Connect with us

Mysore

ಮೈಸೂರಿನಲ್ಲಿ ಡೆಂಗ್ಯೂಗೆ ಮೊದಲ ಬಲಿ

Published

on

ಮೈಸೂರು: ಹುಣಸೂರು ತಾಲೂಕಿನ ಆರೋಗ್ಯಾಧಿಕಾರಿ ನಾಗೇಂದ್ರ (35) ಎಂಬುವವರು ಡೆಂಗ್ಯೂವಿನಿಂದ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಡೆಂಗ್ಯೂಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ಇವರು ಹುಣಸೂರು ತಾಲೂಕಿನ ಗುರುಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹುಣಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ ಕಳೆದ ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಇವರು ಡೆಂಗ್ಯೂ ಸೋಂಕಿನಿಂದ ಬಳಲುತ್ತಿದ್ದರು.

ಜಿಲ್ಲೆಯಲ್ಲಿ ಸದ್ಯಕ್ಕೆ 479 ಡೆಂಗ್ಯೂ ಸಕ್ರಿಯ ಪ್ರಕರಣಗಳು ಇವೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಹೆಚ್ಚಾಗದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯೂ ಡ್ರೈ ಡೇಯನ್ನ ಆಚರಿಸಲಾಗುತ್ತಿದೆ. ಜೊತೆಗೆ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲೂ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸವನ್ನು ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಮಾಡುತ್ತಿದ್ದಾರೆ.

ಮನೆ ಬಳಿ ನೀರು ಸಂಗ್ರಹ ಆಗದಂತೆ ಎಚ್ಚರಿಕೆ ವಹಿಸಲು ತಿಳಿಸಲಾಗಿದ್ದು, ಪ್ರತಿ ದಿನ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಡೆಂಗ್ಯೂಗೆ ಕಳೆದ ಸೋಮವಾರ ಹುಣಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Mysore

ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ

Published

on

ಮೈಸೂರು: ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ  16 ಬಜೆಟ್ ಮಂಡಿಸಿರುವ  ಸಿಎಂ ಸಿದ್ದರಾಮಯ್ಯ ಗೆ ಕೇಂದ್ರ ಬಜೆಟ್ ಬಗ್ಗೆ ಸಂಕುಚಿತ ಭಾವನೆ ತೋರಿದರು.

ಕೇಂದ್ರದ ದೂರದೃಷ್ಟಿಯ ಬಜೆಟ್ ಸಿಎಂ ಗೆ ಅರ್ಥ ಆಗಿಲ್ಲ, ಕೇಂದ್ರದ ಬಜೆಟ್ ಬಗ್ಗೆ ಸಿಎಂ ಬಹಳ ಲಘುವಾಗಿ ಮಾತಾಡಿದ್ದಾರೆ.
ಖಾಲಿ ಚೆಂಬಿನ ಕ್ರೇಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು. ರಾಜ್ಯ ಸರ್ಕಾರ ಖಾಲಿ ಚೆಂಬನ್ನು ಎರಡು ವರ್ಷದಿಂದ ಜನರಿಗೆ ಕೊಡುತ್ತಿದೆ.
ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡಿದರು.

ಕುಮಾರಸ್ವಾಮಿ ಮಂಡ್ಯಗೆ ಏನ್ ತಂದರು? ರಾಜ್ಯಕ್ಕೆ ಏನು ತಂದರು ? ಅಂತ ಪ್ರತಿ ನಿತ್ಯ ಮಂಡ್ಯ ಶಾಸಕರು ಸಣ್ಣತನದಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್ ನಲ್ಲಿ ಉತ್ತರವಿದೆ. ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆ‌ಯ ಘಟಕ ತೆರೆಯಲು 100 ಏಕರೆ ಜಾಗವನ್ನು ಮಂಡ್ಯದಲ್ಲೇ ಕೊಡಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.

ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಭೂಮಿ ಕೊಡಲು ಸಿಎಂ ಗೆ ನಾನೇ ಪತ್ರ ಬರೆದಿದ್ದೇನೆ.
ನಾನು ನಾಟಕವಾಡಲು ಪತ್ರ ಬರೆದಿಲ್ಲ, ನಾಟಕವಾಡಲು ಪ್ರಧಾನಿಗಳು ನಂಗೆ ಈ ಸ್ಥಾನ ಕೊಟ್ಟಿಲ್ಲ, ರಾಜ್ಯದ ಕೈಗಾರಿಕಾ ಅಭಿವೃದ್ಧಿ ಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ, ಖಾಲಿ ಚೆಂಬು ರಾಜ್ಯ ಸರ್ಕಾರದ್ದು, ಕೇಂದ್ರ ಸರ್ಕಾರ ಕೊಟ್ಟ ದುಡ್ಡನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ, 16 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದದ್ದು 50 ಸಾವಿರ ಕೋಟಿ ರೂ. ಈಗ ಅದನ್ನು 63 ಸಾವಿರ ಕೋಟಿ ರೂ ಗೆ ಏರಿಸಲಾಗಿದೆ.

ವಿಶ್ವೇಶ್ವರಯ್ಯ ಸ್ಟಿಲ್ ಫ್ಯಾಕ್ಟರಿ ಪುನಶ್ಚೇತನಕ್ಕೆ 4 ರಿಂದ 5 ಸಾವಿರ ಕೋಟಿ ರೂ. ಕೊಡುತ್ತಿದ್ದೇವೆ. ಎಚ್.ಎಂ.ಟಿ. ಕಂಪನಿ ಪುನರ್ ಆರಂಭಕ್ಕೆ ನಾನು ಬದ್ಧವಾಗಿದ್ದೇನೆ. ಅರಣ್ಯ ಇಲಾಖೆಯವರು ಎಚ್.ಎಂ.ಟಿ. ಕಂಪನಿ ಜಾಗ ನಮ್ಮದು ಎಂದು ತಕರಾರು ತೆಗೆದು ಕೊಂಡು ಕೂತಿದ್ದಾರೆ. ನಾನು ಏನೂ ಮಾಡಲಿ, ರಾಜ್ಯಕ್ಕೆ ಏನೂ ತರಬೇಕು ಎಂಬುದನ್ನು ರಾಜ್ಯ ಸರ್ಕಾರದಿಂದ ಸಂಸದರು ಹೇಳಿಸಿ ಕೊಳ್ಳುವ ರಾಜ್ಯದ ಯಾರಾದರೂ ಒಬ್ಬರು ಮಂತ್ರಿ ಬಂದು ನನ್ನ ಬಳಿ ರಾಜ್ಯಕ್ಕೆ ಇಂತಹ ಪ್ರಾಜೆಕ್ಟ್ ತರಿಸಿ ಕೊಡಿ ಎಂದು ಕೇಳಿದ್ದಿರಾ?
ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ.

ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ, ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್ಯ ಸರ್ಕಾರ ಬಿಡಬೇಕು. ಪ್ರಧಾನ ಮಂತ್ರಿಗಳನ್ನು ಬೀದಿಗೆ ಬಾಯಿಗೆ ಬಂದಂತೆ ಬೈಯ್ಯೋದು, ಅಮೇಲೆ ಪತ್ರ ಕಳಿಸೋದು. ಈ ವರ್ತನೆಯನ್ನು ರಾಜ್ಯ ಸರ್ಕಾರ ಬದಲಿಸಿ ಕೊಳ್ಳಬೇಕು. ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

Continue Reading

Mysore

ರಾಜ್ಯ ಸರ್ಕಾರಕ್ಕೆ ನನ್ನ ಮೇಲೆ ಅಸೂಯೆ: ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

Published

on

ಮೈಸೂರು: ನನ್ನ ಜೊತೆ ರಾಜ್ಯ  ಸರ್ಕಾರಕ್ಕೆ ಮಾತಾಡಲು ಇಗೋ ಸಮಸ್ಯೆ ಇರಬಹುದು ಅಥವಾ ಅಸೂಯೆ ಭಾವನೆ ಇರಬಹುದು. ಜೆಡಿಎಸ್ ಮುಳುಗಿ ಹೋಯಿತು ಎಂದು ಕೊಂಡವರಿಗೆ ಜೆಡಿಎಸ್ ಗೆ ಇಷ್ಟು ದೊಡ್ಡ ಸ್ಥಾನ ಸಿಕ್ಕಿದೆ. ಈ ಕಾರಣಕ್ಕೆ ಅಸೂಯೆ ಇರಬಹುದು ಎಂದರು,.

ಈ ಸಿಎಂಗೆ ಜಾಣ ಕಿವುಡು ಇದೆ. ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಎಬ್ಬಿಸಲು ಅಧಿಕಾರಕ್ಕೆ ಬಂದಿದೆ.  ದಾಖಲೆ ಬಜೆಟ್ ಮಂಡಿಸಿ ರಾಜ್ಯವನ್ನು ಸಿಎಂ ದಿವಾಳಿ ಮಾಡುತ್ತಾರೆ. ಇವತ್ತಿನ ರಾಜ್ಯದ ಪರಿಸ್ಥಿತಿ ಗಮನಿಸಿದರೆ ನಾನು ಇಲ್ಲೇ ಇರಬೇಕಿತ್ತು ಅನ್ನಿಸುತ್ತಿದೆ.

ನಾನು ವಾಪಾಸ್ ಇಲ್ಲಿಗೆ ಬರುವ ಟೈಂ ಬಂದಾಗ ಬರ್ತಿನಿ, ಕುಟುಂಬ ರಾಜಕಾರಣದ ವಿಚಾರದಲ್ಲಿ ನನ್ನ ಕುಟುಂಬಕ್ಕೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಗಲಿಲ್ಲ. ಜೆಡಿಎಸ್ ನಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರು ಬೇಕಾದರೂ ಅಧ್ಯಕ್ಷರಾಗಲಿ ಎಂದು ಹೇಳಿದ್ದೇನೆ.

ಆದರೆ ಯಾರೂ ಸಿದ್ಧರಿಲ್ಲ, ನಾನು ಏನೂ ಮಾಡಲಿ,ಜೆಡಿಎಸ್ ಅನ್ನು ಸಿಎಂ ಟಾರ್ಗೆಟ್ ಮಾಡಿದ್ದಾರೆ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರನ್ನು ಯಾವ ರೀತಿ ಮುಗಿಸಬೇಕು. ಯಾವ ರೀತಿ ಇವರ ಚಾರಿತ್ತ್ಯ ಹರಣ ಮಾಡಬೇಕು ಎಂದು ಸಿಎಂ ಬಹಳ ಪ್ರಯತ್ನ ಮಾಡುತ್ತಿದ್ದಾರೆ.

ಕುಟುಂಬದ ಒಳಗೆ ನಡೆದ ಒಂದು ಪ್ರಕರಣ ವಿಚಾರದಲ್ಲಿ ಎಚ್.ಡಿ. ದೇವೇಗೌಡರನ್ನು ಮಾನಸಿಕವಾಗಿ ಕುಗ್ಗಿಸುವ ಬಹಳ ಪ್ರಯತ್ನ ಆಗಿದೆ. ದೇವೇಗೌಡರ ಗರಡಿಯಲ್ಲೆ ಬೆಳೆದ ಸಿದ್ದರಾಮಯ್ಯ ಈಗ ದೇವೇಗೌಡ ಕುಟುಂಬಕ್ಕೆ ಕೊಡುತ್ತಿರುವ ಕೊಡುಗೆ ಒಂದಾ ಎರಡಾ?
ವೀರಪ್ಪನ್ ಪ್ರಕರಣದಲ್ಲಿ ಪೊಲೀಸರಿಗೆ ಬಹುಮಾನ ರೂಪದಲ್ಲಿ ಹಣ ನೀಡಲಾಗಿತ್ತು. ಅದು ಬಿಟ್ಟರೆ ಹಾಸನದ ಕೇಸ್ ವಿಚಾರದಲ್ಲೇ ಸರ್ಕಾರ ಪೊಲೀಸರಿಗೆ 30 ಲಕ್ಷ ರೂ. ಬಹುಮಾನವಾಗಿ ಕೊಟ್ಟಿದೆಎಂದು ಹೇಳಿದರು.

Continue Reading

Mysore

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಅಶ್ವಿನ್ ಕುಮಾರ್ ಆಯ್ಕೆ

Published

on

ಮೈಸೂರು: ತಿ.ನರಸೀಪುರ ಕ್ಷೇತ್ರದ ಮಾಜಿ ಶಾಸಕ ಅಶ್ವಿನ್ ಕುಮಾರ್ ಅವರನ್ನು ಮೈಸೂರು ಗ್ರಾಮಾಂತರ ಜೆಡಿಎಸ್ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.


ಈ ಸಂಬಂಧ ವರಿಷ್ಠ ಎಚ್.ಡಿ.ದೇವೇಗೌಡ ಆದೇಶ ಹೊರಡಿಸಿದ್ದಾರೆ. ಅಶ್ವಿನ್ ಕುಮಾರ್ ಜಿಲ್ಲಾಧ್ಯಕ್ಷರಾಗಲಿದ್ದಾರೆ ಎಂದು
ಡಿಸೆಂಬರ್ ತಿಂಗಳಲ್ಲೇ ‘ಜನಮಿತ್ರ’ ವರದಿ ಮಾಡಿತ್ತು.

ಆಯ್ಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅಶ್ವಿನ್ ಕುಮಾರ್, “ಪಕ್ಷದ ಸಂಘಟನಾತ್ಮಕ ಚಟುವಟಿಕೆಯ ಹಿತದೃಷ್ಟಿಯಿಂದ ನನ್ನ ಮೇಲೆ ಭರವಸೆ ಇಟ್ಟು ಮೈಸೂರು ಜಿಲ್ಲಾ ಗ್ರಾಮಾಂತರ ಜನತಾದಳ (ಜಾತ್ಯತೀತ) ದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಅವರಿಗೂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ನನ್ನ ಮಾರ್ಗದರ್ಶಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ವಿಶೇಷವಾಗಿ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಹಾಗೂ ನನ್ನ ಮೈಸೂರು ಜಿಲ್ಲೆಯ ಜನತಾದಳದ ನಾಯಕರು, ಮುಖಂಡು ಹಾಗೂ ಕಾರ್ಯಕರ್ತ ಬಂಧುಗಳಿಗೆ ವಿಶೇಷವಾಗಿ ನನ್ನ ಅನಂತ ಅನಂತ ಧನ್ಯವಾದಗಳು ಅರ್ಪಿಸುತ್ತೇನೆ.” ಎಂದಿದ್ದಾರೆ.

Continue Reading

Trending

error: Content is protected !!