Connect with us

Chikmagalur

ಹುಲಿ ಉಗುರು ಪ್ರಕರಣ ಡಿ.ಆರ್.ಎಫ್.ಓ ದರ್ಶನ್ ಬಂಧನ

Published

on

ಚಿಕ್ಕಮಗಳೂರು : ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಆರ್.ಎಫ್.ಓ ದರ್ಶನ್ ರನ್ನು ಎನ್.ಆರ್.ಪುರದಲ್ಲಿ ಬಂಧಿಸಿ, ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

ಡಿ.ಆರ್.ಎಫ್.ಓ ದರ್ಶನ್ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿದ್ದು, ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿ.ಎಫ್.ಓ ನಂದೀಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ದರ್ಶನ್ ರನ್ನು ಎನ್.ಆರ್.ಪುರದಲ್ಲಿ ಬಂಧಿಸಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

Darshan, DRFO, Kalasa, Suspenstion OO

 

 

Continue Reading
Click to comment

Leave a Reply

Your email address will not be published. Required fields are marked *

Chikmagalur

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ : ಹಿರೇಮಗಳೂರು ಪುಟ್ಟಸ್ವಾಮಿ

Published

on

ಚಿಕ್ಕಮಗಳೂರು: ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂದರ್ಭದಲ್ಲೂ ಮರಳುವುದಿಲ್ಲ. ಬಿಜೆಪಿ ಬಿಟ್ಟರೆ ರಾಜಕೀಯ ನಿವೃತ್ತಿ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಯೋಜಕರಾಗಿ ನೇಮಕಗೊಳ್ಳುವ ಮೂಲಕ ಕಾಂಗ್ರೆಸ್‌ಗೆ ವಾಪಸ್ ಬಂದಿರುವುದು ಒಳ್ಳೆಯದು ಎಂದು ಜಿಲ್ಲೆಯ ಕೊಪ್ಪ, ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಿಂದ ಕಾಂಗ್ರೆಸ್‌ನ ಅನೇಕ ಮುಖಂಡರು ಫೋನಾಯಿಸಿ ಅಭಿನಂದಿಸಿ, ಸ್ವಾಗತಿಸುತ್ತಿರುವುದಾಗಿ ಹೇಳುತ್ತಿರುವುದು ನನಗೆ ತೀವ್ರ ಮುಜುಗರದ ಜೊತೆಗೆ ನೋವು ತಂದಿದೆ.


ಕಾಂಗ್ರೆಸ್‌ನ ಕೆಲ ಮುಖಂಡರು ಕಾಂಗ್ರೆಸ್‌ಗೆ ವಾಪಸ್ ಮರಳುವಂತೆ ಕೈ ಮುಖಂಡರು ವಿಶ್ವಾಸದಿಂದ ಕೇಳಿದ್ದಾರೆ. ಅವರುಗಳಿಗೆ ನನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ಆದರೆ, ಅಲ್ಲಲ್ಲಿ ಪುಟ್ಟಸ್ವಾಮಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅವೆಲ್ಲವೂ ವದಂತಿಗಳು ಎಂಬುದನ್ನು ತಿಳಿಸುತ್ತಿದ್ದೇನೆ.
ಭಾರತ ಸ್ವತಂತ್ರವಾದ ಸಂದರ್ಭದಲ್ಲಿ ಕಾಂಗ್ರೆಸ್ ಒಂದು ದೊಡ್ಡ ಮರವಾಗಿತ್ತು ನಿಜ. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್ ನೆಹರು, ಗಾಂಧಿ ಕುಟುಂಬಕ್ಕೆ ಆದ್ಯತೆ ನೀಡಿದ್ದ ಪರಿಣಾಮ ಇಂದು ದೇಶದಲ್ಲಿ ಕಾಂಗ್ರೆಸ್ ಮರವಾಗಿ ಉಳಿಯದೇ ಒಂದು ಒಣಗಿದ ಬಳ್ಳಿಯಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.

Continue Reading

Chikmagalur

ಚಿಕ್ಕಮಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಿ.ಆರ್.ಪಿ.ಎಫ್ ಪೊಲೀಸರು ಪಥ ಸಂಚಲನ ನಡೆಸಿದರು.

Published

on

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಚುನಾವಣೆ ವೇಳೆ ಶಾಂತಿ, ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ದೇಶದ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಬೇಕಾದರೆ ಸಾರ್ವಜನಿಕರ ಸಹಕಾರ ಎಷ್ಟು ಮುಖ್ಯ ಎನ್ನುವುದರ ಅರಿವು ಮೂಡಿಸಿದರು.
ತರೀಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪಥ ಸಂಚಲನವು ಸಾರ್ವಜನಿಕರಲ್ಲಿ ಆತ್ಮ ಸ್ಥೈರ್ಯವನ್ನು ಇಮ್ಮಡಿಗೊಳಿಸಿದೆ

Continue Reading

Chikmagalur

ಮೈತ್ರಿ ಗೆಳೆಯ ಜೆಡಿಎಸ್ ಭೋಜೇಗೌಡರಿಗೆ ಮಾತಿನಲ್ಲಿ ತಿವಿದ ಸಿ.ಟಿ.ರವಿ

Published

on

ವೇದಿಕೆ ಮೇಲಿದ್ದ ಜೆಡಿಎಸ್ ಎಂಎಲ್ಸಿ ಭೋಜೇಗೌಡರ ಕಾಲೆಳೆದ ಸಿ.ಟಿ. ರವಿ

4 ಬಾರಿ ಶಾಸಕನಾಗಿದ್ದಾಗ ಹೆಚ್ಚು ಕೆಲಸ ಮಾಡಿದ್ದು 2018-2023

ಆದರೆ, ಈ ಬಾರಿ ಹೆಚ್ಚು ಕೆಲಸ ಮಾಡಿದ್ರು ಸೋತೆ

ಚುನಾವಣೆ ಸಂದರ್ಭದಲ್ಲಿ ಕೆಲಸ ಚರ್ಚೆಯಾಗಲಿಲ್ಲ, ಅಪಪ್ರಚಾರ ಚರ್ಚೆಯಾಯಿತು

ನನ್ನ ಹಣೆಬರಹ ಕೆಟ್ಟಿತ್ತು, ಜೆಡಿಎಸ್ ಕೂಡ ನನ್ನ ವಿರೋಧವಾಗೇ ಕೆಲಸ ಮಾಡ್ತು

ನಮ್ಮ ನಾಯಕರ ಹೆಸರನ್ನೂ ಬಳಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರು

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸೋಲನ್ನ ನೆನೆದ ಸಿ.ಟಿ.ರವಿ

Continue Reading

Trending

error: Content is protected !!