Manglore
ಧರ್ಮಸ್ಥಳ ಪ್ರಕರಣ: ಬುರುಡೆ ಗ್ಯಾಂಗ್ ವಿರುದ್ಧ ಸೆಕ್ಷನ್‌ಗಳ ಸುರಿಮಳೆ
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದವರೇ ಆರೋಪಿಗಳಾಗಿದ್ದಾರೆ ಎಂದು ವಿಶೇಷ ತನಿಖಾ ತಂಡದ (SIT) ವರದಿಯಲ್ಲಿ ಬುರುಡೆ ಗ್ಯಾಂಗ್ ಷಡ್ಯಂತ್ರ್ಯ ಬಯಲಿಗೆ ಬಂದಿದೆ.
ಈ ಪ್ರಕರಣಕ್ಕ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಬುರುಡೆ ಗ್ಯಾಂಗ್ ಸದಸ್ಯರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ ಗಳ ಸುರಿಮಳೆ ಹೊರಿಸಲಾಗಿದೆ.
ಈ ಕೃತ್ಯದ ಆರೋಪಿಗಳು ಯಾರು ಯಾರು?
1. ಎ1 – ಚಿನ್ನಯ್ಯ
2. ಎ2 – ಮಹೇಶ್ ಶೆಟ್ಟಿ ತಿಮರೋಡಿ
3. ಎ3 – ಗಿರೀಶ್ ಮಟ್ಟಣ್ಣನವರ್
4. ಎ4 – ವಿಠಲ ಗೌಡ
5. ಎ5 – ಜಯಂತ್ ಟಿ
6. ಎ6 – ಸುಜಾತ ಭಟ್

ಯಾವ ಸೆಕ್ಷನ್ ಹಾಕಲಾಗಿದೆ?
1. BNS 211(ಎ) – Criminal Intimidation / ಅಪರಾಧಿಕ ಬೆದರಿಕೆ
ಯಾರಾದರೂ ಮತ್ತೊಬ್ಬ ವ್ಯಕ್ತಿಗೆ ಹಾನಿ ಮಾಡುವುದಾಗಿ, ಸಾವು, ಗಾಯ, ಆಸ್ತಿ ನಾಶ, ಮಾನಹಾನಿ, ಅಥವಾ ಯಾವುದೇ ಅನಿಷ್ಟ ಪರಿಣಾಮ ಉಂಟುಮಾಡುವುದಾಗಿ ಉದ್ದೇಶಪೂರ್ವಕವಾಗಿ ಬೆದರಿಸುವುದು.
2.BNS 230 – Wrongful Restraint / ಅನ್ಯಾಯವಾದ ನಿರ್ಬಂಧ
ಯಾವ ವ್ಯಕ್ತಿಯೂ ತನ್ನ ಇಚ್ಚೆಯಂತೆ ತೆರಳಬೇಕಾದ ದಾರಿಗೆ ಅಡ್ಡಿ ಉಂಟುಮಾಡಿ, ಆ ವ್ಯಕ್ತಿಯನ್ನು ಉದ್ದೇಶಪೂರ್ವಕ ತಡೆಯುವುದು.
3. BNS 231 – Wrongful Confinement / ಅನ್ಯಾಯವಾದ ಬಂಧನ
ವ್ಯಕ್ತಿಯ ಚಲನವಲನವನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಒಬ್ಬರನ್ನು ನಿಯಂತ್ರಿತ ಸ್ಥಳದಲ್ಲಿ ಬಲವಂತವಾಗಿ ಇರಿಸುವುದು.
4. BNS 229 – Force / ಬಲ ಪ್ರಯೋಗ
ಯಾವ ವ್ಯಕ್ತಿಗೆ ಅವನ ಇಚ್ಛೆಗೆ ವಿರುದ್ಧವಾಗಿ ಯಾವುದಾದರೂ ವಸ್ತು, ಬಲ, ಒತ್ತಡ, ದಬ್ಬಾಳಿಕೆ ನಡೆಸುವುದು.
5. BNS 227 – Assault / ದಾಳಿ
ಯಾರಿಗಾದರೂ ಶಾರೀರಿಕ ಹಾನಿ ಮಾಡುವ ಉದ್ದೇಶದ ಸೂಚನೆ ನೀಡುವುದು.
6. BNS 228 – Criminal Force / ಅಪರಾಧಿಕ ಬಲ ಬಳಕೆ
ಉದ್ದೇಶಪೂರ್ವಕವಾಗಿ,ಅಪಮಾನ / ಹಾನಿ / ಭಯ ಹುಟ್ಟಿಸುವುದು.
7. BNS 240 – Extortion / ದಬ್ಬಾಳಿಕೆ ಮೂಲಕ ಹಣ/ಆಸ್ತಿ ಪಡೆಯುವುದು
ಹಾನಿ ಮಾಡುವುದಾಗಿ, ಭಯ ಹುಟ್ಟಿಸಿ ಹಣ/ಆಸ್ತಿ/ಕಾಗದ/ಮೌಲ್ಯಾವಸ್ತು ನೀಡುವಂತೆ ಬೆದರಿಸುವುದು.
8. BNS 236 – False Declaration / ತಪ್ಪು ಘೋಷಣೆ ಸಲ್ಲಿಸುವುದು
ಕೋರ್ಟ್ ಅಥವಾ ಅಧಿಕಾರಿಗಳ ಮುಂದೆ ತಿಳಿದಿದ್ದೂ ತಪ್ಪು ಮಾಹಿತಿ ನೀಡಿ ನಂಬಲರ್ಹ ಮಾಹಿತಿಯನ್ನು ಘೋಷಣೆ ಮೂಲಕ ಉಲ್ಲೇಖಿಸುವುದು.
9. BNS 233 – Cheating / ಮೋಸ
ಒಬ್ಬರನ್ನು ತಪ್ಪಾಗಿ ನಂಬಿಸಿ, ಮತಿಭ್ರಮೆಯಲ್ಲಿ, ವಂಚನೆ ಮಾಡಿ, ಆಸ್ತಿ/ಹಣ/ಲಾಭ ಮಾಡುವುದು.
10. BNS 248 – Criminal Breach of Trust / ನಂಬಿಕೆ ದ್ರೋಹ
ನಂಬಿಸಿ ದುರುಪಯೋಗಪಡಿಸಿಕೊಳ್ಳುವುದು.
11. BNS 336(4) – Public Nuisance endangering public life ಸಾರ್ವಜನಿಕ ಜೀವನವನ್ನ ಅಪಾಯಕ್ಕೆ ಸಿಲುಕಿಸುವ ಕಿರಿಕಿರಿ
ಸಾರ್ವಜನಿಕ ಸ್ಥಳದಲ್ಲಿ,ಸಾರ್ವಜನಿಕರ ಜೀವ/ಆರೋಗ್ಯ/ಸುರಕ್ಷತೆಗೆ ಹಾನಿ ಉಂಟುಮಾಡುವ ಯಾವುದೇ ಕೃತ್ಯ.
12. BNS 61(2) – Common Intention / ಸಹ ಉದ್ದೇಶ
ಎರಡು ಅಥವಾ ಹೆಚ್ಚು ಜನರು ಒಂದು ಸಾಮೂಹಿಕ ಉದ್ದೇಶದಿಂದ ಒಂದೇ ಅಪರಾಧವನ್ನು ಸೇರಿ ಮಾಡಿದರೆ,ಪ್ರತಿಯೊಬ್ಬರೂ ಪೂರ್ಣ ಅಪರಾಧಕ್ಕೆ ಜವಾಬ್ದಾರರು.
Manglore
ವಿವೇಕಾನಂದ ಪಿ.ಯು. ಕಾಲೇಜಿನಲ್ಲಿ ಜೂನ್ 4, 5 ರಂದು “ವಿವೇಕ ಸಂಕಲ್ಪ-2026”
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ 2026-27ನೇ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳ ವಿದ್ಯಾರ್ಥಿ-ಪೋಷಕರ ಸಮಾವೇಶ “ವಿವೇಕ ಸಂಕಲ್ಪ – 2026” ಮತ್ತು ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮವು ಜೂನ್ 4 ಮತ್ತು ಜೂನ್ 5 ರಂದು ಜರುಗಲಿದೆ. ಇದೇ ಸಂದರ್ಭದಲ್ಲಿ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರಿಂದ ಪೋಷಕರಿಗೆ ವಿಶೇಷ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ.
ಜೂನ್ 4 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದ ಕೇಶವ ಸಂಕಲ್ಪ ಸಭಾಭವನದಲ್ಲಿ ವಿಜ್ಞಾನ ವಿಭಾಗದ ಪೋಷಕರ ಸಭೆ ಹಾಗೂ ಕಾಲೇಜು ಪ್ರಾರಂಭೋತ್ಸವ ನಡೆಯಲಿದೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಆಡಳಿತ ಮಂಡಳಿಯ ನಿರ್ದೇಶಕ ಡಾ. ಕೆ. ಎನ್. ಸುಬ್ರಹ್ಮಣ್ಯ ಉಪಸ್ಥಿತರಿರಲಿದ್ದಾರೆ. ಉಡುಪಿಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನೋವೈದ್ಯ ಹಾಗೂ ಲೇಖಕ ಡಾ. ವಿರೂಪಾಕ್ಷ ದೇವರಮನೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪೋಷಕರಿಗೆ “ಸುಗಮ ಪಾಲನೆಗೆ ಹೊಸ ತಲೆಮಾರಿನ ಸವಾಲುಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿಜ್ಞಾನ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

ಜೂನ್ 5 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದ ಪೋಷಕರ ಸಭೆ ಮತ್ತು ಪ್ರಾರಂಭೋತ್ಸವ ಜರುಗಲಿದೆ. ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ಸಚಿನ್ ಶೆಣೈ ಕೆ. ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿ ಡಾ. ವಿರೂಪಾಕ್ಷ ದೇವರಮನೆ ಅವರು “ಪೋಷಕರು ಹಾಗೂ ಮಕ್ಕಳ ಮಧ್ಯೆ ಮನೋವಿಜ್ಞಾನದ ಸತ್ಯಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಕಾಲೇಜು ಪ್ರಾರಂಭೋತ್ಸವದ ಪ್ರಯುಕ್ತ ಜೂನ್ 6 ರಂದು ಬೆಳಿಗ್ಗೆ 7.30 ರಿಂದ ಕಶೇಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಸರಸ್ವತಿ ಪೂಜೆ ನಡೆಯಲಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಜೂನ್ 5 ರಿಂದ ಹಾಗೂ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಜೂನ್ 6 ರಿಂದ ತರಗತಿಗಳು ಮುಂದುವರಿಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂ., ಪೋಷಕರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Chikmagalur
ನ್ಯೂ ವೈಬ್ರೆಂಟ್ ಕಾಲೇಜಿಗೆ ಹೆಮ್ಮೆ: ಜೆಇಇ ಅಡ್ವಾನ್ಸ್ಡ್ 2026ರಲ್ಲಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ: ಧನುಷ್ ಗುತ್ತಿಗೆ ದೇಶದಲ್ಲಿ 95ನೇ ರ‍್ಯಾಂಕ್
ಮೂಡುಬಿದಿರೆ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ 2026ರ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆಯುವ ಮೂಲಕ ಐಐಟಿ ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಇವರಲ್ಲಿ ಧನುಷ್ ಗುತ್ತಿ ಅವರು ಅಖಿಲ ಭಾರತ ಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 95ನೇ ರ‍್ಯಾಂಕ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಉಳಿದಂತೆ ಆದಿತ್ಯ ಅನಿಲ್ ಕೆಂಚಣ್ಣನವರ್ 1803 ರ‍್ಯಾಂಕ್, ಪ್ರಕೃತಿ ಶ್ರೀಧರ್ 1814 ರ‍್ಯಾಂಕ್ (ಕೆಟಗರಿ), ಗೌತಮ್ ಎ.ಎನ್ 3125 ರ್ಯಾಂಕ್ (ಕೆಟಗರಿ), ಸಮ್ಮಿತ್ ಎಚ್.ಎಸ್ 4372 ರ‍್ಯಾಂಕ್ ಹಾಗೂ ಜೆಂಕರ್ ಎಂ 22318 ರ‍್ಯಾಂಕ್ ಪಡೆದು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ.

ವಿದ್ಯಾರ್ಥಿಗಳ ಈ ಅಪೂರ್ವ ಸಾಧನೆಯು ಅವರ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ, ಪೋಷಕರ ಪ್ರೋತ್ಸಾಹ ಮತ್ತು ಕಾಲೇಜಿನ ಗುಣಮಟ್ಟದ ಬೋಧನೆಯ ಪ್ರತಿಫಲವಾಗಿದೆ. ಈ ಯಶಸ್ಸಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿ ಅವರು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನ್ಯೂ ವೈಬ್ರೆಂಟ್ ಕಾಲೇಜಿನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ ಈ ಫಲಿತಾಂಶವು ಮತ್ತೊಂದು ಸಾಕ್ಷಿಯಾಗಿದೆ.
Manglore
ಅಂತರರಾಷ್ಟ್ರೀಯ ಟೇಕ್ವಾಂಡೋ: ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳಿಂದ ಭಾರತಕ್ಕೆ 4 ಚಿನ್ನದ ಪದಕಗಳ ಕೊಡುಗೆ
ಮಂಗಳೂರು : ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 29 ರಿಂದ ಜೂನ್ 1 ರವರೆಗೆ ನಡೆದ ಅಂತರರಾಷ್ಟ್ರೀಯ ಮುಕ್ತ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಕ್ರೀಡಾಕೂಟದ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಯಾನ್ ಶೆಟ್ಟಿ, ಜಶನ್ ಉತ್ತಯ್ಯ ಮತ್ತು ಪ್ರಜ್ವಲ್ ನಾಯಕ್ ಅವರು ಅದ್ಭುತ ಪ್ರದರ್ಶನ ನೀಡಿ ತಲಾ ಒಂದೊಂದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅದೇ ರೀತಿ ಕೆಡೆಟ್ ವಿಭಾಗದಲ್ಲಿ ಚಿನ್ಮಯ್ ಬಿ. ಆರ್. ಚಿನ್ನದ ಪದಕ ಗೆದ್ದರೆ, ಸಮರ್ಥ್ ಜಿ. ಎ. ಮತ್ತು ವಿಹಾನ್ ಅನೀಶ್ ತಲಾ ಒಂದೊಂದು ಬೆಳ್ಳಿ ಪದಕವನ್ನು ಹಾಗೂ ತಮನ್ ಗಿರೀಶ್ ಕಂಚಿನ ಪದಕವನ್ನು ಜಯಿಸಿ ದೇಶದ ಪದಕಗಳ ಪಟ್ಟಿಯನ್ನು ಹೆಚ್ಚಿಸಿದ್ದಾರೆ.
ಭಾರತೀಯ ಕ್ರೀಡಾಪಟುಗಳ ಈ ಸಾಧನೆಗೆ ತಂಡದ ತರಬೇತುದಾರರಾಗಿ ಡಾ. ಗುರುರಾಜ್ ಇಟಗಿ ಹಾಗೂ ವ್ಯವಸ್ಥಾಪಕರಾಗಿ ಶ್ರೀಮತಿ ದೀಪಾ ಶಂಕರ್ ಅವರು ಭಾಗವಹಿಸಿ ಯಶಸ್ವಿ ಮಾರ್ಗದರ್ಶನ ನೀಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕ್ ಹಾಗೂ ಶಾಲೆಯ ಸಮಸ್ತ ಸಿಬ್ಬಂದಿ ವರ್ಗದವರು ಶ್ಲಾಘಿಸಿ, ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
-
Special12 hours agoಕೇವಲ ₹16,500ಕ್ಕೆ ಅಯೋಧ್ಯೆ–ಕಾಶಿ–ಪುರಿ ಯಾತ್ರೆ: ಐಆರ್ಸಿಟಿಸಿಯಿಂದ 10 ದಿನಗಳ ವಿಶೇಷ ಪ್ಯಾಕೇಜ್!!
-
Chikmagalur13 hours agoಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಅಧಿಕಾರಿಗಳಿಗೆ ‘ಇಸ್ಪೀಟ್ ಕಾರ್ಡ್’ ವಿತರಣೆ
-
Hassan12 hours agoಡಿಸಿಸಿ ಬ್ಯಾಂಕ್ ನೇಮಕಾತಿ ಹೆಸರಲ್ಲಿ ವಂಚನೆ ಆರೋಪ: ಯಾವುದೇ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ ಎಂದು ಅಧ್ಯಕ್ಷ ನಾಗರಾಜ್ ಸ್ಪಷ್ಟನೆ:
-
Kodagu10 hours agoಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ತೊರೇರ ಪೊನ್ನಕ್ಕಿ ಆಯ್ಕೆ:
-
Politics2 hours agoಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕ
-
State2 hours agoರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ ಸಿಎಂ ಡಿಕೆಶಿ
-
Politics7 hours agoರಾಜ್ಯದ ನೂತನ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಡಾ.ಜಿ.ಪರಮೇಶ್ವರ್
-
Chikmagalur3 hours agoನ್ಯೂ ವೈಬ್ರೆಂಟ್ ಕಾಲೇಜಿಗೆ ಹೆಮ್ಮೆ: ಜೆಇಇ ಅಡ್ವಾನ್ಸ್ಡ್ 2026ರಲ್ಲಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ: ಧನುಷ್ ಗುತ್ತಿಗೆ ದೇಶದಲ್ಲಿ 95ನೇ ರ್ಯಾಂಕ್
