Mandya
ಜಂತುಹುಳು ನಿವಾರಣಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಎಂ.ಎನ್.ಆಶಾಲತಾ
ಶ್ರೀರಂಗಪಟ್ಟಣ : ಬೆಳೆಯುವ ಮಕ್ಕಳ ಪೌಷ್ಟಿಕಾಂಶ ಹೀರಿ ಬೆಳೆಯುವ ಜಂತುಹುಳುಗಳ ನಿವಾರಣೆಗಾಗಿ ಆಲ್ಬೆಂಡಜೋಲ ಮಾತ್ರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕೆಂದು ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಎನ್.ಆಶಾಲತಾ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜನ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಮಾತ್ರೆ ವಿತರಿಸಿ ಅವರು ಮಾತನಾಡಿ, ಬಯಲು ಶೌಚದಿಂದಾಗಿ, ಬರಿಗಾಲಿನಲ್ಲಿ ನಡೆದಾಗ ಹಾಗೂ ಕಲುಷಿತ ಕೈಗಳಿಂದ ಆಹಾರ ಸೇವನೆ ಮಾಡುವುದರಿಂದ ಜಂತುಹುಳುಗಳಾಗುತ್ತವೆ ಆದ್ದರಿಂದ ಮಕ್ಕಳು ಸ್ವಚ್ಛತೆ ಕಡೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.

ನಂತರ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ ಶ್ರೀಧರ್ ಮಾತನಾಡಿ ಆಲ್ಬೆಂಡಜೋಲ್ ಮಾತ್ರೆಯು ಅತ್ಯಂತ ಸುರಕ್ಷಿತವಾಗಿದ್ದು ಆರೋಗ್ಯ ಇಲಾಖೆಯಿಂದ ಉಚಿತವಾಗಿ ಪ್ರತಿ ವರ್ಷ ಫೆಬ್ರವರಿ 10 ಹಾಗೂ ಆಗಸ್ಟ್ 10 ರಂದು ಆಲ್ಬೆಂಡಜೋಲ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಆದ್ದರಿಂದ ಎಲ್ಲರೂ ಮಾತ್ರೆ ಸೇವಿಸಿ ಜಂತುಹುಳು ಬಾಧೆಯಿಂದ ಮುಕ್ತಿ ಪಡೆದು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸ್ವಪ್ನ, ಸಿಡಿಪಿಒ ಸಕಲೇಶ್ವರ, ಶಿಕ್ಷಕರಾದ ರಾಜಶೇಖರ, ರಾಘು ಹಾಗೂ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ. ಮಂಗಳ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ, ಜಿ.ಬಿ. ಹೇಮಣ್ಣ, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Mandya
ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ.13 ರಿಂದ 18 ರವರೆಗೆ ಉತ್ಸವ: ಬಿ.ಬಸವರಾಜು
ಮಂಡ್ಯ: ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ವತಿಯಿಂದ ಮದ್ದೂರು ತಾಲೂಕಿನ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ.13 ರಿಂದ 18 ರವರೆಗೆ ಉತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ, ತೆಪ್ಪೋತ್ಸವ, ಶಯನೋತ್ಸವ ಮತ್ತು ಭಾರಿ ದನಗಳ ಜಾತ್ರೆ ನಡೆಯಲಿದೆ ಎಂದು ಭಾರತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಬಿ.ಬಸವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ 33 ವರ್ಷಗಳಿಂದಲೂ ಶಿವರಾತ್ರಿ ಉತ್ಸವಗಳು ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆದುಕೊಂಡು ಬಂದಿರುತ್ತವೆ. ಈ ನಿಟ್ಟಿನಲ್ಲಿ 6 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಫೆ.೧೩ರಂದು ಧ್ವಜಾರೋಹಣ, ಮಹಾಮಂಗಳಾರತಿ ಮಹಾಗಣಪತಿ ಪೂಜೆ, ಹೋಮ, ಲಘು ಪುರ್ಣಾಹುತಿ ದಿಬ್ಬಲಿ, ಮಹಾಮಂಗಳಾರತಿ, ಫೆ.14 ರಂದು ನಿತ್ಯಪೂಜೆ, ನವಗ್ರಹ ಮೃತ್ಯುಂಜಯ ಮತ್ತು ಶಾಂತಿಹೋಮ, ಮಹಾಮಂಗಳಾರತಿ ನಡೆಯಲಿದೆ. ಫೆ.15 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಜಾಗರಣೆ, ವಿಶೇಷ ಅಭಿಷೇಕಗಳು, ಹರಿಕಥೆ, ಕೋಲಾಟ, ದೊಡ್ಡವರಸೆ, ಭಜನೆ, ಭರತನಾಟ್ಯ, ಪ್ರವಚನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ನೃತ್ಯರೂಪಕ, ಡೊಳ್ಳುಕುಣಿತ, ಧಾರ್ಮಿಕ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಹೇಳಿದರು.
ಫೆ.16 ರಂದು ವಿಶೇಷ ಪೂಜಾಲಂಕಾರದೊಂದಿಗೆ ಪೂಜಾಭಿಷೇಕ, ಫೆ.17 ರಂದು ಮಧ್ಯಾಹ್ನ 12.10ಕ್ಕೆ ರಥೋತ್ಸವ, ವಿವಿಧ ದೇವರುಗಳ ಉತ್ಸವಗಳು, ಕೀಲುಕುದುರೆ, ಗಾರುಡಿ ಬೊಂಬೆ, ಡೊಳ್ಳುಕುಣಿತ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆಗೆ ಬಾರತೀ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರು ಎಪಿಎಂಸಿಯಿಂದ ಪಶುವೈದ್ಯಕೀಯ ನಿರ್ದೇಶಕರಿಂದ ನೇಮಿಸಲ್ಪಟ್ಟ ವೈದ್ಯಾಧಿಕಾರಿಗಳು ಆಯ್ಕೆ ಮಾಡುವ ವಿಜೇತ ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದರು.

ಫೆ.೧೮ರಂದು ಸಂಜೆ 6.30 ರಿಂದ ತೆಪ್ಪೋತ್ಸವ, ಹಾಗೂ ರಾತ್ರಿ 8 ರಿಂದ ಶಯನೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಇರುತ್ತವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ದನಗಳ ಜಾತ್ರೆಯ ಉತ್ತಮ ರಾಸುಗಳಿಗೆ ಜೋಡಿ ಎತ್ತುಗಳ ವಿಭಾಗದ ಪ್ರಥಮ ಸ್ಥಾನಕ್ಕೆ 15 ಸಾವಿರ, ದ್ವಿತೀಯ 9 ಸಾವಿರ, ತೃತೀಯ 6 ಸಾವಿರ, ಜೋಡಿ ಉಳುಮೆ ಹಸುಗಳ ವಿಭಾಗಕ್ಕೆ ಪ್ರಥಮ 10 ಸಾವಿರ, ದ್ವಿತೀಯ 7,500, ತೃತೀಯ 5 ಸಾವಿರ ತಲಾ ಐದು ವಿಭಾಗಗಳ ಸ್ಪರ್ಧೆಗಳಿಗೆ ನೀಡಲಾಗುವುದು. ಬಹುಮಾನದ ಮೊತ್ತದಲ್ಲಿ ಎಪಿಎಂಸಿಯಿಂದ 22,500 ರೂ ಸೇರಿದಂತೆ ಭಾರತೀ ಎಜುಕೇಷನ್ ಟ್ರಸ್ಟ್ 2,95,000 ರೂ.ಗಳನ್ನು ಭರಿಸಲಿದೆ. ಅತ್ಯುತ್ತಮ ಚಪ್ಪರಕ್ಕೂ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಸಿದ್ದೇಗೌಡ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಉಪನ್ಯಾಸಕ ಶಿವಲಿಂಗೇಗೌಡ ಇತರರಿದ್ದರು.
Mandya
ಜ್ಞಾಪಕಶಕ್ತಿಹೀನ 72 ವರ್ಷದ ತಂದೆ ವಿರೂಪಾಕ್ಷ ಅವರು ಕಾಣೆಯಾಗಿದ್ದಾರೆ : ಸಂತೋಷ್
ಮಂಡ್ಯ: ಜ್ಞಾಪಕಶಕ್ತಿಹೀನ 72 ವರ್ಷದ ತಂದೆ ವಿರೂಪಾಕ್ಷ ಅವರು ಕಾಣೆಯಾಗಿದ್ದು, ಎಲ್ಲಾದರು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಪುತ್ರ ಸಂತೋಷ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ವಿರೋಪಾಕ್ಷ ಅವರೊಂದಿಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ವಾಸವಿದ್ದೇನೆ. ಕಳೆದ 10 ದಿನಗಳ ಹಿಂದ ವಾಯು ವಿಹಾರಕ್ಕೆಂದು ಹೊರಬಂದ ಅವರು, ಬಸ್ ಹತ್ತಿ ಮೈಸೂರು, ಬೇಲೂರು ಮೂಲಕ ಮಂಡ್ಯದಲ್ಲಿ ತಪ್ಪಿ ಹೋಗಿದ್ದಾರೆ ಎಂಬ ಮಾಹಿತಿ ಪಡೆದಿದ್ದೇವೆ ಎಂದರು.
ಮಂಡ್ಯ ನಗರದಲ್ಲಿ ತಲೆಸುತ್ತಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅವರ ಬಗ್ಗೆ ಮಾಹಿತಿ ದೊರೆತ ವೇಳೆಯಲ್ಲಿ ಮತ್ತೆ ಅವರು ಕಾಣಿಯಾಗಿದ್ದು, ಕಳೆದ ಗುರುವಾರ ಮದ್ದೂರು ತಾಲೂಕಿನಲ್ಲಿ ಪತ್ತಯಾಗಿದ್ದರು ಎಂದು ಸ್ಥಳೀಯರು ತಿಳಿಸಿದರು.

ಆದರೆ ಇದುವರೆಗೆ ಅವರ ಸುಳಿವು ಸಿಕ್ಕಿಲ್ಲ. ಯಾರಿಗಾದರು ಕಂಡಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 9880394671, 9972272055, 9945599002 ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.
Mandya
ಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
ಮಂಡ್ಯ : ಕಾಯಕ ಶರಣರು ಸಮಾಜಕ್ಕೆ ವಚನಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯುವಜನತೆಯು ಕಾಯಕ ಶರಣರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ವಿ.ನಂದೀಶ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ನಡೆದ ಕಾಯಕ ಶರಣರ ಜಯಂತಿ (ಮಾದರ ಚೆನ್ನಯ್ಯ ಮಾದರ ಧೂಳಯ್ಯ ಡೋಹರ ಕಕ್ಕಯ್ಯ ಸಮಗಾರ ಹರಳಯ್ಯ ಉರಿಲಿಂಗ ಪೆದ್ದಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಸಾಮಾಜಿಕ ಸುಧಾರಣೆಗಳನ್ನು ಮಾಡಿದ್ದಾರೆ.
ಶರಣರು ಅನ್ನ ದಾಸೋಹ ಮತ್ತು ಕಾಯಕ ದಾಸೋಹವನ್ನು ಆರಾಧಿಸುತ್ತಿದ್ದರು.ಯುವಸಮುದಾಯವು ಶರಣರ ಆದರ್ಶಗಳನ್ನುಬೆಳಸಿಕೊಳ್ಳಬೇಕು ಮತ್ತು ಸಮುದಾಯಕ್ಕೆ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಪರಿಶಿಷ್ಟ ಜಾತಿ ಹಾಗೂ ಪಂಗಡ ಆಯೋಗದ ಮಾಜಿ ಸದಸ್ಯರಾದ ವೆಂಕಟೇಶ್ ದೊಡ್ಡೇರಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಅನುಪಮ, ಮುಖಂಡರುಗಳಾದ ಎಲ್ .ಸಂದೇಶ್, ಕೃಷ್ಣ, ತಮ್ಮಣ್ಣ, ಸಿ.ಕೆ ಪಾಪಯ್ಯ ಎನ್ .ಆರ್ ಚಂದ್ರಶೇಖರ್, ಕೆಂಪಣ್ಣ ಹಾಗೂ ಇನ್ನಿತರರು ಭಾಗವಹಿಸಿದ್ದರು.
-
Mysore9 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya4 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
Hassan1 hour agoಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
-
Mysore3 hours agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
National3 hours agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
-
Kodagu4 hours ago104 ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ: ಎಸ್ಪಿ ಬಿಂದುಮಣಿ
-
Chikmagalur2 hours agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
-
Kodagu2 hours agoಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಬಿ.ಬಿ.ಹೇಮಲತಾ
