Hassan
ಹಾಸನ ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ದಿಶಾ ಸಭೆ
ಹಾಸನ : ಹಾಸನ ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ದಿಶಾ ಸಭೆ
ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸಂಸದ ಪ್ರಜ್ವಲ್‌ರೇವಣ್ಣ ಆಕ್ರೊಶ
ನ್ಯಾಫೆಡ್ ಖರೀದಿ ಕೇಂದ್ರದವರು ಫೋನ್ ಮಾಡಿದ ಕೂಡಲೇ ಏಕೆ ರಿಸರ್ವ್ ಪೊಲೀಸ್ ಕಳುಸ್ತಿರಾ
ಹಿಂದೆ ಮುಂದೆ ಯೋಚನೆ ಮಾಡಲ್ವಾ

ಅಲ್ಲಿ ಏನು ನಡೆತಿದೆ ಅಂತ ತಿಳಿದುಕೊಳ್ಳದೆ ಫೋನ್ ಬಂದ ತಕ್ಷಣ ರಿಸರ್ವ್ ಪೊಲೀಸ್ ಕಳುಸ್ತಿರಾ
ಇನ್ಮುಂದೆ ಯೋಚನೆ ಮಾಡಿ ಕಳುಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಸಂಸದ ಪ್ರಜ್ವಲ್‌ರೇವಣ್ಣ
ಅರಸೀಕೆರೆಯಲ್ಲಿ ಪೊಲೀಸರೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ
ನಾನು ಡಿವೈಎಸ್‌ಪಿ ಗಮನಕ್ಕೂ ತಂದಿದ್ದೇನೆ
ನಾನು ಸುಮ್ಮನೆ ಇದ್ದೇನೆ
ಅರಸೀಕೆರೆಯಲ್ಲಿ ಸಣ್ಣಪುಟ್ಟ ಸಮಾಜದವರು ಬದುಕುವ ಹಾಗೇ ಇಲ್ಲ

ಒಬ್ಬ ಶೇಖರ್ ಯಾದವ್ ಎಂಬುವವನ್ನು ಕರೆದುಕೊಂಡು ಬಂದು ಎರಡು ದಿನ ಸ್ಟೇಷನ್‌ನಲ್ಲಿ ಇಟ್ಕಂಡು ಪಿಟಿ ಕೇಸ್ ಹಾಕಿ ಒಡೆದು, ಚಚ್ಚಿದ್ದಾರೆ
ನಾನು ಗಲಾಟೆ ಮಾಡ್ತಿನಿ ಅಂದಾಗ ಬಿಟ್ಟು ಕಳುಹಿಸಿದ್ದಾರೆ
ಪೊಲೀಸರು ಜನಗಳ ರಕ್ಷಣೆಗೆ ಇರೋದು ಇಲ್ಲಾ ಜನಗಳಿಗೆ ಕಿರುಕುಳ ಕೊಡಲು ಇರೋದೊ
ಹಣದ ವ್ಯವಹಾರದ ವಿಚಾರಕ್ಕೆ ಕರೆದುಕೊಂಡು 353 ಕೇಸ್ ಮಾಡಿದ್ದಾರೆ
ಯಾರು ಅವರಿಗೆ ಈ ನಡೆದುಕೊಳ್ಳಲಿ ಅಧಿಕಾರ ಕೊಟ್ಟಿದ್ದು
ಅವನಿಗೆ ನಡೆಯಲು ಆಗದ ರೀತಿ ಒಡೆದಿದ್ದಾರೆ

ನಾನು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಕೂರುತ್ತೇನೆ ಎಂದ ಮೇಲೆ ಅವನಿಗೆ ಚಿಕಿತ್ಸೆ ಕೊಡಿಸಿದ್ದಾರೆ
ಇದು ಒಂದೇ ಅಲ್ಲ ಈ ರೀತಿ ಬಹಳ ನಡೆತಿದೆ
ಸಣ್ಣಪುಟ್ಟ ಸಮಾಜದವರು ಅರಸೀಕೆರೆ ಭಾಗದಲ್ಲಿ ಬದುಕಲು ಆಗುತ್ತಿಲ್ಲ
Hassan
ವಿಧಾನಸೌಧದಲ್ಲಿ ಕಾರ್ಯಕಲಾಪ ವೀಕ್ಷಿಸಿದ ಎನ್.ಕೆ. ಗಣಪಯ್ಯ ಕಿವುಡ, ಮೂಗ ಮಕ್ಕಳ ರೋಟರಿ ಶಾಲೆಯ ವಿದ್ಯಾರ್ಥಿಗಳು
ಹಾಸನ: ಸಕಲೇಶಪುರದ ಕೌಡಹಳ್ಳಿಯಲ್ಲಿರುವ ಎನ್.ಕೆ. ಗಣಪಯ್ಯ ಕಿವುಡ ಮತ್ತು ಮೂಗ ಮಕ್ಕಳ ರೋಟರಿ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸದನದ ಕಾರ್ಯಕಲಾಪ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ ಸದನದ ವೀಕ್ಷಣೆಗೆ ಅನುವು ಮಾಡಿಕೊಟ್ಟರು.
Hassan
ಹಾಸನ ಮಹಾನಗರ ಪಾಲಿಕೆ ವಾರ್ಡ್ ಪುನರ್ ವಿಂಗಡಣೆ: ಕರಡು ಪ್ರಕಟ
ಹಾಸನ: ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಪ್ರಕಾರ, 2011 ರ ಜನಗಣತಿ ಆಧಾರದ ಮೇರೆಗೆ ಹಾಸನ ಮಹಾನಗರ ಪಾಲಿಕೆಗೆ ವಾರ್ಡ್‌ಗಳನ್ನು ಪುನರ್ ವಿಂಗಡಣೆ ನಿಗದಿ ಪಡಿಸಿ ರಾಜ್ಯ ಸರ್ಕಾರ ಕರಡನ್ನು ಪ್ರಕಟಿಸಿದೆ.
ವಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ನಗರಸಭೆ ಅವಧಿಯಲ್ಲಿ ಇದ್ದಷ್ಟೇ ಅಂದರೆ 35 ವಾರ್ಡ್‌ಗಳೇ ಈಗಲೂ ಮುಂದುವರಿದಿವೆ.
ಆದರೆ ಹಾಸನ ಮಹಾನಗರ ಪಾಲಿಕೆಯಾದ ನಂತರ ಎಲ್ಲ 35 ವಾರ್ಡ್‌ಗಳ ವ್ಯಾಪ್ತಿ ಮತ್ತು ವಿಸ್ತೀರ್ಣ ಹಿಗ್ಗಿದೆ.

ಇದೀಗ ಆಯಾ ವಾರ್ಡ್‌ಗಳಿಗೆ ಸಂಬಂಧಿಸಿದ ಗಡಿ ವ್ಯಾಖ್ಯಾನ(ಚೆಕ್ಕುಬಂದಿ) ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಹಾಸನ ಮಹಾನಗರ ಪಾಲಿಕೆಯ ಕರಡು ವಾರ್ಡ್‌ವಾರು ಕ್ಷೇತ್ರ ಪುನರ್‌ವಿಂಗಡಣಾ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.

ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ೧೫ ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು, ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಹಾಸನ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕೆಂದು ಮಂಜುನಾಥ್ ಅವರು ಸೂಚಿಸಿದ್ದಾರೆ.
Hassan
ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್‌ಡಿಪಿಐ ಮುಖಂಡ
ಆಲೂರು: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆಂಚಮ್ಮನಹೊಸಕೋಟೆ ಗ್ರಾಮದಲ್ಲಿ ಯುವಕರ ಗುಂಪೊಂದು ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮುನೀರ್ ಹಲ್ಲೆಗೊಳಗಾದ ಎಸ್‌ಡಿಪಿಐ ಮುಖಂಡನಾಗಿದ್ದು ಭುವನೇಶ್ ಹಾಗೂ ಅಕ್ಷಯ್ ಹಲ್ಲೆ ನಡೆಸಿದ ಯುವಕರು.

ಇಂದು ಬೆಳಿಗ್ಗೆ ಕೆಂಚಮ್ಮನ ಹೊಸಕೋಟೆ ಗ್ರಾಮದಲ್ಲಿ ಹಾಸಿಗೆ ರಿಪೇರಿ ಮಾಡುವ ಕಾರ್ಮಿಕ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆತನನ್ನು ಅಡ್ಡಗಟ್ಟಿದ ಭುವನೇಶ್ ಹಾಗೂ ಅಕ್ಷಯ್ ಹಲ್ಲೆ ನಡೆಸುತ್ತಿದ್ದಾರೆ. ಇದನ್ನು ಕಂಡ ಮುನೀರ್ ಹಾಸಿಗೆ ರಿಪೇರಿ ಮಾಡುವವರ ರಕ್ಷಣೆಗೆ ಬಂದಿದ್ದು ಮುನೀರ್ ಮೇಲೂ ಭುವನೇಶ್ ಹಾಗೂ ಅಕ್ಷಯ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುನೀರ್ ಕೆಂಚಮ್ಮನ ಹೊಸಕೋಟೆ ಉಪಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದು ಅಲ್ಲಿ ಯಾರು ಇಲ್ಲದ ಕಾರಣ ಕಾಯುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದ ಭುವನೇಶ್ ಹಾಗೂ ಅಕ್ಷಯ್ ಉಪಪೊಲೀಸ್ ಠಾಣೆಯಿಂದ ಹೊರಗೆಳೆದು ಪುನಃ ಮುನೀರ್ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಮುನೀರ್ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಲೂರು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
-
National18 hours agoದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ದೇಶ ಬಿಟ್ಟು ತೊಲಗಿ: ವಾಟ್ಸಪ್ಗೆ ಸುಪ್ರೀಂ ಎಚ್ಚರಿಕೆ
-
Special21 hours agoಪೋಸ್ಟ್ ಆಫೀಸ್ ಉದ್ಯೋಗ ಅವಕಾಶ: ನೇರ ನೇಮಕಾತಿ
-
Hassan12 hours agoಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್‌ಡಿಪಿಐ ಮುಖಂಡ
-
Special12 hours agoಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ
-
Kodagu23 hours agoಹೂಡಿಕೆ ಹೆಸರಲ್ಲಿ ಸೈಬರ್ ವಂಚನೆ : 1.14 ಕೋಟಿ ರೂ. ಕಳೆದುಕೊಂಡ ಸಿದ್ದಾಪುರದ ವ್ಯಕ್ತಿ
-
State12 hours agoಕಮಿಷನ್ಗಾಗಿ ಡೀಲ್ ಆರೋಪದ ಆಡಿಯೋ ವೈರಲ್: ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಿ.ಜಗನ್ನಾಥ್ ಅಮಾನತು
-
Chamarajanagar15 hours agoಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು
-
Kodagu15 hours agoಯುವನಿಧಿ ಯೋಜನೆ: ಕೊಡಗು ಜಿಲ್ಲೆಯಲ್ಲಿ 2116 ಮಂದಿ ಹೆಸರು ನೋಂದಣಿ
