Chikmagalur
ದೇಶ ಮತ್ತು ಸಾಮರ್ಥ್ಯಕ್ಕಾಗಿ ಬಿಜೆಪಿಗೆ ಮತ ನೀಡಿ: ಕೋಟಾ ಶ್ರೀನಿವಾಸ್..
ಮೂಡಿಗೆರೆ: ಈ ಬಾರಿಯ ಲೋಕಸಭೆಯ ಚುನಾವಣೆ ಭಾರತ ದೇಶವನ್ನು ಕಾಯುವ. ದೇಶದ ಗಡಿ ರಕ್ಷಣೆ ಮತ್ತು ಅಭಿವೃದ್ಧಿಗಾಗಿಯಾಗಿದ್ದು. ನನ್ನ ಸಾಮರ್ಥ್ಯ ಮತ್ತು ಮೋಧಿಜಿಗಾಗಿ ಅಭೂತಪೂರ್ವ ಗೆಲುವು ನೀಡಿ ಎಂದು ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭೆ ಅಭ್ಯರ್ಥಿ ಕೋಟ ಶ್ರಿನೀವಾಸ ಪುಜಾರಿ ತಿಳಿಸಿದರು.
ಅವರು ಭಾರತಿಬ್ಯೆಲ್ ನಲ್ಲಿ ಪಕ್ಷದ ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡಿ. ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ಮೋದಿ ಪಾತ್ರ ದೊಡ್ಡದು. ಇಂದು ಗಡಿಯಲ್ಲಿ ಚಿನಾ ಪಾಕಿಸ್ತಾನವನ್ನು ಮೆಟ್ಟಿ ನಿಂತಿದ್ದೇವೆ. ದೇಶವನ್ನು ಆರ್ಥಿಕವಾಗಿ ನಾಷಮಾಡಿ ಚಿನ್ನವನ್ನು ಅಡವಿಟ್ಟಲ್ಲಿಂದ. ಇಂದು ಹಲವು ದೇಶಕ್ಕೆ ಸಾಲ ಕೊಡುವ ವ್ಯವಸ್ಥೆಗೆ ಬಂದಿದ್ದೇವೆ. ಅದರೆ ಕಾಂಗ್ರೇಸ್ ಭಾರತ ಮಾತಕಿ ಜ್ಯೆ ಅನ್ನುವಲ್ಲಿಂದ ಪಾಕಿಸ್ಥಾನ್ ಜಿಂದಾಬಾದ್ ಎನ್ನುವಲ್ಲಿಗೆ ತಂದಿದ್ದಾರೆ. ಕಾಪಿ ಬೆಳೆಗಾರರಿಗೆ. ರೈತರಿಗೆ 25 ಎಕರೆವರೆಗೆ ನಾವು ಲೀಸ್ ಕೊಟ್ಟೆವು. ನಿಮ್ಮದು ಅನ್ನುತ್ತೀರಿ ಅದನ್ನ 10 ಎಕರೆಗೆ ಇಳಿಸಿದ್ದೀರಿ ಅದರೆ ಇನ್ನು ನೀಡಿಲ್ಲ. ನಿಮ್ಮ 10ಕೆಜಿ ಅಕ್ಕಿ ಅಶ್ವಾಸನೆ ಎಲ್ಲಿ ಹೋಯಿತು.ಅಕ್ಕಿ ನೀಡುತ್ತಿರುವುದು ಕೇಂದ್ರ ಸರ್ಕಾರ ಎಲ್ಲವು ನಾನು ಕೊಟ್ಟೆ ಎಂಬುದನ್ನು ಸಿದ್ದಾರಾಮಯ್ಯನವರೆ ಬಿಟ್ಟುಬಿಡಿ. ರಾಜ್ಯದ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ಕಿಸಾನ್ ಸಮ್ಮಾನ್ ರದ್ದು ಮಾಡಿ ನಾಷ ಮಾಡಿದಿರಿ. ಪರಿಶಿಷ್ಟರ 28 ಸಾವಿರ ಕೋಟಿ ಕಿತ್ತುಕೊಂಡು. ಅವರ ಅಭ್ಯುದಯಕ್ಕೆ . ಶಿಕ್ಷಣಕ್ಕೆ. ಕಾಲೋನಿಗೆ ಕೊಟ್ಟ ಹಣಕ್ಕೆ ಟೋಪಿ ಹಾಕಿದೀರಿ. ಗ್ರಾಮ ಪಂಚಾಯಿತಿಯಲ್ಲಿ ಅನುದಾನ ಹೆಚ್ವಳ. ದಲಿತರು ಮತ್ತು ಹಿಂದೂಳಿದವರಿಗೆ ವಿಶೇಷ ಅನುದಾನ ನಾನು ಮಂತ್ರಿಯಾಗಿ ಮಾಡಿದ್ದೇನೆ ನನ್ನ ಸಾಮರ್ಥ್ಯದ ಅದಾರದಲ್ಲಿ ಮತ ಕೇಳುತ್ತಿದ್ದು ಭಾರತ ಮಾತಾಕಿ ಜ್ಯೆ ಎನ್‌ನುವವರಿಗೆ ಮತ ನೀಡಿ. ಅಭೂತಪೂರ್ವ ಗೆಲುವು ನೀಡಿ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ದೀಪಕ್ ದೊಡ್ಡಯ್ಯ. ಕೇಶವಕೆಂಜಿಗೆ. ಬಾಳೂರುಲಕ್ಷ್ಮಣಗೌಡ. ದನಿಕ್. ಅನುಕುಮಾರ್. ಸಚಿನ್ ಬಾನಹಳ್ಳಿ. ವಿಕ್ರಂ. ಶರತ್ ಹೊಸಹಳ್ಳಿ. ಶಿವಕುಮಾರ್. ರವಿಬಡವನದಿಣ್ಣೆ. ಹರ್ಷ ಚಕ್ಕಮಕ್ಕಿ ಮತ್ತಿತರರಿದ್ದರು.

Chikmagalur
ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದ ಕೆ.ಎಸ್.ಗೋಪಾಲಕೃಷ್ಣ
ಚಿಕ್ಕಮಗಳೂರು: ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕೆಂಪನಹಳ್ಳಿ ಕನಕ ಗೆಳೆಯರ ಬಳಗದಿಂದ ನಗರ ಸಮೀಪ ಆಯೋಜಿಸಿದ್ಧ ಎರಡನೇ ವರ್ಷದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಬುಧವಾರ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಪ್ರಥಮ ಹಾ ಗೂ ದ್ವಿತೀಯ ಹೆಚ್.ಎಫ್. ಡಿಲಕ್ಸ್ ಬೈಕ್, ತೃತೀಯ 25 ಸಾವಿರ ನಗದು ಟ್ರೋಫಿ ಮತ್ತು ಚತುರ್ಥ ವಿಜೇತರಿಗೆ 20 ಸಾವಿರ ನಗದು ಆಕರ್ಷಕ ಟ್ರೋಫಿ ವಿತರಿಸಲಾಗುವುದು ಎಂದು ಸ್ಪರ್ಧೆಯ ಆಯೋಜಕ ಕೆಂಪನಹಳ್ಳಿ ಸುನೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ ಲಕ್ಷ್ಮಣ್, ಎಲ್.ಬಿ.ಎಸ್. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರತೀಪ್, ಕೆಂಪನಹಳ್ಳಿ ಗ್ರಾಮಸ್ಥರಾದ ಚರಣ್, ಹರೀಶ್, ರಾಕೇಶ್, ಶಶಾಂಕ್, ಸಚಿನ್, ಕಾರ್ತೀಕ್ , ವರುಣ್, ಡಿಂಪು, ವಸಂತ್, ದರ್ಶನ್ ಮತ್ತಿತರರು ಹಾಜರಿದ್ದರು.
Chikmagalur
ಅಸ್ಸಾಂನಿಂದ ಬಂದಿರುವ ಕಾರ್ಮಿಕನಿಂದ ಕಾಫಿ ತೋಟದಲ್ಲಿ ಗೋ ಹತ್ಯೆ
ಚಿಕ್ಕಮಗಳೂರು : ಕಾಫಿ ತೋಟದಲ್ಲಿ ಗೋ ಹತ್ಯೆ ಮಾಡಿದ ಘಟನೆ ನಡೆದಿದ್ದು, ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿರುವ ಕಾರ್ಮಿಕರಿಂದ ಕೃತ್ಯ ನಡೆದಿದೆ.
ಗೋವುಗಳನ್ನು ಕದ್ದು ತೋಟದಲ್ಲಿ ಹತ್ಯೆ ಮಾಡಲಾಗಿದೆ.ಖಚಿತ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ ನಡೆದಿದ್ದು ಆರೋಪಿಗಳು-ಗೋಮಾಂಸ ಪಕ್ಷಕ್ಕೆ ಪಡೆಯಲಾಗಿದೆ.
ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರಿನ ಕಾಫಿ ಎಸ್ಟೇಟ್ ನಲ್ಲಿ ಘಟನೆ ನಡೆದಿದ್ದು,ಎರಡು ದನಗಳನ್ನು ಹತ್ಯೆ ಮಾಡಿ, ಮಾಂಸ ಹಂಚಿಕೆ ವೇಳೆಯಲ್ಲಿ ದಾಳಿ ಆಗಿದೆ.

ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.ಪಿ.ಎಸ್.ಐ. ರವೀಶ್ ನೇತೃತ್ವದಲ್ಲಿ ದಾಳಿ ನಡೆಸಿಆರೋಪಿಗಳಾದ ಅನ್ಸರ್, ಮಜೀದ್, ಮುಜಾಮಿಲ್ ನನ್ನು ಬಂಧಿಸಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Chikmagalur
ಬೆಂಗಳೂರಿನಲ್ಲಿ ಅಪಘಾತ: ಚಂದ್ರೇಗೌಡ ಸಹಿತ ಮೂವರು ಸ್ಥಳದಲ್ಲೇ ಸಾ*ವು
ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಇಂದು ನಡೆದ ರಸ್ತೆ ಅಪಘಾತದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ.ಎಸ್.ಚಂದ್ರೇಗೌಡ ಸೇರಿದಂತೆ ಮೂವರು ಸ್ಥಳದಲ್ಲೇ ಸಾವಪ್ಪಿದ್ದಾರೆ.
ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿರುವಾಗ ನಾಗಮಂಗಲದ ಸಮೀಪದ ನಾಗತಿಹಳ್ಳಿಯಲ್ಲಿ ಚಾಲನಕ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಅಪ್ಪಳಿಸಿ ಉರುಳಿಬಿದ್ದಿದ್ದು, ವಾಹನ ಚಾಲನೆ ಮಾಡುತ್ತಿದ್ದ ಚಂದ್ರೇಗೌಡ (60) ಅವರ ಪತ್ನಿ ಸರೋಜಮ್ಮ (55) ಜಯಮ್ಮ (70) ಅವರುಗಳು ಅಸುನೀಗಿದ್ದಾರೆ ಹೇಳಲಾಗಿದೆ.

ಕೆಲವು ದಿನಗಳ ಹಿಂದೆ ಹಾಂಕಾಂಗ್ ಪ್ರವಾಸ ಕೈಗೊಂಡಿದ್ದರು. ನಿನ್ನೆ ಬೆಂಗಳೂರಿನಲ್ಲಿರುವ ಅಳಿಯನ ಮನೆಯಲ್ಲಿ ಉಳಿದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ಚಿಕ್ಕಮಗಳೂರು ನಗರಕ್ಕೆ ಆಗಮಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಬಂಧಿಕರಿಗೆ ವಿಷಯ ತಿಳಿಯುತ್ತಿದ್ದಂತೆ ಮೃತ ದೇಹಗಳನ್ನು ತರಲು ಬೆಂಗಳೂರಿಗೆ ತೆರಳಿದ್ದಾರೆ.
ಮೃತ ಡಿ.ಎಸ್.ಚಂದ್ರೇಗೌಡ ಜಿಲ್ಲಾಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. ಸಿಡಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಎರಡು ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದು, ತಾಲೂಕು ಕನಕ ಸಂಘದ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
-
Mandya14 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
State12 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Chamarajanagar6 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
Mandya12 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
State6 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Hassan9 hours agoಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
-
Hassan8 hours agoಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
-
Chamarajanagar8 hours agoರಾಗಿ ಒಕ್ಕಣೆ ಮಿಷನ್ ನಿಂದ ಕೂಲಿ ಕಾರ್ಮಿಕಳೊಬ್ಬಳ ಕೈ ತುಂಡು
