Connect with us

Mandya

ಆನೆಗಳ ಹಿಂಡು ದಾಳಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆ ಬಲಿಯಾಗಿರುವ ಘಟನೆ

Published

on

ಮಂಡ್ಯ :- ಆನೆಗಳ ಹಿಂಡು ದಾಳಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆ ಬಲಿಯಾಗಿರುವ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ನಡೆದಿದೆ.

ಗ್ರಾಮದ ಸಾಕಮ್ಮ ಬಿನ್ ಲೇ. ಸಿದ್ದಪ್ಪ.(50) ಮೃತ ದುರ್ದೈವಿ ಕಾರ್ಮಿಕ ಮಹಿಳೆ ಯಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಎಂಟರ ಸಮಯದಲ್ಲಿ ಜಮೀನಿನ ಬಳಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಸಲಗ ದಾಳಿ ಮಾಡಿದೆ.

ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಸಾಕಮ್ಮ ಪೀಹಳ್ಳಿ ಗ್ರಾಮದ ಮಾಲೀಕ ರೋಬ್ಬರ ಜಮೀನಿಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದರು ಇವರ ಜೊತೆ ಎಂಟಕ್ಕೂ ಹೆಚ್ಚು ಮಂದಿ ಕೂಲಿ ಕೆಲಸಕ ಮಾಡುತ್ತಿದ್ದರು,
ಆನೆ ಪ್ರತ್ಯಕ್ಷವಾಗಿರುವ ಬಗ್ಗೆ ಯಾವುದೇ ಸುಳಿವು ಇಲ್ಲದ ಹಿನ್ನೆಲೆಯಲ್ಲಿ ಭಯ ಪ್ರೀತಿ ಇಲ್ಲದೆ ಕೆಲಸ ಮಾಡುತ್ತಿದ್ದರು ಕಬ್ಬಿನ ಗದ್ದೆಯಲ್ಲಿ ಬಿಡು ಬಿಟ್ಟಿದ್ದ ಆನೆಗಳ ಹಿಂಡಿನಲ್ಲಿದ್ದ ಸಲಗ ಈ ವೇಳೆ ಮಹಿಳೆಯರ ಮೇಲೆ ಏಕಾಏಕಿ ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಸಾಕಮ್ಮ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಿ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಇತರ ಕಾರ್ಮಿಕರು ಪಾರಾಗಿದ್ದಾರೆ, ದುರಂತ ನಡೆದ ಹಿನ್ನೆಲೆಯಲ್ಲಿ ನೂರಾರು ಜನತೆ ಜಮಾವಣೆ ಗುಂಡು ಕಬ್ಬಿನ ಗದ್ದೆಯಲ್ಲೇ ಬಿಡು ಬಿಟ್ಟಿರುವ ಆನೆಗಳ ಹಿಂಡು ಓಡಿಸಲು ಪ್ರಯತ್ನಿಸಿದ್ದು, ಹಲವರು ಕಲ್ಲು ತೂರಿದರು. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಗಳ ಮೇಲೆ ಕಲ್ಲು ತೂರದಂತೆ ಮತ್ತು ಅವುಗಳ ಸಮೀಪ ಹೋಗದಂತೆ ಮನವಿ ಮಾಡಿದ್ದು, ಆದರೆ ರೊಚ್ಚಿಗೆದ್ದ ಜನತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಅಧಿಕಾರಿಗಳು.ಗ್ರಾಮಾಂತರ ಪೊಲೀಸರು ಸ್ಥಳದಲ್ಲಿದ್ದು, ಮುಂದಿನ ಕ್ರಮ ವಹಿಸಿದ್ದಾರೆ.
ಆನೆ ದಾಳಿಯಿಂದ ಮಹಿಳೆ ಸಾವನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯ ಬೀತರಾಗಿದ್ದಾರೆ.

ಸ್ಥಳಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Mandya

ಗೂಳಿ‌ ತಿವಿದು ವ್ಯಕ್ತಿ‌ ಸಾವು

Published

on

ಶ್ರೀರಂಗಪಟ್ಟಣ: ಕೊಟ್ಟಿಗೆಯಿಂದ ಹೊರಗಡೆ ಕಟ್ಟುವ ವೇಳೆ ಗೂಳಿ ತಿವಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ‌ ಮಹದೇವಪುರ ಗ್ರಾಮದ ಬಳಿ‌‌ ನಡೆದಿದೆ.

ಯಳಂದೂರು ತಾಲ್ಲೂಕು‌ ಹನ್ನೂರು ಗ್ರಾಮದ ಲೇಟ್ ಗೂಳಿ ನಂಜಯ್ಯರ ಮಗ ರಂಗಯ್ಯ(60) ಗೂಳಿ ತಿವಿತಕ್ಕೊಳಗಾಗಿ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು, ಆತ ಮಹದೇವಪುರ ಗ್ರಾಮದ ಬಳಿಯ ನಮಿತ್ ವರ್ಮಾ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದನು‌ ಎನ್ನಲಾಗಿದೆ.

ಮಂಗಳವಾರ ಈ ಘಟನೆ ಸಂಭವಿಸಿದ್ದು, ಈ ಸಂಬಂಧ ಅರಕೆರೆ ಠಾಣೆಯಲ್ಲಿ‌ ಪ್ರಕರಣ ದಾಖಲುಗೊಂಡಿದೆ.

Continue Reading

Mandya

ಮೇ.23 ರಂದು 2568ನೇ ಭಗವಾನ್ ಬುದ್ದ ಪೂರ್ಣಿಮ‌ ಅಂಗವಾಗಿ ಉಚಿತ ಸಾಮೂಹಿಕ ವಿವಾಹ

Published

on

ಮಂಡ್ಯ: ಬುದ್ಧ ಭಾರತ ಫೌಂಡೇಶನ್ ವತಿಯಿಂದ ಇದೇ ಮೇ 23 ರಂದು 2568ನೇ ಭಗವಾನ್ ಗೌತಮ ಬುದ್ಧರ ಬುದ್ಧ ಪೂರ್ಣಿಮೆ ಅಂಗವಾಗಿ ಉಚಿತ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ಹಾಗು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬುದ್ಧ ಭಾರತ ಪೌಂಡೇಶನ್ ಅಧ್ಯಕ್ಷ ಜೆ. ರಾಮಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವ ಮೂಲ ಭಾರತೀಯರಿಗೆ ಬುದ್ಧ ಮತ್ತು ಆತನ ಧಮ್ಮ ಮತ್ತು ಇವರು ಬೋಧಿಸಿದ ಹಾಗೂ ಬದುಕಿದ್ದಾಗ ಜೀವನದಲ್ಲಿ ನಡೆದುಕೊಂಡ ನಡೆ ನುಡಿ ಕುರಿತು ಸರ್ವರಿಗೂ ತಿಳಿ ಹೇಳಬೇಕು ಮತ್ತು ಸತ್ಯ ಮಾರ್ಗದಲ್ಲಿ ಪ್ರತಿ ಮಾನವರು ಬಾಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಅಂದು ಹನ್ನೊಂದು ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಪ್ರೊಫೆಸರ್ ಕೆಎಸ್ ಭಗವಾನ್ ಅವರು ಬುದ್ಧ ಮತ್ತು ಆತನ ದರ್ಮದ ವಿಚಾರವಾಗಿ, ಹಾಗೂ ಅಂಬೇಡ್ಕರ್ ಅವರು ಬುದ್ಧ ಧರ್ಮ ಸ್ವೀಕಾರ ಮಾಡಿದ್ದು ಏಕೆ ಎನ್ನುವ ವಿಷಯವಾಗಿ ಪ್ರೊಫೆಸರ್ ಮಹೇಶ್ಚಂದ್ರ ಗುರು ,ಹಾಗೂ ಪರಿಶಿಷ್ಟರು ಏಕೆ ಬೌದ್ಧ ಧರ್ಮವನ್ನು ಸ್ವೀಕಾರ ಮಾಡುತ್ತಿಲ್ಲ ಇದಕ್ಕೆ ಕಾರಣ ಮತ್ತು ಪರಿಹಾರಗಳ ಕುರಿತು ಡಿ.ಎಸ್.ಎಸ್.ಫೋರ್ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ವಿಚಾರ

ಮಂಡಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಕುಮಾರಿ ನೇರಳೆ ಗ್ರಾಮದ ಶಂಭಯ ಮಹದೇವಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದು ಅಲ್ಲದೆ ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ಅನ್ನ ಸಂಪರ್ಕ ನಡೆಯದಲ್ಲಿದ್ದು ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು .

ಗೋಷ್ಠಿಯಲ್ಲಿ ಚಂದ್ರು ,ಬಸವರಾಜ್ ,ನಿಂಗಪ್ಪ, ಶಿವಮೂರ್ತಿ, ಬೊಮ್ಮಯ್ಯ ಇತರರು ಉಪಸ್ಥಿತರಿದ್ದರು.

Continue Reading

Mandya

ದಕ್ಷಿಣ ಶಿಕ್ಷಕರ ಕ್ಷೇತ್ರ: 5403 ಅರ್ಹ ಮತದಾರರ ಅಂತಿಮ ಪಟ್ಟಿ ಪ್ರಕಟ : ಜಿಲ್ಲಾಧಿಕಾರಿ ಡಾ.ಕುಮಾರ

Published

on

ಮಂಡ್ಯ : ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ 5403 ಅರ್ಹ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಮುಖಂಡರ ಸಭೆ ನಡೆಸಿ ಮಾತನಾಡಿದರು. ಜೂನ್ 3 ರಂದು ಬೆಳಿಗ್ಗೆ 8 ರಿಂದ 4 ರವರೆಗೆ ಮತದಾನ ನಡೆಯಲಿದ್ದು. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ, ಎಲ್ಲಾ ಚುನಾವಣೆ ಪ್ರಕ್ರಿಯೆಗಳು ಜೂನ್ 12 ರಂದು ಪೂರ್ಣಗೊಳ್ಳುತ್ತದೆ ಎಂದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ‌ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತವೆ ಹಾಗೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿರುತ್ತಾರೆ ಎಂದರು.

ಮಂಡ್ಯ ತಾಲ್ಲೂಕು ಕಚೇರಿಯಲ್ಲಿ ನೊಂದಣಿಯಾಗಿರುವ ಮತದಾರರ ಸಂಖ್ಯೆ ಹೆಚ್ಚಿದ್ದು, ತಾಲ್ಲೂಕು ಕಚೇರಿಯಲ್ಲಿ ಎರಡು ಮತ ಕೇಂದ್ರ ತೆರೆಯಲಾಗುವುದು. ಮಂಡ್ಯ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಒಂದು ಮತ ಕೇಂದ್ರ ಒಟ್ಟು 3 ಮತ ಕೇಂದ್ರಗಳು ಕಾರ್ಯನಿರ್ವಹಿಸಲಿದೆ. ಜಿಲ್ಲೆಯಲ್ಲಿ 9 ಮತಕೇಂದ್ರಗಳಿದ್ದು, ಅಂತಿಮ‌ ಮತದಾರರ ಪಟ್ಟಿಯ ಪ್ರಕಾರ 5403 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ ಎಂದರು.

ಕೆ ಆರ್ ಪೇಟೆ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 327, ಹೆಣ್ಣು – 137 ಒಟ್ಟು 464 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ನಾಗಮಂಗಲ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 296, ಹೆಣ್ಣು – 147, ಒಟ್ಟು – 443 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಪಾಂಡವಪುರ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 260, ಹೆಣ್ಣು – 186, ಒಟ್ಟು – 446 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಮಂಡ್ಯ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 573, ಹೆಣ್ಣು – 611, ಒಟ್ಟು – 1184, ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಮಂಡ್ಯ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧ ಮತ ಕೇಂದ್ರದಲ್ಲಿ ಗಂಡು – 458, ಹೆಣ್ಣು -343, ಒಟ್ಟು -801, ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಮದ್ದೂರು ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 554, ಹೆಣ್ಣು – 413, ಒಟ್ಟು – 967 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಶ್ರೀರಂಗಪಟ್ಟಣ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 207, ಹೆಣ್ಣು – 224, ಒಟ್ಟು – 431 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಮಳವಳ್ಳಿ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 452, ಹೆಣ್ಣು – 215, ಒಟ್ಟು – 667 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ರಾಜಕೀಯ ಪಕ್ಷಗಳ ಮುಖಂಡರುಗಳಾದ ಬೊಮ್ಮಯ್ಯ, ಮಂಜುನಾಥ್, ನವೀನ್, ದಿನೇಶ್, ರಮೇಶ್ ಉಪಸ್ಥಿತರಿದ್ದರು.

Continue Reading

Trending

error: Content is protected !!