Chamarajanagar
ಸಮಾನ ಅವಕಾಶ ಕಲ್ಪಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತದೆ. ಸಮಾಜ ಕಲ್ಯಾಣ ಸಚಿವರಾದ ಡಾ ಎಚ್ ಸಿ ಮಹದೇವಪ್ಪ:

ಚಾಮರಾಜನಗರ ಮೀಸಲು ಲೋಕಸಭಾ ಕ್ಷೆತ್ರದ ಕೊಳ್ಳೇಗಾಲ ವಿಧಾನಸಭಾ ಕ್ಷೆತ್ರ ದ ಗ್ರಾಮಗಳಾದ ಕೆಸ್ತೂರು, ಮಾಂಬಳ್ಳಿ, ಮದೂರು, ಕುಣಗಲಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಮಗನಾದ ಸುನೀಲ್ ಬೋಸ್ಪರ ಮಾತಾಯಾಚನೆ ವೇಳೆ ಮಾತನಾಡಿ ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು ಅದು ಒಳ್ಳೆಯದಾಗಿದ್ದರು ಅಲ್ಲಿರುವ ಅಂಶಗಳನ್ನು ಜಾರಿ ಮಾಡುವವರು ಸರಿಯಿದ್ದರೆ ಮಾತ್ರ ಎಲ್ಲಾ ಅವಕಾಶ ಸಿಗುತ್ತದೆ.ಯಾವುದೇ ಪಕ್ಷದಲ್ಲಾಗಲಿ ವ್ಯಕ್ತಿ ಪೂಜೆ ಮಾಡಬೇಡಿ ಹಾಗೆ ಮಾಡಿದರೆ ಆತ ಸರ್ವಾಧಿಕಾರಿಯಾಗುತ್ತಾನೆ ನಂತರ ದೇಶ ನಾಶವಾಗುತ್ತದೆ. ಎಂದು ಸಮಾಜ ಕಲ್ಯಾಣ ಸಚಿವರಾದ ಡಾ ಎಚ್ ಸಿ ಮಹದೇವಪ್ಪ ರವರು ತಿಳಿಸಿದರು.ಈಗ ಅದೇ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ ಅವರಿಗೆ ರಾಜಕೀಯದಲ್ಲಿ ಸಿದ್ದಂತಾ ಮತ್ತು ಬದ್ಧತೆ ಇಲ್ಲ ನಿಜವಾಗಿಯೂ ಅವರಿಗೆ ಜನರ ಅಭಿವೃದ್ಧಿ ಮುಖ್ಯನ ಇಲ್ಲ ಅವರ ಕುಟುಂಬದ ಅಭಿವೃದ್ಧಿ ಮುಖ್ಯನ ಎಂಬುದನ್ನು ನೀವೇ ತೀರ್ಮಾನಿಸಬೇಕು. ಬಿಜೆಪಿ ಪಕ್ಷ ಒಂದು ಓಟು ಒಂದು ದೇಶ ಅನ್ನೋ ತಂತ್ರ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿರುವ ಹುನ್ನಾರ ಇದು ಪ್ರಜಾಪ್ರಭುತ್ವದಲ್ಲಿ ಜನರ ರಾಜಕೀಯ ಹಕ್ಕನ್ನು ಶಮನ ಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಾತ್ಯತೀತವಾದ ಭಾರತ ರಾಷ್ಟ್ರವನ್ನು ಒಂದು ಧರ್ಮದ ದೇಶ ಕಟ್ಟುವ ಕೆಲಸಕ್ಕೆ ಬಿಜೆಪಿ ಎಲ್ಲಾ ತಯಾರು ಮಾಡುತ್ತಿದೆ. ಕೋಮು ಸೌಹಾರ್ದತೇಯನ್ನು ಕಾಪಾಡಲು ಕಾಂಗ್ರೆಸ್ ಪಕ್ಷ ದೇಶದಲ್ಲಿ ಅನಿವಾರ್ಯವಾಗಿ ಬೇಕಾಗಿದೆ.
Chamarajanagar
ಗುಂಡ್ಲುಪೇಟೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ

ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣೆಗೆ ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ ಈ ಹಿಂದೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಪರಶಿವಮೂರ್ತಿ ಅವರಿಗೆ ಡಿವೈಎಸ್ಪಿ ಆಗಿ ಮುಂಬಡ್ತಿ ಹೊಂದಿದ ಹಿನ್ನೆಲೆ ಅವರ ಜಾಗಕ್ಕೆ ಜಯಕುಮಾರ್ ಅವರನ್ನು ನೇಮಿಸಲಾಗಿದೆ.
ಅಧಿಕಾರವಹಿಸಿಕೊಂಡ ಜಯಕುಮಾರ್ ಅವರನ್ನು ಸ್ವಾಗತ ಕೋರಿದ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು
Chamarajanagar
ಗುಂಬಳ್ಳಿಯ ನೀರಿನ ಟ್ಯಾಂಗ್ ಸ್ವಚ್ಛಗೊಳಿಸಿದ ಗ್ರಾಮ ಪಂಚಾಯಿತಿ

ಯಳಂದೂರು ಮಾರ್ಚ್ 27
ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇದ್ದ ನೀರಿನ ಟ್ಯಾಂಕನ್ನು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೊಳಿಸಲಾಯಿತು.
ಕಳೆದ ಕೆಲವು ದಿನಗಳಿಂದ ಕುಡುಕರ ಹಾವಳಿ ಮಿತಿಮೀರಿ ಮಧ್ಯದ ಪಾಕೆಟ್ ಗಳು ಸೇರಿದಂತೆ ನೀರಿನ ತೊಂಬೆ ಸುತ್ತಮುತ್ತ ಅಶುಚಿತ್ವ ತಾಂಡವ ಆಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕೂಡಲೇ ಪೌರಕಾರ್ಮಿಕರ ಜೊತೆಗೆ ಶುಚಿತ್ವಕ್ಕೆ ಮುಂದಾದರು. ಇದರಿಂದ ಮುಂಬರುವ ರೋಗ ರುಜಿನಗಳಿಗೆ ಸ್ವಚ್ಛ ಮಾಡಿದ ಕ್ಷಣದಿಂದಲೇ ಅಂತ್ಯ ಹಾಡಲಾಯಿತು.
ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಕೃಷ್ಣನಾಯಕ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನೀರಿನ ತೊಂಬೆಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮುಂಭಾಗ ಇದ್ದ ನೀರಿನ ತೊಂಬೆ ಬಳಿ ಕುಡುಕರು ಮಧ್ಯ ಕುಡಿದು ಪಾಕೆಟ್ ಗಳನ್ನು ನೀರಿನ ತೊಂಬೆ ಸುತ್ತಮುತ್ತ ಎಸೆಯುತ್ತಿದ್ದರು. ಇಂದು ಎಲ್ಲವನ್ನು ಸ್ವಚ್ಛಗೊಳಿಸಲಾಗಿದೆ ಮುಂಬರುವ ದಿನಗಳಲ್ಲಿ ಇಂಥವರ ಮೇಲೆ ಕಠಿಣ ಕ್ರಮವನ್ನು ಪಂಚಾಯಿತಿ ವತಿಯಿಂದ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರು ಸೇರಿದಂತೆ ಗುಂಬಳ್ಳಿ ಗ್ರಾಮಸ್ಥರು ಮತ್ತು ಇತರರು ಹಾಜರಿದ್ದರು
Chamarajanagar
ಹುಲಿ ದಾಳಿ: ಹಸು ಬಲಿ

ಗುಂಡ್ಲುಪೇಟೆ:-ತಾಲೂಕಿನ ಪಡಗೂರು ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಹಸುವನ್ನು ಕೊಂದು ಹಾಕಿದ ಘಟನೆ ನಡೆದಿದೆ ಪಡಗೂರು ಗ್ರಾಮದಲ್ಲಿ ನಡೆದಿದೆ.
ಪಡಗೂರು ಗ್ರಾಮದ ತರಕಾರಿ ಮಹೇಶ ಎಂಬುವವರ ಜಮೀನಿನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಸುಮಾರು 60 ಸಾವಿರ ಬೆಲೆಬಾಳುವ ಹಸುವಾಗಿದ್ದು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಸ್ಥಳ ಪರಿಶೀಲನೆ ನಡೆಸಿದರು.
ಪಡಗೂರು ಗ್ರಾಮದಲ್ಲಿ ಪದೇ ಪದೇ ಸಾಕು ಪ್ರಾಣಿಗಳು ಮೇಲೆ ಹುಲಿ ದಾಳಿ ಮಾಡುತ್ತಿದ್ದರು ಅರಣ್ಯ ಇಲಾಖೆಯವರು ಯಾವುದೇ ರೀತಿಯಲ್ಲೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
-
Special11 hours ago
ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ
-
State7 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan8 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
State8 hours ago
ಪತ್ರಿಕೋದ್ಯಮ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಅವರಿಗೆ ಡಿ.ಲಿಟ್ ಪದವಿ
-
State6 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?
-
Kodagu4 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan5 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು
-
Mysore9 hours ago
ಸತೀಶ್ ಜಾರಕಿಹೊಳಿ ಸಿಎಂ ಆಗಲು ಎಚ್ಡಿಕೆ ಅವರನ್ನು ಭೇಟಿಯಾಗಿದ್ದಾರೆ: ಜಿಟಿ ದೇವೇಗೌಡ