Connect with us

State

ಎಲೆಕ್ಟೋರಲ್ ಬಾಂಡ್ ಯೋಜನೆ ಅಂದ್ರೆ ಏನು?? ಸುಪ್ರೀಂ ಕೋರ್ಟ್ ರದ್ದುಗೊಳಿಸಲು ಕಾರಣವೇನು??

Published

on

Electoral Bond Scheme: ಎಲೆಕ್ಟೋರಲ್ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ನೀಡಿದೆ.

What Is Electoral Bond Scheme: ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಈಗ ರದ್ದುಗೊಳಿಸಿದೆ. ಎಲೆಕ್ಟೋರಲ್ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ಹೊರಬಿದ್ದಿದೆ. ಕಪ್ಪುಹಣವನ್ನು ತಡೆಗಟ್ಟುವ ಉದ್ದೇಶದಿಂದ ಮಾಹಿತಿ ಹಕ್ಕು ಉಲ್ಲಂಘನೆ ಸಮರ್ಥನೀಯವಲ್ಲ, ಎಲೆಕ್ಟೋರಲ್ ಬಾಂಡ್ ಯೋಜನೆಯು ಮಾಹಿತಿ ಹಕ್ಕು ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದು, ರಾಜಕೀಯ ಪಕ್ಷಗಳಿಂದ ಹಣಕಾಸಿನ ಮಾಹಿತಿಯನ್ನು ಬಹಿರಂಗಪಡಿಸದಿರುವುದು ಇದಕ್ಕೆ ವಿರುದ್ಧ ಎಂದು ಹೇಳಿದೆ.

ಎಲೆಕ್ಟೋರಲ್ ಬಾಂಡ್ ಗಳನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲೆಕ್ಟೋರಲ್ ಬಾಂಡ್ ಗಳ ಮೂಲಕ ಇದುವರೆಗೆ ನೀಡಿರುವ ಎಲ್ಲಾ ಕೊಡುಗೆಗಳ ಬಗ್ಗೆ ವಿವರಗಳನ್ನು ಮಾರ್ಚ್ 31 ರೊಳಗೆ ಚುನಾವಣಾ ಆಯೋಗಕ್ಕೆ ನೀಡುವುದು ಕಡ್ಡಾಯ’ ಎಂದು ಕೋರ್ಟ್ ಸೂಚನೆ ನೀಡಿದೆ. ಏಪ್ರಿಲ್ 13 ರ ಒಳಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲು ಚುನಾವಣಾ ಆಯೋಗಕ್ಕೆ ನ್ಯಾಯಾಲಯವು ಸೂಚನೆ ನೀಡಿದೆ.

ಎಲೆಕ್ಟೋರಲ್ ಬಾಂಡ್ ಯೋಜನೆಯಲ್ಲಿ ಆರ್ಟಿಕಲ್ 19(1)(ಎ) ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದೆ. ಇದನ್ನು ಅಸಂವಿಧಾನಿಕ ಎಂದು ಪರಿಗಣಿಸಿರುವ ನ್ಯಾಯಾಲಯ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಎಲೆಕ್ಟೋರಲ್ ಬಾಂಡ್ ಎಂದರೇನು?

2017 ರಲ್ಲಿ ಭಾರತ ಸರ್ಕಾರವು ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಘೋಷಣೆ ಮಾಡಿತು. ಈ ಯೋಜನೆಯನ್ನು ಸರ್ಕಾರವು ಜನವರಿ 29 2018 ರಂದು ಕಾನೂನುಬದ್ಧವಾಗಿ ಜಾರಿಗೆ ತಂದಿತು. ಸರಳವಾಗಿ ಹೇಳುವುದಾದರೆ, ಎಲೆಕ್ಟೋರಲ್ ಬಾಂಡ್ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಆರ್ಥಿಕ ಸಾಧನವಾಗಿದೆ. ಇದು ಪ್ರಾಮಿಸರಿ ನೋಟ್‌ನಂತಿದೆ

ಭಾರತದ ನಾಗರಿಕ, ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಿಂದ ಇದನ್ನು ಖರೀದಿ ಮಾಡಬಹುದಾಗಿದೆ. ತಮ್ಮ ಆಯ್ಕೆಯ ಯಾವುದೇ ರಾಜಕೀಯ ಪಕ್ಷಕ್ಕೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾಗಿದೆ.

KYC ವಿವರಗಳಗಳು ಹೊಂದಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಯಾರು ಬೇಕಾದರೂ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿ ಮಾಡಬಹುದಾಗಿದೆ. ಎಲೆಕ್ಟೋರಲ್ ಬಾಂಡ್‌ಗಳು ಪಾವತಿಸುವವರ ಹೆಸರನ್ನು ಹೊಂದಿರುವುದಿಲ್ಲ. ಈ ಯೋಜನೆಯಡಿಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದಿಷ್ಟ ಶಾಖೆಗಳಿಂದ ರೂ 1,000, ರೂ 10,000, ರೂ 1 ಲಕ್ಷ, ರೂ 10 ಲಕ್ಷ ಮತ್ತು ರೂ 1 ಕೋಟಿಯ ಯಾವುದೇ ಮುಖಬೆಲೆಯ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಬಹುದು.

ಎಲೆಕ್ಟೋರಲ್ ಬಾಂಡ್‌ಗಳನ್ನು ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಳಲ್ಲಿ 10 ದಿನಗಳ ಅವಧಿಗೆ ಖರೀದಿಸಲು ಲಭ್ಯವಾಗುತ್ತವೆ. ಲೋಕಸಭೆ ಚುನಾವಣೆಯ ವೇಳೆ ಕೇಂದ್ರ ಸೂಚಿಸಿದ 30 ದಿನಗಳ ಹೆಚ್ಚುವರಿ ಅವಧಿಯಲ್ಲಿ ನೀಡಬಹುದಾಗಿದೆ.

ಎಲೆಕ್ಟೋರಲ್ ಬಾಂಡ್‌ ಹೇಗೆ ಕಾರ್ಯನಿರ್ವಹಿಸುತ್ತವೆ?

ಎಲೆಕ್ಟೋರಲ್ ಬಾಂಡ್‌ಗಳನ್ನು ಬಳಸುವುದು ತುಂಬಾ ಸುಲಭ. ನೀವು ಇವುಗಳನ್ನು ಎಸ್‌ಬಿಐನ ಕೆಲವು ಶಾಖೆಗಳಲ್ಲಿ ಪಡೆದುಕೊಳ್ಳುತ್ತೀರಿ. ನೀವು ಈ ಬಾಂಡ್‌ನ್ನು ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದ ಬಳಿಕ ರಿಸೀವರ್ ಅದನ್ನು ನಗದು ಆಗಿ ಪರಿವರ್ತಿಸಬಹುದು. ಪಕ್ಷದ ಖಾತೆಯನ್ನು ಪರಿಶೀಲಿಸಿ ಎನ್‌ಕ್ಯಾಶ್ ಮಾಡಲು ಬಳಕೆಯಾಗುತ್ತದೆ. ಎಲೆಕ್ಟೋರಲ್ ಬಾಂಡ್‌ಗಳು 15 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ.

ಯಾರು ಚುನಾವಣಾ ಬಾಂಡ್ ಪಡೆಯುತ್ತಾರೆ?

ದೇಶದ ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳು ಈ ಬಾಂಡ್ ಅನ್ನು ಪಡೆಯುತ್ತವೆ, ಆದರೆ ಇದಕ್ಕೆ ಷರತ್ತು ಎಂದರೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಆ ಪಕ್ಷವು ಕನಿಷ್ಠ ಒಂದು ಶೇಕಡಾ ಅಥವಾ ಹೆಚ್ಚಿನ ಮತಗಳನ್ನು ಪಡೆದಿರಬೇಕು. ಅಂತಹ ನೋಂದಾಯಿತ ಪಕ್ಷವು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಲು ಅರ್ಹವಾಗಿರುತ್ತದೆ.

2017 ರಲ್ಲಿ, ಕೇಂದ್ರ ಸರ್ಕಾರವು ಹಣಕಾಸು ಮಸೂದೆಯ ಮೂಲಕ ಸಂಸತ್ತಿನಲ್ಲಿ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಮೊದಲು ಪರಿಚಯ ಮಾಡಿತು.

Continue Reading
Click to comment

Leave a Reply

Your email address will not be published. Required fields are marked *

State

INDvsENG 1st t20: ಟೀಂ ಇಂಡಿಯಾ ಅಲ್‌ರೌಂಡರ್‌ ಪ್ರದರ್ಶನ; ಸೂರ್ಯ ಬಳಕ್ಕೆ ಮೊದಲ ಜಯ

Published

on

ಕೊಲ್ಕತ್ತಾ: ಭಾರತ ತಂಡದ ಸಂಘಟಿತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ದಾಳಿಗೆ ನಲುಗಿದ ಇಂಗ್ಲೆಂಡ್‌ ತಂಡ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಇಲ್ಲಿನ ಈಡೆನ್‌ ಗಾರ್ಡೆನ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ ನಿಗದಿತ 20 ಓವರ್‌ಗಳಲ್ಲಿ ಆಲ್‌ಔಟ್‌ ಆಗಿ 132 ರನ್‌ ಗಳಿಸಿ ಟೀಂ ಇಂಡಿಯಾಗೆ 133 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿ ಭಾರತ ತಂಡ 12.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 133 ರನ್‌ ಗಳಿಸಿ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.

ಇಂಗ್ಲೆಂಡ್‌ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಪರವಾಗಿ ಬೆನ್‌ ಡಕೆಟ್‌ ಹಾಗೂ ಫಿಲ್‌ ಸಾಲ್ಟ್‌ ಇನ್ನಿಂಗ್ಸ್‌ ಆರಂಭಿಸಿದರು. ಸಾಲ್ಟ್‌ ಶೂನ್ಯ ಸುತ್ತಿ ಹೊರನಡೆದರೇ, ಡಕೆಟ್‌ 4(4) ರನ್‌ ಗಳಿಸಿ ಇನ್ನಿಂಗ್ಸ್‌ ಮುಗಿಸಿದರು.

ನಾಯಕ ಜೋಸ್‌ ಬಟ್ಲರ್‌ 44 ಎಸೆತ 8 ಬೌಂಡರಿ, 2 ಸಿಕ್ಸರ್‌ ಸಹಿತ 68 ರನ್‌ ಗಳಿಸಿದ್ದೇ ತಂಡದ ಪರವಾಗಿ ಗಳಿಸಿದ ಅಧಿಕ ರನ್‌. ಬಟ್ಲರ್‌ ಏಕಾಂಕಿ ಹೋರಾಟದ ಫಲವಾಗಿ ಇಂಗ್ಲೆಂಡ್‌ ನೂರರ ಗಡಿ ದಾಟಿತು.

ಉಳಿದಂತೆ ಹ್ಯಾರಿ ಬ್ರೂಕ್‌ 17(14), ಲಿವಿಂಗ್‌ಸ್ಟೋನ್‌ ಡಕ್‌ಔಟ್‌, ಬೆಥೆಲ್‌ 7(14), ಓವರ್‌ಟನ್‌ 2(4), ಆಟ್ಕಿನ್ಸನ್‌ 2(13), ಜೋಫ್ರಾ ಆರ್ಚರ್‌ 12(10), ಮಾರ್ಕ್‌ವುಡ್‌ 1(1) ಹಾಗೂ ಆದಿಲ್‌ ರಶೀದ್‌ ಔಟಾಗದೇ 8(11) ರನ್‌ ಗಳಿಸಿದರು.

ಟೀಂ ಇಂಡಿಯಾ ಪರ ವರುಣ್‌ ಚಕ್ರವರ್ತಿ 3, ಅರ್ಶದೀಪ್‌ ಸಿಂಗ್‌, ಹಾರ್ದಿಕ್‌ ಪಾಂಡ್ಯ ಹಾಗೂ ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಬಳಿಸಿ ಮಿಂಚಿದರು.

ಟೀಂ ಇಂಡಿಯಾ ಇನ್ನಿಂಗ್ಸ್‌: ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಸಂಜು ಸ್ಯಾಮ್ಸನ್‌ 26(20) ರನ್‌ ಗಳಿಸಿದರೇ, ನಾಯಕ ಸೂರ್ಯಕುಮಾರ್‌ ಯಾದವ್‌ ಡಕ್‌ಔಟ್‌ ಆಗಿ ಹೊರನಡೆದರು.

ಇತ್ತ ಆರಂಭದಿಂದಲೇ ಭರ್ಜರಿಯಾಗಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ ಭರ್ಜರಿ 8 ಸಿಕ್ಸರ್‌ಗಳ ಸಹಾಯದಿಂದ 79 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಜೊತೆಯಾದ ತಿಲಕ್‌ ವರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ಕ್ರಮವಾಗಿ 19 ಹಾಗೂ 3 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌ ಎರಡು, ಆದಿಲ್‌ ರಶೀದ್‌ ಒಂದು ವಿಕೆಟ್‌ ಕಬಳಿಸಿದರು.

Continue Reading

State

ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ

Published

on

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಎರಡು ಪ್ರತ್ಯೇಕ ಅಪಘಾತದಲ್ಲಿ ಮೃತರಾದವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 3ಲಕ್ಷ ಪರಿಹಾರ ಘೋಷಿಸಲಾಗಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು.

ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ ರೂ.3 ಲಕ್ಷ ಪರಿಹಾರ ನೀಡಲಾಗುವುದು.

ಜೊತೆಗೆ ಅಪಘಾತದಲ್ಲಿ ಗಾಯಗೊಂಡವರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣ. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷಿತರಾಗಿರಿ ಎಂದು ಮನವಿ ಮಾಡುತ್ತೇನೆ ಎಂದು ಸಿಎಂ ಆಫ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ ಪರಿಹಾರ ಘೋಷಿಸಿದ್ದಾರೆ.

Continue Reading

State

ಮುಡಾ ಸೈಟು ಮುಟ್ಟುಗೋಲು: ಸಿಎಂ ಸಿದ್ದರಾಮಯ್ಯ ಏನಂದ್ರು?

Published

on

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) 50:50 ಅನುಪಾತದಲ್ಲಿ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಮುಡಾ ಸೈಟುಗಳನ್ನು ಮುಟ್ಟುಗೋಲು ಹಾಕಿಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಈ ಸಂಬಂಧ ಮೊದಲ ಬಾರಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇಡಿ ಅಧಿಕಾರಿಗಳ ಮಾಧ್ಯಮ ಪ್ರಕಟಣೆಗೂ ನನಗೂ ಯಾವುದೇ ಸಂಬಂಧವಿಲ್ಲ. 50:50 ಸೈಟುಗಳನ್ನು ಮುಟ್ಟುಗೋಲು ಹಾಕಿದ್ದೇವೆ ಎನ್ನುತ್ತಾರೆ. ಕೇವಲ ರಾಜಕೀಯ ಉದ್ದೇಶದಿಂದ ತನಿಖೆ ಮಾಡುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಟಾಂಗ್‌ ಕೊಟ್ಟರು.

ಇಡಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿರುವುದು ಬಿಜೆಪಿ. ಇದೊಂದು ರಾಜಕೀಯ ಉದ್ದೇಶಪೂರಿತವಾದ ಪಿತೂರಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Continue Reading

Trending

error: Content is protected !!