Chikmagalur
ಚಿರತೆ ಹೊಡೆದು ಮದಗದ ಕೆರೆ ಎಸೆತ ಪ್ರಕರಣ:ತನಿಖೆಗೆ ಪರಿಸರ ಪ್ರೇಮಿಗಳ ಒತ್ತಾಯ.
ಕಡೂರು : ತಾಲ್ಲೂಕಿನ ಮದಗದ ಕೆರೆಯಲ್ಲಿ ಅಂದಾಜು ಐದು ವರ್ಷದ ಗಂಡು ಚಿರತೆ ಮೃತ ದೇಹ ತೇಲುವ ಸ್ಥಿತಿಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ. ಇದೇ ವ್ಯಾಪ್ತಿಯ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಸ್ಥಳೀಯ ಮೂರ್ತಿ ಮತ್ತು ರಾಜಣ್ಣ ಎನ್ನುವರ ಮೇಲೆ ನಿತ್ರಣಗೊಂಡಿದ ಚಿರತೆಯೊಂದು ದಾಳಿ ಮಾಡಿತ್ತು.ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.ದಾಳಿ ನಂತರ ಚಿರತೆ ಅಲ್ಲಿಯೇ ಪೊದೆಯಲ್ಲಿ ಇತ್ತು ಎನ್ನಲಾಗಿದೆ.ಇದನ್ನು ಗಮನಿಸಿದ ಕೆಲವರು ಕಲ್ಲು ,ದೊಣ್ಣೆಗಳಿಂದ ಹೊಡೆದು ಕೊಂದು, ಮದಗದ ಕೆರೆ ಹಾಕಿದ್ದಾರೆ ಎನ್ನುವುದು ಸ್ಥಳೀಯರ ವಾದ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದು ಮರಣೋತ್ತರ ಪರೀಕ್ಷೆ ಮಾಡುವಾಗ ಚಿರತೆ ಮಾಡುವಾಗ ಚಿರತೆಯ ತಲೆಯ ಮೇಲೆ ಗಾಯ ಪತ್ತೆಯಾಗಿದೆ.ಅದರ ದೇಹದ ಮೇಲೆ ಹಲವಾರು ಕಡೆ ಹಲ್ಲೆ ಆಗಿರುವ ಕುರುಹುಗಳು ಪತ್ತೆಯಾಗಿವೆ.ಈ ಸಂಭಂದ ಸ್ಥಳದಲ್ಲಿ ಪಶುವೈದ್ಯರು ಇದನ್ನು ದಾಖಲು ಮಾಡಿದ್ದಾರೆ.

ಸ್ಥಳೀಯರ ಪ್ರಕಾರ ವಾಹನ ಡಿಕ್ಕಿ ಹೊಡೆದು ನಿತ್ರಣಗೊಂಡು ಅಲ್ಲೇ ಇತ್ತು ಮತ್ತು ಸ್ಥಳೀಯ ದಾರಿ ಹೋಕರ ಮೇಲೆ ದಾಳಿ ಮಾಡಿತ್ತು.ಇದನ್ನು ದುಷ್ಕರ್ಮಿಗಳು ಹೊಡೆದು ಕೊಂದು ಹಾಕಿದ್ದಾರೆ ಎನ್ನುತ್ತಾರೆ.
ತನಿಖೆಗೆ ಒತ್ತಾಯ:ಚಿರತೆಯ ಅಮಾನುಷ ಹತ್ಯನ್ನು ಖಂಡಿಸಿದ ಪರಿಸರ ಪ್ರೇಮಿಗಳು ಇದನ್ನು ಸರಿಯಾಗಿ ತನಿಖೆ ಮಾಡಿ ತಪ್ಪಿತಸ್ಥ ಜನರ ವಿರುದ್ಧ ಕೇಸು ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Chikmagalur
ಅಡಿಕೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ₹5.7 ಲಕ್ಷ ಮೌಲ್ಯದ ಸ್ವತ್ತು ವಶ
ಬಾಳೆಹೊನ್ನೂರು: ಬನ್ನೂರು ಗ್ರಾಮದ ಜಕ್ಕಣಕ್ಕಿಯಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಬಾಳೆಹೊನ್ನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ₹5.7 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬನ್ನೂರು ಗ್ರಾಮದ ತೋಟದ ಗೋಡೌನ್‌ನ ಹೆಂಚನ್ನು ತೆಗೆದು ಅಡಿಕೆ ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬಾಳೆಹೊನ್ನೂರು ಪೊಲೀಸ್ ಠಾಣೆಯ ತಂಡವು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಬಂಧಿತರಿಂದ ₹2,70,000 ಮೌಲ್ಯದ 10 ಚೀಲ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕಳ್ಳತನ ಕೃತ್ಯಕ್ಕೆ ಬಳಸಿದ್ದ ಟಾಟಾ ಸೂಪರ್ ಕ್ಯಾರಿ ಗೂಡ್ಸ್ ವಾಹನ ಹಾಗೂ ಓಮಿನಿ ಕಾರನ್ನು ಜಪ್ತಿ ಮಾಡಲಾಗಿದ್ದು, ಒಟ್ಟು ₹5.7 ಲಕ್ಷ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನರಸಿಂಹರಾಜಪುರ ವೃತ್ತದ ಸಿಪಿಐ ಗುರುದತ್ ಕಾಮತ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು ಪಿಎಸ್ಐ ಅಂಬರೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶಂಕರ್, ಶಂಕರಪ್ಪ ಎಂ.ಬಿ., ಮನು, ಭೀಮಸೇನ್, ಗಿರೀಶ್ ಕುಮಾರ್, ಕಾರ್ತಿಕ್, ರಘು ಕೆ., ಆನಂದ ಬಿರಾದಾರ್, ಕಿರಣ್ ಕುಮಾರ್, ಮಂಜುನಾಥ ಬಿರಿಗಾಲ್ ಮತ್ತು ಚನ್ನಯ್ಯ ಭಾಗವಹಿಸಿದ್ದರು.
Chikmagalur
ಶಾಸಕ ಹೆಚ್.ಡಿ. ತಮ್ಮಯ್ಯ ಭಾವಚಿತ್ರಕ್ಕೆ ಬ್ಲೇಡ್, ಇಬ್ಬರ ಬಂಧನ
ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಶಾಸಕ ಹೆಚ್.ಡಿ. ತಮ್ಮಯ್ಯ ಅವರ ಭಾವಚಿತ್ರಕ್ಕೆ ಬ್ಲೇಡ್ ಹಾಕಿದ ಘಟನೆ ನಡೆದಿದೆ. ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಕ್ಕೂ ಹಾನಿ ಮಾಡಲಾಗಿದೆ.
ಈ ಸಂಬಂಧ ಬಸವನಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂದೀಪ್ (27) ಹಾಗೂ ದಿಲೀಪ್ (20) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ಇಬ್ಬರೂ ಮದ್ಯದ ಅಮಲಿನಲ್ಲಿ ಫ್ಲೆಕ್ಸ್‌ಗೆ ಬ್ಲೇಡ್ ಹಾಕಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ವಿಚಾರಣೆಯ ವೇಳೆ, “ನನಗೆ ಈ ಶಾಸಕ ಇಷ್ಟವಿಲ್ಲ” ಎಂಬ ಕಾರಣಕ್ಕೆ ಕೃತ್ಯ ಎಸಗಿರುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ.
ಬಂಧಿತರಿಬ್ಬರೂ ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಗ್ರಾಮದ ನಿವಾಸಿಗಳಾಗಿದ್ದಾರೆ. ಸಂದೀಪ್ ಕೂಲಿ ಕಾರ್ಮಿಕನಾಗಿದ್ದು, ದಿಲೀಪ್ ಕೆಇಬಿ ಗುತ್ತಿಗೆ ಆಧಾರಿತ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಘಟನೆ ಕುರಿತು ಬಸವನಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Chikmagalur
ರಾಮಲಿಂಗಾರೆಡ್ಡಿ ರಾಜೀನಾಮೆ| ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ಆಘಾತ: ಸಿ.ಟಿ. ರವಿ ವ್ಯಂಗ್ಯ
ಚಿಕ್ಕಮಗಳೂರು: “ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲ ಬಾಲಿಗೇ ಸಿಕ್ಸ್ ಹೊಡೆಯಲು ಹೋಗಿ ಹಿಟ್ ವಿಕೆಟ್ ಆಗಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವ್ಯಂಗ್ಯವಾಡಿದರು.
ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ಸಂಪುಟ ದರ್ಜೆಯ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಜೀನಾಮೆ ನೀಡಿರುವುದು ಸರ್ಕಾರದ ಆಂತರಿಕ ಪರಿಸ್ಥಿತಿ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ” ಎಂದು ಹೇಳಿದರು.

ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಭವಿಷ್ಯದ ರಾಜಕೀಯ ಬೆಳವಣಿಗೆಗಳಿಗೆ ಮುನ್ಸೂಚನೆಯಾಗಿದ್ದು, ಇದು ಆಡಳಿತದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕವಿದೆ ಎಂದು ಅವರು ಅಭಿಪ್ರಾಯಪಟ್ಟರು.
“ರಾಮಲಿಂಗಾರೆಡ್ಡಿ ಯಾರಿಗೆ ಮಾತು ಕೊಟ್ಟಿದ್ದರು, ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಜನರಿಗೆ ಗೋಚರವಾಗುತ್ತಿರುವುದು ರಾಜೀನಾಮೆ ಮತ್ತು ಸರ್ಕಾರದೊಳಗಿನ ಆಂತರಿಕ ಬೇಗುದಿ ಮಾತ್ರ. ಹಿರಿಯ ನಾಯಕ ಸತೀಶ್ ಜಾರಕಿಹೊಳಿ ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹಾಗೂ ರಾಮಲಿಂಗಾರೆಡ್ಡಿ ರಾಜೀನಾಮೆ ಇವೆಲ್ಲವೂ ಮುಂದಿನ ಬೆಳವಣಿಗೆಗಳಿಗೆ ಮುನ್ಸೂಚನೆ ನೀಡುತ್ತಿವೆ” ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಹಿರಿಯ ಸಚಿವರಲ್ಲೇ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ. “ಈಗಲೇ ಈ ರೀತಿಯ ಆಂತರಿಕ ಬೇಗುದಿ ಕಂಡುಬರುತ್ತಿದ್ದರೆ, ಸಂಪೂರ್ಣ ಸಚಿವ ಸಂಪುಟ ರಚನೆಯಾದ ಬಳಿಕ ಇನ್ನಷ್ಟು ಗಂಭೀರ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ” ಎಂದು ನುಡಿದರು.
ಬಣ ರಾಜಕೀಯ ಹಿಂದೆಯೂ ಇತ್ತು, ಈಗಲೂ ಇದೆ ಹಾಗೂ ಮುಂದೆಯೂ ಇರುತ್ತದೆ. ಆದರೆ ಅದು ರಾಜ್ಯ ಮತ್ತು ಪಕ್ಷದ ಹಿತಾಸಕ್ತಿಯನ್ನು ಮೀರಬಾರದು. ಬಣಗಳ ನಡುವಿನ ಸ್ಪರ್ಧೆ ಆಡಳಿತದ ಮೇಲೆ ಪರಿಣಾಮ ಬೀರಿದರೆ ರಾಜ್ಯದ ಅಭಿವೃದ್ಧಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
-
Special8 hours agoರಾಜ್ಯದಲ್ಲಿ ನೇಮಕಾತಿ ಹಬ್ಬ: ಸರಣಿ ಉದ್ಯೋಗ ಅಧಿಸೂಚನೆಗಳಿಗೆ ಕ್ಷಣಗಣನೆ!!
-
Kodagu23 hours agoಕೊಡಗು : ಭಾರೀ ವಾಹನಗಳ ಸಂಚಾರ ನಿಷೇಧ
-
Politics20 hours agoರಾಜೀನಾಮೆ ಹಿಂಪಡೆದ ರಾಮಲಿಂಗಾರೆಡ್ಡಿ
-
National22 hours agoಗಿಲ್–ರಾಹುಲ್ ಶತಕದ ಹೊಳಪು: ಅಫ್ಘಾನಿಸ್ತಾನದ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತದ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ
-
Hassan20 hours agoKCET ಫಲಿತಾಂಶ ಪ್ರಕಟ: HKSನ ಯಜತ್ ಗೌಡ ಜಿಲ್ಲೆಗೆ ಪ್ರಥಮ
-
Hassan8 hours agoಐತಿಹಾಸಿಕ ಸಾಧನೆ ಗೈದ ಕೆಪಿಎಸ್ ಪಿಯು ಕಾಲೇಜು
-
State19 hours agoರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
-
Politics24 hours agoರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್: ಸಚಿವ ಸಂಪುಟದಲ್ಲಿ ಮುಂದುವರಿಕೆ – ಸುರ್ಜೇವಾಲ ಸ್ಪಷ್ಟನೆ
