Connect with us

Uncategorized

ದೇವರಹಳ್ಳಿ ಗ್ರಾಮದ ರೈತರ ಜಮೀನಿನ ಸಮಸ್ಯೆಗಳಿಗೆ ಶಿಘ್ರದಲ್ಲೇ ಪರಿಹಾರ: ಜಿಲ್ಲಾಧಿಕಾರಿ ಶಿಲ್ಪನಾಗ್

Published

on

ಯಳಂದೂರು: ಸೋಲಿಗರು ವಾಸಿಸುವ ಕಾಡಂಚಿನ ಗ್ರಾಮವಾದ ಕೆ ದೇವರಹಳ್ಳಿ ಗ್ರಾಮದಲ್ಲಿ ಕಾಡಿಗೆ ಸೇರಿಕೊಂಡಿರುವ ರೈತರ ಜಮೀನುಗಳ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲು ಸಂಬಂಧಪಟ್ಟ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ದೊರಕಿಸಿ ಕೊಡುವ ಭರವಸೆಯನ್ನು ಜಿಲ್ಲಾಧಿಕಾರಿ ಶಿಲ್ಪನಾಗ್ ನೀಡಿದರು.

ಅವರು ತಾಲೂಕಿನ ಕೆ ದೇವರ ಹಳ್ಳಿ ಗ್ರಾಮದ ಪಕ್ಕದಲ್ಲಿರುವ ಬಿ ಆರ್ ಟಿ ಹುಲಿ ರಕ್ಷಿತಾ ಅರಣ್ಯಕ್ಕೆ ಸೇರಿರುವ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿದರು.

1964 ರಲ್ಲಿ ಇಲ್ಲಿ ಕೆಲವು ರೈತರಿಗೆ ಜಮೀನನ್ನು ದರಕಾಸ್ತು ಮೂಲಕ ನೀಡಲಾಗಿದೆ. ಸರ್ವೆ ನಂಬರ್ 4ರಲ್ಲಿ 392 ಎಕರೆ ಜಮೀನು ಸರ್ಕಾರಿ ಗುಡ್ಡವಾಗಿದ್ದು ಇದರಲ್ಲಿ 181.8 ಎಕರೆ ಜಮೀನನ್ನು 70 ಜನ ರೈತರಿಗೆ ನೀಡಲಾಗಿದೆ. ಸರ್ವೆ ನಂಬರ್ ಇದರಲ್ಲಿ 540 ಎಕರೆ ಜಮೀನಿದ್ದು, ಇದರಲ್ಲಿ 99 ಎಕರೆ ಜಮೀನನ್ನು 22 ಜನ ರೈತರಿಗೆ ನೀಡಲಾಗಿದೆ. ಸರ್ವೆ ನಂಬರ್ 6ರಲ್ಲಿ ಒಟ್ಟು 606.33 ಎಕರೆ ಜಮೀನು ಇದೆ.

ಆದರೆ ಅರಣ್ಯ ಇಲಾಖೆಯ ಕಾಯ್ದೆ ಜಾರಿಯಾದ ನಂತರ ಇಲ್ಲಿ ವ್ಯವಸಾಯ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಅಲ್ಲದೆ ಇದರ ಹಕ್ಕು ಪತ್ರಗಳನ್ನು ಆರ್ಟಿಸಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಜಮೀನಿದ್ದರೂ ಇದು ರೈತರ ದೊಡ್ಡ ಸಮಸ್ಯೆ ಆಗಿದೆ ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಇವರಿಗೆ ಪರ್ಯಾಯ ಜಮೀನು ನೀಡುವುದು ಅಥವಾ ಪರಿಹಾರ ನೀಡುವುದು ಎಂಬುದಾಗಿ ಸಂಬಂಧಪಟ್ಟ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯನ್ನು ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಶಾಲೆಯಲ್ಲಿ ಜಿಲ್ಲಾಧಿಕಾರಿ ಪಾಠ

ಸೋಲಿಗ ಜನಾಂಗದ ವಿದ್ಯಾರ್ಥಿಗಳೇ ಹೆಚ್ಚು ವ್ಯಾಸಂಗ ಮಾಡುವ ಕಾಡಂಚಿನ ಗ್ರಾಮವದ ಕೆ. ದೇವರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಶಿಲ್ಪನ ಭೇಟಿ ನೀಡಿ ಉದ್ದುದ್ದಲ್ಲಿ ಲೆಕ್ಕ ಹೇಳಿಕೊಡುವ ಮೂಲಕ ಪಾಠ ಮಾಡಿದರು ಇಲ್ಲಿನ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಅವರ ಬುದ್ಧಿಮತ್ತೆಯನ್ನು ಪರೀಕ್ಷಿಸಿದರು ಯಾವುದೇ ಕಾರಣಕ್ಕೂ ವ್ಯಾಸಂಗವನ್ನು ನಿಲ್ಲಿಸಬಾರದು ಎಂಬ ಬುದ್ಧಿ ಮಾತು ಹೇಳಿದರು ಈ ಮಕ್ಕಳಿಗೆ ಸರಕಾರದಿಂದ ದೊರೆಯುವ ಊಟ ಬಟ್ಟೆ ಇತ್ಯಾದಿ ಸೌಲಭ್ಯಗಳನ್ನು ಮಕ್ಕಳಿಗೆ ನೀಡಬೇಕು ಎಂದು ಶಿಕ್ಷಕರಿಗೆ ಮನದಟ್ಟು ಮಾಡಿದರು.

ತಹಶೀಲ್ದಾರ್ ಜಯಪ್ರಕಾಶ್, ಆರ್ ಐ ಯದುಗಿರಿ, ಆರ್ ಎಫ್ ಓ ನಾಗೇಂದ್ರ ನಾಯಕ, ಶಿಕ್ಷಕ ರವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Uncategorized

ಅನಾಥ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ವಾರ್ಷಿಕೋತ್ಸವ ಆಚರಿಸಿದ ಕರ್ನಾಟಕ ಭೀಮ ಸೇನೆ

Published

on

ನಂಜನಗೂಡು ಮೇ.22

ಅನಾಥ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ವಿನೂತನವಾಗಿ ಕರ್ನಾಟಕ ಭೀಮ ಸೇನೆ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.
ಮೈಸೂರಿನ ವಿಜಯನಗರದ ಸವಿ ನೆನಪು ಫೌಂಡೇಷನ್ ಸೇವಾಶ್ರಮದಲ್ಲಿ ಕರ್ನಾಟಕ ಭೀಮ ಸೇನೆಯ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಘಟಕದ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಒಂದು ದಿನದ ಅನ್ನದಾನ ಮಾಡುವ ಮೂಲಕ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಅನಾಥ ಮಕ್ಕಳೊಂದಿಗೆ ಕರ್ನಾಟಕ ಭೀಮ ಸೇನೆಯ ಪದಾಧಿಕಾರಿಗಳು ಕೇಕ್ ಕತ್ತರಿಸಿ ಮಕ್ಕಳಿಗೆ ಕೇಕ್ ಕಟ್ ಮಾಡಿ ತಿನ್ನಿಸಿ, ಊಟ ಬಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಬಳಿಕ ಕರ್ನಾಟಕ ಭೀಮ ಸೇನೆಯ ಜಿಲ್ಲಾಧ್ಯಕ್ಷ ಸರ್ವೇಶ್ ಮಾತನಾಡಿ, ರಾಜ್ಯಾದ್ಯಂತ ಸಂಘಟನೆಯು ಬಲಿಷ್ಠವಾಗಿ ಬೆಳೆಯುತ್ತಿದೆ. ಏಕಕಾಲದಲ್ಲಿ ಕಾರ್ಯಕ್ರಮ ನಡೆಸಲು ಎರಡನೇ ವರ್ಷದ ಸಂಭ್ರಮಾಚರಣೆಯನ್ನು ಅನಾಥ ಮಕ್ಕಳಿಗೆ ಒಂದು ದಿನದ ಅನ್ನದಾನ ಮಾಡಲು ಸಂಘಟನೆಯು ತೀರ್ಮಾನ ಮಾಡಲಾಗಿತ್ತು. ಅದರಂತೆ ಇಂದು ಮಕ್ಕಳಿಗೆ ಅನ್ನದಾನ ಮಾಡಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮತ್ತು ಕೆ.ಶಿವರಾಂ ರವರ ನೆನಪಿನಾರ್ಥವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನ ಮಾಡಿದ್ದೇವೆ. ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವು ಸಂಘಟನೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಮಾದೇಶ್, ಮೈಸೂರು ತಾಲ್ಲೂಕು ಗೌರವಾಧ್ಯಕ್ಷ ವೈರಮುಡಿ, ಮೈಸೂರು ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಜಿಲ್ಲಾ ಕಾರ್ಯದರ್ಶಿ ಬಾಲರಾಜು, ನಗರ ಸಂಘಟನಾ ಕಾರ್ಯದರ್ಶಿ ರವಿಚಂದ್ರ, ನಂಜನಗೂಡು ತಾಲ್ಲೂಕು ಅಧ್ಯಕ್ಷ ಬಾಣೂರು ಶಿವಸ್ವಾಮಿ, ಹುಣಸೂರು ತಾಲ್ಲೂಕು ಅಧ್ಯಕ್ಷ ಶಿವು, ನಂಜನಗೂಡು ತಾಲ್ಲೂಕು ಗೌರವಾಧ್ಯಕ್ಷರಾದ ಎಚ್.ಡಿ ಶಂಭಯ್ಯ, ರವಿಚಂದ್ರ ಪ್ರಕಾಶ್ ಪುಟ್ಟಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Uncategorized

ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ – ಮಾಜಿಸಚಿವ ಎಚ್.ಡಿ.ರೇವಣ್ಣ

Published

on

ಹಾಸನ : ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಹೇಳಿಕೆ

ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ

ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ

ನಾನು ದೇವರ ಮೇಲೆ ನಂಬಿಕೆ ಇಟ್ಟಿರುವವನು

ರಾಜ್ಯದ, ಜಿಲ್ಲೆಯ ಹಾಗೂ ಹೊಳೆನರಸೀಪುರದ‌ ದೇವೇಗೌಡರನ್ನು ಅರವತ್ತು ವರ್ಷದಿಂದ ರಾಜಕೀಯ ಶಕ್ತಿ ಕೊಟ್ಟಿದ್ದಾರೆ

ಕುಮಾರಸ್ವಾಮಿ, ನನಗೆ ಶಕ್ತಿ ಕೊಟ್ಟಿದ್ದಾರೆ

ಇಪ್ಪತ್ತೈದು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ

ಹೊಳೆನರಸೀಪುರ ತಾಲ್ಲೂಕು ಜನರು, ಜಿಲ್ಲೆಯ ಜನರ ಜೊತೆ ನಾನು ಬದುಕಿರುವವರೆ ನಿಮ್ಮ ಜೊತೆ ನಾನು ದೇವೇಗೌಡರು, ಕುಮಾರಸ್ವಾಮಿ ನಮ್ಮ ಕುಟುಂಬ ಇರುತ್ತದೆ

ಯಾರು ದೃತಿಗೆಡಬೇಕಾದ ಪ್ರಮೇಯವಿಲ್ಲ

ಜಿಲ್ಲೆಯ ಜನ ನನಗೆ ಸಹಕಾರ ಕೊಟ್ಟಿದ್ದಾರೆ, ಆ ಸಹಕಾರಕ್ಕೆ ನಾನು ಋಣಿಯಾಗಿರುತ್ತೇನೆ

ನಮ್ಮ ಕಾರ್ಯಕರ್ತರ ಸಂಕಷ್ಟಕ್ಕೆ ಇರ್ತಿನಿ

ಹೊಳೆನರಸೀಪುರದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಮಾಜಿಸಚಿವ ಎಚ್.ಡಿ.ರೇವಣ್ಣ

ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ರೇವಣ್ಣ

ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಎಚ್‌ಡಿಆರ್

ಪ್ರಜ್ವಲ್‌ರೇವಣ್ಣ ಹೆಸರಲ್ಲೂ ಅರ್ಚನೆ ಮಾಡಿಸಿದ ಎಚ್.ಡಿ.ರೇವಣ್ಣ

Continue Reading

Uncategorized

ಬೆಳ್ತಂಗಡಿ: ‘ಪೊಲೀಸ್ ಠಾಣೆ ನಿಮ್ಮ‌ ಅಪ್ಪಂದಾ’ ಪಿಎಸ್ಐಗೇ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜ – ಎಫ್ಐಆರ್ ದಾಖಲು

Published

on

ಮಂಗಳೂರು: ತನ್ನ ಬೆಂಬಲಿಗರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದಲ್ಲದೆ, ಠಾಣೆ ಏನು ನಿಮ್ಮ ಅಪ್ಪಂದಾ ಎಂದು ಪೊಲೀಸರಿಗೇ ಧಮ್ಕಿ ಹಾಕಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಬೆಳ್ತಂಗಡಿಯ ಮೆಲಂತಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಲ್ಲುಕ್ವಾರೆಗೆ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು‌. ಈ ವೇಳೆ ಕಲ್ಲುಕ್ವಾರೆ ನಡೆಸುತ್ತಿದ್ದ ಶಾಸಕ ಹರೀಶ್ ಪೂಂಜ ಆಪ್ತ, ಬೆಳ್ತಂಗಡಿ ತಾಲೂಕು ಯುವಮೋರ್ಚ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಮತ್ತಿತರರನ್ನು ಪೊಲೀಸರು ಶನಿವಾರ ಬಂಧಿಸಿದ್ದರು‌‌. ಈ ಬಂಧನವನ್ನು ವಿರೋಧಿಸಿ ಬೆಳ್ತಂಗಡಿ ಠಾಣೆಯೆದುರು ಶಾಸಕ ಹರೀಶ್ ಪೂಂಜ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು‌. ಅಲ್ಲದೆ ಬೆಳ್ತಂಗಡಿ ಪಿಎಸ್ಐ ಮುರುಳಿಧರ್ ನಾಯ್ಕ್ ಅವರಿಗೆ ಶಾಸಕ ಹರೀಶ್ ಪೂಂಜ ಅವರು ಬೆದರಿಕೆ ಹಾಕಿದ್ದರು‌. ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲುಕೋರೆ ಮಾಲಕ ಪ್ರಮೋದ್ ದಿಡುಪೆ ತಲೆಮರೆಸಿಕೊಂಡಿದ್ದಾನೆ. ಆತನ ಬಂಧಿಸಲು ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

Continue Reading

Trending

error: Content is protected !!