Hassan
ಹೆಚ್.ಡಿ.ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು
||ರಾಜ್ಯ ಸರಕಾರ ವಿರುದ್ಧ ಜೆಡಿಎಸ್ ನೇರ ಆರೋಪ||
||ಡಿಕೆಶಿ ಸ್ಲೀಪರ್ ಸೆಲ್ ನಿಂದ 4 ಸಂಚು||
ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು ರೂಪಿಸಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಅಲ್ಲದೆ; ದೇವೆಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸಿ ಯೋಜಿತವಾಗಿ ಟಾರ್ಗೆಟ್ ಮಾಡಿದೆ ಎಂದಿರುವ ಜೆಡಿಎಸ್; ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಗುರುತರ ಆರೋಪಗಳನ್ನು ಮಾಡಿದೆ.
ವಕೀಲ ದೇವರಾಜೇಗೌಡರ ಜತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ನಡೆಸಿರುವ ಮೊಬೈಲ್ ಸಂಭಾಷಣೆಯ ತುಣುಕುಗಳು ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಲ್ಲಿಯೇ ಜೆಡಿಎಸ್ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ಡಿಸಿಎಂ ಡಿಕೆಶಿ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.
ಕಳಚಿ ಬಿದ್ದ ಕಾಂಗ್ರೆಸ್ ಅಸಲಿ ಮುಖ:
ಹೊಂಚು ಹಾಕಿ ಸಂಚು ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ… ಹೌದಲ್ಲವೇ ಕಾಂಗ್ರೆಸ್ಸಿಗರೇ? ಸತ್ಯ ನಿಮ್ಮ ಮುಂದೆಯೇ ಇದೆ. ನಿಮ್ಮ ಅಧ್ಯಕ್ಷರೇ ಪೆನ್ ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್. CDಶಿವಕುಮಾರ್ ಗ್ಯಾಂಗ್ ನಡೆಸಿದ ಪೆನ್ ಡ್ರೈವ್ ಹಂಚಿಕೆಯ ಹೇಯ ಕೃತ್ಯದ ಸಂಚುಗಳೇ ಅವೆಲ್ಲಾ. ದೇವರಾಜೇಗೌಡರ ಹೇಳಿಕೆಯ ನಂತರ ಹೊರಬಿದ್ದಿರುವ ಆಡಿಯೋ ಟೇಪುಗಳೇ ಮಹಾಸಂಚಿನ ಮಹಾಕಥೆಯನ್ನು ಬಿಚ್ಚಿಟ್ಟಿವೆ. ಈಗ ಹೇಳಿ, ಯಾರು ಮೆಂಟಲ್? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಡಿಕೆಶಿಯಿಂದ ನಾಲ್ಕು ಸಂಚು:
CDಶಿವಕುಮಾರ್ ಗ್ಯಾಂಗಿನ ಸಂಚುಗಳು ಹೀಗಿವೆ ಎಂದಿರುವ ಜೆಡಿಎಸ್, ಡಿ.ಕೆ.ಶಿವಕುಮಾರ್ ಹೂಡಿರುವ ಸಂಚುಗಳನ್ನು ಪಟ್ಟಿ ಮಾಡಿದೆ.
•ಸಂಚು ನಂ.1: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಖ್ಯಾತಿ ತರುವುದು.
•ಸಂಚು ನಂ.2: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡುವುದು.
•ಸಂಚು ನಂ.3: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುರಿದು ಬೀಳುವಂತೆ ಮಾಡುವುದು.
•ಸಂಚು ನಂ.4: ಹೆಚ್.ಡಿ.ದೇವೆಗೌಡರ ಜೀವವನ್ನು ಬಲಿ ಪಡೆಯುವುದು.
ಡಿಕೆಶಿ ಸ್ಲೀಪರ್ ಸೆಲ್ ಟೂಲ್ ಕಿಟ್ ಏನು?
ಈ ಸಂಚು ಜಾರಿಗೆ CDಶಿವಕುಮಾರ್ ಸ್ಲೀಪರ್ ಸೆಲ್ ನ ಟೂಲ್ ಕಿಟ್ ವ್ಯವಹಾರದ ಬಗ್ಗೆ ಜೆಡಿಎಸ್ ಎಳೆಎಳೆಯಾಗಿ ವಿವರಿಸಿದೆ.
•ಈ ಮಹಾಸಂಚು ಸಾಕಾರಕ್ಕೆ CDಶಿವಕುಮಾರ್ ಹೂಡಲಿದ್ದ ಬಂಡವಾಳ ಬರೋಬ್ಬರಿ ₹100 ಕೋಟಿ!!
•ಹೆಚ್.ಡಿ.ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಹೇಳಲು ವಕೀಲ ದೇವರಾಜೇಗೌಡರಿಗೆ ₹100 ಕೋಟಿ ಆಫರ್!!
•ಅಡ್ವಾನ್ಸ್ ಆಗಿ ₹5 ಕೋಟಿ ಹಣವನ್ನು ಬೌರಿಂಗ್ ಕ್ಲಬ್ಬಿನ ಕೊಠಡಿ ಸಂಖ್ಯೆ 110ಕ್ಕೆ ರವಾನೆ.
•ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ರೆಡಿ ಮಾಡಿದ್ದೇ CDಶಿವಕುಮಾರ್.
•ಮೋದಿ, ಕುಮಾರಸ್ವಾಮಿ ಅವರುಗಳ ವಿರುದ್ಧ ಅಪಪ್ರಚಾರ ನಡೆಸಲು, ಇಡೀ ಸಂಚು ಅನುಷ್ಠಾನಕ್ಕೆ ನಾಲ್ವರು ಪ್ರಮುಖ ಸಚಿವರ ಸಮಿತಿ ರಚಿಸಿದ್ದೇ CDಶಿವಕುಮಾರ್.
•ದೇವೇಗೌಡರನ್ನು ಸಾವಿನ ದವಡೆಗೆ ನೂಕುವುದು ಈ ಸ್ಲೀಪರ್ ಸೆಲ್ ನ ಮಹಾನ್ ಟಾರ್ಗೆಟ್!!
ವಕೀಲರಾದ ದೇವೇರಾಜೇಗೌಡರೇ ಸ್ವತಃ ಬಿಚ್ಚಿಟ್ಟ ಈ ಸತ್ಯಗಳು ಹಾಗೂ ಆಡಿಯೋ ಟೇಪುಗಳು ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಮಾನವನ್ನು ಬೀದಿ ಬೀದಿಯಲ್ಲಿ ಹರಾಜು ಹಾಕಿವೆ. ಕಂಡವರ ಮನೆಯಲ್ಲಿ ಸಾವು ಬಯಸುವ ಕಾಂಗ್ರೆಸ್ಸಿಗೆ ಧಿಕ್ಕಾರ ಎಂದು ಜೆಡಿಎಸ್ ಕಿಡಿಕಾರಿದೆ.
ಅಲ್ಲದೆ; ನೂರುಕೋಟಿ CDಶಿವಕುಮಾರ್, CDಶಿವಕುಮಾರ್, ಪೆನ್ ಡ್ರೈವ್ ಗ್ಯಾಂಗ್, CDಶಿವಕುಮಾರ್ ಸ್ಲೀಪರ್ ಸೆಲ್, ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದೆಲ್ಲಾ ಡಿಕೆಶಿಯನ್ನು ಕುಟುಕಿದೆ ಜೆಡಿಎಸ್.
Hassan
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ – ಎಂ.ಎಚ್. ಕುಮಾರ ಶೆಟ್ಟಿ
ಹಾಸನ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯನ್ನಾಗಿ ನನ್ನನ್ನು ನೇಮಕ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಹಾಗೂ ರಾಜ್ಯ ಸಮಿತಿ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸುವುದಾಗಿ ಆಯ್ಕೆಗೊಂಡ ಎಂ.ಎಚ್. ಕುಮಾರ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅನುಮೋದನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ ಎಂದರು.
ನಾನು ಮಲ್ಲಿಗೆವಾಳ್ ಗ್ರಾಮದಲ್ಲಿ ಜನಿಸಿದ್ದು, ನಾನು ಎರಡು ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಮತ್ತೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ಮೂರನೇ ಬಾರಿಗೆ ಆಯ್ಕೆಗೊಂಡು ಹಾಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಗ್ರಾಮೀಣ ಭಾಗದಿಂದ ಬಂದಿದ್ದು, ಕಾಂಗ್ರೆಸ್ ಪಕ್ಷವು ಡಿ.ಕೆ. ಶಿವಕುಮಾರ ರವರು ನನ್ನನ್ನು ಗುರುತಿಸಿ, ಅನುಮೋಧಿಸಿ ರಾಜ್ಯ ಕಾರ‍್ಯದರ್ಶಿಯಾಗಿ ನಮ್ಮ ರಾಜ್ಯಾಧ್ಯಕ್ಷರಾದ
ಮಧು ಬಂಗಾರಪ್ಪ ಅವರಿಂದ ಆದೇಶ ಪತ್ರವನ್ನು ನೀಡಿದ್ದಾರೆ. ನಮ್ಮ ಪಕ್ಷವು ಕಾರ್ಯಕರ್ತರನ್ನು ಗುರುತಿಸಿ ಈ ಹುದ್ದೆ ಕೊಟ್ಟಿದ್ದಾರೆ ಎಂದರೇ ನಮಗೆ ಹೆಮ್ಮೆ ಆಗುತ್ತದೆ. ಈ ಹುದ್ದೆ ಕೊಡಿಸಿದ ಪಕ್ಷದ ಎಲ್ಲಾ ನಾಯಕರಿಗೆ ಕೃತಜ್ಞತೆ ಹೇಳಿದರು. ಕೊಟ್ಟಿರುವ ಹುದ್ದೆಯನ್ನು ನಿಬಾಯಿಸಿಕೊಂಡು ಹೋಗುವುದಾಗಿ ಇದೆ ವೇಳೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ, ನೇಕಾರರ ಸಂಘದ ಅಧ್ಯಕ್ಷ ಎ.ವಿ. ಶಂಕರ ಶೆಟ್ಟಿ, ಶೇಷಪ್ಪ ಚಾರ್ ಇತರರು ಉಪಸ್ಥಿತರಿದ್ದರು.
Hassan
ಅಯ್ಯಪ್ಪ ಮಾಲೆದಾರ ಕನ್ನಡಿಗರ ಮೇಲೆ ಕೇರಳದಲ್ಲಿ ಹಲ್ಲೆ, ಕನ್ನಡ ಧ್ಚಜಕ್ಕೆ ಅಪಮಾನ, ಮುಂದೆ ಈ ರೀತಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಿ: ವಿಜಯಕುಮಾರ್ ಮನವಿ
ಹಾಸನ: ಕೇರಳದಲ್ಲಿ ಕನ್ನಡಿಗರ ಅಯ್ಯಪ್ಪ ಮಾಲೆದಾರೆಗಳ ಮೇಲೆ ನಡೆದ ಹಲ್ಲೆ ಮಾಡಿದಲ್ಲದೇ ಕನ್ನಡಿಗರ ಸ್ವಾಭಿಮಾನಕ್ಕೆ ಹಾಗೂ ಕರ್ನಾಟಕದ ಧ್ವಜಕ್ಕೆ ಮಾಡಿದ ಅಪಮಾನವಾಗಿದ್ದು, ಮುಂದೆ ಅಯ್ಯಪ್ಪ ಮಾಲೆದಾರಿಗಳಿಗೆ ಯಾವ ರೀತಿ ತೊಂದರೆ ಆಗದಂತೆ ಕರ್ನಾಟಕ ಸರಕಾರ ಕ್ರಮತೆಗೆದುಕೊಳ್ಳುವಂತೆ ಅರಕಲಗೂಡು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಅಧ್ಯಕ್ಷ ವಿಜಯಕುಮಾರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮಾತನಾಡಿ, ಮೊದಲಿಗೆ ಒರ್ವ ಪತ್ರಕರ್ತರಿಗೆ ಹಾಗೂ ಹಾಸನದ ಜಿಲ್ಲಾವರಿಷ್ಠಾಧಿಕಾರಿ ಹೊಳೆನರಸೀಪುರದ ಡಿವೈ.ಎಸ್.ಪಿ. ಮೇಡಂ ಅರಕಲಗೂಡು ಸರ್ಕಲ್ ಇನ್ಸ್ ಪೆಕ್ಟರ್ ಸಿಬ್ಬಂದಿಗಳಿಗೆ ಧನ್ಯವಾದಗಳು. ಮತ್ತು ಕ್ಯಾಲಿಕಟ್ ಹತ್ತಿರ ಕರ್ನಾಟಕದ ಅಯಪ್ಪ ಮಾಲೆದಾರೆಗಳ ಮೇಲೆ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರುರಂಗಡಿ ತಾಲ್ಲೂಕಿನ ಪಾಣಂಬರ್ ಗ್ರಾಮದಲ್ಲಿ ಇರುವ ಮಾರಿಯಾಮ್ಮ ಹಲ್ಲಾ ಅಂಗಡಿಯ ಕೆಲಸದವರಿಂದ ಅಯ್ಯಪ್ಪ ಮಾಲೆದಾರೆಗಳ ಮೇಲೆ ಹಲೆ ಮಾಡಿದ್ದಾರೆ. ನೆಡೆದ ಘಟನೆ ವಿವರ ನಾವು ಸುಮಾರು ೨೪೦ ಕೆಜಿ ಯವರೆಗೆ ಹಲ್ವಾವನ್ನು ತೆಗೆದುಕೊಂಡು ಹಣ ಪಾವತಿ ಮಾಡಿರುತ್ತೇವೆ.ಇದರ ಮಧ್ಯೆ ಹಲ್ಲಾ ತೂಕ ಹಾಕುವಾಗ ಗ್ರಾಂಗಳ ವ್ಯತ್ಯಾಸ ಮಾಡಿರುತ್ತಾರೆ. ಅದನ್ನು ಸ್ವಾಮಿಗಳು ಪ್ರಶ್ನಿಸಿದಾಗ ಅದಕ್ಕೆ ಹಲ್ವ, ಕಟ್ಟು ಮಾಡುವ ಸೇಲ್ಸ್ ಮ್ಯಾನ್ ಕೆಟ್ಟದಾಗಿ ಮಾತನಾಡಿದ್ದಾನೆ ಅಲ್ಲೆ ಇದ್ದ ಅಂಗಡಿ ಸಿಬ್ಬಂದಿ ಅ ಸಿಬ್ಬಂದಿಗೆ ಬೈದು ಹಲ್ಕಾ ಕೊಡುವಂತೆ ತಿಳಿಸಿರುತ್ತಾನೆ ಎಂದು ದೂರಿದರು. ನಂತರ ಹಲ್ವಾ ಎಲ್ಲಾರು ತೆಗೆದುಕೊಂಡು ಹೋದ ಸಂದರ್ಭದಲ್ಲಿ ನಮ್ಮ ಸ್ವಾಮಿಗಳಾದ ಜೀವನ್, ಹರೀಶ್ ದಿಲೀಪ್ ಅವರು ಕರ್ಜೂರ್ ದ ವಿಚಾರದಲ್ಲಿ ಬೆಲೆಯ ವಿಚಾರವಾಗಿ ಮಾತನಾಡುವಾಗ ಅಲ್ಲೆ ಇದ್ದ ಐದು ಜನ
ಸಿಬ್ಬಂದಿಯು ನಮ್ಮ ಸ್ವಾಮಿಗಳ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾ ಕೆಟ್ಟದಾಗಿ ಮಾತಾನಾಡುತ್ತ ಇರುತ್ತಾರೆ. ನಂತರ ವಿಜಯ್ ಮತ್ತು ಗುರುಸ್ವಾಮಿಗಳು ಹೋಗಿ ಸಿಬ್ಬಂದಿಯವರಿಗೆ ಕೇಳಿದಾಗ ನಮ್ಮ ಮೇಲು ಸಹಾ ಸಿಟ್ಟಾಗಿ ಮಾತಾನಾಡುತ್ತ ಕೌಂಟರ್ ನಲ್ಲಿ ಇದ್ದ ಸಿಬ್ಬಂದಿಗಳಲ್ಲಿ ಕೇರಳ ರಾಜ್ಯದ ಸಿಬ್ಬಂದಿಯು ಗುಂಡ್ಲುಪೇಟೆಯ ಸಿಬ್ಬಂದಿ ಜೊತೆ ಈ ಕರ್ನಾಟಕದ ಸೂಳೆ ನನ್ನ ಮಕ್ಕಳದು ದುರಂಕಾರ ಜಾಸ್ತಿ ಎಂದು ಮಾಲಯಾಳಂ ನಲ್ಲಿ ಅವ್ಯಾಚಪದಗಳಿಂದ ನಮ್ಮನ್ನು ನಿಂದಿಸಿದ್ದು, ಅರಕಲಗೂಡು ತಾಲ್ಲೂಕಿನ ಕಳ್ಳಿಮುದ್ದನಹಳ್ಳಿ ಗ್ರಾಮದ ಮನು ಎಂಬುವರಿಗೆ ಗಾಯವಾಗಿದ್ದು, ಮಲಪ್ಪುರಮ್ ಸರ್ಕಾರಿ ಅಸ್ಪತ್ರೆಗೆ ಸೇರಿಸಿದ್ದಾರೆ. ಕನ್ನಡಿಗರು ಎಂದು ಅವ್ಯಾಚ ಪದಗಳನ್ನು ಬಳಸಿ ನಿಂದಿಸಿ ಹಲ್ಲೆ ಮಾಡಿದು ಹಾಸನದ ಎಸ್ ಪಿ ಯವರ ಮಾಲೆದಾರೆಗಳಿಗೆ ಫೋನ್ ಮೂಲಕ ಸಹಕಾರ
ಮಾಡಿ ಅಸ್ಪತ್ರೆಗೆ ಸೇರಿಸಲು ಸಹಾಯ ಮಾಡಿರುತ್ತಾರೆ. ಅಲ್ಲೆ ಪಕ್ಕದಲ್ಲಿ ಇದ್ದ ನಮ್ಮ ಕನಾರ್ಟಕದ ಸ್ವಾಮಿಯೊಬ್ಬರು ಮಾಲಯಾಳಂನಲ್ಲಿ ಕರ್ನಾಟಕದ ಸೂಳೆ ಮಕ್ಕಳು ಎಂದು ಬೈಯುವ ವಿಚಾರ ತಿಳಿಸಿದ್ದರು. ನಾವು ಅದನ್ನ ಪ್ರಶ್ನೆ ಮಾಡಿ ಕೇಳಿದಾಗ ಅಲ್ಲಿ ಇದ್ದ. ಅಂಗಡಿ ಮಾಲಿಕ ಮತ್ತು ವಿಜಯ್ ಮಾತಾನಾಡುತ್ತ ಇದ್ಧಿ ಆ ಸಮಯದಲ್ಲಿ ನಮ್ಮ ಸ್ವಾಮಿಗಳು ಬಸ್ಸು ಹತ್ತಲು ಹೋಗತ್ತಿದ್ದಾಗ ಪಕ್ಕದ ಹಲ್ವ, ಅಂಗಡಿಯಿಂದ ಬಂದ ಮಲಯಾಳಿ ಮತ್ತು ಅಂಗಡಿಯಲ್ಲಿಂದ ಹುಡುಗರು ನಮ್ಮ ಸ್ವಾಮಿಗಳ ಮೇಲೆ ಹಲ್ಲೆ ಮಾಡಿ ಅಯ್ಯಪ್ಪ ಸ್ವಾಮಿಗಳ ಮಾಲೆ ಹರಿದು ಹಾಗೂ ಹಲ್ವಾ ಅಂಗಡಿ ಇತರ ಸಿಬ್ಬಂದಿ ಅಲ್ಲೆ ಇದ್ದ ವಾಹನದ ಧ್ವಜದ ಕೋಲುನ್ನು ಮುರಿಯಲು ಯತ್ನಸಿದ ಸಮಯದಲ್ಲಿ ಪುನಃ ಗಲಾಟೆ ಹಾಗುತ್ತೆ, ನಂತರ ನಮ್ಮ ಇಬ್ಬರು ಸ್ವಾಮಿಗಳಿಗೆ ಗಂಭೀರವಾದ ಪೆಟ್ಟು ಬಿದ್ದಿದೆ ಎಂದರು.
ನಂತರ ಕೇರಳದ ಪೋಲಿಸ್ ಅವರ ಸಹಾಯ ಕೇಳಿದರು ಯಾರು ಬರದ ಕಾರಣ, ವಿಜಯ್ “ನಮ್ಮ ಹಾಸನದ ಎಸ್ ಪಿ ಮೇಡಂ ಅವರಿಗೆ ವಿಚಾರ ತಿಳಿಸಿದವು ಇವರ ಸಹಕಾರ ದಿಂದ ನಂತರ ಬಂದ ಕೇರಳದ ಪೋಲಿಸ್ ಅವರ ಮೂಲಕ ಖಾಸಗಿ ಅಸ್ಪತ್ರೆ ವಾಹನ ತರಸಿಕೊಂಡು ಡಿ ಎಮ್ ಎಸ್ ಅಸ್ಪತ್ರೆಗೆ ಪ್ರಥಮ ಚಿಕಿತ್ಸಾ ಕೊಡಿಸಿ, ಅವರು ಅಲ್ಲಿನಾ ಜಿಲ್ಲಾ ಅಸ್ಪತ್ರೆಗೆ ಹೋಗ ಬೇಕು ಎಂದು ತಿಳಿಸಿದರು. ನಂತರ ನಾವು ಹಲ್ವಾ ಅಂಗಡಿ ಹತ್ತಿರ ಬಂದು ಅಲ್ಲೇ ಇದ್ದ ಮಾಲಿಕರ ಹತ್ತಿರ ಹಲ್ವಾದ ಬಿಲ್ ಕೇಳಿದರೆ ಕೊಡುವುದಕ್ಕೆ ನಕಾರ ಮಾಡಿದರು. ಯಾವಾಗ ನಾವು ಬಿಲ್ ಬೇಕು ಎಂದು ಪಟ್ಟು ಹಿಡಿದ ಕಾರಣ ಬಿಲ್ ಕೊಟ್ಟರು. ಜಗಳ ಮಾಡಿದ ಹುಡುಗರು ಎಲ್ಲಿ ಅಂದರೆ ಅವರು ಕದ್ದು ಹೋಗಿದ್ದಾರೆ ಎಂದು ಸುಳ್ಳು ಹೇಳಿ ನಮ್ಮ ಜೊತೆಯಲ್ಲಿ ಪುನಃ ಜಗಳ ಮಾಡಿದರು. ನಂತರ ಅಲ್ಲಿನ ಸರ್ಕಲ್
ಇನ್ಸ್‌ಪೆಕ್ಟರ್ ಬಂದು ನಮ್ಮನ್ನು ಠಾಣೆಗೆ ಕರೆದುಕೊಂಡು ಹೋಗಿದ ನಂತರ ಹಲ್ಲಾ ಅಂಗಡಿ ಮಾಲೀಕರು ಬರುತ್ತಾರೆ. ಪೋಲಿಸರ ಜೊತೆಯಲ್ಲಿ ಗಲಾಟೆ ಮಾಡಿದ ಹುಡುಗರು ಬೇಕೆ ಬೇಕು ಎಂದಾಗ ಹಲ್ಲಾ ಅಂಗಡಿ ಮಾಲಿಕ ತನ್ನ ಕಾರಿನಲ್ಲಿ ಕರೆದುಕೊಂಡು ಬಂದನು. ನಂತರ ಪೋಲಿಸರ ಸಮುಖದಲ್ಲಿ ತೀರ್ಮಾನ ಮಾಡುತ್ತಾರೆ. ಅಸ್ಪತ್ರೆಯ ಖರ್ಚು ವೆಚ್ಚವನ್ನು ನೀಡಿದರು. ನಾವು ಅಲ್ಲಿಂದ ಬಂದ ಮೇಲೆ ನಮ್ಮ ಕರ್ನಾಟಕದ ಕೆಲವು ಡ್ರೈವರ್ ಗಳು ಅಂಗಡಿ ಮಾಲಿಕರ ಪರವಾಗಿ ನಿಂತು ಒಂದು ವಿಡಿಯೋ ಮಾಡಿಸಿರುವ ಸಂಗತಿ ನೋಡಿದ್ರಿ ಅದರಲ್ಲಿ ನಮ್ಮ ಅಂಗಡಿಯ ಸಿಬ್ಬಂದಿಗಳಿಗೆ ಕನ್ನಡ ಗೊತ್ತಿಲ್ಲಾ ಎಂದು ಸ್ವಾಮಿಗಳು ಕನ್ನಡದಲ್ಲಿ ಬೈದರು ಎಂದು ಸುಳ್ಳು ಮಾಹಿತಿಯನ್ನು ಮಾಲಿಕ ಅನೂಪ್ ಹೇಳಿರುತ್ತಾನೆ. ಇದು ಅಪ್ಪಟವಾದ ಸುಳ್ಳು ಯಾಕೆಂದರೆ ನಾವು ಸುಮಾರು ಎಂಟು
ವರ್ಷಗಳಿಂದ ಅಲ್ಲೆ ಹಲ್ಲಾ ತಂದಿರುತ್ತೇವೆ. ನಮಗೆ ಸಹಾ ಗೊತ್ತಿದೆ ಕನ್ನಡ ಬರುತ್ತ ಇಲ್ಲಾವ ಎಂದು ಅಂಗಡಿ ಮಾಲಿಕನ ವ್ಯಾಪಾರಕ್ಕೆ ಮುಂದೆ ತೊಂದರೆ ಹಾಗಬಾರದು ಎಂದು ಕೇವಲ ನೆಪ ಮಾತ್ರಕ್ಕೆ ಕ್ಷಮೆ ಕೇಳಿರುತ್ತಾನೆ ಎಂದು ದೂರಿದರು. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಹಾಗೂ ಕರ್ನಾಟಕದ ಧ್ವಜಕ್ಕೆ ಮಾಡಿದ ಅಪಮಾನವಾಗಿದ್ದು ಮುಂದೆ ಅಯ್ಯಪ್ಪ ಮಾಲಾದಾರೆಗಳಿಗೆ ಯಾವುದೇ ರೀತಿ ತೊಡ ಹಾಗದೆ ರೀತಿ ಕೇರಳ ಸರ್ಕಾರ ಮತ್ತು ನಮ್ಮ ಕರ್ನಾಟಕ ಸರ್ಕಾರ ಕ್ರಮತೆಗೆದುಕೊಳ್ಳಬೇಕು ಎಂಬುವುದು ನಮ್ಮ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ, ಹೊರಗುತ್ತಿಗೆದಾರರ ರಾಜ್ಯ ಘಟಕದ ಅಧ್ಯಕ್ಷ ಅಕ್ಷಯ್ ಡಿ.ಎಂ. ಗೌಡ, ಹರೀಶ್, ಕರವೇ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಧರ್ಮರಾಜು, ಮನು ಇತರರು ಉಪಸ್ಥಿತರಿದ್ದರು.
Hassan
ಜಿಲ್ಲೆಯ ವಕ್ಸ್ ಬೋರ್ಡ್ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ: ಬಿ.ಹೆಚ್. ಸುಲೈಮಾನ್ ಆಗ್ರಹ
ಹಾಸನ: ಬೋರ್ಡ್ ಅಧಿಕಾರಿಯಾದ ಜರೀನಾ ಬೇಗಂರವರ ಬಗ್ಗೆ ಅನುಮಾನ ಇರುವುದರಿಂದ ಜಿಲ್ಲೆಯ ವಕ್ಸ್ ಬೋರ್ಡ್‌ನಲ್ಲಿ ಇಲ್ಲಿವರೆಗೂ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಬಿ.ಹೆಚ್. ಸುಲೈಮಾನ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ ಜಿಲ್ಲೆಯ ವಕ್ಸ್ ಬೋರ್ಡ್‌ನಲ್ಲಿ ೨೧ ಜನರ ಸಲಹೆ ಸಮಿತಿ ಇದ್ದರೂ ಸಹ ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ ಎನ್ನುವಂತೆ ವಕ್ಸ್ ಬೋರ್ಡಿನ ಅಧ್ಯಕ್ಷರೂ ಮತ್ತು ಜಿಲ್ಲಾ ವಕ್ಸ್ ಬೋರ್ಡ್ ಅಧಿಕಾರಿಯಾದ ಶ್ರೀಮತಿ ಜರೀನಾ ಬೇಗಂರವರು ಸೇರಿಕೊಂಡು ಜಿಲ್ಲಾ ವ ಬೋರ್ಡಿನಲ್ಲಿ ನಡೆಯುತ್ತಿರುವಂತಹ ಯಾವುದೇ ವಿಚಾರಗಳನ್ನು ಸಲಹ ಸಮಿತಿಗಳಿಗೆ ತಿಳಿಸದೇ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದು, ಇದರಿಂದ ಸಲಹಾ ಸಮಿತಿಯ ನಿರ್ದೇಶಕರುಗಳಿಗೆ ಉಪಾಧ್ಯಕ್ಷರುಗಳಿಗೆ ಬಹಳಷ್ಟು ಅವಮಾನವನ್ನು ಮಾಡಿರುತ್ತಾರೆ ಎಂದು ದೂರಿದರು.
ಸಲಹಾ ಸಮಿತಿಯ ೨೧ ಜನರ ಆಯ್ಕೆಯಾಗಿ ೨೬ ತಿಂಗಳು ಕಳೆದರೂ ಇದುವರೆಗೆ ೦೪ ಸಭೆಗಳನ್ನು ಮಾಡಿರುತ್ತಾರೆ. ಹಾಗೂ ಯಾವುದೇ ಸಭಾ ವಿಷಯಗಳನ್ನು ಸಭೆಯಲ್ಲಿ ಚರ್ಚಿಸದೆ ತಮಗೆ ಇಷ್ಟ ಬಂದಂತೆ ತೀರ್ಮಾನವನ್ನು ತೆಗೆದುಕೊಂಡಿರುತ್ತಾರೆ. ತಿಂಗಳಿಗೆ ಒಮ್ಮೆ ಸಲಹಾ ಸಮಿತಿಯ ಸಭೆಯನ್ನು ಕರೆಯುವ ಪದ್ಧತಿ ಇದ್ದು, ಅದನ್ನು ಉಲ್ಲಂಘಿಸಿದ್ದಾರೆ. ದಿನಾಂಕ: ೨೫/೧೦/೨೦೨೪ರಂದು ರಾಜ್ಯದಿಂದ ೦೮ ಡೆತ್ ಫ್ರೀಜರ್‌ಗಳನ್ನು ತಾಲ್ಲೂಕುವಾರು ವಿತರಿಸಲು ರಾಜ್ಯ ವಕ್ಸ್ ಬೋರ್ಡ್‌ನಿಂದ ಹಾಸನ ಜಿಲ್ಲಾ ವಕ್ಸ್ ಬೋರ್ಡ್‌ಗೆ ಬಂದಿರುತ್ತದೆ ಎಂದರು.
ಆದರೆ ಈ ಡೆತ್ ಫ್ರೀಜರ್‌ಗಳು ಹಾಸನ ಜಿಲ್ಲೆಗೆ ಬಂದಿರುವುದಾಗಲೀ ಅಥವಾ ಇವುಗಳನ್ನು ಯಾವ ತಾಲ್ಲೂಕುಗಳಿಗೆ ಹಂಚಬೇಕೆಂದು ಸಲಹಾ ಸಮಿತಿಗೆ ತಿಳಿಸದೆ ತಮಗೆ ಮನಬಂದಂತೆ ಅಧ್ಯಕ್ಷರು ಹಾಗೂ ಜಿಲ್ಲಾ ವಕ್ಸ್ ಬೋರ್ಡ್ ಅಧಿಕಾರಿಯಾದ ಶ್ರೀಮತಿ ಜರೀನಾ ಬೇಗಂರವರು ತಾಲ್ಲೂಕಿನ ಹಳ್ಳಿಗಳಿಗೆ ಡೆತ್ ಫ್ರೀಜರ್‌ಗಳನ್ನು ಹಂಚಿಕೆ ಮಾಡಿರುತ್ತಾರೆ. ಇದರಲ್ಲಿ ಬಹಳಷ್ಟು ಭ್ರಷ್ಟಾಚಾರಗಳು ನಡೆದಿರುವ ಬಗ್ಗೆ ಅನುಮಾನ ಇದ್ದು ತಾಲ್ಲೂಕಿನ ಹೆಡ್ ಮಸೀದಿಗಳಿಗೆ ಹಂಚಬೇಕಾದ ಡೆತ್ ಫ್ರೀಜರ್‌ಗಳನ್ನು ಸಲಹ ಸಮಿತಿಗೆ ಗೊತ್ತಿಲ್ಲದೆ ಹಂಚಿರುವುದು ಭ್ರಷ್ಟಚಾರಕ್ಕೆ ಅನುವು ಮಾಡಿಕೊಟ್ಟಂತೆ ಆಗಿದೆ. ೨೬ ತಿಂಗಳು ಕಳೆದರೂ ಜಿಲ್ಲಾ ವಕ್ ಬೋರ್ಡ್‌ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿರುವುದಿಲ್ಲ.
ತಾಲ್ಲೂಕುವಾರು ಮಸೀದಿಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು ಆಯ್ಕೆ ಆಗಿರುವುದಿಲ್ಲ. ಸುಮಾರು ೧ಳಿ ವರ್ಷದಿಂದ ಅರ್ಜಿಯನ್ನು ಸಲ್ಲಿಸಿದ ಮಸೀದಿ ಅಧ್ಯಕ್ಷರುಗಳಿಗೆ ಅರ್ಜಿಯನ್ನು ವಿಲೇವಾರಿ ಮಾಡಿರುವುದಿಲ್ಲ ಹಾಗೂ ವಕ್ ಬೋರ್ಡಿನಿಂದ ಮಸೀದಿಗಳಿಗೆ ಯಾವುದೇ ಮಾಹಿತಿಯನ್ನು ಕೊಟ್ಟಿರುವುದಿಲ್ಲ. ಅಧಿಕಾರಿಯವರು ಸಬೂಬು ಹೇಳಿಕೊಂಡು ಮುಂದೂಡುತ್ತಿದ್ದಾರೆ. ಜಿಲ್ಲಾ ವಕ್ಸ್ ಬೋರ್ಡ್ ಅಧಿಕಾರಿ ಶ್ರೀಮತಿ ಜರೀನಾ ಬೇಗಂರವರು ಬಿ.ಪಿ.ಎಲ್ ಕಾರ್ಡ್ ಹೊಂದಿದ್ದು, ಜಿಲ್ಲಾ ವಕ್ಸ್ ಬೋರ್ಡ್‌ನಲ್ಲಿ ಸುಮಾರು ೩೦ ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರು ೨೦೧೨ ರಿಂದ ೨೦೨೪ರವರೆಗೆ ಪಡಿತರ ಪದಾರ್ಥಗಳನ್ನು ಪಡೆದು ರೂ. ೧,೩೫,೬೩೮ ರೂ.ಗಳ ದಂಡವನ್ನು ಸರ್ಕಾರಕ್ಕೆ ಪಾವತಿಸಿರುತ್ತಾರೆ. ಅಲ್ಲದೆ ಇವರು ೩೦ ವರ್ಷಗಳಿಂದ ಜಿಲ್ಲಾ ವಕ್ಸ್ ಬೋರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇಲ್ಲಿಯವರೆಗೆ ಏನೆಲ್ಲಾ ಭ್ರಷ್ಟಾಚಾರ ಮಾಡಿರುವ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ಕೋರಿಕೊಳ್ಳುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭೇರ್ ಅಹಮದ್, ಅನ್ಸರ್ ಪಾಷಾ, ಸಬ್ಬಿ, ಅಬ್ದೂಲ್ ರಫೀಕ್ ಇತರರು ಪಾಲ್ಗೊಂಡಿದ್ದರು.
-
Chamarajanagar20 hours ago
Hannur|ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಜಟಾಪಟಿ
-
Hassan22 hours ago
Hassan| ಕಾಡಾನೆ ದಾಳಿಗೆ ಕಾರ್ಮಿಕ ಬ*ಲಿ
-
State15 hours ago
ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ
-
Chamarajanagar11 hours ago
ಜ.23ರಂದು ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ
-
National - International14 hours ago
ಪನಾಮಾ ಕಾಲುವೆ ವಿವಾದ: ಟ್ರಂಪ್ ಹೇಳಿಕೆ ತಿರಸ್ಕರಿಸಿದ ಪನಾಮಾ ಅಧ್ಯಕ್ಷ ಜೋಸ್ ರೌಲ್
-
Hassan17 hours ago
ಕಾಡಾನೆ ದಾಳಿಯಿಂದ ವೃದ್ದ ಸಾ*ವು ಪ್ರಕರಣ
-
Kodagu11 hours ago
ಸಾರ್ವಜನಿಕರಿಗೆ ಪಂಗನಾಮ ಹಾಕಿದ್ದ ಫರ್ನೀಚರ್ ಅಂಗಡಿ ಮಾಲೀಕನ ಬಂಧನ
-
National - International12 hours ago
ರಾಜ್ಯದಲ್ಲಿ ಪ್ರತ್ಯೇಕ ಎರಡು ಕಡೆ ಅಪಘಾತ: ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ