Connect with us

Special

ಅರಣ್ಯ ರಕ್ಷಣೆಗಾಗಿ ದೂರ ಸಂವೇದಿ ತಂತ್ರಜ್ಞಾನ

Published

on

ಕಾಡ್ಗಿಚ್ಚೆಂಬ ಕೆಂಬೂತವನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ದೂರ ಸಂವೇದಿ ತಂತ್ರಜ್ಞಾನವನ್ನು ಮತ್ತೊಷ್ಟು ಅಭಿವೃದ್ಧಿ ಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇತ್ತೀಚೆಗೆ ಜಾಗತಿಕ ತಾಪಮಾನದಿಂದಾಗಿ ಹೆಚ್ಚುತ್ತಿರುವ ಕಾಡ್ಗಿಚ್ಚು ಲೆಕ್ಕವಿಲ್ಲದಷ್ಟು ಅರಣ್ಯ ಪ್ರದೇಶವನ್ನು ದಹಿಸುತ್ತಿದೆ. ಕಾಡ್ಗಿಚ್ಚಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಅಗ್ನಿವೀರರನ್ನು ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ದೂರ ಸಂವೇದಿ ತಂತ್ರಜ್ಞಾನವು ಸಹಕಾರಿಯಾಗಲಿದೆ.

2023 ರಲ್ಲಿ ಕೆನಡಾ ದೇಶವು ಅತಿ ಹೆಚ್ಚು ಕಾಡ್ಗಿಚ್ಚಿಗೆ ತುತ್ತಾಗಿರುವ ದೇಶವಾಗಿದೆ. ಸುಮಾರು18 ಮಿಲಿಯನ್ ಹೆಕ್ಟೇರ್ ಪ್ರದೇಶ ನಾಶವಾಗಿದೆ. ಎನ್.ಸಿ.ಇ.ಐ ವರದಿಯ ಅನುಸಾರ 2023 ರ ಸಾಲಿನಲ್ಲಿ ವಿಶ್ವದಾದ್ಯಂತ ಸುಮಾರು 55,571 ಸ್ಥಳಗಳಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಆ ಪೈಕಿ 2,633,636 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇನ್ನೂ ಕರ್ನಾಟಕವೊಂದರಲ್ಲೇ ಸುಮಾರು 3793.13 SQ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದರಿಂದ ಸುಮಾರು 2170 ಮೆಗಾಟನ್ ನಷ್ಟು ಇಂಗಾಲ ಹೊರಸುಸುವಿಕೆ ಉಂಟಾಗಿದ್ದು, ಆ ಪೈಕಿ ಶೇ. 22ರಷ್ಟು ಕೆನಡಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಬಿಡುಗಡೆಯಾಗಿದೆ. ಈ ಹಿಂದೆ ಕಾಡ್ಗಿಚ್ಚು ಸಂಭವಿಸಿದರೆ ಅದು ದುಪ್ಪಟ್ಟಾಗುವವರೆಗೂ ಗಮನಕ್ಕೆ ಬರುತ್ತಿರಲಿಲ್ಲ. ಆದರೆ ದೂರ ಸಂವೇದಿ ತಂತ್ರಜ್ಞಾನದಿಂದಾಗಿ ಅತ್ಯಂತ ವೇಗವಾಗಿ ಉಪಗ್ರಹದ ಮೂಲಕ ಕಾಡ್ಗಿಚ್ಚು ಸಂಭವಿಸಿದ ಸ್ಥಳ ಯಾವುದು ಎಂಬ ಮಾಹಿತಿ ಅರಣ್ಯ ಇಲಾಖೆಗೆ ದೊರೆಯುತ್ತದೆ.

ದೂರ ಸಂವೇದಿ ತಂತ್ರಜ್ಞಾನ ಎಂಬುದು ಉಪಗ್ರಹದ ನೆರವಿನಿಂದ ಮಾಹಿತಿ ನೀಡುವ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು ಹಲವು ವರ್ಷಗಳಿಂದ ಬಳಕೆಯಾಗುತ್ತಿದೆ. ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರಕ್ಕೆ ಬಂದು ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಗೆ ಬರುತ್ತಿತ್ತು. ನಂತರ ಆಯಾ ರಾಜ್ಯಗಳಿಗೆ ಮಾಹಿತಿ ತಲುಪುತ್ತಿತ್ತು. ಈ ಪ್ರಕಿಯೆ ನಡೆಯಲು ಸಮಯವನ್ನು ತೆಗೆದುಕೊಳ್ಳುತ್ತಿದ್ದರಿಂದ ಶೀಘ್ರವಾಗಿ ಮಾಹಿತಿ ತಿಳಿಯಲು ಕಷ್ಟವಾಗುತ್ತಿತ್ತು. ಆದರೆ ಈಗ ನೇರವಾಗಿ ನಾಸಾದಿಂದ ಇಸ್ರೋದ ಎನ್.ಆರ್.ಎ.ಸಿ ಗೆ ಬಂದ ಮಾಹಿತಿ ಕೆ.ಎಸ್.ಆ.ರ್.ಎಸ್.ಸಿ ಗೆ ಬರುತ್ತದೆ. ನಂತರ ಮಾಹಿತಿ ಶೀಘ್ರವಾಗಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆಯಾಗುತ್ತದೆ. ಈ ಮೂಲಕ ತಕ್ಷಣವೇ ಸ್ಪಂದಿಸಿ ಬೆಂಕಿ ನಂದಿಸಲು ಸಾಧ್ಯವಾಗುವ ಮುಖೇನ ಹೆಚ್ಚಿನ ಅರಣ್ಯ ನಾಶವನ್ನು ತಡೆಯುತ್ತದೆ. ಈ ತಂತ್ರಜ್ಞಾನದಲ್ಲಿ ಕಾಡ್ಗಿಚ್ಚಿನ ಅಲರ್ಟ್ ಬಂದ ನಂತರ ಫೀಡ್ ಬ್ಯಾಕ್ ಹಾಕಲು ಅವಕಾಶವಿದೆ. ಅಗ್ನಿಯನ್ನು ನಂದಿಸುತ್ತಿರುವ ಚಿತ್ರಗಳನ್ನು ಸಹ ಅಪ್ಲೋಡ್ ಮಾದುವುದರ ಜೊತೆಗೆ ಅಗ್ನಿ ನಿಯಂತ್ರಣಕ್ಕೆ ಬಂದಿದೆಯೋ ಇಲ್ಲವೋ ಎಂಬ ಮಾಹಿತಿಯು ಲಭ್ಯವಾಗಲಿದೆ ಎಂಬುದು ತಜ್ಞರು ಸ್ಪಷ್ಟಪಡಿಸುತ್ತಾರೆ.

ಈ ತಂತ್ರಜ್ಞಾನದ ಮೂಲಕ ಅರಣ್ಯ ರಕ್ಷಣೆಗೆ ಹೆಚ್ಚಿನ ಸಹಕಾರ ಸಿಗಲಿದ್ದು, ಇದರ ಅಭಿವೃದ್ಧಿ ಕಾರ್ಯ ಶೀಘ್ರವಾಗಿ ನಡೆಯಬೇಕಿದೆ.

Continue Reading
Click to comment

Leave a Reply

Your email address will not be published. Required fields are marked *

Special

ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ವಿವೋ ಕಂಪನಿಯ Vivo V50 ಹೊಸ ಫೋನ್ ಬಿಡುಗಡೆ : ಬೆಲೆ ಎಷ್ಟು?

Published

on

ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ವಿವೋ ಕಂಪನಿಯ Vivo V50 ಹೊಸ ಫೋನ್ ಬಿಡುಗಡೆ : ಬೆಲೆ ಎಷ್ಟು?

Vivo V50 Mobile detail’s : ಮೊಬೈಲಗಳಲ್ಲಿ ಉತ್ತಮ ಕ್ಯಾಮೆರಾವನ್ನು ಗ್ರಾಹಕರಿಗೆ ನೀಡುವಲ್ಲಿ ಯಶಸ್ವಿಯಾಗಿರುವ ವಿವೋ ಕಂಪನಿಯು ಇದೀಗ ಮತ್ತೊಂದು V ಸರಣಿಯ “Vivo V50” ಎಂಬ ಹೆಸರಿನಲ್ಲಿ ಹೊಸ ಮೊಬೈಲ್ ಒಂದನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡಲಿದೆ.

ಇದೆ ಫೆಬ್ರವರಿ 17 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮುನ್ನ ಈ ಫೋನ್ ಖರೀದಿಸಲು ಗ್ರಾಹಕರಿಗೆ ಪೂರ್ವ ಬುಕ್ಕಿಂಗ್ ನ ವಿಶೇಷ ಆಫರ್ ಘೋಷಿಸಿದ್ದು, ಫೆಬ್ರವರಿ 16ನೇ ತಾರೀಕಿನವರೆಗೆ ಇದಕ್ಕೆ ಅವಕಾಶವಿದೆ.

ಪೂರ್ವ ಬುಕ್ಕಿಂಗ್ ನಲ್ಲಿ ಘೋಷಿಸಿದ ಆಫರ್ ಗಳು :

* 1 ವರ್ಷದ ವಿಸ್ತೃತ ಖಾತರಿಯನ್ನು (Extended warranty) ಉಚಿತವಾಗಿ ಘೋಷಿಸಿದೆ.
* ಅದರ ಜೊತೆಗೆ 1 ವರ್ಷದ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ ಅನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಘೋಷಿಸಿದೆ.

ವಿವೋ ವಿ50 ಮೊಬೈಲ್ ನ ಬೆಲೆ ಎಷ್ಟಿರಲಿದೆ?

ಈ ಹೊಸ ಸರಣಿಯ ಹಿಂದಿನ ಸರಣಿ ವಿವೋ ವಿ40 ಮೊಬೈಲ್ ನ ಬೆಲೆಯೂ 34,999ರೂ. ಇತ್ತು. ಇದೆ ಬೆಲೆಯ ವ್ಯಾಪ್ತಿಯಲ್ಲಿ ವಿವೋ ವಿ50 ಮೊಬೈಲ್ ಅನ್ನು ಬಿಡುಗಡೆ ಮಾಡುವ ಸಂಪೂರ್ಣ ಸಾಧ್ಯತೆಗಳಿದ್ದು, ಇದರ ಬೆಲೆಯೂ 40,000ರೂ. ನ ಆಸು ಪಾಸಿನಲ್ಲಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್ ವಿಶೇಷತೆಗಳು :

ಇದು 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದ್ದು, 90w ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಯಾವ ಬಣ್ಣದಲ್ಲಿ ಲಭ್ಯವಿದೆ?

ಸದ್ಯಕ್ಕೆ ಇದು ರೋಸ್ ರೆಡ್, ಸ್ಟಾರಿ ನೈಟ್ ಹಾಗೂ ಟೈಟಾನಿಯಂ ಗ್ರೇ ಬಣ್ಣದಲ್ಲಿ ಲಭ್ಯವಿದೆ.

Continue Reading

Special

ಸುಪ್ರೀಂ ಕೋರ್ಟ್ ನಲ್ಲಿ ಉದ್ಯೋಗವಕಾಶ : ಕ್ಲರ್ಕ್ ಹುದ್ದೆಗಳ ನೇಮಕಾತಿ

Published

on

Supreme Court Recruitment 2025 – ದೇಶದ ಉಚ್ಚ ನ್ಯಾಯಾಲಯವಾಗಿರುವ ಸುಪ್ರೀಂ ಕೋರ್ಟ್ ನಲ್ಲಿ ಲಾ ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 90 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಫೆಬ್ರವರಿ 07, 2025ರ ಒಳಗಾಗಿ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆಗಳು ಮತ್ತು ವಯೋಮಿತಿ ಅರ್ಹತೆಗಳ ವಿವರ :

ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಾನೂನು ಪದವಿಧರರಾಗಿದ್ದು, ಹುದ್ದೆಗೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿರತಕ್ಕದ್ದು. ವಯೋಮಿತಿ ಅರ್ಹತೆ ನೋಡುವುದಾದರೆ 20 ವರ್ಷ ಮೇಲ್ಪಟ್ಟಿರಬೇಕು ಹಾಗೂ 32 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ – 500ರೂ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 07 ಫೆಬ್ರವರಿ 2025

ಅರ್ಜಿ ಸಲ್ಲಿಕೆಗೆ ಡೈರೆಕ್ಟ್ ಲಿಂಕ್ – https://cdn3.digialm.com/EForms/configuredHtml/32912/92228/Index.html

Continue Reading

Special

ಗ್ರಾಮ ಪಂಚಾಯತಿಯ ವಿವಿಧ ಸೇವೆಗಳನ್ನು ನಿಮ್ಮ ವಾಟ್ಸಪ್ ನಲ್ಲಿಯೇ ಪಡೆಯಿರಿ : ಯಾವ ಸೇವೆಗಳು ಮತ್ತು ಹೇಗೆ?

Published

on

ಗ್ರಾಮ ಪಂಚಾಯಿತಿಯ ವಿವಿಧ ಸೇವೆಗಳನ್ನು ಮೊಬೈಲ್ ನಲ್ಲಿಯೇ ಪಡೆಯಲು ಹೊಸ ವ್ಯವಸ್ಥೆ : ಪ್ರತಿಯೊಂದು ಡಿಜಿಟಲೀಕರಣ ಆಗುತ್ತಿದ್ದು, ಇದೀಗ ಸಾರ್ವಜನಿಕರಿಗೆ ಗ್ರಾಮ ಪಂಚಾಯಿತಿಯ ವಿವಿಧ ಸೇವೆಗಳನ್ನು ಆನ್ಲೈನ್ ಮೂಲಕವೇ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹೊಸ ವ್ಯವಸ್ಥೆಯನ್ನು ಜಾರಿಗೆ ಮಾಡಿದೆ.

ಏನಿದು ಹೊಸ ವ್ಯವಸ್ಥೆ?

ಗ್ರಾಮೀಣ ಭಾಗದ ಜನರಿಗೆ ಗ್ರಾಮ ಪಂಚಾಯಿತಿಯ ವಿವಿಧ ಸೌಲಭ್ಯಗಳು ಮತ್ತು ಸೇವೆಗಳು ಸುಲಭವಾಗಿ ಕೈ ಬೆರಳಿನ ತುದಿಯಲ್ಲಿ ಸಿಗಲಿ ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು “ಪಂಚಮಿತ್ರ ವ್ಯಾಟ್ಸಪ್ ಚಾಟ್ ಸೇವೆ” ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

“Panchamithra Whatsapp Chat Service” – ಯಾವ ಸೇವೆಗಳು ಸಿಗಲಿವೆ?

ಪಂಚಮಿತ್ರ ವ್ಯಾಟ್ಸಪ್ ಚಾಟ್ ಸೇವೆಯ ಅಡಿಯಲ್ಲಿ ಸಾರ್ವಜನಿಕರಿಗೆ ವಿವಿಧ ರೀತಿಯ ಸೇವೆಗಳು ಸಿಗಲಿವೆ. ಅವುಗಳಲ್ಲಿ ಕುಂದು ಕೊರತೆಗಳಿಗೆ ಸಹಾಯ, ಅಹವಾಲುಗಳನ್ನು ದಾಖಲಿಸುವುದು, ಹಕ್ಕು ಪತ್ರ ಮತ್ತು ಐಡಿಗಳನ್ನು ನವೀಕರಿಸಲು, ಖಾಸಗಿ ಮತ್ತು ಸಾರ್ವಜನಿಕ ಅಗತ್ಯತೆಗಳಿಗಾಗಿ ಸೇರಿದಂತೆ ಗ್ರಾಮ ಪಂಚಾಯಿತಿಯ ವಿವಿಧ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಅವಕಾಶವಿರುತ್ತದೆ.

ಈ ಸೇವೆಯನ್ನು ಪಡೆಯುವುದು ಹೇಗೆ?

ಪಂಚಮಿತ್ರ ವ್ಯಾಟ್ಸಪ್ ಚಾಟ್ ಸೇವೆಯನ್ನು ಪಡೆಯಲು ಬೇಕಾದ ಕೊನೆಯ ಭಾಗದಲ್ಲಿ ನೀಡಿರುವ ವಾಟ್ಸಾಪ್ ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಿ. Hi ಎಂದು ಕಳುಹಿಸಿದ ತಕ್ಷಣ ಇಂಗ್ಲಿಷ್ ಅಥವಾ ಕನ್ನಡ ಭಾಷೆಯನ್ನು ಆಯ್ಕೆ ಮಾಡಲು ಹೇಳಲಾಗುತ್ತದೆ. ನಂತರದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರದಲ್ಲಿ ಮತ್ತೊಂದು ಬಾರಿ ನಿಮ್ಮ ಮಾಹಿತಿಯನ್ನು ಖಚಿತ ಪಡಿಸಿ ಮುಂದುವರಿಯಿರಿ. ಇದರ ನಂತರ ನಿಮಗೆ ಯಾವ ಸೇವೆ ಪಡೆಯಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಈ ರೀತಿ ನೀವು ಪಂಚಮಿತ್ರ ವ್ಯಾಟ್ಸಪ್ ಚಾಟ್ ಸೇವೆಯಲ್ಲಿ ವಿವಿಧ ಸೇವೆಗಳನ್ನು ಪಡೆದುಕೊಳ್ಳಬಹುದು.

ಪಂಚಮಿತ್ರ ವಾಟ್ಸಾಪ್ ನಂಬರ್ – 8277506000

Continue Reading

Trending

error: Content is protected !!