Connect with us

State

ದ್ವಿತೀಯ ಪಿಯುಸಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗದ ಜೊತೆಗೆ ಇಂಜಿನಿಯರಿಂಗ್ ಡಿಗ್ರಿ ಪಡೆಯಲು ಸುವರ್ಣ ಅವಕಾಶ

Published

on

ದ್ವಿತೀಯ ಪಿಯುಸಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗದ ಜೊತೆಗೆ ಇಂಜಿನಿಯರಿಂಗ್ ಡಿಗ್ರಿ ಪಡೆಯಲು ಸುವರ್ಣ ಅವಕಾಶ

Indian Army Technical Entry Scheme – ಭಾರತೀಯ ಸೇನೆಯ ಯೋಜನೆ ” ಟೆಕ್ನಿಕಲ್ ಎಂಟ್ರಿ ಸ್ಕೀಮ್ ” ಅಡಿಯಲ್ಲಿ ದ್ವಿತೀಯ ಪಿಯುಸಿ ಪಾಸಾದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಉದ್ಯೋಗದ ಜೊತೆಗೆ 4 ವರ್ಷದ ಇಂಜಿನಿಯರಿಂಗ್ ಪದವಿ ನೀಡಲು ಅರ್ಜಿ ಆಹ್ವಾನಿಸಿದೆ.

ಯೋಜನೆಯ ವಿವರ :

ಇದಕ್ಕೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಿ ನಂತರದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಫೈನಲ್ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿ ಅಭ್ಯರ್ಥಿಗಳಿಗೆ ಸೇರ್ಪಡೆ ಪತ್ರವನ್ನು ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷಗಳ ತರಬೇತಿಯ ನಂತರ ನೇರವಾಗಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಶೈಕ್ಷಣಿಕ ಹಾಗೂ ವಯೋಮಿತಿ ಅರ್ಹತೆಗಳು :

12ನೇ ತರಗತಿ ಪಾಸಾದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. 12ನೇ ತರಗತಿಯಲ್ಲಿ ರಸಾಯನ ಶಾಸ್ತ್ರ, ಬೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ಅಧ್ಯಯನದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾದವರ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿಯ ಅರ್ಹತೆಗಳು – ಕನಿಷ್ಠ 16.5 ವರ್ಷದಿಂದ ಗರಿಷ್ಟ 19.5 ವರ್ಷದ ವಯೋಮಿತಿಯಲ್ಲಿರಬೇಕು.

ಸ್ಟೈಪೆಂಡ್ – ಆಯ್ಕೆ ಆಗುವ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ 56,100ರೂ. ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – ನವೆಂಬರ್ 5, 2024

ಹೆಚ್ಚಿನ ಮಾಹಿತಿಗಾಗಿ – www.joinindianarmy.nic.in

Continue Reading

Special

ಸಾಂದೀಪನಿ ಶಿಷ್ಯವೇತನ ಯೋಜನೆ 2025-26| 1.15 ರೂ. ಲಕ್ಷವರೆಗೆ ಸಹಾಯಧನ : ಅರ್ಜಿ ಆಹ್ವಾನ

Published

on

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ 2025–26ನೇ ಸಾಲಿನ ಸಾಂದೀಪನಿ ಶಿಷ್ಯವೇತನ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸುಗಮಗೊಳಿಸಿ ನಿರ್ವಹಣಾ ವೆಚ್ಚದ ಬಾಧೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ಪ್ರತಿ ವರ್ಷ ಜಾರಿಗೆ ಬರುತ್ತಿದೆ.

ಸಹಾಯಧನದ ವಿವರ:
* PUC, ಡಿಪ್ಲೋಮಾ ಮತ್ತು ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500 × 10 ತಿಂಗಳು = ₹15,000 ವರ್ಷಕ್ಕೆ
* ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದವರಿಗೆ ಗರಿಷ್ಠ ₹1 ರಿಂದ ₹1.5 ಲಕ್ಷದವರೆಗೆ ಸಹಾಯ

ಯಾರು ಅರ್ಹರು?:
* ಕರ್ನಾಟಕದ ನಿವಾಸಿ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು
* ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ
* ಹಿಂದಿನ ವರ್ಷ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
* ಒಂದೇ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಎರಡು ಮಂದಿಗೆ ಮಾತ್ರ ಶಿಷ್ಯವೇತನ; ಹೆಣ್ಣುಮಕ್ಕಳಿಗೆ ಮಿತಿ ಇಲ್ಲ

ಅಗತ್ಯ ದಾಖಲೆಗಳು
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಹಿಂದಿನ ತರಗತಿಯ ಅಂಕಪಟ್ಟಿ
* ಕಾಲೇಜಿನ ಅಧ್ಯಯನ ಪ್ರಮಾಣ ಪತ್ರ
* ಶುಲ್ಕ ಪಾವತಿ ರಸೀದಿ
* ಬ್ಯಾಂಕ್ ಪಾಸ್‌ಬುಕ್ ನಕಲು

ಅರ್ಜಿ ಸಲ್ಲಿಸುವ ವಿಧಾನ
* ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಂತರ ಹೊಸ ಖಾತೆ ತೆರೆಯಿರಿ ಅಥವಾ ಲಾಗಿನ್ ಆಗಿ
* ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ತುಂಬಿ ಅರ್ಜಿಯನ್ನು ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 28 ಫೆಬ್ರವರಿ 2026

ಅಧಿಕೃತ ವೆಬ್‌ಸೈಟ್‌:
•https://ssp.postmatric.karnataka.gov.in
•ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ: kbrahman.org

ಸಾಂದೀಪನಿ ಶಿಷ್ಯವೇತನ ಯೋಜನೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಮಹತ್ತರ ಅವಕಾಶ. ಶುಲ್ಕ ಮರುಪಾವತಿ ಮತ್ತು ನಿರ್ವಹಣಾ ಭತ್ಯೆ ಸೇರಿ 1.15 ರೂ.ಲಕ್ಷವರೆಗೆ ನೆರವು ದೊರೆಯುವುದರಿಂದ ಉನ್ನತ ಶಿಕ್ಷಣದ ಬಾಧೆ ಬಹಳ ಮಟ್ಟಿಗೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

Continue Reading

Special

14.21 ಲಕ್ಷ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ: ರಾಜ್ಯ ಸರ್ಕಾರದ ಮಹತ್ವದ ಘೋಷಣೆ

Published

on

ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದ ಅತಿಯಾದ ಮಳೆ ಬಿರುಗಾಳಿ ಬರ ಪರಿಸ್ಥಿತಿಯಿಂದಾಗಿ ರೈತರು ಎದುರಿಸಿದ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ. ಕೃಷಿ ಮತ್ತು ಆದಾಯ ನಷ್ಟಕ್ಕೆ ಒಳಗಾದ 14.21 ಲಕ್ಷ ರೈತರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪರಿಹಾರಕ್ಕೆ ಮುಖ್ಯ ಕಾರಣ:
* ಬೆಳೆ ನಾಶ
* ಮಣ್ಣು ಕೊಚ್ಚಿ ಹೋಗುವುದು
* ನೀರಿನ ಕೊರತೆ
* ಅತಿಯಾದ ಮಳೆಯ ಪರಿಣಾಮದ ಹಾವಳಿ
ಇವುಗಳಿಂದ ರೈತರಿಗೆ ದೊಡ್ಡ ಮಟ್ಟದ ಹಾನಿ ಸಂಭವಿಸಿತ್ತು.

ಪರಿಹಾರ ಪಡೆಯಲು ಅರ್ಹರು:
•ಸಂಬಂಧಿತ ತಾಲೂಕಿನಲ್ಲಿ ನೈಜವಾಗಿ ಬೆಳೆ ಹಾನಿ ದೃಢಪಟ್ಟ ರೈತರು
•FRUITS / e-Kshana / Parihara ಪೋರ್ಟ್‌ಲಲ್ಲಿ ನೋಂದಣಿ ಹೊಂದಿರುವವರು
•ಭೂಮಿ ಹೊಂದಿರುವ ರೈತರು

ಸಚಿವರ ಹೇಳಿಕೆ:
ಕಂದಾಯ ಸಚಿವರು ತಿಳಿಸಿದಂತೆ “ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಕೈಕಟ್ಟಿ ಕೂತಿರುವುದಿಲ್ಲ. ಶೀಘ್ರವಾದ ಪರಿಹಾರ ವಿತರಣೆಯ ಮೂಲಕ ಕೃಷಿಕ ಕುಟುಂಬಗಳಿಗೆ ನೆರವಾಗಿ ಅವರ ಜೀವನೋಪಾಯವನ್ನು ಬಲಪಡಿಸುವುದು ನಮ್ಮ ಧ್ಯೇಯ.”

ಯಾವ ದಾಖಲೆಗಳನ್ನು ಪರಿಶೀಲಿಸಲಾಗುವುದು?
•RTC / ಭೂ ಹಕ್ಕಿನ ದಾಖಲೆ
•ಬೆಳೆ ನಾಶದ ಪಂಚನಾಮಾ
•FRUITS ID
•ಬ್ಯಾಂಕ್ ಖಾತೆ ಮಾಹಿತಿಗಳು

ಪರಿಹಾರ ಪಡೆಯಲು ರೈತರು ಏನು ಮಾಡಬೇಕು?
•ರೈತರು ಯಾವುದೇ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
* ತಮ್ಮ FRUITS ಪೋರ್ಟಲ್ ವಿವರಗಳನ್ನು ಪರಿಶೀಲಿಸಬೇಕು
* ಬ್ಯಾಂಕ್ ಖಾತೆ ಆಧಾರ್–DBT ಲಿಂಕ್ ಇದ್ದರೆ ಹಣ ನೇರವಾಗಿ ಜಮೆಯಾಗುತ್ತದೆ
* ಮೊತ್ತ ಜಮೆಯಾದ ನಂತರ SMS ಮೂಲಕ ಮಾಹಿತಿ ಬರುತ್ತದೆ

ಅಧಿಕೃತ ವೆಬ್‌ಸೈಟ್‌:
•FRUITS ಪೋರ್ಟಲ್:
https://fruits.karnataka.gov.in
•ಕೃಷಿ ಸಂಬಂಧಿತ ಮಾಹಿತಿ: https://raitamitra.karnataka.gov.in

ರಾಜ್ಯ ಸರ್ಕಾರದ ಈ ಹೆಜ್ಜೆ ಬೆಳೆ ನಷ್ಟದಿಂದ ಬೇಸತ್ತುಬಿಟ್ಟ ರೈತರಿಗೆ ಧೈರ್ಯ ತುಂಬುವಂತದ್ದಾಗಿದೆ. ರೈತ ಕುಟುಂಬಗಳು ಸಂಕಷ್ಟದಿಂದ ಹೊರಬರಲು ಇದು ಪ್ರಮುಖ ನೆರವಿನ ಕೈ ಆಗಿದೆ ಎಂದು ಹೇಳಬಹುದು.

Continue Reading

State

ದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್

Published

on

ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಕರ್ನಾಟಕ ದ್ವೇಷ ಭಾಷಣ  ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು  ವಿಧೇಯಕ ಮಂಡಿಸಿದ ಅವರು, ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ಹಾಕುವ ವಿಧೇಯಕ ಇದಾಗಿದ್ದು, ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ ಎಂದು ವಿಧೇಯಕದಲ್ಲಿ ಕಾನೂನು ತರಲಾಗಿದೆ ಎಂದು ಮಾಹಿತಿ ನೀಡಿದರು.

ಆದರೆ ಬಿಜೆಪಿ ಅದನ್ನು ವಿರೋಧಿಸಿದೆ. ಈಗಾಗಲೇ ಸಾಕಷ್ಟು ವಿವಾದ ಸೃಷ್ಟಿಸಿರುವ ವಿಧೇಯಕ ಬೇಡವೇ ಬೇಡ, ಅಂಗೀಕಾರ ಪ್ರಕ್ರಿಯೆ ವೇಳೆ ಮತಕ್ಕೆ ಹಾಕಬೇಕೆಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದರು.

ಇನ್ನು ದ್ವೇಷ ಭಾಷಣ ನಿಯಂತ್ರಣ ವಿಧೇಯಕ ಮಂಡನೆ ವೇಳೆ ವಿಧಾನಸಭೆಯಲ್ಲಿ ಮೈಕ್ ಕೈ ಕೊಟ್ಟು ಕಲಾಪ ಮುಂದೂಡಿದ ಘಟನೆಯೂ ನಡೆಯಿತು. ನಂತರ ಮೈಕ್ ಸರಿಪಡಿಸಿ ಕಲಾಪ ಪುನಃ ಪ್ರಾರಂಭಿಸಿ ಪರಮೇಶ್ವರ್ ವಿಧೇಯಕ ಮಂಡಿಸಿದರು.

ವಿಧೇಯಕದಲ್ಲಿ ಏನಿದೆ?

1. ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯಲು ವಿಧೇಯಕ.
2.  ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳ ತಡೆಗೆ ವಿಧೇಯಕ.
3. ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ.
4. ಅಪರಾಧ ಪುನರಾವರ್ತನೆ ಆದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
5. ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣ.
6.  ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು.
7. ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.
8. ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ.
9. ದ್ವೇಷ ಭಾಷಣಗಳ ಕಂಟೆಂಟ್‌ಗಳನ್ನು ಡೊಮೈನ್‌ನಿಂದ ಬ್ಲಾಕ್ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರವೂ ಗೊತ್ತುಪಡಿಸಿದ ಅಧಿಕಾರಿಗಳಿಗೆ ವಿಧೇಯಕ ನೀಡಿದೆ.

Continue Reading

Trending

error: Content is protected !!