Hassan
ದೇವರ ಮೊರೆ ಹೋದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ
ಸನ : ಇಂದು ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ
ದೇವರ ಮೊರೆ ಹೋದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ
ಬೆಳ್ಳಂಬೆಳಿಗ್ಗೆ ಟೆಂಪಲ್ ರನ್ ಮಾಡುತ್ತಿರುವ ಪ್ರಜ್ವಲ್‌ರೇವಣ್ಣ
ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿ ಗ್ರಾಮದಲ್ಲಿರುವ ದೇವೇಶ್ವರ ದೇವಾಲಯಕ್ಕೆ ಭೇಟಿ
ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಪ್ರಜ್ವಲ್‌ರೇವಣ್ಣ
ಪ್ರಜ್ವಲ್‌ರೇವಣ್ಣಗೂ ಮೊದಲು ಸಹೋದರ ಸೂರಜ್‌ರೇವಣ್ಣ ಇದೇ ದೇವಾಲಯಕ್ಕೆ ಭೇಟಿ
ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸೂರಜ್‌ರೇವಣ್ಣ

Hassan
ಶಾಂತಿಗ್ರಾಮ ಟೋಲ್‌ನಲ್ಲಿ ಸಿಎಸ್‌ಆರ್ ಯೋಜನೆಗಳ ಹಸ್ತಾಂತರ
ಹಾಸನ : ಇಂಟರ್‌ರೈಸ್ ಟ್ರಸ್ಟ್ ವತಿಯಿಂದ, ದೇವಿಹಳ್ಳಿ ಹಾಸನ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ಹಾಗೂ ಎನ್‌ಜಿಒ ಪಾಲುದಾರ ಸಂಸ್ಥೆ ಮೇಕಿಂಗ್ ದಿ ಡಿಫರೆನ್ಸ್ ಸಹಯೋಗದಲ್ಲಿ ಇಂದು ಬೆಳಿಗ್ಗೆ ಶಾಂತಿಗ್ರಾಮ ಟೋಲ್ ಪ್ಲಾಜಾದಲ್ಲಿ ಸಿಎಸ್‌ಆರ್ ಯೋಜನೆಗಳ ಹಸ್ತಾಂತರ ಮತ್ತು ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೂರ್ಣಿಮಾ ಬಿ.ಆರ್ ಅವರು ಮಾತನಾಡಿ, ಸಮುದಾಯದ ಕಲ್ಯಾಣ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ’ಇಂಟರ್‌ರೈಸ್ ಟ್ರಸ್ಟ್’ ಮತ್ತು ಅದರ ಪಾಲುದಾರ ಸಂಸ್ಥೆಗಳು ಕೈಗೊಂಡಿರುವ ಜನಪರ ಕಾರ್ಯಗಳನ್ನು ಶ್ಲಾಘಿಸಿದರು.
ಘನತ್ಯಾಜ್ಯ ನಿರ್ವಹಣೆ: ಶಾಂತಿಗ್ರಾಮ ಗ್ರಾಮ ಪಂಚಾಯಿತಿಗೆ ಕಸ ಸಂಗ್ರಹಣಾ ವಿದ್ಯುತ್ ಚಾಲಿತ ವಾಹನವನ್ನು ಹಸ್ತಾಂತರಿಸಲಾಯಿತು. ಇದರಿಂದ ಸ್ಥಳೀಯ ಮಟ್ಟದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಅನುಕೂಲವಾಗಲಿದೆ.

ಶುದ್ಧ ಕುಡಿಯುವ ನೀರು: ಮಡೆನೂರು ಗ್ರಾಮ ಪಂಚಾಯಿತಿಯ ಕೇರೆಕೆರೆ ಗ್ರಾಮದಲ್ಲಿ ಆರ್‌ಒ ವಾಟರ್ ಪ್ಯೂರಿಫೈಯರ್ ಘಟಕವನ್ನು ಉದ್ಘಾಟಿಸಲಾಯಿತು. ಇದರಿಂದ ಸುಮಾರು ೩,೦೦೦ ಜನರಿಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಲಭ್ಯವಾಗಿದೆ.
ಶೈಕ್ಷಣಿಕ ಉತ್ತೇಜನ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಮೂಲಕ ಶಿಕ್ಷಣದ ಕಡೆಗೆ ಆಸಕ್ತಿ ಮೂಡಿಸಲಾಯಿತು.

ಈ ಸಮಾರಂಭದಲ್ಲಿ ಹಾಸನ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಎಚ್.ಡಿ, ಕರ್ನಲ್ ನಟೇಶ್ ಕೆ.ಎಸ್ (ನಿವೃತ್ತ), ಇಂಟರ್‌ರೈಸ್ ಟ್ರಸ್ಟ್‌ನ ಕ್ಲಸ್ಟರ್ ಮುಖ್ಯಸ್ಥ ಸತೀಶ್ ಕುಮಾರ್ ಕೆ.ವಿ, ಡಿಎಚ್‌ಟಿಪಿಎಲ್‌ನ ಯೋಜನಾ ಮುಖ್ಯಸ್ಥ ಸುನಿಲ್ ಸಿ.ಕೆ. ಹಾಗೂ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.
Hassan
ಮಾನವೀಯತೆ ಮೆರೆದ ಡಿಸಿ ಲತಾಕುಮಾರಿ : ಅಪಘಾತದಲ್ಲಿ ಗಾಯಾಗೊಂಡಿದ್ದವರಿಗೆ ನೆರವು
ಹಾಸನ : ಕರ್ತವ್ಯ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರರಿಗೆ ತಕ್ಷಣ ನೆರವು ನೀಡಿ ಮಾನವೀಯತೆ ಮೆರೆದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಕತ್ತರಿಘಟ್ಟ ಗೇಟ್ ಸಮೀಪ ಬೆಳಗ್ಗೆ ಸುಮಾರು 8.30 ಗಂಟೆ ವೇಳೆಗೆ ಇಬ್ಬರು ಬೈಕ್ ಸವಾರರ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಕೆರೆಕೋಡಿಹಳ್ಳಿ ಗ್ರಾಮದ ಕೃಷ್ಣಕುಮಾರ್ ಅವರ ಬಲ ಕಾಲು ಮುರಿದಿದ್ದು, ಮತ್ತೊಬ್ಬ ಸವಾರನೂ ಗಾಯಗೊಂಡಿದ್ದಾರೆ.

ಅದೇ ಸಮಯದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ವಾಹನ ನಿಲ್ಲಿಸಿ ಗಾಯಾಳುಗಳ ಸ್ಥಿತಿ ಪರಿಶೀಲಿಸಿದರು. ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ ಅವರು, ವಿಳಂಬವಾಗದಂತೆ ಖಾಸಗಿ ವಾಹನ ವ್ಯವಸ್ಥೆ ಮಾಡಿ ಗಾಯಾಳುಗಳನ್ನು ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಜಿಲ್ಲಾಧಿಕಾರಿಯವರ ಈ ಮಾನವೀಯ ಕಾರ್ಯವನ್ನು ಸ್ಥಳೀಯರು ಪ್ರಶಂಸಿಸಿದ್ದು, ಅಪಘಾತದ ಸಂದರ್ಭದಲ್ಲೂ ತಕ್ಷಣ ಸ್ಪಂದಿಸಿ ನೆರವಾದ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Hassan
ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ: ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ
ಹಾಸನ: ನಗರದ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಮಾ. 3ರಂದು ಬೆಳಗಿನ ಜಾವ 5.40ರ ಸುಮಾರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ. [email protected] ವಿಳಾಸಕ್ಕೆ Rameeza Hussain ([email protected]) ಎಂಬ ಇಮೇಲ್ ಐಡಿಯಿಂದ ಸಂದೇಶ ರವಾನೆಯಾಗಿದ್ದು, ಬೆಳಿಗ್ಗೆ 11.50ಕ್ಕೆ ನ್ಯಾಯಾಲಯ ಹಾಗೂ ನ್ಯಾಯಾಧೀಶರ ಕೊಠಡಿಯಲ್ಲಿ ಸೈನೈಡ್ ವಿಷಾನಿಲ ತುಂಬಿದ ಆರ್‌ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿತ್ತು.

ಇದಲ್ಲದೆ, ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು ನಿರಪರಾಧಿ ನಾಗರಿಕನನ್ನು ಸ್ಥಳಾಂತರಿಸಬೇಕು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದ್ದು, 26/11 ಮುಂಬೈ ಭಯೋತ್ಪಾದಕ ದಾಳಿ ಹಾಗೂ ಅಜ್ಮಲ್ ಕಸಬ್ ಪ್ರಕರಣಕ್ಕೂ ಉಲ್ಲೇಖ ಮಾಡಲಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ DAR ಡಿವೈಎಸ್‌ಪಿ ಪಾಲಾಕ್ಷ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ಕಟ್ಟಡವನ್ನು ಭದ್ರತಾ ವಲಯಕ್ಕೆ ತೆಗೆದುಕೊಂಡರು.

ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನ್ಯಾಯಾಲಯ ಆವರಣದ ಸಂಪೂರ್ಣ ತಪಾಸಣೆ ನಡೆಸಲಾಯಿತು.
ವಿಸ್ತೃತ ಪರಿಶೀಲನೆಯ ಬಳಿಕ ಯಾವುದೇ ಬಾಂಬ್ ಅಥವಾ ಅನುಮಾನಾಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
-
Hassan11 hours agoಮಹಿಳಾ ಇಂಜಿನಿಯರ್ ಕವಿತಾ ವಿರುದ್ಧ ಆರೋಪಗಳು: ಸೂಕ್ಷ್ಮ ವಿಚಾರಣೆಗೆ ಆಗ್ರಹ
-
Chikmagalur5 hours agoದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ ಯಶಸ್ವಿ
-
Hassan3 hours agoಶಾಂತಿಗ್ರಾಮ ಟೋಲ್‌ನಲ್ಲಿ ಸಿಎಸ್‌ಆರ್ ಯೋಜನೆಗಳ ಹಸ್ತಾಂತರ
-
Chikmagalur5 hours agoಕೈವಾರ ತಾತಯ್ಯ ವಿಶ್ವ ಶ್ರೇಷ್ಠ ಸಂತ: ಶಾಸಕ ಹೆಚ್.ಡಿ.ತಮ್ಮಯ್ಯ
-
Chamarajanagar6 hours agoಹನೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 490 ಕೋಟಿ ರೂ. ಯೋಜನೆ ಜಾರಿಗೆ ಸಂಸದ ಸುನೀಲ್ ಬೋಸ್ ಮನವಿ
-
Hassan14 hours agoಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ : ಜಿಲ್ಲಾಡಳಿತದ ತೀರ್ಮಾನದಂತೆ ರಥಕ್ಕೆ ಇಲ್ಲಾ ಬಟ್ಟೆ ಅಲಂಕಾರ
-
Hassan14 hours agoನಿಧಾನವಾಗಿ ಹೋಗು ಎಂದಿದ್ದಕ್ಕೆ ಕಾರು ಹರಿಸಿ ಯುವಕನ ಬರ್ಬರ ಹತ್ಯೆ
-
Manglore7 hours agoಪ್ರೀತಿ ನಿರಾಕರಣೆ- ಓಮನ್ನಲ್ಲಿ ಆ*ತ್ಮಹ*ತ್ಯೆಗೆ ಶರಣಾದ ಸೋಮೇಶ್ವರದ ಯುವಕ
