Mandya
ಫೆ.17 ರಂದು ‘ಡೈರೆಕ್ಟ್ ಆ್ಯಕ್ಷನ್’ ನಾಟಕ

ಮಂಡ್ಯ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಸಂಘಟನೆ ಮೂಲಕ ನಡೆಸಿದ ರೈತ ಚಳವಳಿಯ ಘಟನಾವಳಿ ಆಧಾರಿತ ‘ಡೈರೆಕ್ಟ್ ಆ್ಯಕ್ಷನ್’ ನಾಟಕದ 11ನೇ ಪ್ರದರ್ಶನವು ಫೆ.27 ಸಂಜೆ 6 ಗಂಟೆಗೆ ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿದೆ ಎಂದು ಭಾರತೀಯ ಮೆಡಿಕಲ್ ಕೌನ್ಸಿಲ್ ನಿರ್ದೇಶಕ ಡಾ.ಎಚ್.ಎನ್.ರವೀಂದ್ರ ಹೇಳಿದರು.
ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದ್ದು, ಪ್ರವೇಶವು ಎಲ್ಲರಿಗೂ ಉಚಿತ ಇರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ನಟರಾಜ್ ಹುಳಿಯಾರ್ ನಾಟಕ ರಚನೆ ಮಾಡಿದ್ದು, ಕಬ್ಬಡ್ಡಿ ನರೇಂದ್ರ ಬಾಬು ನಿರ್ದೆಶಿಸಿದ್ದಾರೆ. ಚಲನಚಿತ್ರ ನಟ ಸಂಪತ್ ಮೈತ್ರೇಯಾ ಪ್ರೊ.ಎಂಡಿಎನ್ ಪಾತ್ರ ನಿರ್ವಹಿಸುತ್ತಿದ್ದು, ಬೆಂಗಳೂರಿನ ನಗ್ನ ಥಿಯೇಟರ್ ತಂಡದ ಕಲಾವಿದರ ತಂಡ ನಾಟಕ ಪ್ರಸ್ತುತ ಪಡಿಸಲಿದೆ ಎಂದು ವಿವರಿಸಿದರು.
ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಪುತ್ರ ಪಚ್ಚೆ ನಂಜುಂಡಸ್ವಾಮಿ ಅವರು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಂಡ್ಯ ಜಿಲ್ಲಾ ಯುವ ಜನರು ಅದರಲ್ಲೂ ವಿದ್ಯಾರ್ಥಿ ನಾಯಕರು, ವಿವಿಧ ಸಂಘಟನೆಗಳ ಮುಖಂಡರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕ ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.
ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ, ಕರುನಾಡು ಸೇವಕರು ಸಂಘಟನೆಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮುಖಂಡರಾದ ಪಿ.ಕೆ.ನಾಗಣ್ಣ, ಮಂಜುನಾಥ್, ಸೋಮು ಸ್ವರ್ಣಸಂದ್ರ ಇದ್ದರು.
Mandya
ಪತ್ರಕರ್ತರಿಗೆ ಪರಿಹಾರದ ಚೆಕ್ ವಿತರಣೆ

ಮಂಡ್ಯ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಮಂಡ್ಯ ನಗರ ಸಭೆಯಲ್ಲಿ ಮೀಸಲಿರಿಸಿದ್ದ ಆರೋಗ್ಯ ಪರಿಹಾರ ನಿಧಿಯಿಂದ ಹಿರಿಯ ಪತ್ರಕರ್ತರಾದ ಬಸವರಾಜ್ ಹೆಗಡೆ ಹಾಗೂ ಶೇಷು ಅವರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ..ಎನ್.ನವೀನ್ ಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದ ಬಿ.ಪಿ ಪ್ರಕಾಶ್ ಅವರು, ಪರಿಹಾರದ ಚೆಕ್ ವಿತರಣೆ ಮಾಡಿ ಆರೋಗ್ಯ ವಿಚಾರಿಸಿದರು.
ಬಸವರಾಜ್ ಹೆಗಡೆ ಹಾಗೂ ಶೇಷು ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಜಿಲ್ಲಾ ಸಂಘದ ಮನವಿ ಮೇರೆಗೆ ನಗರ ಸಭೆ ತಲಾ ಹತ್ತು ಸಾವಿರದ ಪರಿಹಾರದ ಚೆಕ್ ಅನ್ನು ನೀಡಿದೆ.
Mandya
ಕರೀಘಟ್ಟ ದೇವರ ಕಾಡು ಅರಣ್ಯ ಪ್ರದೇಶಕ್ಕೆ ಬೆಂಕಿ: 25 ಎಕರೆ ಅರಣ್ಯ ಭಸ್ಮ

ಶ್ರೀರಂಗಪಟ್ಟಣ : ಕರೀಘಟ್ಟ ದೇವರ ಕಾಡು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸುಮಾರು 25 ಎಕರೆ ಪ್ರದೇಶದ ಅರಣ್ಯ ಭಸ್ಮವಾಗಿದೆ.
ತಾಲ್ಲೂಕಿನ ಗಣಂಗೂರು ಐಬಿ ಎದುರುಗಿನ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಅರಣ್ಯ ಪ್ರದೇಶದಲ್ಲಿನ ಮರ, ಗಿಡಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಹಾನಿಗೊಳಗಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸಿದ್ದಾರೆ.
Mandya
ಫೈನಾನ್ಸ್ ಕಿರುಕುಳದಿಂದ ಮೃತರಾದ ತಾಯಿ-ಮಗನ ಕುಟುಂಬ ಭೇಟಿಯಾದ ಆರ್.ಅಶೋಕ್

ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕಳಕ್ಕೆ ಬೇಸತ್ತು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡದ್ದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮ ಎಂಬವವರು ಉಜ್ಜೀವನ್ ಬ್ಯಾಂಕ್‌ನಲ್ಲಿ 6 ಲಕ್ಷ ಸಾಲ ಪಡೆದು, ಸಾಲ ತೀರಿಸಲಾಗದೆ ಬ್ಯಾಂಕ್ ಸಿಬ್ಬಂದಿಗಳ ಕಾಟದಿಂದ ಮನನೊಂದು ಜ.28 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ತಾಯಿ ಸಾವಿನಿಂದ ಮನನೊಂದ ಮಗ ರಂಜಿತ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಂದು (ಫೆ.6) ಗ್ರಾಮಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಜೊತೆಗೆ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಇಂಡವಾಳು ಸಚ್ಚಿದಾನಂದ ಮತ್ತಿತರರು ಸಾಥ್ ನೀಡಿದರು.
-
State13 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu10 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar10 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu10 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Kodagu14 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Hassan8 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ
-
Hassan9 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports11 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್