಹೋಗಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರ ಹೊಲಯದಲ್ಲಿ ಘಟನೆ ನಡೆದಿದೆ.

ಗದಗದಿಂದ ಹುಬ್ಬಳ್ಳಿ ಮಾರ್ಗವಾಗಿ ಕಾರ್‌ ಪ್ರಯಾಣ ಮಾಡುವಾಗ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಭೀಕರ ಘಟನೆ ನಡೆದಿದೆ.

I20 ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ಅವರು ಹೊರಟಿದ್ದರು.

ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಣ್ಣಿಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

Trending

error: Content is protected !!