Mandya
ಡೆಂಗ್ಯೂ ಜ್ವರ ಹರಡದಂತೆ ತಡೆಯಲು ಹೆಚ್ಚಿನ ನಿಗಾ ವಹಿಸಿ: ಡಿಸಿ ಕುಮಾರ

ಮಂಡ್ಯ: ಡೆಂಗ್ಯೂ ಜ್ವರಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ 415 ಪ್ರಕರಣಗಳು ವರದಿಯಾಗಿದ್ದು, ಒಂದೇ ಸ್ಥಳದಲ್ಲಿ 2 ಅಥವಾ ಹೆಚ್ಚಿನ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಸುತ್ತ ಮುತ್ತ ಪ್ರದೇಶದಲ್ಲಿ ಕಡ್ಡಾಯವಾಗಿ ಲಾರ್ವಾ ಪರೀಕ್ಷೆ ನಡೆಸಿ ಎಂದರು.
ಡೆಂಗ್ಯೂ ಪ್ರಕರಣಗಳಲ್ಲಿ ವಯಸ್ಸುವಾರು ಪಟ್ಟಿ ಮಾಡಿಕೊಂಡು ಮಕ್ಕಳಲ್ಲಿ ಹೆಚ್ಚು ಕಂಡು ಬಂದಿದ್ದರೆ ಅಂತಹ ಶಾಲೆ ಹಾಗೂ ಅಂಗನವಾಡಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿ ಎಂದರು.
ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿಗಳು ಸಭೆ ನಡೆಸಿ ಡೆಂಗ್ಯೂ ತಡೆಗಟ್ಟುವ ಬಗ್ಗೆ ಯೋಜನೆಗಳನ್ನು ರೂಪಿಸಿ ಜಾಗೃತಿ ಕಾರ್ಯಕ್ರಮಗಳನ್ಬು ಆಯೋಜಿಸಿ ಎಂದರು.
ಸ್ಥಳೀಯ ಸಂಸ್ಥೆಗಳು ಹಾಗೂ, ಆರೋಗ್ಯ ಇಲಾಖೆಯವರು ಪ್ರತಿ ದಿನ ದೊಡ್ಡ ಶಾಲೆ ಹಾಗೂ ಹಾಸ್ಟಲ್ ಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿ. ಆರೋಗ್ಯ ಇಲಾಖೆಯಿಂದ ಸಾರ್ವಜನಿಕರು ಹಾಗೂ ಮಕ್ಕಳು ಕೈಗೊಳ್ಳಬೇಕಿರುನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿ ಅನುಸರಿಸುವಂತೆ ಪ್ರೇರೆಪಿಸಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಮಾತನಾಡಿ, ಡೆಂಗ್ಯೂ ಹರಡುವ ಸೊಳ್ಳೆ ಕಡಿತವನ್ನು ತಪ್ಪಿಸಲು ಆದಷ್ಟು ಸಾರ್ವಜನಿಕರು ತುಂಬು ತೋಳಿನ ಉಡುಪು ಧರಿಸಿ, ಬೇವಿನ ಎಣ್ಣೆಯನ್ನು ಕೈ ಮತ್ತು ಕಾಲಿಗೆ ಹಚ್ಚಿಕೊಳ್ಳಿ. ಜ್ವರ ಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಿ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ಆರೋಗ್ಯ ಇಲಾಖೆಯ 157 ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಸ್ಥಳದ ಅವಶ್ಯಕತೆ ಇದ್ದು, ಗ್ರಾಮದ ಹತ್ತಿರ ಸ್ಥಳವನ್ನು ಗುರುತಿಸಿ ಎಂದರು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ 18 ರಿಂದ 50 ವರ್ಷದೊಳಗಿನವರು ವಾರ್ಷಿಕವಾಗಿ ರೂ 436/- ಪ್ರಿಮಿಯಂ ಪಾವತಿಸಿ ಯಾವುದೇ ಕಾರಣಕ್ಕೂ ಮೃತ ಪಟ್ಟರೂ ರೂ 2 ಲಕ್ಷದ ವಿಮೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ವಾರ್ಷಿಕವಾಗಿ ರೂ 20 ಪ್ರೀಮಿಯಂ ಪಾವತಿಸಿದರೆ ಅಪಘಾತದಿಂದ ಮೃತ ಪಟ್ಟಲ್ಲಿ ರೂ 2 ಲಕ್ಷದ ವಿಮೆ ದೊರೆಯಲಿದೆ. ಈ ಬಗ್ಗೆ ಎಲ್ಲಾ ಸಿಬ್ಬಂದಿಗಳು, ಮಹಿಳಾ ಸಂಘಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ನೊಂದಾಯಿಸಿಕೊಳ್ಳುವಂತೆ ಪ್ರೇರೇಪಿಸಿ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ,ಜನಸ್ಪಂದನದಲ್ಲಿ ಸ್ವೀಕೃತವಾಗುವ ಸಾರ್ವಜನಿಕರ ದೂರು ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ಪರಿಹಾರ ಒದಗಿಸಿ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯತರ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಆಧಾರ್ ಸೀಡಿಂಗ್ ಮಿಸ್ ಮ್ಯಾಚ್ ಆಗಿರುವುದರಿಂದ ಸುಮಾರು 527 ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪಾವತಿಯಾಗಿಲ್ಲ. 10 ದಿನದೊಳಗಾಗಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ತೊಂದರೆ ಸರಿಪಡಿಸಿ ವಿದ್ಯಾರ್ಥಿ ವೇತನ ಪಾವತಿಗೆ ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
Mandya|ಹಣ ಮಾಡುವ ಉದ್ದೇಶದಿಮದ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ : ಚಂದ್ರಶೇಖರ್

ಮಂಡ್ಯ: ಕನ್ನಂಬಾಡಿ ಕಟ್ಟೆ ಮುಖ್ಯದ್ವಾರದ ಬಳಿ ಹಣ ಮಾಡುವ ಉದ್ದೇಶದಿಮದ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಮಾಡಲು ಮುಂದಾಗಿದ್ದು, ಸದರಿ ಕ್ರಿಯಾಯೋಜನೆ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಕಾವೇರಿಗೆ ಆರತಿ ಎಂಬ ಹೆಸರು ಸೇರಿಸಿ ಕನ್ನಂಬಾಡಿ ಅಣೆಕಟ್ಟೆಯ ಪರಿಸರ, ನೈರ್ಮಲ್ಯಕ್ಕೆ ದಕ್ಕೆ ತರುವಂತಹ ಕೆಲಸ ಮಾಡಲಾಗುತ್ತಿದೆ. ಕಾವೇರಿ ಆರತಿಯ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಮೂಡುತ್ತಿದೆ ಎಂದರು.
ಸರ್ಕಾರ ಲಾಭ ಮಾಡಿ ಹಣ ಲೂಟಿ ಹೊಡೆಯುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅಚ್ಚುಕಟ್ಟು ವ್ಯಾಪ್ತಿಯ ಮುಖ್ಯನಾಲೆ, ಉಪನಾಲೆ, ಸೀಳುನಾಲೆ, ನಾಲಾ ಬದಿಯ ರಸ್ತೆಗಳು ತೀರ ಹದಗೆಟ್ಟಿದೆ. ನಾಲೆಯ ಕೊನೆಯ ಭಾಗಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಕೆಲಸಕ್ಕೆ ಒತ್ತು ಕೊಡದೆ ಅನಾವಶ್ಯಕ ಯೋಜನೆಗೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿರುವುದು ಖಂಡನೀಯವಾಗಿದ್ದು, ಈ ಹಿನ್ನಲೆ ಏಪ್ರಿಲ್ ೧೭ರಂದು ರೈತ ಸಂಘ ಸಭೆ ನಡೆಸಿದ್ದು, ಮೇ.೦೬ರಂದು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಮಾತನಾಡಿ, ಮೈಷುಗರ್‌ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ೧೩ ಮರಗಳನ್ನು ಕಡಿಸಿ, ತಮ್ಮ ಮನೆಗೆ ಸಾಗಿಸಿಕೊಂಡಿದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮೈಷುಗರ್ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಘೋಷಿಸಿಕೊಂಡು ೩೩ ಕೋಟಿ ರೂ ನಷ್ಟದಲ್ಲಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ, ಮಾಧ್ಯಮ ಕಾರ್ಯದರ್ಶಿ ಸೋ.ಸಿ.ಪ್ರಕಾಶ್, ಮಲ್ಲೇಶ್, ಲಿಂಗರಾಜು, ಎಂ.ಕುಮಾರ್ ಇದ್ದರು.
Mandya
Mandya: ಮೇ.1ಕ್ಕೆ ಕುಂದೂರು ಬೆಟ್ಟ ಗ್ರಾಮದ ಶ್ರೀ ರಸ ಸಿದ್ದೇಶ್ವರ ಮಠದ ಪಟ್ಸ್ ದಲ ಬ್ರಹ್ಮೋಪದೇಶ ಪೂರ್ವಕ ಗುರುಪಟ್ಟಾಧಿಕಾರಿ ಮಹೋತ್ಸವ

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟ ಗ್ರಾಮದ ಶ್ರೀ ರಸ ಸಿದ್ದೇಶ್ವರ ಮಠದ ಪಟ್ಸ್ ದಲ ಬ್ರಹ್ಮೋಪದೇಶ ಪೂರ್ವಕ ಗುರುಪಟ್ಟಾಧಿಕಾರಿ ಮಹೋತ್ಸವ ಹಾಗೂ ಸುಕ್ಷೇತ್ರದ ಶ್ರೀ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮವನ್ನು ಮೇ.01ರಂದು ಆಯೋಜಿಸಲಾಗಿದೆ ಎಂದು ಮಠದ ಮಠಾಧ್ಯಕ್ಷ ನಂಜುಂಡಸ್ವಾಮೀಜಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಇಂದು(ಏಪ್ರಿಲ್.26) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ವೀರಸಿಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಲಾಗುವುದು. ರಸ ಸಿದ್ದೇಶ್ವರ ಮಠಾಧ್ಯಕ್ಷ ನಂಜುಂಡಸ್ವಾಮೀಜಿ ಪ್ರಾಸ್ತವಿಕ ನುಡಿಗಳನ್ನಾಡುವರು, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ರುದ್ರಮುನಿ ಸ್ವಾಮಿಗಳ ಭಾವಚಿತ್ರ ಅನಾವರಣ ಮಾಡುವರು ಎಂದು ಹೇಳಿದರು.
ಕಾರ್ಯಕ್ರಮವನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು, ಬಿಜೆಪಿ ರಾಜ್ಯಾಧ್ಯಕ್ಷ ಮಹಾಧ್ವರದ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕ ಗಣೇಶ್‌ಪ್ರಸಾದ್, ಚಾಂಷುಗರ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ, ಜಿಲ್ಲಾ ಶರಣ ಸಂಘಟನೆ ವೇದಿಕೆಯ ಗೌರವ ಅಧ್ಯಕ್ಷ ಬಬ್ರುವಾಹನ, ಮುಖಂಡ ಪುಟ್ಟಬುದ್ದಿ ಇದ್ದರು.
Mandya
ಗವಿಮಠದ ಬೆಟ್ಟದಲ್ಲಿ ಹಾಡಾಗಲೇ ಚಿರತೆ ಪ್ರತ್ಯಕ್ಷ

ಕೆ.ಆರ್.ಪೇಟೆ : ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಬೆಟ್ಟದಲ್ಲಿ ಹಾಡಾಗಲೇ ಚಿರತೆಯೊಂದು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಬೆಟ್ಟದ ಮೇಲೆ ಕುಳಿತಿರುವ ಚಿರತೆಯ ಚಲನವಲನ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದ್ದು, ಬೆಟ್ಟದ ತಪ್ಪಲಿನಲ್ಲಿದೆ ಮಾಜಿ ಸಿ.ಎಂ.ಬಿ.ಎಸ್.ವೈ ಮನೆದೇವರ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯವಿದೆ.
ಬೆಟ್ಟಕ್ಕೆ ದಿನನಿತ್ಯ ಹೆಚ್ಚಿನ ಪ್ರವಾಸಿಗರು ಬಂದು ಹೋಗಲಿದ್ದು, ಇದೀಗ ಬೆಟ್ಟದ ತಪ್ಪಲಿನಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಚಿರತೆ ಧಾಳಿಯಿಂದ ಅವಘಢ ಸಂಭವಿಸುವ ಮುನ್ನ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
-
State11 hours ago
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಆರೋಪಿ ರನ್ಯಾರಾವ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
-
Uncategorized7 hours ago
ಭಾರತ-ಪಾಕ್ ಯುದ್ಧದ ಬಗ್ಗೆ ಸಿಎಂ ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ವಾಗ್ದಾಳಿ
-
Hassan4 hours ago
ಜಮೀನು ವಿಚಾಕ್ಕೆ ಕೊಲೆ
-
Hassan6 hours ago
ಹಾಸನ| ಪ್ರತಿಯೊಬ್ಬರು ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡುವುದು ಅಗತ್ಯ: ಮಾಜಿ ಶಾಸಕ ಬಿ.ಆರ್. ಗುರುದೇವ್
-
Mysore12 hours ago
ಕೇಂದ್ರ ಸರ್ಕಾರ, ಯುದ್ಧದ ಬದಲು ಪಾಕ್ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ: ಸಿಎಂ ಸಿದ್ದರಾಮಯ್ಯ
-
Mysore10 hours ago
ಬಿಜೆಪಿ ದೇವರು, ಧರ್ಮದ ಹೆಸರಲ್ಲಿ ಬರೀ ಸುಳ್ಳು ಹರಡುತ್ತದೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
-
Kodagu7 hours ago
ಮಡಿಕೇರಿಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ
-
Kodagu8 hours ago
ಪ್ರಧಾನಿ, ಗೃಹ ಸಚಿವರ ರಾಜೀನಾಮೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ