Connect with us

Kodagu

ಕಾಡಾನೆ ದಾಳಿ – ವೃದ್ಧರಿಗೆ ತೀವ್ರ ಗಾಯ – ಜಿಲ್ಲಾಸ್ಪತ್ರೆಗೆ ದಾಖಲು

Published

on

ವೀರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮುಂದುವರೆದಿದ್ದು, ಆನೆದಾಳಿಯಿಂದ ವೃದ್ದರೋರ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ವಿರಾಜಪೇಟೆ ತಾಲ್ಲೂಕಿನ ಕಡಂಗ ಮರೂರು ಗ್ರಾಮದಲ್ಲಿ‌ ನಡೆದಿದೆ.
ಕಡಂಗ ಮರೂರು ಗ್ರಾಮದ 73 ವರ್ಷ ನಿವಾಸಿ ಅಮ್ಮಂಡ ಸುಬ್ರಹ್ಮಣಿ ಮನೆಯಿಂದ ಹಾಲು ತರಲು ಅಂಗಡಿಗೆ ತೆರಳುವ ಸಂದರ್ಬದಲ್ಲಿ ಕಡಂಗ ಮರೂರು ಗ್ರಾಮದ ಭದ್ರಕಾಳಿ ದೇವಾಲಯದ ಸಮೀಪದ ತೋಟದಿಂದ ಏಕಾ ಏಕಿ ಬಂದ ಮೂರು ಕಾಡಾನೆಗಳು ಸುಬ್ರಮಣಿ ಮೇಲೆ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಕೈ ಕಾಲುಗಳಿಗೆ ತೀವ್ರ ಪಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Kodagu

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ: ಅಪ್ಪಚೆಟ್ಟೋಳಂಡ ಡಿಯಾ ಗೆ ಪ್ರಶಸ್ತಿ

Published

on

ವರದಿ: ಝಕರಿಯ ನಾಪೋಕ್ಲು

ನಾಪೋಕ್ಲು: ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಸಮಿತಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಾಪೋಕ್ಲು ಬಳಿಯ ಬಲ್ಲಮಾಟಿ ಗ್ರಾಮದ ಅಪ್ಪಚೆಟ್ಟೋಳಂಡ ಎ.ಎಂ. ಡಿಯಾ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆದಿದ್ದಾರೆ.

ಕೊಡಗಿನ ಜವಾಹರ್ ನವೋದಯ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಯಾಗಿರುವ ಡಿಯಾ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೊಳಂಡ ಮಿಥುನ್ ಮಾಚಯ್ಯ ಹಾಗೂ ನೀನಾ ಮಾಚಯ್ಯ ದಂಪತಿಗಳ ಪುತ್ರಿಯಾಗಿದ್ದಾರೆ.

Continue Reading

Kodagu

ಕೊಡಗು ಎನ್.ಐ.ಎಂ.ಎ ಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ

Published

on

ಮಡಿಕೇರಿ: ಕೊಡಗು ಜಿಲ್ಲೆಯ ನಿಮಾ 2022-24 ಸಾಲಿನಲ್ಲಿ ತೋರಿದ ಸರ್ವಾಂಗೀಣ ಚಟುವಟಿಕೆಗಳಿಗೆ ರಾಜ್ಯದ 34 ಶಾಖೆಗಳ ಪೈಕಿ ಪ್ರಥಮ ಸ್ಥಾನವನ್ನು ಪಡೆದ ಹಿರಿಮೆಗೆ ಪಾತ್ರವಾಯಿತು.

ರಾಣಿಬೆನ್ನೂರು ನಲ್ಲಿ ನಡೆದ ಎನ್.ಐ.ಎಂ.ಎ ರಾಜ್ಯ ಸಮಿತಿ ಸಭೆಯಲ್ಲಿ ಕೊಡಗು ಜಿಲ್ಲೆಯ ನಿಮಾ, ಪ್ರಥಮ ಸ್ಥಾನ ಪಡೆದುಕೊಂಡಿರುವ ಅಧಿಕೃತ ಘೋಷಣೆ ಮಾಡಲಾಯಿತು.

ಕೊಡಗು ಜಿಲ್ಲೆಯಿಂದ ರಾಜ್ಯ ಪ್ರತಿನಿಧಿಗಳಾದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಶ್ಯಾಮ ಪ್ರಸಾದ್ ಪಿ.ಎಸ್ ಹಾಗೂ ಕೊಡಗು ಜಿಲ್ಲಾ ಅಧ್ಯಕ್ಷ ಡಾ.ರಾಜಾರಾಮ.ಎ.ಆರ್.ಜಿಲ್ಲೆಯ ಪರವಾಗಿ ಪ್ರಶಸ್ತಿ ಪಡೆದುಕೊಂಡರು.

ಕೊಡಗು ಜಿಲ್ಲೆಯ ನೀಮಾ ಮಹಿಳಾ ಘಟಕ ಕೂಡ ಮಹಿಳಾ ವಿಭಾಗದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು.

25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಕೊಡಗು ನೀಮಾ ಈ ವರ್ಷದಲ್ಲಿ ಸಾರ್ವಜನಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ನಿಮಾ ಕೊಡಗು ಘಟಕದ ಅಧ್ಯಕ್ಷ ಡಾ. ರಾಜಾರಾಂ ತಿಳಿಸಿದ್ದಾರೆ.

Continue Reading

Kodagu

ಜನವರಿ 26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ

Published

on

ಮಡಿಕೇರಿ : ಉಪನ್ಯಾಸಕಿ ಮತ್ತು ಲೇಖಕಿ ಕೆ. ಜಯಲಕ್ಷ್ಮಿ ಅವರು ಬರೆದಿರುವ ಮತ್ತೆ ವಸಂತ ಹೆಸರಿನ ಕಥಾ ಸಂಕಲನ ಇದೇ ಜನವರಿ 26 ರಂದು ಲೋಕಾರ್ಪಣೆಯಾಗಲಿದೆ.

ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಜನವರಿ 26 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮತ್ತೆ ವಸಂತ ಕಥಾ ಸಂಕಲನವನ್ನು ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಲೋಕಾರ್ಪಣೆ ಮಾಡಲಿದ್ದಾರೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಟಿ. ಪಿ ರಮೇಶ್ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕ
ಜಿ . ಚಿದ್ವಿಲಾಸ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್ ಟಿ., ಬೆಳ್ತಂಗಡಿಯ ಎನ್. ಜಯಪ್ರಕಾಶ್ ಶರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮತ್ತೆ ವಸಂತ ಕಥಾ ಸಂಕಲನದ ಕಥೆಗಾರ್ತಿ ಜಯಲಕ್ಷ್ಮಿ ತಿಳಿಸಿದ್ದಾರೆ.

Continue Reading

Trending

error: Content is protected !!