Hassan
ಸಾಹಿತಿ ಭಾನುಮುಷ್ತಾಕ್ ರವರಿಗೆ ಬೂಕರ್ ಪ್ರಶಸ್ತಿ : ನಗರದಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಸಂಭ್ರಮ
ಹಾಸನ: ಎಲ್ಲಾರ ಜನಪರಗಳ ಕಾಳಜಿ ಇರುವ ಒಡನಾಡಿ, ಸಾಹಿತಿ, ವಕೀಲರು, ಶ್ರೀಮತಿ ಭಾನುಮುಷ್ತಾಕ್ ಅವರಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಗುರುವಾರದಂದು ಸಾರ್ವಜನಿಕ ಸಂಭ್ರಮ ಹಾಗೂ ಅಭಿನಂದನೆ ಸಲ್ಲಿಸುವುದಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಘೋಷಣೆ ಕೂಗಿ ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿದರು.

ಮೊದಲು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಹೂವಿನ ಮಳೆ ಕರೆದರು. ನಂತರ ಲೇಖಕಿ ಬಾನು ಮುಷ್ತಾಕ್ ಅವರ ೨೦೨೫ನೇ ಸಾಲಿನ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ ಗೆ ಬೂಕರ್ ಪ್ರಶಸ್ತಿ ಪಡೆದುಕೊಂಡಿದನ್ನು ಘೋಷಣೆ ಕೂಗುವುದರ ಮೂಲಕ ಸಂಭ್ರಮಿಸಿ ಸಿಹಿ ಹಂಚಿದರು.ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಮುಖಂಡ ಧರ್ಮೇಶ್ ಮಾತನಾಡಿ, ಭಾನುಮುಷ್ತಾಕ್ ಅವರ ಆರಂಭ ದಿನಗಳಿಂದಲೂ ಜನಪರ ಚಳುವಳಿಗಳು, ರೈತ ಚಳುವಳಿ, ದಲಿತ ಹಾಗೂ ಕಾರ್ಮಿಕ ಚಳುವಳಿಗಳ ಜೊತೆ ಸಂಬಂಧ ಇಟ್ಟುಕೊಂಡಂತವರು ಎಂದರು. ಸಾಮಾಜಿಕ ಒಡನಾಟವೇ ಅವರ ಸಾಹಿತ್ಯದಲ್ಲಿ ಸಾಮಾಜಿಕ ವಿಚಾರವನ್ನು ಹೆಚ್ಚು ಕೊಡುವುದಕ್ಕೆ ಸಹಕಾರಿ ಆಗಿದೆ. ಅವರಿಗೆ ಈಗ ಅಂತರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಒಂದು ರೀತಿಯ ಸಂಭ್ರಮ. ಅವರು ಇಲ್ಲಿಗೆ

ಬಂದ ನಂತರ ಸ್ವಾಗತಿಸಿ ನಾಗರೀಕ ಸನ್ಮಾನ ಮಾಡುವಂತಹ ಕಾರ್ಯಕ್ರಮ ಇರುತ್ತದೆ. ಹಾಸನದ ಹೆಸರನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಖ್ಯಾತಿ ಬಂದಿದೆ. ಈ ಬಗ್ಗೆ ವಿಶ್ವದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ದೀಪಬಸ್ತಿ ಮತ್ತು ಭಾನು ಮುಷ್ತಾಕ್ ಕನ್ನಡಕ್ಕೆ ಸಿಕ್ಕಿರುವ ಮೊದಲನೆ ಬುಕರ್ ಪ್ರಶಸ್ತಿ ಇದಾಗಿದೆ. ಇಂಡಿಯಕ್ಕೆ ಹಲವಾರು ಪ್ರಶಸ್ತಿ ಬಂದಿದೆ. ಜೊತೆಗೆ ಕನ್ನಡಿಗರು ತೆಗೆದುಕೊಂಡಿದ್ದಾರೆ ಈ ಪ್ರಶಸ್ತಿ. ಆದರೇ ಕನ್ನಡಕ್ಕೆ, ಕನ್ನಡ ಭಾಷೆ ಕೃತಿಗೆ ಸಿಕ್ಕಿರುವ ಒಂದು ಪ್ರಶಸ್ತಿ ಇದಾಗಿದೆ ಎಂದು ಶ್ಲಾಘಿಸಿದರು. ಇದೊಂದು ಬಹಳ ದೊಡ್ಡ ಸಾಧನೆ. ಇದನ್ನ ಇಡೀ ದೇಶ ಸಂಭ್ರಮಿಸುತ್ತಿದೆ. ಹಾಸ ಜಿಲ್ಲೆಯಲ್ಲೂ ಸಂಭ್ರಮಿಸುತ್ತಿದ್ಧೇವೆ. ಭಾನುಮುಷ್ತಾಕ್ ನಮ್ಮ ಜೊತೆ ಇದ್ದರೂ ನಮ್ಮ ಒಡನಾಡಿ ಎಂಬುದು ಹೆಮ್ಮೆಯಿದೆ. ಅವರ ಬರುವಿಕೆಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಆ ಸಂಭ್ರಮದ ಕ್ಷಣಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ಹಿರಿಯ ಸಾಹಿತಿ ರೂಪ ಹಾಸನ್ ಮಾತನಾಡಿ, ಇವತ್ತು ನಮ್ಮೆಲ್ಲರಿಗೂ ಹಾಸನದ ಜನರಿಗೆ ತುಂಬ ಸಂತೋಷದ ದಿನವಾಗಿದೆ. ಕಳೆದ ವರ್ಷ ಇದೆ ಸಂದರ್ಭದಲ್ಲಿ ಅತ್ಯಂತ ನೋವು ಸಂಕಟದ ವೇಳೆ ಹಾದು ಹೋಗಿರುವುದು ಎಲ್ಲಾರಿಗೂ ನೆನಪು ಇದೆ. ಅಂದು ಹಾಸನ ಬೇಡವಾದ ಕಾರಣಕ್ಕೆ ಪ್ರಸಿದ್ಧಿ ಪಡೆದಿತ್ತು. ಆದರೇ ಇವತ್ತು ನಿಜವಾಗಿ ಹಾಸನದ ಘನತೆ ಏನು? ಅದರ ಗೌರವ ಏನು? ಅದು ಎಷ್ಟು ಸಾಧನೆಯನ್ನು ಮಾಡಿದೆ ಬಗ್ಗೆ ತಿಳಿಸಿಕೊಡುವಂತಹ ವೇಳೆಗೆ ನಾವು ಭಾನುಮುಷ್ತಾಕ್ ಮತ್ತು ದೀಪ ಬಸ್ತಿ ಅವರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡು ನಮ್ಮೆಲ್ಲರಿಗೂ, ಕನ್ನಡಿಗರಿಗೂ ಹೆಮ್ಮೆಯನ್ನು ತಂದಿದ್ದಾರೆ ಎಂದರು. ಭಾನುಮುಷ್ತಾಕರು ಇಲ್ಲಿಗೆ ಬಂದ ನಂತರ ವಿಜೃಂಭಣೆಯಿಂದ ಆಚರಿಸುವ ಕೆಲಸ ಮಾಡೋಣ. ಈಗ ನಾವೆ ಫೇಸ್ ಬುಕ್, ಸೋಶಿಯಲ್ ಮಿಡಿಯದಲ್ಲಿ ಹಾಗೂ ವಾಟ್ಸಾಪ್ ನಲ್ಲಿ

ಹಂಚಿಕೊಳ್ಳುತ್ತಿದ್ದೇವು. ಅದರಲ್ಲೂ ಮಹಿಳೆಯರು, ಲೇಖಕಿಯರು ಎನ್ನುವುದು ನನಗೆ ತುಂಭ ಸಂತೋಷ ಕೊಡುವ ವಿಷಯ. ಒಬ್ಬ ಮುಸ್ಲಿಂ ಹೆಣ್ಣು ಮಗಳು ಹೊರಗೆ ಬಂದು ಇಷ್ಟೆಲ್ಲಾ ಸಾಧನೆ ಮಾಡುವುದು, ವಕೀಲೆ ವೃತ್ತಿಯಲ್ಲಿ ತೊಡಗುವಂತದು, ಸಾಮಾಜಿಕ ಹೋರಾಟದಲ್ಲಿ ಇರುವುದು ಎಲ್ಲಾವು ಅಪುರೂಪವಾದಂತಹ ಸಂದರ್ಭದಲ್ಲಿ ಇವತ್ತು ಭಾನುಮುಷ್ತಾಕ್ ಏರಿದಂತಹ ಎತ್ತರ ಎಲ್ಲಾ ಲೇಖಕಿಯರಿಗೂ ಸ್ಪೂರ್ತಿಯನ್ನು ಕೊಡುವ ವಿಷಯ ಎಂದು ಶ್ಲಾಘನೆವ್ಯಕ್ತಪಡಿಸಿದರು. ಪುರುಷ ಪ್ರಧಾನ ಸಮಾಜ ಧಾರ್ಮಿಕ ಮತಾಂದತೆ ಹೊಂದಿರುವ ಸಮಾಜದಲ್ಲಿ ಕೂಡ ಇನ್ನು ಹೆಣ್ಣು ಮಕ್ಕಳನ್ನು ಕೀಳಾಗೆ ನೋಡುತ್ತಿದ್ದು, ಅವರ ಸಾಧನೆಯನ್ನು ಕಡೆಗಣಿಸುವಂತಹ, ನಿರ್ಲಕ್ಷಿಸುವ ಈ ಸಂದರ್ಭದಲ್ಲಿ ಅತ್ಯಂತ ಎತ್ತರಕ್ಕೆ ಏರಿ ಸಾಭಿತುಪಡಿಸಿರುವುದಕ್ಕೆ ನಿಜವಾಗಿ ಭಾನುಮುಷ್ತಾಕ್ ಅವರನ್ನ ಅಭಿನಂಧಿಸಬೇಕು ಎಂದು ಹೇಳಿದರು. ಜೊತೆಗೆ ಅದನ್ನ ಅನುವಾಧಿಸಿದಂತಹ ದೀಪಬಸ್ತಿಯನ್ನು ಕೂಡ ನೆನಪಿಸಿಕೊಳ್ಳಲಾಗುವುದು. ಇನ್ನು ಹೆಚ್ಚಿನ ಸಾಧನೆಯನ್ನು ಇವರು ಮಾಡಲಿ. ಈ ಸಾಧನೆ ಒಬ್ಬರದಲ್ಲ. ಇಡೀ ಹಾಸನ, ಕನ್ನಡಿಗರು ಭಾರತಕ್ಕೆ ಸಂದಂತಹ ಗೌರವಾಗಿದೆ ಎಂದು ತಿಳಿಸಿದರು.

ಇದೆ ವೇಳೆ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಪತ್ರಕರ್ತರಾದ ನಾಗರಾಜು ಹೆತ್ತೂರ್, ಮಂಜು ಬನವಾಸೆ, ಚಲಂ. ಎಂ.ಜಿ. ಪೃಥ್ವಿ, ವೈದ್ಯೆ ರಂಗಲಕ್ಷ್ಮಿ, ಸಿ. ಸುವರ್ಣ, ಶಾಡ್ರಕ್, ಕೆ.ಟಿ. ಜಯಶ್ರೀ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಆರ್.ಪಿ.ಐ. ಸತೀಶ್, ಕೃಷ್ಣದಾಸ್, ಚಿನ್ನಸ್ವಾಮಿ ಮಹೇಶ್ ಇತರರು ಉಪಸ್ಥಿತರಿದ್ದರು.
Hassan
ಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಹಾಸನ: ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಶ್ರೀನಗರ ನಿವಾಸಿ ಆದಿಲ್ ಪಾಷಾ (29), ಅಂಬೇಡ್ಕರ್ ನಗರ ನಿವಾಸಿ ಮಹಮದ್ ಸಬ್ರಿಜ್ ಕಾಲು ಹಾಗೂ ಹಳೇಬೀಡು ತರಗಿನ ಪೇಟೆ ಗೋವಿಂದ (40) ಬಂಧಿತ ಆರೋಪಿಗಳು.

ಏನಿದು ಪ್ರಕರಣ-1?
ಫೆ. 3 ರಂದು ಹಾಸನದ ದೇವೇಗೌಡ ನಗರದ ಬಸ್ಸು ನಿಲ್ದಾಣದ ಹತ್ತಿರ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ತರುತ್ತಿದ್ದಾರೆಂದು ಹಾಸನ ನಗರ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆದಿಲ್ ಆದಿಲ್ ಪಾಷಾ ಹಾಗೂ ಮಹಮದ್ ಸಬ್ರಿಜ್ ಕಾಲುನನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1301 ಗ್ರಾಂ ತೂಕವುಳ್ಳ ಅಂದಾಜು ಬೆಲೆ 2,08,500 ರೂ. ಬೆಲೆಬಾಳುವ ಗಾಂಜಾಸೊಪ್ಪು ಹಾಗು ಒಂದು ಓಪೋ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಾಸನದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ 2:
ಹಗರೆ-ಹಳೇಬೀಡು ರಸ್ತೆ ಪುಷ್ಪಗಿರಿ ಬೆಟ್ಟದ ಹತ್ತಿರ ಬಂಡಾರಿಕಟ್ಟೆ ಬಸ್ ನಿಲ್ದಾಣದಲ್ಲಿ ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹಳೇಬೀಡು ಠಾಣೆ ಪೊಲೀಸರು ದಾಳಿ ನಡೆಸಿ ಬಸ್ ನಿಲ್ದಾಣದೊಳಗೆ ಕುಳಿತುಕೊಂಡಿದ್ದ ಹಳೇಬೀಡಿನ ನಯನ ಕ್ಷತ್ರಿಯ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ತರಗಿನಪೇಟೆ ನಿವಾಸಿ ಗೋವಿಂದನ ಬಳಿಯಿದ್ದ ೫೧೦ ಗ್ರಾಂ ತೂಕವುಳ್ಳ ಗಾಂಜಾ ಸೊಪ್ಪನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hassan
2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
ಬೆಂಗಳೂರು/ಹಾಸನ: ಎತ್ತಿನಹೊಳೆ ನೀರನ್ನು 2027ರ ಅಂತ್ಯದೊಳಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಏತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಲು ಈ ಮೂರು ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ ನೀಡುವುದೇ ಮುಖ್ಯ ಉದ್ದೇಶ. ಈ ಉದ್ದೇಶ ಈಡೇರಬೇಕಾದರೆ ಬಾಕಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಲಾಯಿತು.
ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಸಭೆಯಲ್ಲಿ ಕೋಲಾರ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಎಂಸಿ ಸುಧಾಕರ್ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ, “2027ರಲ್ಲಿ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ ಕುಡಿಯುವ ನೀರು ಹರಿಯುವುದನ್ನು ಖಚಿತಪಡಿಸುವಂತೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಲಾಯಿತು.

ಸಚಿವರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರಾದ ರಾಜೇಶ್ ಅಮ್ಮಿನಭಾವಿ ಹಾಗೂ 3 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಓಗಳು, ಎಸ್ಎಲ್ಓ ಗಳು ಉಪಸ್ಥಿತರಿದ್ದು ಸಂಬಂಧಿತ ಎಲ್ಲಾ ಅಧಿಕಾರಿಗಳಿಗೂ ಅಗತ್ಯ ಸೂಚನೆ ನೀಡಲಾಗಿದೆ.
ಪ್ರಮುಖವಾಗಿ ಎತ್ತಿನಹೊಳೆ ನೀರು ತುಮಕೂರು ಜಿಲ್ಲೆಯ ಗಡಿಯವರೆಗೆ ತರಲು ಕಾಮಗಾರಿ ಪ್ರಗತಿಯಲ್ಲಿದೆ. ಮುಂದೆ ದೊಡ್ಡಬಳ್ಳಾಪುರದಿಂದ ಕುಂದಾಣ ಮಾರ್ಗವಾಗಿ ಒಂದು ಪೈಪ್ ಲೈನ್ ಕೋಲಾರ ಹಾಗೂ ಬಂಗಾರಪೇಟೆ ಕಡೆಗೆ, ಮತ್ತೊಂದು ಪೈಪ್ ಲೈನ್ ಚಿಂತಾಮಣಿ ಶ್ರೀನಿವಾಸಪುರ ಮಾರ್ಗವಾಗಿ ಮುಳಬಾಗಿಲು ಕಡೆಗೆ ಅಳವಡಿಸಲು ಕೂಡಲೇ ಕಾಮಗಾರಿ ಆರಂಭಿಸಲು ಸಭೆಯಲ್ಲಿ ಸೂಚಿಸಲಾಯಿತು.

ಈ ಪೈಪ್ ಲೈನ್‌ಗಳು ಒಟ್ಟು 261.90 ಕಿ.ಮೀ. ದೂರು ಅಳವಡಿಸಬೇಕಿದೆ. ಪೈಪ್ ಲೈನ್ ಅಳವಡಿಸಲು ಅಗತ್ಯವಿರುವ ಭೂ ಸ್ವಾಧೀನವನ್ನು ಕೂಡಲೇ ಮಾಡಲು ಭೂ ಸ್ವಾಧೀನ ಅಧಿಕಾರಿಗಳಿಗೆ ಸೂಚಿಸಲಾಯಿತು. ಭೂ ಸ್ವಾಧೀನ ಆದೇಶ ಹೊರಡಿಸಿದ ಭಾಗದಲ್ಲಿ ಪೈಪ್ ಲೈನ್ ಅಳವಡಿಕೆಯನ್ನು ಕೂಡಲೇ ಆರಂಭಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮುಂದುವರೆದು, ಕುಡಿಯುವ ನೀರು ಒದಗಿಸಬೇಕಾದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೀರು ಶುದ್ದೀಕರಣ ಘಟಕ ಹಾಗೂ ಗ್ರಾಮಗಳಿಗೆ ನೀರು ತಲುಪಿಸುವ ಪೈಪ್ ಲೈನ್ಗಳನ್ನು ಅಳವಡಿಸಲು ಅಂದಾಜು ಪಟ್ಟಿ ಹಾಗೂ ಪ್ರಸ್ತಾವನೆಗಳನ್ನು ಕೂಡಲೇ ತಯಾರಿಸಿ ಅನುಮೋದನೆಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಒಟ್ಟಾರೆ 2027ರ ಅಂತ್ಯಕ್ಕೆ ನೀರನ್ನು ಈ ಮೂರೂ ಜಿಲ್ಲೆಗಳಿಗೆ ತಲುಪಿಸಲು ಮತ್ತು ನೀರನ್ನು ಶುದ್ದೀಕರಿಸಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಂಬಂಧಿತ ಎಲ್ಲಾ ಇಲಾಖೆಗಳು ಸಮನ್ವಯದಿಂದ ಮತ್ತು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಯಿತು.
Hassan
ವಿಧಾನಸೌಧದಲ್ಲಿ ಕಾರ್ಯಕಲಾಪ ವೀಕ್ಷಿಸಿದ ಎನ್.ಕೆ. ಗಣಪಯ್ಯ ಕಿವುಡ, ಮೂಗ ಮಕ್ಕಳ ರೋಟರಿ ಶಾಲೆಯ ವಿದ್ಯಾರ್ಥಿಗಳು
ಹಾಸನ: ಸಕಲೇಶಪುರದ ಕೌಡಹಳ್ಳಿಯಲ್ಲಿರುವ ಎನ್.ಕೆ. ಗಣಪಯ್ಯ ಕಿವುಡ ಮತ್ತು ಮೂಗ ಮಕ್ಕಳ ರೋಟರಿ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸದನದ ಕಾರ್ಯಕಲಾಪ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ ಸದನದ ವೀಕ್ಷಣೆಗೆ ಅನುವು ಮಾಡಿಕೊಟ್ಟರು.
-
Politics6 hours agoಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
-
Kodagu12 hours agoಕಾರೆಕೆರೆ ಕಾವಲು: 47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿಗೆ ಆಗ್ರಹ
-
Kodagu12 hours agoಕೋಮು ಸಾಮರಸ್ಯ ಮೂಡಿಸುವಲ್ಲಿ ಉರೂಸ್ ಕೊಡುಗೆ ಅಪಾರ
-
Hassan4 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Hassan9 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
National8 hours agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Chamarajanagar8 hours agoಬೆಳಗಿನ ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
-
Mysore8 hours agoಜಿಲ್ಲಾ ಪೊಲೀಸರಿಂದ ಗೋದಾಮು, ಕೈಗಾರಿಕಾ ಶೋಧ
