Connect with us

Chamarajanagar

ಧರ್ಶ್ ಸ್ಕೂಲ್ ಆಫ್ ಎಕ್ಸೆಲೆನ್ಸ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜನೆ

Published

on

ಹನೂರು : ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕವಾಗುತ್ತದೆ. ಈ ನಿಟ್ಟಿನಲ್ಲಿ ಧರ್ಶ್ ಸಂಸ್ಥೆಯು ಆಯೋಜನೆ ಮಾಡಿರುವ ವಸ್ತು ಪ್ರದರ್ಶನ ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ಉತ್ತಮ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಶಿವರಾಜು ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಧರ್ಶ್ ಸ್ಕೂಲ್ ಆಫ್ ಎಕ್ಸೆಲೆನ್ಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಕಾಗಾದು. ಜತೆಗೆ ಜ್ಞಾನದ ಅವಶ್ಯಕತೆ ಜೊತೆಗೆ ಇಂಥ ವಸ್ತು ಪ್ರದರ್ಶನ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳು ಕೇವಲ ಪುಸ್ತಕದ ಹುಳುಗಳಾದರೆ ಪ್ರಯೋಜನವಿಲ್ಲ. ಜ್ಞಾನಕ್ಕೂ ವಿಸ್ತರಿಸಿದಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಎಂಬುದಕ್ಕೆ ಈ ವಸ್ತು ಪ್ರದರ್ಶನ ಸಾಕ್ಷಿಯಾಗಿದೆ, ಜಾಗತೀಕರಣದ ಸಂಭ್ರಮದಲ್ಲಿ ತಂತ್ರಜ್ಞಾನದ ವಿಜಯ ಪತಾಕೆ ಹಿಡಿದು ನಿಂತವರು ನಾವು, ತಾಂತ್ರಿಕ ಶಿಕ್ಷಣದಲ್ಲಿಂದು ಜಗತ್ತು ಬೆರಗಾಗುವಂತೆ ಮುನ್ನಡೆದವರು ನಾವು, ಚಂದ್ರಯಾನ ೩ ಯಶಸ್ಸಿನಿಂದ ಭಾರತ ವಿಜ್ಞಾನದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ನಿತ್ಯ ಜೀವನಕ್ಕೆ ಬೇಕಾದಂತಹ ಮೂಲಭೂತ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸಾಮಾಜಿಕ ಪರಿಸರವನ್ನು ರಕ್ಷಿಸುವ ಕಾಳಜಿಯನ್ನು ಈ ವಸ್ತು ಪ್ರದರ್ಶನ ಉಂಟುಮಾಡಿದೆ. ಪಠ್ಯ ವಸ್ತುವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಇಂತಹ ವಸ್ತು ಪ್ರದರ್ಶನಗಳು ಸಹಕಾರಿಯಾಗುತ್ತದೆ ವಿದ್ಯಾರ್ಥಿಗಳ ಸಂವಹನ ಕೌಶಲ್ಯ ಭಾಷಾ ಪ್ರೌಢಿಮೆ ಇಂತಹ ವಸ್ತು ಪ್ರದರ್ಶನದ ಮೂಲಕ ಬಹಳಷ್ಟು ಗಟ್ಟಿಗೊಳ್ಳುತ್ತದೆ ಪೋಷಕರು ಮತ್ತು ಸಮಾಜದ ಸ್ಪಂದನೆ ಮೆಚ್ಚುಗೆ ಪಡೆಯಿತು.

ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರೀತಿಯಲ್ಲಿ ಪುಟಾಣಿ ಮಕ್ಕಳು ಭಗವದ್ಗೀತೆಯ ಶ್ಲೋಕಗಳನ್ನು ಹೇಳಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೆಚ್ಚುಗೆ ಪಾತ್ರವಾಯಿತು.

ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಜಲ ಚಕ್ರ, ಸ್ವಚ್ ಭಾರತ್, ಮಳೆನೀರಿನ ಕೊಯ್ಲು, ಚಂದ್ರಯಾನ, ಜ್ವಲಾಮುಖಿ, ಆಹಾರ ಪಿರಮಿಡ್ ಜಲ, ವಾಯು, ಶಬ್ದ ಮಾಲಿನ್ಯ, ಸೇವ್ ಅರ್ಥ್. ಸಮುದಾಯ (ಗ್ರಾಮೀಣ, ನಗರ, ಅರಣ್ಯ ). ಪ್ರಾಣಿ ಆವಾಸಗಳು ಇನ್ನು ಹತ್ತು ಹಲವಾರು ವಸ್ತು ಪ್ರದರ್ಶನ ಮತ್ತು ಪ್ರಯೋಗಗಳನ್ನು ಪ್ರದರ್ಶನ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್, ಜಿಲ್ಲಾ ಕರ್ನಾಟಕ ಸರ್ಕಾರ ಸಹ ಶಿಕ್ಷಕರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಇಸಿಓಗಳಾದ ಚಿನ್ನಪ್ಪಯ್ಯ, ಕಿರಣ್, ಕಂದವೇಲು, ಸಿ.ಆರ್.ಪಿ ದೇವರಾಜು, ಶಾಲೆಯ ಮುಖ್ಯಸ್ಥರಾದ ವೆಂಕಟರಣನಾಯ್ಡು, ಶ್ರೀನಿವಾಸ್, ಚಂದನ, ಶಿಕ್ಷಕರಾದ ಶ್ರೀಧರ್, ಸಹ ಶಿಕ್ಷಕರುಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಗುಂಡ್ಲುಪೇಟೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ

Published

on

ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣೆಗೆ ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ ಈ ಹಿಂದೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಪರಶಿವಮೂರ್ತಿ ಅವರಿಗೆ ಡಿವೈಎಸ್ಪಿ ಆಗಿ ಮುಂಬಡ್ತಿ ಹೊಂದಿದ ಹಿನ್ನೆಲೆ ಅವರ ಜಾಗಕ್ಕೆ ಜಯಕುಮಾರ್ ಅವರನ್ನು ನೇಮಿಸಲಾಗಿದೆ.

ಅಧಿಕಾರವಹಿಸಿಕೊಂಡ ಜಯಕುಮಾರ್ ಅವರನ್ನು ಸ್ವಾಗತ ಕೋರಿದ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು

Continue Reading

Chamarajanagar

ಗುಂಬಳ್ಳಿಯ ನೀರಿನ ಟ್ಯಾಂಗ್‌ ಸ್ವಚ್ಛಗೊಳಿಸಿದ ಗ್ರಾಮ ಪಂಚಾಯಿತಿ

Published

on

ಯಳಂದೂರು ಮಾರ್ಚ್ 27

ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇದ್ದ ನೀರಿನ ಟ್ಯಾಂಕನ್ನು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೊಳಿಸಲಾಯಿತು.

ಕಳೆದ ಕೆಲವು ದಿನಗಳಿಂದ ಕುಡುಕರ ಹಾವಳಿ ಮಿತಿಮೀರಿ ಮಧ್ಯದ ಪಾಕೆಟ್ ಗಳು ಸೇರಿದಂತೆ ನೀರಿನ ತೊಂಬೆ ಸುತ್ತಮುತ್ತ ಅಶುಚಿತ್ವ ತಾಂಡವ ಆಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕೂಡಲೇ ಪೌರಕಾರ್ಮಿಕರ ಜೊತೆಗೆ ಶುಚಿತ್ವಕ್ಕೆ ಮುಂದಾದರು. ಇದರಿಂದ ಮುಂಬರುವ ರೋಗ ರುಜಿನಗಳಿಗೆ ಸ್ವಚ್ಛ ಮಾಡಿದ ಕ್ಷಣದಿಂದಲೇ ಅಂತ್ಯ ಹಾಡಲಾಯಿತು.

ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಕೃಷ್ಣನಾಯಕ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನೀರಿನ ತೊಂಬೆಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮುಂಭಾಗ ಇದ್ದ ನೀರಿನ ತೊಂಬೆ ಬಳಿ ಕುಡುಕರು ಮಧ್ಯ ಕುಡಿದು ಪಾಕೆಟ್ ಗಳನ್ನು ನೀರಿನ ತೊಂಬೆ ಸುತ್ತಮುತ್ತ ಎಸೆಯುತ್ತಿದ್ದರು. ಇಂದು ಎಲ್ಲವನ್ನು ಸ್ವಚ್ಛಗೊಳಿಸಲಾಗಿದೆ ಮುಂಬರುವ ದಿನಗಳಲ್ಲಿ ಇಂಥವರ ಮೇಲೆ ಕಠಿಣ ಕ್ರಮವನ್ನು ಪಂಚಾಯಿತಿ ವತಿಯಿಂದ ಜರುಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೌರಕಾರ್ಮಿಕರು ಸೇರಿದಂತೆ ಗುಂಬಳ್ಳಿ ಗ್ರಾಮಸ್ಥರು ಮತ್ತು ಇತರರು ಹಾಜರಿದ್ದರು

Continue Reading

Chamarajanagar

ಹುಲಿ ದಾಳಿ: ಹಸು ಬಲಿ

Published

on

ಗುಂಡ್ಲುಪೇಟೆ:-ತಾಲೂಕಿನ ಪಡಗೂರು ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಹಸುವನ್ನು ಕೊಂದು ಹಾಕಿದ ಘಟನೆ ನಡೆದಿದೆ ಪಡಗೂರು ಗ್ರಾಮದಲ್ಲಿ ನಡೆದಿದೆ.
ಪಡಗೂರು ಗ್ರಾಮದ ತರಕಾರಿ ಮಹೇಶ ಎಂಬುವವರ ಜಮೀನಿನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಸುಮಾರು 60 ಸಾವಿರ ಬೆಲೆಬಾಳುವ ಹಸುವಾಗಿದ್ದು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಸ್ಥಳ ಪರಿಶೀಲನೆ ನಡೆಸಿದರು.

ಪಡಗೂರು ಗ್ರಾಮದಲ್ಲಿ ಪದೇ ಪದೇ ಸಾಕು ಪ್ರಾಣಿಗಳು ಮೇಲೆ ಹುಲಿ ದಾಳಿ ಮಾಡುತ್ತಿದ್ದರು ಅರಣ್ಯ ಇಲಾಖೆಯವರು ಯಾವುದೇ ರೀತಿಯಲ್ಲೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

Continue Reading

Trending

error: Content is protected !!