Connect with us

Chamarajanagar

ಆರ್ಥಿಕ ಸದೃಢತೆಗೆ ರೈತರು ಭವಿಷ್ಯದ ಹಣ್ಣುಗಳನ್ನು ಬೆಳೆಯಲು ಡಾ. ಹಿತ್ತಲಮನಿ ಸಲಹೆ

Published

on

ಚಾಮರಾಜನಗರ: ಜಿಲ್ಲೆಯ ಹವಾಗುಣಕ್ಕೆ ಪೂರಕವಾಗುವಂತಹ ಭವಿಷ್ಯದ ಹಣ್ಣಿನ ಬೆಳೆಗಳನ್ನು ಬೆಳೆದು ರೈತರು ಹೆಚ್ಚಿನ ಆದಾಯ ಗಳಿಸಿ ಆರ್ಥಿಕ ಸದೃಢತೆ ಹೊಂದಬಹುದಾಗಿದೆ ಎಂದು ಕೃಷಿ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಎಸ್.ವಿ.ಹಿತ್ತಲಮನಿ ಸಲಹೆ ಮಾಡಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಭವಿಷ್ಯದ ಹಣ್ಣಿನ ಬೆಳೆಗಳಾದ ಬಟರ್‍ಪ್ರೂಟ್ (ಬೆಣ್ಣೆಹಣ್ಣು), ಡ್ರ್ಯಾಗನ್‍ಪ್ರೂಟ್, ಹಲಸು, ಮಾವು, ಸೀತಾಫಲ, ನೇರಳೆ, ರಾಂಬುಟನ್, ಇನ್ನಿತರೆ ಬೆಳೆಗಳ ಪರಿವರ್ತನೆ, ಹೊಸತಳಿ ಪರಿಚಯ, ಬೇಸಾಯ ಕ್ರಮ ಹಾಗೂ ಅವಕಾಶಗಳ ಕುರಿತು ಜಿಲ್ಲೆಯ ರೈತರಿಗೆ ಆಯೋಜಿಸಲಾಗಿದ್ದ ‘ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಪಿಪಿಟಿ ಮೂಲಕ ವಿವರಿಸಿ ಮಾತನಾಡಿದರು.

ತೋಟಗಾರಿಕೆಯನ್ನು ಸಾಮಾನ್ಯ ರೈತರ ಕಸುಬನ್ನಾಗಿ ಮಾಡಿ ಜನರ ಅರ್ಥಿಕ ಸ್ಥಿತಿಗತಿ ಸುಧಾರಿಸಿದವರು ತೋಟಗಾರಿಕೆಯ ಪಿತಾಮಹ ಡಾ.ಎಂ.ಎಚ್. ಮರಿಗೌಡ ಅವರು. ಕೃಷಿಗೆ ಹೆಚ್ಚಿನ ಮಹತ್ವವಿದ್ದ ಆಗಿನ ಕಾಲದಲ್ಲಿ ಮರಿಗೌಡ ಅವರು ತೋಟಗಾರಿಕೆಯ ಮೂಲಕ ತರಕಾರಿ ಹಾಗೂ ಹಣ್ಣಿನ ಬೆಳೆಗಳ ಪ್ರಾಮುಖ್ಯತೆಯನ್ನು ಇಡೀ ಸಮುದಾಯ, ದೇಶಕ್ಕೆ ಪರಿಚಯಿಸಿದರು. ಕರ್ನಾಟಕದಲ್ಲೆಡೆ ಒಂದೊಂದು ಪ್ರಮುಖ ಹಣ್ಣಿನ ಬೆಳೆ ಬೆಳೆಯುತ್ತಾರೆ. ಆದರೆ ಎಲ್ಲಾ ಪ್ರಮುಖ ಬೆಳೆಗಳು ಇಂದು ಸಮಸ್ಯೆ ಎದುರಿಸುತ್ತಿವೆ. ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ, ಹಣ್ಣಿನ ದರ ಕುಸಿದರೂ ರೈತರ ಜೀವನ ಕಷ್ಟಸಾಧ್ಯವಾಗಲಿದೆ ಎಂದರು.

ರೈತರು ಈಗಿರುವ ಹಣ್ಣಿನ ಬೆಳೆಗಳ ಜೊತೆಗೆ ಪರ್ಯಾಯ ಹಣ್ಣುಗಳನ್ನು ಬೆಳೆಯಲು ಮುಂದಾಗಬೇಕಿದೆ. ಪರ್ಯಾಯ ಬೆಳೆಗಳ ಮಾಹಿತಿಗಾಗಿ ಬೇರೆಬೇರೆ ಭಾಗದ ರೈತರೊಂದಿಗೆ ಚರ್ಚಿಸಿ ಭವಿಷ್ಯದ ಹೊಸತಳಿಗಳ ವಿವರ ಅರಿಯಬೇಕು. ಕರ್ನಾಟಕದಲ್ಲಿ ಕರಾವಳಿ, ಪಶ್ಚಿಮ ಘಟ್ಟಗಳು, ಮಲೆನಾಡು, ಬಯಲುಸೀಮೆ ಪ್ರದೇಶಗಳಿದ್ದು, ಮಳೆಯಾಶ್ರಿತ ಹಾಗೂ ನೀರಾವರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಭೂಮಿಯ ಸ್ಥಿತಿಗತಿ, ಹವಾಗುಣ, ಪರಿಸರಕ್ಕೆ ಅನುಗುಣವಾಗಿ ಹಣ್ಣಿನ ಬೆಳೆ ಬೆಳೆಯಬೇಕು. ಆಗಮಾತ್ರ ಉತ್ತಮ ಫಸಲು ಬರಲಿದೆ. ರೈತರ ಆದಾಯ ದ್ವಿಗುಣಗೊಳ್ಳಲಿದೆ. ಚಾಮರಾಜನಗರ ಜಿಲ್ಲೆಯ ಹವಾಗುಣವು ಸಹ ಹಲವು ಹಣ್ಣಿನ ಬೆಳೆಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಪ್ಲೋರಜಾ ಕಂಪನಿ ಪ್ರತಿನಿಧಿ ಶಾಂತರಾಜು ಥೈ-ಹಲಸು ಹಣ್ಣಿನ ಬಗ್ಗೆ ಮಾಹಿತಿ ನೀಡಿ, ಕಂಪನಿಯು ರೈತರ ಜೊತೆ ಒಡಂಬಡಿಕೆ ಮಾಡಿಕೊಂಡು ಹಲಸಿನ ಸಸಿಗಳನ್ನ ನೀಡುತ್ತದೆ. ಹಲಸಿನ ಹಣ್ಣುಗಳನ್ನು ಕಂಪನಿಯಿಂದಲೇ ಖರೀದಿಸಿ ಪ್ರತಿ ಕೆ.ಜಿ. ಗೆ 30 ರೂ. ನಂತೆ ಕಂಪನಿಯು ರೈತರಿಗೆ ನೀಡಲಿದೆ. ಒಮ್ಮೆ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡರೆ 28ರಿಂದ 30 ವರ್ಷ ರೈತರು ನಿರಂತರ ಆದಾಯ ಪಡೆಯಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.

ವಿಚಾರಸಂಕಿರಣದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಶಿವಪ್ರಸಾದ್, ರೈತ ಮುಖಂಡರು, ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಯ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

Continue Reading

Chamarajanagar

ಬಿಳಿಗಿರಿ ರಂಗನಬೆಟ್ಟದ ದೇವಾಲಯ ಸುತ್ತಮುತ್ತ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ

Published

on

ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಿದರು.

ವಿದ್ಯಾರ್ಥಿಗಳು ದೇವಾಲಯದ ಹೊರ ಆವರಣ, ಮೆಟ್ಟಿಲುಗಳು, ಪ್ರವೇಶ ದಾರಿಗಳು ಹಾಗೂ ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ಕಸ ಸಂಗ್ರಹಿಸಿ ಸ್ವಚ್ಚತೆ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಆರ್.ಎಸ್. ಅಶ್ವಿನಿ ಮಾತನಾಡಿ, ಸ್ಕೌಟ್ಸ್ ಆಂಡ್ ಗೈಡ್ಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತವೆ. ಇಂತಹ ಶ್ರಮದಾನ ಕಾರ್ಯಗಳಿಂದ ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಸಮಾಜದ ಸಮಸ್ಯೆಗಳತ್ತ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪರಿಸರ ಸ್ವಚ್ಚತೆ ನಮ್ಮೆಲ್ಲರ ಕರ್ತವ್ಯ. ಯುವಜನರು ಈ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಇತರರಿಗೂ ಪ್ರೇರಣೆಯಾಗುತ್ತದೆ. ಇಂತಹ ಕಾರ್ಯಗಳು ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಆಂಡ್ ಗೈಡ್ಸ್ ಸಂಚಾಲಕ ಡಾ. ಪಿ.ಎಂ. ನಾಗೇಂದ್ರ ಕುಮಾರ್, ಜಿ.ಕೆ. ದೀಪಿತ ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

Continue Reading

Chamarajanagar

ಫೆ. 8ರಂದು ಎಸ್.ಸಿ. ಎಸ್.ಟಿ ಮುಖಂಡರ ಕುಂದು ಕೊರತೆ ಸಭೆ

Published

on

ಚಾಮರಾಜನಗರ: ಪೊಲೀಸ್ ಇಲಾಖೆ ವತಿಯಿಂದ ಎಸ್.ಸಿ, ಎಸ್.ಟಿ. ಮುಖಂಡರ ಕುಂದು ಕೊರತೆ ಸಭೆಯನ್ನು ಫೆ. 8ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ (ಎಸ್.ಸಿ. ಎಸ್.ಟಿ) ಜನಾಂಗದವರು ಈ ಸಭೆಯನ್ನು ಸದುಪಯೋಪಡಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ಫೆ. 8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಚಾಮರಾಜನಗರ ಉಪವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಫೆಬ್ರವರಿ 8ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹೆಗ್ಗವಾಡಿಪುರ, ದೇಶವಳ್ಳಿ, ಸಂತೇಮರಹಳ್ಳಿ, ಕುದೇರು, ದೇಮಹಳ್ಳಿ, ಕಮರವಾಡಿ, ಬಾಣಹಳ್ಳಿ, ತೆಳ್ಳನೂರು, ಬಸವಟ್ಟಿ, ಕಾವುದವಾಡಿ, ಕೆಂಪನಪುರ, ಮಹಂತಾಳಪುರ, ಹುಲ್ಲೇಪುರ, ಹೊಸಮೋಳೆ, ಮೂಡಲಅಗ್ರಹಾರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Trending

error: Content is protected !!