Connect with us

Kodagu

ಲೋಕಸಭಾ ಚುನಾವಣೆ; ನಿಷೇಧಾಜ್ಞೆ

Published

on

ಕೊಡಗು ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ ಲೋಕಸಭಾ ಚುನಾವಣೆ-2024 ರ ಮತದಾನ ನಡೆಸುವ ಸಂಬಂಧ ಮತ್ತು ಈ ಅವಧಿಯಲ್ಲಿ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 126 ರಡಿ ವ್ಯಾಖ್ಯಾನಿಸಿದ ಅಂಶಗಳಂತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144 ರಡಿ ದತ್ತವಾದ ಅಧಿಕಾರದಂತೆ ಏಪ್ರಿಲ್, 24 ರ ಸಂಜೆ 5 ಗಂಟೆಯಿಂದ ಏಪ್ರಿಲ್, 26 ರ ಸಂಜೆ 5 ಗಂಟೆವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಅಭ್ಯರ್ಥಿ ಅಥವಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವುದನ್ನು ಹೊರತುಪಡಿಸಿ, ಉಳಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಭೆ-ಸಮಾರಂಭ ನಡೆಸುವುದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವುದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಿದೆ.
ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗುವುದನ್ನು ನಿಷೇಧಿಸಿದೆ.

ಐದಕ್ಕಿಂತ ಹೆಚ್ಚಿನ ಜನ ಗುಂಪು ಸೇರುವುದು/ ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಎಲ್ಲಾ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿ ಪರ ಪ್ರಚಾರ, ಮತದಾರರ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗು ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಆನೆ ದಾಳಿಗೆ ಸಿಲುಕಿ ಗಾಯಗೊಂಡ ಭರತ್ ರವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ ಎಸ್ ಪೊನ್ನಣ್ಣ

Published

on

ಮಡಿಕೇರಿ : ಇತ್ತೀಚೆಗೆ ಆನೆ ದಾಳಿಗೆ ಸಿಲುಕಿ ಗಾಯಗೊಂಡು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಮದೆ ಗ್ರಾಮದ ಪಟ್ಟಡ ಭರತ್ ರವರ ಯೋಗಕ್ಷೇಮ ವಿಚಾರಿಸಲು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು.

ಗಾಯಾಳು ಭರತ್ ರಿಗೆ ಧೈರ್ಯ ಹೇಳುತ್ತಾ ಘಟನೆಯ ಬಗ್ಗೆ ವಿವರ ಪಡೆದ ಮಾನ್ಯ ಶಾಸಕರು, ವೈದ್ಯರಲ್ಲಿ ಗಾಯದ ತೀವ್ರತ ಬಗ್ಗೆ ಮಾಹಿತಿ ಪಡೆದು, ಹೆಚ್ಚಿನ ಕಾಳಜಿ ವಹಿಸಿ ಇವರನ್ನು ಗುಣಮುಖರನ್ನಾಗಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರು ವೈಯುಕ್ತಿಕ ಧನ ಸಹಾಯ ನೀಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿಯವರಾದ ಕೊಲ್ಯದ ಗಿರೀಶ್, ಸೂರಜ್ ಹೊಸೂರು, ಪಟ್ಟಡ ದೀಪಕ್, ಕೊಡಗನ ತೀರ್ಥ ಪ್ರಸಾದ್, ಪಟ್ಟಡ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Continue Reading

Kodagu

ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೊಟ್ಟಮುಡಿ ಮರ್ಕಝ್ ವಿದ್ಯಾರ್ಥಿನಿ ರಈಸಾ ಜಿಲ್ಲೆಗೆ ಪ್ರಥಮ

Published

on

ವರದಿ : ಝಕರಿಯ ನಾಪೋಕ್ಲು

ನಾಪೋಕ್ಲು : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ 2026ನೇ ಸಾಲಿನ 10ನೇ ತರಗತಿಯ ಆಂಗ್ಲ ಮಾಧ್ಯಮ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೆ.ಆರ್. ರಈಸಾ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

ನಾಪೋಕ್ಲು ಬಳಿಯ ಕೊಟ್ಟಮುಡಿ ಮರ್ಕಝುಲ್ ಹಿದಾಯ ಮದರಸ ವಿದ್ಯಾರ್ಥಿನಿಯಾಗಿರುವ ರಈಸಾ 10ನೇ ತರಗತಿ ಮದರಸ ಆಂಗ್ಲ ಮಾಧ್ಯಮ ವಿಭಾಗದ ಪಬ್ಲಿಕ್ ಪರೀಕ್ಷೆಯಲ್ಲಿ 300ಕ್ಕೆ300 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ರಈಸಾ ಎಡಪಾಲ ಕಿಕ್ಕರೆ ಗ್ರಾಮದ ನಿವಾಸಿ ಮದರಸ ಅಧ್ಯಾಪಕರಾದ ಅಬ್ದುಲ್ ರಶೀದ್ ಮುಸ್ಲಿಯಾರ್ ಹಾಗೂ ಫಾತಿಮಾ ದಂಪತಿಗಳ ಪುತ್ರಿಯಾಗಿದ್ದಾಳೆ. ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಮದರಸ ಆಂಗ್ಲಮಾಧ್ಯಮ ಪಬ್ಲಿಕ್ ಪರೀಕ್ಷೆಯಲ್ಲಿ ಕೊಟ್ಟಮುಡಿ ಮರ್ಕಝುಲ್ ಹಿದಾಯ ಮದರಸದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ100ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.

Continue Reading

Kodagu

ಲಾಂಛನ , ಒಕ್ಕೂಟದ ಶೀರ್ಷಿಕೆ ಗೀತೆ ಲೋಕಾರ್ಪಣೆ

Published

on

ಗೋಣಿಕೊಪ್ಪ : ಕಾವೇರಿ ಪೊಮ್ಮಕ್ಕಡ ಕೂಟದ ‘ಮೀನ್ಯಾರ್ ನಮ್ಮೆ’ಯ ಲಾಂಛನ ಮತ್ತು ಒಕ್ಕೂಟದ ಶೀರ್ಷಿಕೆ ಗೀತೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಲೋಕಾರ್ಪಣೆಗೊಳಿಸಿದರು.

ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಅಧ್ಯಕ್ಷತೆಯಲ್ಲಿ ಏಪ್ರಿಲ್ ಮೂರರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೂಟದ ಒಂಬತ್ತನೇ ವರ್ಷದ ಆಚರಣೆಯಾಗಿ “ಮೀನ್ಯಾರ್ ನಮ್ಮೆ” ಯನ್ನು ನಾಲ್ಕನೇ ವರ್ಷವಾಗಿಸುವ ಸಂಭ್ರಮಕ್ಕೆ ಲಾಂಛನ ಅನಾವರಣಗೊಂಡಿತು.


ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಕೊಡವ ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೊಡವ ಭಾಷೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಶಿಷ್ಟ ಭಾಷೆಗಳಲ್ಲಿ ಕೊಡವ ಭಾಷೆಯು ತನ್ನ ಶ್ರೀಮಂತಿಕೆಯನ್ನು ಉಳಿಸಿಕೊಂಡಿದೆ. ಕೊಡವ ಬಾಷೆಯಲ್ಲಿನ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಕಲೆ, ಸಂಗೀತಗಳನ್ನು ಮತ್ತಷ್ಟು ಪಸರಿಸುವ ಮೂಲಕ ಈ ಭಾಷೆಯ ಉಳಿವಿಗೆ ಪ್ರತಿಯೊಬ್ಬರೂ ಕ್ರಿಯರಾಗಿರಬೇಕು ಎಂದು ಹೇಳಿದರು.


ಕೊಡವ ಭಾಷೆಯಲ್ಲಿ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಹೆಚ್ಚಿನ ಕೊರತೆ ಕಾಡುತ್ತಿತ್ತು. ಇಂದು ಅಂತಹ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಕೊಡವ ಭಾಷೆಯ ಬರಹಗಾರರು ಮತ್ತು ಹಾಡುಗಾರರು ಮುಂದುವರೆದಿದ್ದಾರೆ ಎಂಬುವುದು ಈ ಭಾಷೆಯ ಸಂಭ್ರಮವಾಗಿದೆ. ಇಂತಹ ವ್ಯವಸ್ಥೆಗಳಿಗೆ ಕಾವೇರಿ ಪೋಮ್ಮಕ್ಕಡ ಕೂಟ ಪೂರಕ ವಾತಾವರಣವನ್ನು ಒದಗಿಸಿಕೊಡುತ್ತಿದೆ ಎಂದು ಹೇಳಿದರು.

ಕಾವೇರಿ ಪೋಮ್ಮಕ್ಕಡ ಕೂಟದ ಅಧ್ಯಕ್ಷೆ ವಿಜು ದೇವಯ್ಯ ಮಾತನಾಡಿ, ಕೂಟವು ಕಳೆದ 9 ವರ್ಷಗಳಿಂದ ಕಾರ್ಯನಿರತವಾಗಿದೆ. ಆರೋಗ್ಯ, ಪರಿಸರ, ಸಮಾಜದ ಕಳಕಳಿ ಮತ್ತು ಸೇವೆಗಳೊಂದಿಗೆ ಗುರುತಿಸಿಕೊಳ್ಳುವ ಮೂಲಕ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದೆ ಎಂದು ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.


ಒಕ್ಕೂಟದ ಶೀರ್ಷಿಕೆ ಗೀತೆಯ ರಚನೆಗಾರ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ಮತ್ತು ಹಾಡುಗಾರ್ತಿ ಕಬ್ಬಚ್ಚೀರ ರಶ್ಮಿ ಸೇರಿದಂತೆ ಕೊಟದ ಸದಸ್ಯರುಗಳು ಇದ್ದರು.

Continue Reading

Trending

error: Content is protected !!