Connect with us

Mysore

ಶಾಂತಿ ಕಾಪಾಡುವಂತೆ ಡಾ.ಎಂ.ಪಿ.ರಮೇಶ್ ಮನವಿ

Published

on

ಮೈಸೂರು: ಮಹಿಷಾ ದಸರಾ ಹಾಗೂ ಚಾಮುಂಡಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ಈ ಗೊಂದಲ ಸಮಾಜದ ಶಾಂತಿ ಕದಡುತ್ತಿದ್ದು, ಇದರಿಂದ ಶಾಂತಿ ಕಾಪಾಡುವಂತೆ ಡಾ.ಎಂ.ಪಿ.ರಮೇಶ್ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳಿಗೂ ಮಾನ್ಯತೆ ಇದೆ. ಎಲ್ಲವನ್ನು ಸೌಹರ್ದಯುತವಾಗಿ ಪರಿಗಣಿಸಿ ಶಾಂತಿ ಕಾಪಾಡುವ ಕೆಲಸವನ್ನು ಸಂಬಂಧ ಪಟ್ಟವರು ಮಾಡಬೇಕಿದೆ ಎಂದು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Mysore

ಏ.9 ರಂದು ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ: ಪೂರ್ವ ಸಿದ್ಧತೆ ಕುರಿತು ದರ್ಶನ್‌ ದ್ರುವ ಸಭೆ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆಯ ಏ.9 ರಂದು ಜರುಗುವ ಮಹೋತ್ಸವದ ಹಿನ್ನೆಲೆ ಇಂದು ಬುಧವಾರ 2 ನೇ ಹಂತದ ಪೂರ್ವಭಾವಿ ಸಭೆಯನ್ನು ಎಡಿಸಿ ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ದೊಡ್ಡ ಜಾತ್ರೆ ಪೂರ್ವ ಸಿದ್ಧತಾ ಸಭೆ ನಡೆಸಲಾಯಿತು.

ನಗರದ ಶ್ರೀಕಂಠೇಶ್ವರ ಸ್ವಾಮಿಯ ಅನ್ನದಾಹೋಹ ಭವನದಲ್ಲಿ ಆಯೋಜಿಸಿದ್ದ ದೊಡ್ಡ ಜಾತ್ರೆಯ ಪ್ರಯುಕ್ತ ಅಧಿಕಾರಿಗಳು ಮತ್ತು ಏಳೂರು ಗ್ರಾಮಸ್ಥರ ಸಲಹೆ ಸೂಚನೆಗಳ 2 ನೇ ಹಂತ ಪೂರ್ವದ ಸಭೆ ಆಯೋಜಿಸಲಾಯಿತು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಶ್ರೀಕಂಠೇಶ್ವರ ದೇವಸ್ಥಾನ ಸುತ್ತು, ಅಂಬೇಡ್ಕರ್ ಭವನ, ನಗರ ಸಭೆ, ಸೇರಿದಂತೆ ದೀಪದ ಅಲಂಕಾರಗಳನ್ನು ಅದ್ದೂರಿಯಾಗಿ ಮಾಡಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಧಿಕಾರಿಗೆ ಸೂಚನೆ ನೀಡಿದರು.

ರಥೋತ್ಸವ ಜರುಗಲಿರುವಗ ರಥದ ಚಕ್ರಗಳು, ರಥದ ಹಗ್ಗ, ರಸ್ತೆಗಳಲ್ಲಿ ಹಳ್ಪಳ ದಿಟ್ಟನೆಗಳನ್ನು, ಪರಿಶೀಲಿಸಬೇಕು, ಅಧಿಕಾರಿಗಳು ನಿಮ್ಮ ಜವಾಬ್ದಾರಿಯಿಂದ ಅವಘಡನೆ ನಡೆಯದೆ ಹಾಗೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಗಡಕ್ ಸೂಚನೆ ಶಾಸಕ ದರ್ಶನ್ ಧ್ರುವನಾರಾಯಣ್ ನೀಡಿದರು.

ಎಡಿಸಿ ಶಿವರಾಜ್ ಮಾತನಾಡಿ ಕ್ಷೇತ್ರದಲ್ಲಿ ಇಂತಹ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಹೆಚ್ಚು ಸಹಕಾರ ಬೆಂಬಲ ಕೊಡುತ್ತಿದ್ದಾರೆ ಖುಷಿಯಾಗುತ್ತದೆ. ಆದ್ದರಿಂದ ಅಧಿಕಾರಿಗಳು ನಿಮ್ಮ ಜವಾಬ್ದಾರಿಯಿಂದ ಕೆಲಸಗಳನ್ನು ನಿರ್ವಹಿಸಬೇಕು

ಜಾತ್ರೆ ಕಳೆದು ವರ್ಷಕ್ಕಿಂತ ಅದ್ದೂರಿಯಾಗಿ ಅಲಂಕಾರ ಮಾಡಿ ಯಾವುದೇ ಇತರ ಘಟಕಗಳ ನಡುವೆ ಅದ್ದೂರಿಯಾಗಿ ಜಾತ್ರೆ ನಡೆಯಬೇಕು.

ದೇವಸ್ಥಾನ ಸುತ್ತ ಹಾಗೂ ತೇರು ಎಳೆಯುವಾಗ ಸಿಸಿಟಿವಿ ಅಳವಡಿಸಿರಬೇಕು. ರಥ ಚಕ್ರದ ಹಿಂಭಾಗದಲ್ಲಿ ಎದ್ದಿನ ಮರ ಕೊಡುವವರು ಜಾಗೃತಿ ಆಗಿರಬೇಕು ಅವರಿಗೆ ಟೀ ಶರ್ಟ್ ಕೊಡಬೇಕೆಂದು ದೇವಸ್ಥಾನ ಅಧಿಕಾರಿಗೆ ಸೂಚನೆ ನೀಡಿದರು

ಶಾಸಕರಿಂದ ಸಭಾಷ್ ಅದ್ದೂರಿಯಾಗಿ ನಡೆಯಿತು ಎಂದು ಅನಿಸಿಕೊಂಡರೆ ಸಂತೋಷವಾಗುತ್ತದೆ. ನಂಜುಂಡೇಶ್ವರ ಸ್ವಾಮಿ ನಮ್ಮ ಮನೆ ದೇವರು ಎಂದುಕೊಂಡು. ನಂಜುಂಡೇಶ್ವರ ಸ್ವಾಮಿಯ ಭಯಕ್ಕೆ ಶ್ರದ್ಧೆ ಇಟ್ಟು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸಗಳನ್ನು ನಿರ್ವಹಿಸಿ ಎಂದು ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನರ್, ನಗರ ಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ, EO ಜಗದೀಶ್ , DYSP ರಘು , ನಗರಸಭಾ ಪೌರಯುಕ್ತರಾದ ವಿಜಯ್ ಸೇರಿದಂತೆ ವಿವಿಧ ಗ್ರಾಮದ ಯಜಮಾನರುಗಳು, ಮುಖಂಡರುಗಳು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mysore

ಗುರುವಾರ ಮುಕ್ತ ವಿವಿ ಘಟಿಕೋತ್ಸವ ಸತೀಶ್ ಜಾರಕಿಹೊಳಿ ಗೆ ಗೌರವ ಡಾಕ್ಟರೇಟ್

Published

on

ಮೈಸೂರು: ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ 20ನೇ ಘಟಿಕೋತ್ಸವ ಸಮಾರಂಭವು ಮಾರ್ಚ್ 27 ರಂದು ಬೆಳಗ್ಗೆ 11 ಗಂಟೆಗೆ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯಲಿದೆ. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌ ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಘಟಿಕೋತ್ಸವದಲ್ಲಿ ಒಟ್ಟು 17,348 ಮಂದಿ ವಿವಿಧ ಪದವಿ ಪಡೆಯಲಿದ್ದು, ಒಟ್ಟು 54 ಚಿನ್ನದ ಪದಕ, 58 ನಗದು ಬಹುಮಾನ ನೀಡಲಾಗುವುದು ಎಂದರು.

ಈ ಸಾಲಿನಲ್ಲಿ 6402 ಪುರುಷರು, 10946 ಮಹಿಳೆಯರಿಗೆ ಪದವಿ ನೀಡಲಿದ್ದು, ವಿವಿಯ ಇತಿಹಾಸದಲ್ಲೇ ಅತ್ಯಧಿಕ ಮಂದಿ ಒಟ್ಟು 41 ಮಂದಿ ಪಿಎಚ್ ಡಿ ಪದವಿ ಪಡೆಯಲಿದ್ದಾರೆ. ಸ್ನಾತಕ, ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 25109 ಮಂದಿ ಪರೀಕ್ಷೆಗೆ ಹಾಜರಾಗಿ 17307 ಮಂದಿ ತೇರ್ಗಡೆ ಹೊಂದಿ ಶೇ.68.92ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿಯವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ . ಮಾನವ ಬಂಧುತ್ವ ವೇದಿಕೆಯ ಸಾಮಾಜಿಕ ಕಾರ್ಯಕ್ಕೆ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ. ಅದರಂತೆ ಚಿತ್ರದುರ್ಗದ ಐಡಿಯಲ್‌ ಎಜುಕೇಶನ್‌ ಸೊಸೈಟಿ ಚೇರ್ಮನ್‌ ಸಿ.ಎಂ.ಇರ್ಫಾನುಲ್ಲಾ ಷರೀಫ್‌ ಅವರ ಶೈಕ್ಷಣಿಕ ಸೇವೆ ಹಾಗೂ ಕಲುಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಛೇರ್ಮನ್‌ ಡಾ.ದಾಕ್ಷಾಯಣಿ ಎಸ್‌.ಅಪ್ಪಾ ಅವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್‌ ಕುಮಾರ್‌ ತಿವಾರಿ ಘಟಿಕೋತ್ಸವದ ಭಾಷಣ ಮಾಡುವರು ಎಂದು ಡಾ.ಶರಣಪ್ಪ ವಿ. ಹಲಸೆ ತಿಳಿಸಿದರು.

ಕುಲಸಚಿವರ ಕಚೇರಿಗೆ ಸಿಬ್ಬಂದಿ ನೋಟಿನ ಹಾರ ಹಾಕಿ ಪ್ರತಿಭಟಿಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಪರೀಕ್ಷಾಂಗ ಕುಲಸಚಿವ ಎಚ್‌.ವಿಶ್ವನಾಥ್‌, ಕುಲಸಚಿವ ಡಾ.ಪ್ರವೀಣ, ಶೈಕ್ಷಣಿಕ ಡೀನ್‌ ಪ್ರೊ.ಲಕ್ಷ್ಮಿ, ಬಿಒಎಂ ಸದಸ್ಯರು ಉಪಸ್ಥಿತರಿದ್ದರು.

ಕೋಟ್
ಕಳೆದ ಎರಡು ವರ್ಷಗಳಲ್ಲಿ 86 ಸಾವಿರ ಅಭ್ಯರ್ಥಿಗಳು ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದರು. ಈ ವರ್ಷ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಮಾ.31ರವರೆಗೂ ಪ್ರವೇಶಕ್ಕೆ ಅವಕಾಶವಿದೆ.
– ಪ್ರೊ.ಶರಣಪ್ಪ ವಿ.ಹಲಸೆ, ಮುಕ್ತ ವಿವಿ ಕುಲಪತಿ

Continue Reading

Mysore

ಎವರೆಸ್ಟ್ ಶಿಖರ ಏರಿದ ಅನುಭವ ಪುಸ್ತಕ ಬರೆಯುತ್ತಿರುವ ಡಾ. ಉಷಾ ಹೆಗ್ಡೆ

Published

on

ಮೈಸೂರು: ಜೀವಸಹಿತ ವಾಪಸ್ ಬರುವ ಬಗ್ಗೆ ಅನುಮಾನದ ಮನಸ್ಥಿತಿಯಲ್ಲಿಯೇ ಹಿಮಾಲಯದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದೆ. ಮೌಂಟ್ ಎವರೆಸ್ಟ್ ಏರಿದ ತಮ್ಮ ಸಾಧನೆಯ ಹಾದಿ ಹಾಗೂ ಸಿದ್ಥತೆಗಳ ಕುರಿತು ಪುಸ್ತಕ ಬರೆಯುತ್ತಿರುವುದಾಗಿ ಮೈಸೂರಿನ ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಉಷಾ ಹೆಗ್ಡೆ ಅವರು ತಿಳಿಸಿದರು.

ಇಲ್ಲಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಬೆಂಗಳೂರಿನ ಇನ್ ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆಂಡ್ ರಿಸರ್ಚ್ (ಐಎಂಎಸ್ಆರ್) ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪತ್ರಿಕಾ ಬರಹ ಕೌಶಲ ಕುರಿತು ಎರಡು ದಿನಗಳ ಕಾರ್ಯಾಗಾರದಲ್ಲಿ ಬುಧವಾರ ಅವರು ಅಣುಕು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಮೌಂಟ್ ಎವರೆಸ್ಟ್ ಶಿಖರ ಏರುವ ಮುನ್ನ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದೆ. ದೈಹಿಕವಾಗಿ ಫಿಟ್ ಆಗಿದ್ದೆ. ಮನೆಯಲ್ಲಿ ಮೊದಲು ಬೇಡ ಎಂದಿದ್ದರು. ಆದರೆ, ನಾನು ಪಡೆಯುತ್ತಿದ್ದ ತರಬೇತಿ ನೋಡಿ ಉತ್ತೇಜನ ನೀಡಿದರು. ಮನೆಯವರ ಬೆಂಬಲ ಇಲ್ಲದಿದ್ದರೆ
ಮೌಂಟ್ ಎವರೆಸ್ಟ್ ಶಿಖರ ಏರಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಸಾಗರಮಾತಾ ಕೃಪೆ ಇಲ್ಲದಿದ್ದರೆ ಹಿಮಾಲಯ ಏರಲು ಸಾಧ್ಯವಾಗುವುದಿಲ್ಲ. ಪರ್ವತಾರೋಹಣಕ್ಕೆ ಮನಸ್ಸು ಧೃಡವಾಗಿರಬೇಕು. ಎವರೆಸ್ಟ್ ಶಿಖರ ಏರುವಾಗ ಹಾಗೂ ಇಳಿಯುವಾಗ ಅನೇಕ ಶವಗಳನ್ನು ನೋಡಿದೆ. ಶಿಖರ ಏರಿ ವಾಪಸ್ ಇಳಿಯುವಾಗಲೇ ಸವಾಲುಗಳು, ಅಪಾಯಗಳು ಹೆಚ್ಚು ಎಂದು ಅವರು ತಿಳಿಸಿದರು.

ಇಡೀ ದೇಶವನ್ನು ಸೈಕಲ್ ನಲ್ಲಿ ಸುತ್ತಬೇಕು ಎಂಬ ಆಸೆ ಇದೆ ಎಂದು ಅವರು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಸ್ಚಚ್ಛ ಮೈಸೂರು ರಾಯಭಾರಿಯಾಗಿರುವ ಅವರು ಪ್ರತಿಯೊಬ್ಬರಿಂದಲೂ ಸ್ವಚ್ಚ ಮೈಸೂರು ಅಭಿಯಾನ ಆರಂಭವಾಗಬೇಕು ಎಂದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಡಾ.ಉಷಾ ಹೆಗ್ಡೆ ಅವರು ಉತ್ತರಿಸಿದರು.

ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಸಹ ಕುಲಪತಿ ಪ್ರೊ.ಕೆ.ವಿ.ನಾಗರಾಜ್, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ತ್ರಿವೇಣಿ, ಸುವರ್ಣ ಎಸ್.ಕಂಬಿ ಅವರು ಉಪಸ್ಥಿತರಿದ್ದರು.

Continue Reading

Trending

error: Content is protected !!