Connect with us

National - International

ಭಾರತಕ್ಕೆ ರಾಜತಾಂತ್ರಿಕ ಜಯ: ಫ್ಯಾಕ್ಟ್‌ಶೀಟ್‌ನಲ್ಲಿ ‘ದ್ವಿದಳ ಧಾನ್ಯಗಳು’ ಉಲ್ಲೇಖ ಕೈಬಿಟ್ಟ ಅಮೆರಿಕಾ..!

Published

on

ನವದೆಹಲಿ: ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತ–ಅಮೆರಿಕ ನಡುವಿನ ತಾತ್ಕಾಲಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವೈಟ್ ಹೌಸ್ ಪರಿಷ್ಕೃತ ಫ್ಯಾಕ್ಟ್ ಶೀಟ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೆಲವು ದ್ವಿದಳ ಧಾನ್ಯಗಳು ಎಂಬ ಉಲ್ಲೇಖವನ್ನು ಕೈಬಿಟ್ಟಿರುವುದು ಕಂಡು ಬಂದಿದೆ.

ಸೋಮವಾರ ಬಿಡುಗಡೆಗೊಂಡ ಮೊದಲ ಫ್ಯಾಕ್ಟ್‌ಶೀಟ್‌ನಲ್ಲಿ, ಭಾರತವು ಅಮೆರಿಕದ ಕೈಗಾರಿಕಾ ಉತ್ಪನ್ನಗಳು ಮತ್ತು ಕೆಲವು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವುದು ಅಥವಾ ರದ್ದುಪಡಿಸುವುದಾಗಿ ಹೇಳಲಾಗಿತ್ತು.

ಈ ಪಟ್ಟಿಯಲ್ಲಿ ಡ್ರೈಡ್ ಡಿಸ್ಟಿಲರ್ಸ್ ಗ್ರೇನ್ಸ್, ಕೆಂಪು ಜೋಳ, ಡ್ರೈಫ್ರೂಟ್ಸ್, ತಾಜಾ ಹಣ್ಣುಗಳು, ಕೆಲವು ಬೇಳೆಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಮದ್ಯಪಾನ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳು ಸೇರಿದ್ದವು.

ಭಾರತವು ಹೆಚ್ಚಿನ ಅಮೇರಿಕನ್ ಉತ್ಪನ್ನಗಳನ್ನು ಖರೀದಿಸಲು ಮತ್ತು 500 ಶತಕೋಟಿ USD ಗಿಂತ ಹೆಚ್ಚಿನ ಅಮೆರಿಕಾ ಇಂಧನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಉತ್ಪನ್ನಗಳನ್ನು ಖರೀದಿಸಲು “ಬದ್ಧವಾಗಿದೆ” ಹೇಳಲಾಗಿತ್ತು.

ಆದರೆ, ಮಂಗಳವಾರ ಬಿಡುಗಡೆಗೊಂಡ ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಲ್ಲಿ ಬೇಳೆಗಳು ಎಂಬ ಉಲ್ಲೇಖವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಜೊತೆಗೆ, ಮೊದಲ ಪಟ್ಟಿಯಲ್ಲಿ ಬಳಸಿದ್ದ “India is committed” (ಭಾರತ ಬದ್ಧವಾಗಿದೆ) ಎಂಬ ಪದವನ್ನು “India intends” (ಭಾರತ ಉದ್ದೇಶಿಸಿದೆ) ಎಂದು ಬದಲಾಯಿಸಿದೆ.

ಭಾರತವು ಅಮೇರಿಕಾದ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸಲು ಮತ್ತು 500 ಬಿಲಿಯನ್ ಯುಎಸ್ ಡಾಲರ್‌ಗಿಂತ ಹೆಚ್ಚಿನ ಅಮೆರಿಕಾದ ಇಂಧನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕಲ್ಲಿದ್ದಲು ಮತ್ತು ಇತರ ಉತ್ಪನ್ನಗಳನ್ನು ಖರೀದಿಸಲು ಉದ್ದೇಶಿಸಿದೆ ಎಂದು ಪರಿಷ್ಕೃತ ಫ್ಯಾಕ್ಟ್ ಶೀಟ್ ನಲ್ಲಿ ತಿಳಿಸಲಾಗಿದೆ.

ಸಂಯುಕ್ತ್ ಕಿಸಾನ್ ಮೋರ್ಚಾ (SKM), ಮತ್ತು ಅಖಿಲ ಭಾರತ ಕಿಸಾನ್ ಸಭಾ (AIKS) ಸೇರಿದಂತೆ ಹಲವಾರು ರೈತ ಸಂಘಟನೆಗಳು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದವನ್ನು ಟೀಕಿಸಿ ಫೆಬ್ರವರಿ 12ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಕೆ ಹಾಗೂ ಬದಲಾವಣೆಗಳು ಕಂಡು ಬಂದಿದೆ

 

National - International

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ವಿಮಾನ 10 ನಿಮಿಷ ಆಗಸದಲ್ಲಿ ಗಿರಕಿ: 2ನೇ ಪ್ರಯತ್ನದಲ್ಲಿ ಸೇಫ್ ಲ್ಯಾಂಡಿಂಗ್!

Published

on

ಲಕ್ನೋ: ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಮಂಗಳವಾರದಂದು, ಲಕ್ನೋ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಮೊದಲ ಲ್ಯಾಂಡಿಂಗ್ ಪ್ರಯತ್ನ ಸ್ಥಗಿತಗೊಳಿಸಿ ‘ಗೋ-ಅರೌಂಡ್’ ಮಾಡಿದ ಬಳಿಕ 2ನೇ ಪ್ರಯತ್ನದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ವರದಿಗಳು ತಿಳಿಸಿವೆ.

‘ಗೋ-ಅರೌಂಡ್’ ಎಂದರೆ ವಿಮಾನವು ಲ್ಯಾಂಡಿಂಗ್‌ ಆಗುವ ಮುನ್ನ ಇಳಿಯುವ ಪ್ರಕ್ರಿಯೆಯನ್ನ ಸ್ಥಗಿತಗೊಳಿಸಿ ಮತ್ತೆ ಮೇಲಕ್ಕೆ ಏರಿ, ಪರಿಸ್ಥಿತಿ ಅನುಕೂಲಕರವಾದ ನಂತರ ಮತ್ತೊಮ್ಮೆ ಲ್ಯಾಂಡಿಂಗ್‌ಗೆ ಪ್ರಯತ್ನಿಸುವ ಪ್ರಕ್ರಿಯೆ.

ದೆಹಲಿ–ಲಕ್ನೋ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ AI-1717 ಸಂಖ್ಯೆ ವಿಮಾನವು ಮಂಗಳವಾರ ಮಧ್ಯಾಹ್ನ ಸುಮಾರು 3.45ಕ್ಕೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯಲು ಮುಂದಾಗಿತ್ತು. ಆದ್ರೆ ಆ ವೇಳೆ ಬೀಸುತ್ತಿದ್ದ ಬಲವಾದ ಗಾಳಿಯ ಪರಿಸ್ಥಿತಿಯನ್ನ ವಿಮಾನದ ಸಿಬ್ಬಂದಿ ಪರಿಶೀಲಿಸಿ, ಮೊದಲ ಲ್ಯಾಂಡಿಂಗ್ ಪ್ರಯತ್ನ ಕೈಬಿಟ್ಟರು.ಸುಮಾರು 10 ನಿಮಿಷಗಳ ಬಳಿಕ, 3.55ಕ್ಕೆ ವಿಮಾನವು 2ನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ವಿಮಾನ ಲ್ಯಾಂಡ್ ಆದ ಬಳಿಕ ಎಲ್ಲಾ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ಸಾಮಾನ್ಯ ರೀತಿಯಲ್ಲಿ ವಿಮಾನದಿಂದ ಇಳಿದಿದ್ದಾರೆ. ಘಟನೆಯ ಕುರಿತು ಏರ್ ಇಂಡಿಯಾ ಸಂಸ್ಥೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

Continue Reading

National - International

ಅಮೇರಿಕದಲ್ಲಿ ‘ಅಕ್ಕ’ ರಜತ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

Published

on

ಫಿಲಿಡೆಲ್ಫಿಯಾ, ಸೆಪ್ಟೆಂಬರ್ 4: ಕನ್ನಡಿಗರ ಜಾಗತಿಕ ಒಗ್ಗಟ್ಟು, ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಸಂಭ್ರಮವನ್ನು ಸಾರುವ ‘ಅಕ್ಕ’ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು. ಅಮೆರಿಕದ ವಿವಿಧ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಿದ್ದು, ಫಿಲಿಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಶನ್ ಸೆಂಟರ್‌ನಲ್ಲಿ ಕನ್ನಡದ ಕಂಪು ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮೂರು ದಿನಗಳ ಕಾಲ ನಡೆಯಲಿರುವ ರಜತ ಮಹೋತ್ಸವದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಗೀತ, ಚಲನಚಿತ್ರ, ಸಂಸ್ಕೃತಿ, ಉದ್ಯಮ, ಶಿಕ್ಷಣ, ಯುವಜನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೇರು ಸಾಧಕರ ಹೆಸರಿನಲ್ಲಿ ಪ್ರಮುಖ ವೇದಿಕೆಗಳಿಗೆ ನಾಮಕರಣ
ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮೇರು ಸಾಧಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸಮ್ಮೇಳನದ ಪ್ರಮುಖ ವೇದಿಕೆಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಸಮ್ಮೇಳನದ ಮುಖ್ಯ ಸಾಂಸ್ಕೃತಿಕ ವೇದಿಕೆಗೆ ‘ಡಾ. ಪುನೀತ್ ರಾಜ್‌ಕುಮಾರ್ ವೇದಿಕೆ’, ಮತ್ತೊಂದು ವೇದಿಕೆಗೆ ‘ಎಸ್. ಜಾನಕಿ ವೇದಿಕೆ’, ‘ಸಾಲುಮರದ ತಿಮ್ಮಕ್ಕ ವೇದಿಕೆ’ ಹಾಗೂ ಕಿರುಚಿತ್ರೋತ್ಸವ ನಡೆಯುವ ಸಭಾಂಗಣಕ್ಕೆ ‘ಶಂಕರ್ ನಾಗ್ ವೇದಿಕೆ’ ಎಂದು ಹೆಸರಿಡಲಾಗಿದೆ. ಕನ್ನಡದ ಹೆಮ್ಮೆಯ ಸಾಧಕರನ್ನು ಸ್ಮರಿಸುವುದರ ಜೊತೆಗೆ ಅವರ ಸಾಧನೆ, ಸೇವೆ ಮತ್ತು ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇದಾಗಿದೆ.

ಯುವಜನತೆ ಮತ್ತು ವೃತ್ತಿಪರರಿಗೆ ವಿಶೇಷ ಆದ್ಯತೆ
ವಿದೇಶಗಳಲ್ಲಿ ಬೆಳೆಯುತ್ತಿರುವ ಎರಡನೇ ತಲೆಮಾರಿನ ಯುವ ಕನ್ನಡಿಗರನ್ನು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ವೃತ್ತಿಪರ ಜಗತ್ತಿನೊಂದಿಗೆ ಮತ್ತಷ್ಟು ಬೆಸೆಯುವ ಉದ್ದೇಶದಿಂದ ಈ ಬಾರಿಯ ಸಮ್ಮೇಳನದಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಾಮಾಜಿಕ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಡಿಜಿಟಲ್ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಯುವ ತಂತ್ರಜ್ಞರಿಗಾಗಿ ‘ಹ್ಯಾಕ್4ಗುಡ್’ ಹ್ಯಾಕಥಾನ್ ಆಯೋಜಿಸಲಾಗಿದೆ. ಉನ್ನತ ಶಿಕ್ಷಣ, ಕಾರ್ಪೊರೇಟ್ ಉದ್ಯೋಗಾವಕಾಶಗಳು ಹಾಗೂ ವೃತ್ತಿಜೀವನದ ಮಾರ್ಗದರ್ಶನಕ್ಕಾಗಿ ‘ಅಕ್ಕ ಕೆರಿಯರ್ ಕನೆಕ್ಟ್’ ಕಾರ್ಯಕ್ರಮ ನಡೆಯಲಿದೆ. ಯುವಜನರಿಗೆ ತಮ್ಮ ವೃತ್ತಿಜೀವನದ ಅವಕಾಶಗಳನ್ನು ಅರಿತುಕೊಳ್ಳಲು ಹಾಗೂ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂವಾದ ನಡೆಸಲು ಇದು ವೇದಿಕೆಯಾಗಲಿದೆ.
ವ್ಯಾಪಾರ, ಉದ್ಯಮ ಮತ್ತು ಹೂಡಿಕೆಗೆ ‘ಸಿರಿಪೇಟೆ’
ಅಕ್ಕ ರಜತ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ‘ಸಿರಿಪೇಟೆ’ಯನ್ನು ಕೇವಲ ಮನರಂಜನೆ ಅಥವಾ ಖರೀದಿ ಕಾರ್ಯಕ್ರಮವನ್ನಾಗಿ ರೂಪಿಸದೆ, ವ್ಯಾಪಾರ, ವೃತ್ತಿಪರ ಸೇವೆ, ಶಿಕ್ಷಣ, ಹಣಕಾಸು, ನವೀನತೆ ಹಾಗೂ ಸಮುದಾಯ ಸೇವೆಗಳ ಪರಿಚಯಕ್ಕೂ ವೇದಿಕೆಯಾಗಿ ರೂಪಿಸಲಾಗಿದೆ. ಈ ಬಾರಿ 60ಕ್ಕೂ ಹೆಚ್ಚು ವ್ಯಾಪಾರಿಗಳು, ಉದ್ಯಮಿಗಳು, ವೃತ್ತಿಪರರು, ಸಂಸ್ಥೆಗಳು ಮತ್ತು ಸೇವಾ ಪೂರೈಕೆದಾರರು ಸಿರಿಪೇಟೆಯಲ್ಲಿ ಭಾಗವಹಿಸುತ್ತಿದ್ದಾರೆ. ‘ಸಿರಿಪೇಟೆ’ ಹೆಸರಿನ ವಿಶೇಷ ವಸ್ತುಪ್ರದರ್ಶನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು . ಮೈಸೂರು ಅರಮನೆಯ ಪರಂಪರೆ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ವೈವಿಧ್ಯವನ್ನು ಅಮೆರಿಕದ ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನಕ್ಕೆ ‘ಸಿರಿಪೇಟೆ’ ವಿಶೇಷ ವೇದಿಕೆಯಾಗಿದೆ.
ಕನ್ನಡಿಗರಿಗೆ ವಿವಿಧ ಖಾದ್ಯಗಳ ರಸದೌತಣ
ಸಿರಿಪೇಟೆಯಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಾಂಪ್ರದಾಯಿಕ ಖಾದ್ಯಗಳು ಸೇರಿದಂತೆ ಬಗೆಬಗೆಯ ಆಹಾರ ಪದಾರ್ಥಗಳನ್ನು ಕನ್ನಡಿಗರಿಗೆ ಸವಿಯಲು ಅವಕಾಶ ಕಲ್ಪಿಸಲಾಗಿದೆ.
ಅಮೆರಿಕದ ವಿವಿಧ ನಗರಗಳಿಂದ ಆಗಮಿಸಿರುವ ಕನ್ನಡಿಗರು ಕುಟುಂಬ ಸಮೇತರಾಗಿ ಸಿರಿಪೇಟೆಗೆ ಭೇಟಿ ನೀಡಿ ವಿವಿಧ ಆಹಾರ ಪದಾರ್ಥಗಳನ್ನು ಸವಿಯುವುದರ ಜೊತೆಗೆ, ಉದ್ಯಮ ಮತ್ತು ವ್ಯಾಪಾರ ಮಳಿಗೆಗಳನ್ನೂ ವೀಕ್ಷಿಸುತ್ತಿದ್ದಾರೆ.
ಕನ್ನಡ ಕಲಾ-ಸಾಂಸ್ಕೃತಿಕ ವೈಭವ
ಸಮ್ಮೇಳನದಲ್ಲಿ ಕನ್ನಡದ ಕಲೆ, ಸಂಗೀತ, ಚಲನಚಿತ್ರ ಹಾಗೂ ಸಾಂಸ್ಕೃತಿಕ ವೈವಿಧ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ಗಾಯನ ಪ್ರತಿಭೆಗಳಿಗೆ ಜಾಗತಿಕ ವೇದಿಕೆ ಕಲ್ಪಿಸುವ ‘ಅಕ್ಕ ಐಡಲ್ 2026’ ಸ್ಪರ್ಧೆ ಪ್ರಮುಖ ಆಕರ್ಷಣೆಯಾಗಲಿದೆ. ಇದರೊಂದಿಗೆ ದೇಶ-ವಿದೇಶದ ಪ್ರತಿಭಾವಂತ ನಿರ್ದೇಶಕರ ಕಿರುಚಿತ್ರಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ ನಡೆಯಲಿದ್ದು, 20ಕ್ಕೂ ಹೆಚ್ಚು ಆಯ್ದ ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ಮಹಿಳಾ ಸಬಲೀಕರಣ ಗೋಷ್ಠಿಗಳು, ಯುವಜನರ ಸಂವಾದಗಳು ಸೇರಿದಂತೆ ವಿವಿಧ ವಿಚಾರಗೋಷ್ಠಿಗಳು ಸಮ್ಮೇಳನದ ಭಾಗವಾಗಿವೆ.
ವೈದ್ಯಕೀಯ ಕ್ಷೇತ್ರಕ್ಕೂ ವಿಶೇಷ ವೇದಿಕೆ
ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಭಾರತೀಯ ವೈದ್ಯರು ಮತ್ತು ದಂತವೈದ್ಯರನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಮೆಡಿಕಲ್ ಮತ್ತು ಡೆಂಟಲ್ CME ಸಮಾವೇಶಗಳು ಆಯೋಜಿಸಲಾಗಿದೆ.
ವೈದ್ಯಕೀಯ ಕ್ಷೇತ್ರದ ಹೊಸ ಬೆಳವಣಿಗೆಗಳು, ಜ್ಞಾನ ವಿನಿಮಯ ಹಾಗೂ ವೃತ್ತಿಪರ ನೆಟ್‌ವರ್ಕಿಂಗ್‌ಗೆ ಈ ಸಮಾವೇಶಗಳು ಅವಕಾಶ ಕಲ್ಪಿಸಲಿವೆ.
ಭಾರತದಿಂದ ಗಣ್ಯರ ಆಗಮನ
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಭಾರತದಿಂದ ಹಲವು ಗಣ್ಯರು ಫಿಲಿಡೆಲ್ಫಿಯಾಗೆ ಆಗಮಿಸಿದ್ದಾರೆ. ಅಕ್ಕದ ಸ್ವಾಗತ ಸಮಿತಿಯ ಸದಸ್ಯರು ಗಣ್ಯರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಮೈಸೂರು ರಾಜವಂಶಸ್ಥರು ಹಾಗೂ ಮೈಸೂರಿನ ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಚಲನಚಿತ್ರ ನಟ ನಟಿಯರು , ವಚನ ಸಾಹಿತ್ಯಕಾರರು, ಹಿರಿಯ ಪತ್ರಕರ್ತರು, ಗಾಯಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

(ಮಧು ರಂಗಯ್ಯ, ಅಧ್ಯಕ್ಷರು , ಅಕ್ಕ)
ಸಭಾಂಗಣದ ಅಲಂಕಾರ, ಭೋಜನ ವ್ಯವಸ್ಥೆ, ನೋಂದಣಿ, ಅತಿಥಿಗಳ ವಸತಿ ಸೇರಿದಂತೆ ಸಮ್ಮೇಳನಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜೊತೆಗೆ, ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಉದ್ದೇಶದೊಂದಿಗೆ ‘ಅಕ್ಕ’ ರಜತ ಮಹೋತ್ಸವ ನಡೆಯುತ್ತಿದ್ದು, ಅಮೆರಿಕದ ನೆಲದಲ್ಲಿ ಕರ್ನಾಟಕದ ಸಾಂಸ್ಕೃತಿಕ ವೈಭವ, ಕನ್ನಡದ ಕಂಪು ಮತ್ತು ಕನ್ನಡಿಗರ ಒಗ್ಗಟ್ಟು ಅನಾವರಣಗೊಳ್ಳುತ್ತಿದೆ.

Continue Reading

National - International

ಅಮೆರಿಕದ ಅಧಿಪತ್ಯಕ್ಕೆ ಒಳಪಟ್ಟಿತೇ ವೆನೆಜುವೆಲಾ ತೈಲ ಸಂಪತ್ತು? ಟ್ರಂಪ್ ಮಹತ್ವದ ಹೇಳಿಕೆ

Published

on

ವಾಷಿಂಗ್ಟನ್: ಅಮೆರಿಕವು ವೆನೆಜುವೆಲಾದೊಂದಿಗೆ  ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ವೆನೆಜುವೆಲಾದ 65 ಶತಕೋಟಿ ಬ್ಯಾರಲ್‌ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ಹಿಡಿತ ಸಾಧಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಹೇಳಿದರು.

ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲರ್‌ ಮಡುರೊ ಅವರ ಸರ್ಕಾರವನ್ನು ಅಮೆರಿಕ ಉರುಳಿದ ಬಹುದಿನಗಳ ನಂತರ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ.

ಈ ಮಹತ್ವದ ಒಪ್ಪಂದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಹಾಗೂ ಈ ಒಪ್ಪಂದವು (Oil Deal) ಉಭಯ ದೇಶಗಳ ನಡುವಿನ ಸಂಬಂಧವನ್ನ ಮತ್ತಷ್ಟು ಬಲಪಡಿಸಲಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಈ ಐತಿಹಾಸಿಕ ಒಪ್ಪಂದ ಅಮೆರಿಕದ ತೈಲ ನಿಕ್ಷೇಪಗಳ ಸಾಮರ್ಥ್ಯವನ್ನ ದ್ವಿಗುಣಗೊಳಿಸಲಿದೆ, ನಮ್ಮ ತೈಲ ಪೂರೈಕೆ ಗಣನೀಯವಾಗಿ ಹೆಚ್ಚಿಸುವ ಜೊತೆಗೆ ಭವಿಷ್ಯದಲ್ಲಿ ಪ್ರತಿಯೊಬ್ಬ ಅಮೆರಿಕನ್ನರಿಗೆ ಕಡಿಮೆ ಬೆಲೆಯಲ್ಲಿ ತೈಲ ಮತ್ತು ಅನಿಲ ದೊರಕಿಸಿಕೊಡಲು ಸಹಾಯ ಮಾಡುತ್ತದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ವೆನೆಜುವೆಲಾವನ್ನು ಸಮೃದ್ಧಿಯತ್ತ ಸಾಗಿಸಲು ಸಹಾಯ ಮಾಡುತ್ತದೆ ಎಂದು ಟ್ರಂಪ್‌ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ವೆನೆಜುವೆಲಾದೊಂದಿಗಿನ ನಮ್ಮ ಒಪ್ಪಂದವು ವಿಶ್ವ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ತೈಲ ಒಪ್ಪಂದವಾಗಿದೆ ಎಂದು ಅವರು ಪುನರುಚ್ಛರಿಸಿದ್ದಾರೆ.

ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳಲ್ಲಿ ಒಂದಾಗಿದೆ. ಯುಎಸ್ ಇಂಧನ ಮಾಹಿತಿ ಆಡಳಿತದ ಅಂದಾಜಿನ ಪ್ರಕಾರ, ದಕ್ಷಿಣ ಅಮೆರಿಕಾದ ದೇಶವು ಸುಮಾರು 303 ಶತಕೋಟಿ ಬ್ಯಾರೆಲ್ ಕಚ್ಚಾ ತೈಲ ಹೊಂದಿದೆ. ಇದು ವಿಶ್ವದ ಒಟ್ಟು ಪೂರೈಕೆಯ ಸರಿಸುಮಾರು ಶೇ.17 ರಷ್ಟಿದೆ. ಇದರ ತೈಲ ನಿಕ್ಷೇಪಗಳನ್ನು ಸಹ ನಕ್ಷೆ ಮಾಡಲಾಗಿದೆ. ಆದರೆ ಕಳಪೆ ಮೂಲಸೌಕರ್ಯದಿಂದಾಗಿ ವೆನೆಜುವೆಲಾ ವಿಶ್ವದ ತೈಲದ ಸುಮಾರು ಶೇ.1 ರಷ್ಟು ಮಾತ್ರ ಉತ್ಪಾದಿಸುತ್ತದೆ. ಇದೀಗ ಹೊಸ ಒಪ್ಪಂದಗಳ ಅಡಿಯಲ್ಲಿ ಅಮೆರಿಕವು ವೆನೆಜುವೆಲಾ ತೈಲ ನಿಕ್ಷೇಪಗಳನ್ನ ಅಭಿವೃದ್ಧಿಪಡಿಸಲು ಅವಕಾಶ ನೀಡಲಿದ್ದು, ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪಾಲನ್ನು ಅಮೆರಿಕ ಪಡೆಯಲಿದೆ ಎಂದು ತಿಳಿದುಬಂದಿದೆ.

Continue Reading

Trending

error: Content is protected !!