Connect with us

State

ಮನೆ ಇಲ್ಲದವರಿಗೆ ಈ ಯೋಜನೆಯಲ್ಲಿ ಸಿಗುತ್ತೆ ಸ್ವಂತ ಕನಸಿನ ಮನೆ

Published

on

ಕೇಂದ್ರ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ(Govt Scheme). ಹಲವು ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎನ್ನಬಹುದು.

ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ಹೊರ ಜಗತ್ತಿಗೆ ಕಾಲಿಟ್ಟಿದ್ದಾರೆ. ಪುರುಷರಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಮಹಿಳೆಯರಿಗೆ ಸರ್ಕಾರದ ಎಲ್ಲಾ ಯೋಜನೆಯ ಲಾಭ ಪಡೆದುಕೊಳ್ಳುವ ಹಕ್ಕು ಇದೆ.

ಸ್ವಂತ ಮನೆ ಇರಬೇಕು ಎನ್ನುವ ಆಸೆ ಪುರುಷರದ್ದು ಮಾತ್ರ ಅಲ್ಲ, ಸಾಕಷ್ಟು ಮಹಿಳೆಯರಿಗೂ ಕೂಡ ತಾನು ತನ್ನದೇ ಸ್ವಂತ ಮನೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಇದಕ್ಕೆ ಈಗ ಸರ್ಕಾರದ ಈ ಯೋಜನೆಯು ಪೂರಕವಾಗಿದೆ.

ಮಹಿಳೆಯರು ಗುಡಿಸಿಲಿನಲ್ಲಿ ಅಥವಾ ಕಚ್ಚಾ ಮನೆಯಲ್ಲಿ ವಾಸಿಸ ಮಾಡುವ ಅಗತ್ಯ ಇಲ್ಲ. ಸರ್ಕಾರ ಪಕ್ಕಾ ಮನೆ ನಿರ್ಮಾಣ ಮಾಡಿಕೊಡುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ.

ಮಹಿಳೆಯರಿಗಾಗಿ ಈ ಯೋಜನೆ

ಸದ್ಯ ಕೇಂದ್ರ ಮಹಿಳೆಯರಿಗಾಗಿ ಲಾಡ್ಲಿ ಬೆಹೆನಾ ಯೋಜನೆಯನ್ನು ಜಾರಿ ಮಾಡಿದೆ. ಬಡ ಕುಟುಂಬದ ಮಹಿಳೆಯರು, ಅಥವಾ ಸ್ವಂತ ಮನೆ ಇಲ್ಲದೆ ಇರುವವರು, ಸಣ್ಣಪುಟ್ಟ ಸ್ಥಳದಲ್ಲಿ ವಾಸಿಸುವ ಮಹಿಳೆಯರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಇರುವ ಯೋಜನೆಯಾಗಿದೆ.

ಈ ಯೋಜನೆಯಲ್ಲಿ ಸರಕಾರ ಶಾಶ್ವತ ಮನೆ ನಿರ್ಮಾಣ ಮಾಡಿಕೊಳ್ಳಲು ಮಹಿಳೆಯರಿಗೆ ಹಣ ನೀಡುತ್ತದೆ. ಮಹಿಳೆಯರು ಮಾತ್ರ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು. ಕುಟುಂಬದ ಬೇರೆ ಸದಸ್ಯರು ಅರ್ಜಿ ಸಲ್ಲಿಸಿದರೆ ಅಂತವರಿಗೆ ಲಾಡ್ಲಿ ಬೇಹೆನ್ ಯೋಜನೆ ಲಭ್ಯವಾಗುವುದಿಲ್ಲ.

ಎಷ್ಟು ಸಿಗಲಿದೆ ಸಹಾಯಧನ

ಲಾಡ್ಲಿ ಬೆಹನ್ ಯೋಜನೆಯಡಿ ಶಾಶ್ವತ ಮನೆಯನ್ನು ಮಹಿಳೆಯರ ಹೆಸರಿಗೆ ನಿರ್ಮಿಸಿ ಕೊಡಲಾಗುವುದು. ಇದಕ್ಕಾಗಿ ನೀವು ಸಹಾಯ ಧನವನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಎರಡು ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡುತ್ತದೆ.

ನೀವು ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಈ ಬಗ್ಗೆ ಮಾಹಿತಿ ಪಡೆಯಬಹುದು. ಅರ್ಜಿ ಸಲ್ಲಿಸಿದ ಫಲಾನುಭವಿಯ ಖಾತೆಗೆ ನೇರವಾಗಿ ಸರ್ಕಾರದಿಂದ 2 ಲಕ್ಷ ರೂಪಾಯಿ ಜಮಾ ಮಾಡಲಾಗುವುದು.

ಸದ್ಯ ಈ ಯೋಜನೆ ಮಧ್ಯಪ್ರದೇಶದಲ್ಲಿ ಆರಂಭಗೊಂಡಿದೆ. ಸದ್ಯದಲ್ಲಿಯೇ ಕರ್ನಾಟಕ ರಾಜ್ಯಕ್ಕೂ ಬರುವ ಸಾಧ್ಯತೆಗಳು ಇವೆ. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

Continue Reading
Click to comment

Leave a Reply

Your email address will not be published. Required fields are marked *

State

ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ : ಬೇಗ ಅರ್ಜಿ ಸಲ್ಲಿಸಿ

Published

on

Indian Air force Recruitment 2025 – ದ್ವಿತೀಯ ಪಿಯುಸಿ ಮುಗಿಸಿ ಭಾರತೀಯ ರಕ್ಷಣಾ ಇಲಾಖೆಯಲ್ಲಿ ದೇಶ ಸೇವೆ ಸಲ್ಲಿಸ ಬಯಸುವಂತಹ ಹಾಗೂ ಕೇಂದ್ರ ಸರ್ಕಾರಿ ಉದ್ಯೋಗವನ್ನು ಸೇರ ಬಯಸುವ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸುವುದು ಹೇಗೆ ಕೊನೆಯ ದಿನಾಂಕ ಯಾವಾಗ ಮತ್ತು ಆಯ್ಕೆ ವಿಧಾನ ಹೀಗಿರಲಿದೆ ಎಂಬ ಮಾಹಿತಿ ಇಲ್ಲಿದೆ..

ಅಗ್ನಿವೀರ ನೇಮಕಾತಿಗೆ ಅರ್ಹತಾ ಮಾನದಂಡಗಳೇನು?

ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿದಂತಹ ಅಥವಾ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಮುಗಿಸಿದಂತಹ ಅಭ್ಯರ್ಥಿಗಳು ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಪ್ರಮುಖವಾಗಿ ಅಭ್ಯರ್ಥಿಗಳು ಶೇಕಡ 50ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.

ವಯೋಮಿತಿ ಮಾನದಂಡಗಳನ್ನು ನೋಡುವುದಾದರೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಜುಲೈ 02, 2005 ರಿಂದ ಜನವರಿ 02, 2009 ರ ಒಳಗಾಗಿ ಜನಿಸಿರುವಂತಹ ಅಭ್ಯರ್ಥಿಗಳು ಮಾತ್ರ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಈ ನೇಮಕಾತಿಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?

ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಆನ್ಲೈನ್ ಪರೀಕ್ಷೆ ನಂತರದಲ್ಲಿ ದೈಹಿಕ ಪರೀಕ್ಷೆ ಹಾಗೂ ನಂತರದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಆನ್‌ಲೈನ್‌  ಮೂಲಕ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಕೊನೆಯ ದಿನಾಂಕ ಜುಲೈ 31 ಆಗಿರುತ್ತದೆ.

ಹಾಗಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹತೆಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಅಧಿಕೃತ ಜಾಲತಾಣ agnipathvayu.cdac.in ಭೇಟಿ ನೀಡಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು.

Continue Reading

State

ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ

Published

on

ಶಿವಮೊಗ್ಗ : ಸೋಗಾನೆಯ ಕೇಂದ್ರ ಕಾರಾಗೃಹದ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆ ನಡೆಸಿ ಮೊಬೈಲ್ ಫೋನ್ ಹೊರಗೆ ತೆಗೆಯಲಾಗಿದೆ.
ಖೈದಿ ದೌಲತ್ ಅಲಿಯಾಸ್ ಗುಂಡ (30) ಎಂಬಾತನ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್ ಫೋನ್ ಪತ್ತೆಯಾಗಿದೆ.

ಪ್ರಕರಣವೊಂದರಲ್ಲಿ ದೌಲತ್ ಅಲಿಯಾಸ್ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈತ ಜೂ. 24 ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್ರೇ ಮಾಡಿದಾಗ ಖೈದಿ ದೌಲತ್‌ನ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಗೊತ್ತಾಗಿತ್ತು.

ವೈದ್ಯರು ಶಸ್ತ್ರ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಷೇಧವಿದ್ದರು ಜೈಲಿನೊಳಗೆ ಮೊಬೈಲ್ ಫೋನ್ ತಲುಪಿರುವ ಕುರಿತು ತನಿಖೆ ನಡೆಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ. ರಂಗನಾಥ್ ಅವರು ದೂರು ನೀಡಿದ್ದಾರೆ.

ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Continue Reading

State

ಹಾರ್ಟ್ ಅಟ್ಯಾಕ್ ನ ಈ ಕೆಲವು ಲಕ್ಷಣಗಳನ್ನು ನಿರ್ಲಕ್ಷ ಮಾಡಬೇಡಿ : ಈ 3C ಗಳನ್ನು ನೆನಪಿಟ್ಟರೆ ಜೀವ ಉಳಿಸಿಕೊಳ್ಳಬಹುದು

Published

on

Heart Attack Symptoms : ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರಿಗೂ ಕೂಡ ಹಾರ್ಟ್ ಅಟ್ಯಾಕ್ ಎಂಬ ರೋಗ ಹೆಚ್ಚು ಕಾಡುತ್ತಿದೆ.

ಯಾವುದೇ ಒಬ್ಬ ರೋಗಿಗೆ ಹೃದಯಘಾತದ ಲಕ್ಷಣಗಳು ಕಂಡು ಬಂದ ನಂತರದ 60 ನಿಮಿಷಗಳನ್ನು ಗೋಲ್ಡನ್ ಹವರ್ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಒಂದು ಅಮೂಲ್ಯವಾದ ಸಮಯದಲ್ಲಿ ನಾವು ಸಕಾಲಿಕ ಆರೈಕೆಯನ್ನು ತೆಗೆದುಕೊಂಡರೆ ಪ್ರಾಣಪಾಯದಿಂದ ಪಾರಾಗಬಹುದು.

ಈ ಒಂದು ಲೇಖನದಲ್ಲಿ ನಾವು ನಿಮಗೆ ಅಥವಾ ಯಾವುದೇ ಒಬ್ಬ ವ್ಯಕ್ತಿಗೆ ಹೃದಯಘಾತದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಸುಲಭವಾಗಿ ಮಾಡಿಕೊಳ್ಳಬಹುದಾದ 3C ಗಳನ್ನು ತಿಳಿಸಿಕೊಡಲಿದ್ದೇವೆ. ಇದರಿಂದ ರೋಗಿಗಳು ಪ್ರಾಣಪಾಯದಿಂದ ಉಳಿಯಬಹುದು.

CPR ನ 3 C ಗಳನ್ನು ನೆನಪಿಟ್ಟುಕೊಳ್ಳಿ..!

1. CHECK (ಪರಿಶೀಲಿಸಿ) : ಮೊಟ್ಟ ಮೊದಲು ನೀವು ಹೃದಯಘಾತ ಲಕ್ಷಣಗಳು ಕಂಡು ಬಂದ ವ್ಯಕ್ತಿ ಉಸಿರಾಡುತ್ತಿದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸಿ.
2. CALL (ಕರೆ ಮಾಡಿ) : ತಕ್ಷಣವೇ ಆಂಬುಲೆನ್ಸ್ಗೆ ತಕ್ಷಣವೇ ಕರೆ ಮಾಡಿ.
3. COMPRESS (ಒತ್ತಿರಿ) : ಒಂದು ವೇಳೆ ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ ಸಿಪಿಆರ್ ಪ್ರಾರಂಭಿಸಿ. ರೋಗಿಯ ಎದೆಯನ್ನು ಕನಿಷ್ಠ 30 ಬಾರಿ ಸತತವಾಗಿ ಒತ್ತಿರಿ ಮತ್ತು ವೈದ್ಯಕೀಯ ನೆರವು ಸಿಗುವವರೆಗೂ ನಿಲ್ಲಿಸದಿರಿ.

ತೀವ್ರ ಹೃದಯಾಘಾತದ ಸಂದರ್ಭದಲ್ಲಿ ಗೋಲ್ಡನ್ ಹವರ್ ಏಕೆ ಮುಖ್ಯ?

ತೀವ್ರ ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದಲ್ಲಿ ಮೊದಲ 60 ನಿಮಿಷಗಳನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು.

ನಂತರದಲ್ಲಿ ತಕ್ಷಣದ ಇಸಿಜಿ ಮತ್ತು ಟೆನೆಸ್ಟೆಪ್ಲೇಸ್ ಚುಚ್ಚುಮದ್ದು (ರಕ್ತಹೆಪ್ಪುಗಟ್ಟುವಿಕೆ ಕರಗಿಸಲು) ಜೀವ ಉಳಿಸಲು ಸಹಕಾರಿಯಾಗುತ್ತದೆ.

ನೆನಪಿಡಿ : ಗೋಲ್ಡನ್ ಅವರ್ ಆರೈಕೆಯು ಜೀವ ಉಳಿಸಬಹುದು

Continue Reading

Trending

error: Content is protected !!