Connect with us

Hassan

ಏ.20 2024 ರಂದು ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವ

Published

on

ಬೇಲೂರು : ಏ.20 2024 ರಂದು ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವ

ರಥೋತ್ಸವದಂದು ಮುಸ್ಲಿಂ ಖಾಜೊ ಸಾಹೇಬರಿಂದ ಕುರಾನ್ ಪಠಾಣಕ್ಕೆ ಅವಕಾಶ ನೀಡಿದಂತೆ ಒತ್ತಾಯ

ಬೇಲೂರು ಚನ್ನಕೇಶವ ಹಿತರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಕೆ

ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ ಬೇಲೂರು ಚನ್ನಕೇಶವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು

ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ, ಹೋಮ, ಹವನ ನಡೆಸಬೇಕು

ಶ್ರೀ ಚನ್ನಕೇಶವ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಡಿಯಲ್ಲಿ ಬರುತ್ತದೆ

ಮ್ಯಾನ್ಯುಯಲ್ ಕೈಪಿಡಿಯಲ್ಲಿ ರಥೋತ್ಸವದ ದಿನದಂದು ಮೇದೂರು ಖಾಜಿ ಸಾಹೇಬರ ಕುಟುಂಬದವರಿಗೆ ಮರ್ಯಾದೆ ಮತ್ತು ಧಾನ್ಯ ಕಾಣಿಕೆ ನೀಡಬೇಕು ಎಂದು ಉಲ್ಲೇಖ ಇದೆ

ಮ್ಯಾನ್ಯುಯಲ್ ಕೈಪಿಡಿಯಲ್ಲಿ ಎಲ್ಲೂ ಸಹ ರಥದ ಎದುರು ಕುರಾನ್ ಪಠಣ ಮಾಡಬೇಕು ಎಂದು ಉಲ್ಲೇಖ ಇರುವುದಿಲ್ಲ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಯಾವುದೇ ಅನ್ಯ ಧರ್ಮೀಯರ ಆಚರಣೆ, ಚಟುವಟಿಕೆ ಹಾಗೂ ಪಠಣ ಮಾಡಲು ಅವಕಾಶವಿಲ್ಲ.

 

Continue Reading
Click to comment

Leave a Reply

Your email address will not be published. Required fields are marked *

Hassan

ಗೋಸಾಗಾಟ ಕಾಯಿದೆ ತಿದ್ದುಪಡಿಗೆ ವಿರೋಧ: ನಾಳೆ ರಾಜ್ಯವ್ಯಾಪಿ ಪ್ರತಿಭಟನೆ-ಹಿಂದು ಸಂಘಟನೆಗಳ ಘೋಷಣೆ

Published

on

ಹಾಸನ: ಕಾಂಗ್ರೆಸ್ ಸರ್ಕಾರ ತರಲು ಮುಂದಾಗಿರುವ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ 2020ರ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿಂದು ಸಂಘಟನೆಗಳು, ನಾಳೆ ರಾಜ್ಯವ್ಯಾಪಿ ತಳಮಟ್ಟದ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಮಹಿಪಾಲ್ ಅವರು ತಿಳಿಸಿದರು.

ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ವಶಪಡಿಸುವ ವಾಹನಗಳನ್ನು ಬ್ಯಾಂಕ್ ಗ್ಯಾರಂಟಿ ಇಲ್ಲದೆ ಕೇವಲ ಇಂಡೆಮ್ನಿಟಿ ಬಾಂಡ್ ಮೇಲೆ ಬಿಡುಗಡೆ ಮಾಡುವಂತೆಯಾದ ಈ ತಿದ್ದುಪಡಿ ಗೋವಿನ ರಕ್ಷಣೆಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಅವರು ಆರೋಪಿಸಿದ್ದಾರೆ.


ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿ ಮಂಡನೆಯಾಗಬಹುದೆಂಬ ವರದಿ ಹಿನ್ನೆಲೆಯಲ್ಲಿ, ವಿಶ್ವ ಹಿಂದು ಪರಿಷತ್ ಹಾಗೂ ಹಿಂದು ಜಾಗರಣ ವೇದಿಕೆ ಸೇರಿ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ಈ ಕ್ರಮ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ.
ನಾಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಹಾಗೂ ಗ್ರಾಮ ಮಟ್ಟದಲ್ಲೂ ಶಾಂತ್ಯುತ ಪ್ರತಿಭಟನೆಗಳನ್ನು ಹಿಂದು ಸಂಘಟನೆಗಳು ನಡೆಸಲಿದ್ದು, ತಿದ್ದುಪಡಿಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗ ಕಾರ್ಯದರ್ಶಿ ಮಹಿಪಾಲ್, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಲೋಕೇಶ್, ವಿ.ಹಿಂ.ಪ ಹಾಸನ ಜಿಲ್ಲಾಧ್ಯಕ್ಷ ಅನುಪ್, ಜಿಲ್ಲಾ ಸಹಕಾರ್ಯದರ್ಶಿ ಮಂಜು, ಬೀಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿ.ಹಿಂ.ಪ ದಕ್ಷಿಣ ಪ್ರಾಂತ ಗೋರಕ್ಷಕ ವಿಕಾಸ್, ಬಜರಂಗದಳ ಜಿಲ್ಲಾ ಸಂಯೋಜಕ ಅಭಿಷೇಕ್ ಸೇರಿದಂತೆ ಘಟನೆಗೆ ಸಂಬಂಧಿಸಿದಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಾಳೆ ರಾಜ್ಯವ್ಯಾಪಿ ಪ್ರತಿಭಟನೆಗೊಳ್ಳುವ ನಿರ್ಧಾರವನ್ನು ಘೋಷಿಸಿದರು.

Continue Reading

Hassan

ಕರ್ನಾಟಕ ರತ್ನ ವಿಷ್ಣುವರ್ಧನ್ 75ನೇ ಅಮೃತ ಮಹೋತ್ಸವ:ಅನಿರುಧ್ ಪುಷ್ಪಾರ್ಚನೆ, ಅಭಿಮಾನಿಗಳಿಗೆ ಕೋಟಿಕೋಟಿ ನಮನ

Published

on

ಹಾಸನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಸರಸ್ವತಿ ದೇವಸ್ಥಾನ ವೃತ್ತದಲ್ಲಿರುವ ಕರ್ನಾಟಕ ರತ್ನ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ  75ನೇ ಅಮೃತ ಮಹೋತ್ಸವವನ್ನು ಸ್ಮರಿಸುವ ಕಾರ್ಯಕ್ರಮ ಭಾವಪೂರ್ಣವಾಗಿ ನಡೆಯಿತು.

ಅವರ ಪ್ರತಿಮೆಗೆ ನಟ ಅನಿರುದ್ದೀನ್ ಅವರು ಪುಷ್ಪಾರ್ಚನೆ ನೆರವೇರಿಸಿ, ದಿವಂಗತ ನಟನಿಗೆ ಗೌರವ ಸಲ್ಲಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅನಿರುದ್ದ್, ಅಭಿಮಾನಿಗಳ ಪ್ರೀತಿ ಏನಿದೆ ಎಂಬುದು ವಿಷ್ಣುವರ್ಧನ್ ಅಪ್ಪನಿಗೆ ಸಿಗುತ್ತಿರುವ ಅಮೋಘ ಗೌರವದಿಂದಲೇ ಕಾಣಿಸುತ್ತದೆ.

ದೈಹಿಕವಾಗಿ ನಮ್ಮನ್ನೆಲ್ಲಾ ಬಿಟ್ಟು 16 ವರ್ಷ ಕಳೆದರೂ, ಜನರ ಪ್ರೀತಿ ಕ್ಷಣವೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಅಸಿಮ ಪ್ರೀತಿಗೆ ಕುಟುಂಬದ ಪರವಾಗಿ ನಾನು ಕೋಟಿಕೋಟಿ ನಮನ ಸಲ್ಲಿಸುತ್ತೇನೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಅವರು ತಮ್ಮ ಕಲಾ ಪ್ರಯಾಣದ ಕುರಿತು ಮಾತನಾಡುತ್ತಾ, ಪ್ರಸ್ತುತ “ಸೂರ್ಯವಂಶ” ಧಾರವಾಹಿಯಲ್ಲಿ ನಟಿಸುತ್ತಿದ್ದು, ಸುಮಾರು 550 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎಂಜu ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೊತೆಗೆ ಬರವಣಿಗೆಯ ಮೇಲಿನ ಆಸಕ್ತಿ ಮುಂದುವರಿದಿದ್ದು, ಇತ್ತೀಚೆಗೆ “ಸಾಲುಗಳು” ಎಂಬ ಪುಸ್ತಕ ಬಿಡುಗಡೆಯಾಗಿದೆ. ಜನವರಿಯಲ್ಲಿ ಇದರ ಇಂಗ್ಲಿಷ್ ಆವೃತ್ತಿ ಸಹ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಒಂದು ಕಾದಂಬರಿಯ ಬರವಣಿಗೆ ಅಂತಿಮ ಹಂತದಲ್ಲಿದ್ದು, ಮುಂದಿನ ವರ್ಷವೇ ಅದನ್ನು ಲೋಕಾರ್ಪಣೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್, ಸಮಾಜಸೇವಕರಾದ ಗಣೇಶ್ ತಮ್ಲಾಪುರ, ವಿಜಯಕುಮಾರ್ ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

Continue Reading

Hassan

ಜೋಗಿಪುರ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟನೆ ವಿಚಾರವಾಗಿ: ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತರ ನಡುವೆ ಘರ್ಷಣೆ

Published

on

ವರದಿ: ದಯಾನಂದ ಶೆಟ್ಟಿಹಳ್ಳಿ

ಚನ್ನರಾಯಪಟ್ಟಣ: ಪಟ್ಟಣದ ಸಮೀಪ ಇರುವ ಜೋಗಿಪುರ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತರ ನಡುವೆ ಘರ್ಷಣೆ ನಡೆದಿದೆ.

ಈ ದಿನ ಜೋಗಿಪುರ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟನೆ ಮಾಡಲು ಶಾಸಕರು ಮುಂದಾದಾಗ ಗ್ರಾಮದ ಕಾಂಗ್ರೆಸ್ ಮುಖಂಡರು ತಡೆಹಿಡಿಯಲು ಪ್ರಯತ್ನಿಸಿದರು.

ಶಾಸಕರು ಸಮಾಧಾನ ಮಾಡಲು ಪ್ರಯತ್ನಿಸಿದಾಗ ಕಾಮಗಾರಿ ಪೂರ್ಣಗೊಂಡಿಲ್ಲ ಪೂರ್ಣಗೊಂಡಿರುವ ಇಲಾಖೆಯ ಪತ್ರ ಕೊಡಿ ಎಂದು ಹೇಳಿ ಜಬರ್ದಸ್ತ್ ಮಾಡುವ ಸಂದರ್ಭದಲ್ಲಿ.ನೂಕಾಟ ತಳ್ಳಾಟ ನಡೆದು ಕೊನೆಗೆ ಶಾಸಕರು ದೀಪ ಹಚ್ಚುವ ಮೂಲಕ ಉದ್ಘಾಟನೆ ನಡೆಸಿದರೆ.

ಕಾಂಗ್ರೆಸ್ ಮುಖಂಡರು ಉದ್ಘಾಟನಾ ಫಲಕವನ್ನು ಒಡೆದು ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಶಾಸಕರು ಉದ್ಘಾಟನೆ ನಂತರ ಶೌಚಾಲಯ ಹಾಗೂ ವಿದ್ಯುತ್ ಪಟ್ಟಿ ಅಳವಡಿಕೆ ಬಗ್ಗೆ ತಿಳಿಸಿದ್ದೀರಿ ಕೂಡಲೇ ಅದನ್ನು ನೆರವೇರಿಸಲಾಗುತ್ತದೆ ಇದು ದೇವೇಗೌಡರ ಅನುದಾನ ಹಾಗೂ ಶಾಸಕರ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದೆ ಎಂದರು.

ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುವ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಜೋಗಿಪುರದಲ್ಲಿ ಹಿಂದಿನಿಂದಲೂ ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಇದೇ ರೀತಿ ಘರ್ಷಣೆಗಳು ನಡೆಯುತ್ತಾ ಬಂದಿವೆ. ಕ

ಳೆದ ಐದು ವರ್ಷದ ಹಿಂದೆ ಹಾಲು ಉತ್ಪಾದಕರ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಕೂಡ ಕೈ ಕೈ ಮೇಲಾಯಿಸಿ ಘರ್ಷಣೆ ಮಾಡಿಕೊಂಡಿದ್ದರು ಎಂದು ಮಹಿಳೆಯರು ಗಲಾಟೆ ಮಾಡುತ್ತಿದ್ದವರಿಗೆ ಗ್ರಾಮದ ಅಭಿವೃದ್ಧಿಯನ್ನು ಯೋಚಿಸಿದೆ ಕಿತ್ತಾಡಿಕೊಂಡು ಗ್ರಾಮ ಹಿಂದುಳಿಯಲು ಕಾರಣರಾಗುತ್ತಿದ್ದಾರೆ ಎಂದು ಗಲಾಟೆ ನೇತೃತ್ವ ವಹಿಸುತ್ತಿದ್ದವರ ಮೇಲೆ ಹಿಡಿ ಶಾಪ ಹಾಕುತ್ತಾ ಗುಜುಗುಜು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂತು.

Continue Reading

Trending

error: Content is protected !!