Connect with us

Mysore

ವಿಶ್ವ ಪ್ರಜಾಪ್ರಭುತ್ವ ದಿನ ಆಚರಣೆ

Published

on

ಮೈಸೂರು : ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನಲೆಯಲ್ಲಿ ನಡೆದ ಸಂವಿಧಾನ ಪೀಠಿಕೆ ಬೋಧನೆ ಕಾರ್ಯಕ್ರಮವೂ ನಗರದಲ್ಲಿ ನಡೆಯಿತು.

ಮೈಸೂರಿನ ಒವೆಲ್ಸ್ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜನೆ
ಸಂವಿಧಾನ ಪೀಠಿಕೆಯಾನ್ನು ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಭೋದನೆ ಮಾಡಿದರು. ಬಳಿಕ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಹಂಗಾಮಿ ಮೇಯರ್ ಶಿವಕುಮಾರ್,ಉಪಮೇಯರ್ ರೂಪ,ಜಿಪಂ ಸಿಇಒ ಗಾಯತ್ರಿ,ಪಾಲಿಕೆ ಆಯುಕ್ತ ಶರೀಫ್,ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ರಂಗೇಗೌಡ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿ.
ಸಂವಿಧಾನ ಪೀಠಿಕೆ ಬೋಧನೆ ಕಾರ್ಯಕ್ರಮಕ್ಕೆ ಗೈರಾದ ಜಿಲ್ಲೆಯ ಶಾಸಕರು,ಸಂಸದರು.

Continue Reading
Click to comment

Leave a Reply

Your email address will not be published. Required fields are marked *

Mysore

ರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ

Published

on

ಮೈಸೂರು: ರಾಜ್ಯ ಸರ್ಕಾರದ ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ ಆರೋಪ ವಿಚಾರದಲ್ಲಿ, ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಯತೀಂದ್ರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ.ಅನಧಿಕೃತವಾಗಿ ವರ್ಗಾವಣೆ ಸಚಿವರಾಗಿದ್ದಾರೆ. ಸಿದ್ದರಾಮಯ್ಯಗೆ ಯತೀಂದ್ರ ಕೆಟ್ಟ ಹೆಸರು ತರುತ್ತಿದ್ದಾರೆ. ಸಿದ್ದರಾಮಯ್ಯ ತಲೆ ತಗ್ಗಿಸುವ ಕೆಲಸವನ್ನು ಯತೀಂದ್ರ ಮಾಡುತ್ತಿದ್ದಾರೆ.

ಸಿಎಂ ಮೊದಲ ಪುತ್ರ, ರಾಕೇಶ್ ಸಿದ್ದರಾಮಯ್ಯ ಅವರಿಂದ ಸಿದ್ದರಾಮಯ್ಯಗೆ ಯಾವತ್ತೂ ಮುಜುಗರ ಆಗಿರಲಿಲ್ಲ. ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ಸಿದ್ದರಾಮಯ್ಯಗೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ. ಅಪ್ಪನ ಅಧಿಕಾರವನ್ನು ಅತಿ ಹೆಚ್ಚು ಯತೀಂದ್ರ ದುರುಪಯೋಗ ಮಾಡಿ ಕೊಂಡಿದ್ದಾರೆ.

ಮಗನಿಂದ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೆ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯವಾಗಿದೆ.
ಯತೀಂದ್ರ ಅವರೇ ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ? ಮನೆ, ತೋಟ, ಆಸ್ತಿ ಎಲ್ಲಾ ಇದೆ. ನಿಮ್ಮ ಅಣ್ಣನ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಇನ್ನೂ ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ ಹೇಳಿ. ಎಲ್ಲರಿಗೂ ಗದರಿಸುವ ಸಿದ್ದರಾಮಯ್ಯ ತಮ್ಮ ಮಗನಿಗೆ ಈ ವಿಚಾರದಲ್ಲಿ ಗದರಿಸಲು ಆಗುತ್ತಿಲ್ಲ, ಮೈಸೂರು ಉಸ್ತುವಾರಿ ಸಚಿವರು ವರ್ಷದಲ್ಲಿ ಮೂರು ದಿನ ಮಾತ್ರ ಕಾಣುತ್ತಾರೆ.

ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಹಾಗೂ ದಸರಾದಲ್ಲಿ ಅಷ್ಟೆ ಜಿಲ್ಲಾ ಉಸ್ತುವಾರಿ ಸಚಿವರು ಕಾಣುತ್ತಾರೆ. ಇಡೀ ಮೈಸೂರು ಅಭಿವೃದ್ಧಿ ಸತ್ತು ಹೋಗಿದೆ. ವರ್ಗಾವಣೆ ದಂಧೆ ಮೈಸೂರಲ್ಲಿ ದೊಡ್ಡ ಮಟ್ಟದಲ್ಲಿ ಸಾಗಿದೆ. ಯತೀಂದ್ರ ಬಾಯಲ್ಲಿ ಒಂದು ದಿನವಾದರೂ ಮೈಸೂರು ಅಭಿವೃದ್ಧಿ ಮಾತು ಬಂದಿದ್ಯಾ? ನಾಳೆ ಬೆಳಗ್ಗೆ ಬಿಬಿಎಂಪಿ, ಮೈಸೂರು ಪಾಲಿಕೆ ಚುನಾವಣೆ ನಡೆದೆ ಕಾಂಗ್ರೆಸ್ ಧೂಳೀಪಟ ಆಗುತ್ತದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ಕಾಂಗ್ರೆಸ್‌ಗೆ ಧೈರ್ಯ ಇಲ್ಲ, ಅಧಿಕಾರ ಹಸ್ತಾಂತರ ಇಲ್ಲ ಎಂಬ ಯತೀಂದ್ರ ಹೇಳಿಕೆ ಅವರ ತಂದೆಯ ಮನದ ಮಾತು. ಸಿದ್ದರಾಮಯ್ಯ ಹೇಳಲು ಆಗದ್ದನ್ನು ಮಗನ‌ ಮೂಲಕ ಹೇಳಿಸುತ್ತಿದ್ದಾರೆ.

ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ ಗೆ ರಾಜ್ಯದಲ್ಲಿ ಯಾವ ಸ್ಥಿತಿ ಬಂತೋ ಅದೇ ಸ್ಥಿತಿ ಈಗಲು ಕಾಂಗ್ರೆಸ್ ಗೆ ಬರುತ್ತದೆ.
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಭವಿಷ್ಯ ನುಡಿದಿದ್ದಾರೆ.

Continue Reading

Mysore

ಭಜನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ: ಗುರುಮೂರ್ತಿ, ಗುರುಗೆ ಸನ್ಮಾನ

Published

on

ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಭಜನಾ ಸ್ಪರ್ಧೆಯಲ್ಲಿ ಜೆಎಸ್ ಎಸ್ ಎರಡನೇ ಹಂತದ ಬಡಾವಣೆಯ ಶ್ರೀ ಶಿವರಾತ್ರಿ ರಾಜೇಂದ್ರ ಭಜನಾ ಮತ್ತು ಕಲಾತಂಡವು ಭಾಗವಹಿಸಿದ್ದು ಮೂರನೆ ಸ್ಥಾನ ಗಳಿಸಿತು‌. ಈ ಹಿನ್ನೆಲೆಯಲ್ಲಿ ಭಜನಾ ಮಾಸ್ಟರ್ ದೇವನೂರಿನ ಗುರುಮೂರ್ತಿ ಮತ್ತು ಕಂಜಿರ ನುಡಿಸಿದ ಗುರು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.


ಭಜನಾ ಮಂಡಳಿ ಅಧ್ಯಕ್ಷ ಗುರು ಬಸಪ್ಪ, ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ ಸ್ವಾಮಿ, ಖಜಾಂಚಿ ಬಿ ಪರಶಿವಮೂರ್ತಿ, ನಿರ್ದೇಶಕರಾದ ಸುಂದರರಾಜ, ಪರಮೇಶ್ವರ್ ಸತೀಶ್ ಪುಟ್ಟಣ್ಣ, ಜಿ. ಮಹದೇವಪ್ಪ, ಸಿದ್ದಲಿಂಗಸ್ವಾಮಿ, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಂಗಾಧರ್ , ಉಪಾಧ್ಯಕ್ಷ ಸೋಮಶೇಖರ್, ನಿರ್ಗಮಿತ ಅಧ್ಯಕ್ಷ ಮುದ್ದು ಬಸವಣ್ಣ, ಮೈಸೂರಿನ ಬಸವ ಬಳಗ ಪೂರ್ವ ವಲಯದ ಅಧ್ಯಕ್ಷರ ಶಿವಸ್ವಾಮಿ, ಲಲಿತಾದ್ರಿ ಮಹಿಳಾ ಬಳಗದ ಅಧ್ಯಕ್ಷೆ ಜ್ಯೋತಿ, ಡಾ. ಓಂಪ್ರಕಾಶ್ ಉಪಸ್ಥಿತರಿದ್ದರು.

Continue Reading

Mysore

ಸೋಲು ಗೆಲುವು ಸಾಮಾನ್ಯ, ಸಮನಾಗಿ ಸ್ವೀಕರಿಸಿ : ಕ್ರೀಡಾಪಟುಗಳಿಗೆ ಸಂಸದ ಸುನಿಲ್ ಬೋಸ್ ಕರೆ

Published

on

ವರದಿ:  ಮಹದೇವಸ್ವಾಮಿ ಪಟೇಲ್

ನಂಜನಗೂಡು: ಕ್ರೀಡೆ ಮತ್ತು ಆಟ ಅಂದ ಮೇಲೆ ಸೋಲು ಗೆಲುವು ಸಾಮಾನ್ಯ. ಇವೆರಡನ್ನು ಸಮಾನಾಗಿ ಸ್ವೀಕರಿಸಬೇಕು. ಯಾವುದೇ ಅಹಿತಕರ ಘಟನೆ ಜರುಗದಂತೆ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೊಳಿಸಿದ್ದೀರ. ಗೆದ್ದ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಂಜನಗೂಡು ತಾಲೂಕು ಹೆಜ್ಜೆಗೆ ಜೋಡಿ ಮಾರಮ್ಮ ಹಬ್ಬದ ಪ್ರಯುಕ್ತ ಎಚ್.ಎಸ್. ಲಕ್ಷ್ಮೀನಾರಾಯಣ ಹಾಗೂ ಹೆಜ್ಜೆಗೆ ಆರ್ ಇಂಧನ ಬಾಬು ಅವರ ಸಾರಥ್ಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕ್ರೀಡಾಕೂಟದಲ್ಲಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಈ ಪೈಕಿ ಫೈನಲ್ ಪಂದ್ಯದಲ್ಲಿ ಗೆಲುವಿನಗೆ ಬೀರಿ ಮೊದಲನೇ ಸ್ಥಾನ ಪಡೆದ ಉಪ್ಪಿನಳ್ಳಿ ತಂಡ, ರನ್ನರ್ ಅಪ್ ಆದ ಹೆಜ್ಜಿಗೆ ಮತ್ತು ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕ್ರೀಡೆ ಮತ್ತು ಆಟದಲ್ಲಿ ಸೋಲು ಗೆಲುವು ಎರಡು ಇರುತ್ತದೆ. ಇವೆರಡನ್ನು ಸಮನಾಗಿ ಸ್ವೀಕರಿಸಬೇಕು. ಸೋಲು ಗೆಲುವಿಗಿಂತ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವವನ್ನ ಬೆಳೆಸಿಕೊಳ್ಳಬೇಕು. ಕ್ರೀಡೆ ಕೇವಲ ಪ್ರಶಸ್ತಿಗಾಗಿ ಸೀಮಿತಗೊಳ್ಳಿಸಿಕೊಳ್ಳಬಾರದು. ನಮ್ಮ ದೇಹಕ್ಕೆ ಕ್ರೀಡೆ ಮತ್ತು ವ್ಯಾಯಾಮ ಅತ್ಯಗತ್ಯವಾಗಿದೆ. ದೇಹದಲ್ಲಿನ ಕಲ್ಮಶ ನೀರನ್ನು ಹೊರ ತೆಗೆಯುವಲ್ಲಿ ಕ್ರೀಡೆ ಮತ್ತು ವ್ಯಾಯಾಮ ಅನುಕೂಲವಾಗುತ್ತದೆ. ಆಯೋಜಿಸಿದ್ದ ಕ್ರೀಡಾಕೂಟದಲ್ಲಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ, ಯಾವುದೇ ಅಹಿತಕರ ಘಟನೆ ಜರುಗದಂತೆ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದೀರ. ಮುಂದಿನ ದಿನಗಳಲ್ಲೂ ಇನ್ನು ಹೆಚ್ಚು ಹೆಚ್ಚು ಕ್ರೀಡೆಗಳು ಆಯೋಜನೆಗೊಳ್ಳಲಿ. ಇದನ್ನು ಆಯೋಜಿಸಿದ ಇಂಧನ ಬಾಬು ಸೇರಿದಂತೆ ಇನ್ನಿತರರಿಗೆ ಹೃತ್ಪೂರ್ವಕ ಅಭಿನಂದನೆಗಳು ಅಂತ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮಾಜಿ ಧರ್ಮದರ್ಶಿ ಹೆಜ್ಜಿಗೆ ಇಂಧನ ಬಾಬು, ತಗಡೂರು ಬ್ಲಾಕ್ ಯೂಥ್ ಅಧ್ಯಕ್ಷ ಹಾಗೂ ಗುತ್ತಿಗೆದಾರರಾದ ಹೆಜ್ಜಿಗೆ ರವಿ, ಹಾಡ್ಯ ರಂಗಸ್ವಾಮಿ,
ಚೋಳ್ ರಾಜ್, ಕಾರವಾನ್ ಬಾರ್ ಗಿರಿ, ದಿನೇಶ್, ಆರ್ ಮಹದೇವು, ಸೇರಿದಂತೆ ಇನ್ನಿತರರು ಹಾಜರಿದ್ದರು.

Continue Reading

Trending

error: Content is protected !!