Sports
IPL 2025: ಲಖನೌ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಡೆಲ್ಲಿ
ವಿಶಾಖಪಟ್ಟಣಂ: ಇಂಪ್ಯಾಕ್ಟ್ ಪ್ಲೇಯರ್ ಅಶುತೋಷ್ ಶರ್ಮಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡ ರೋಚಕ ಹಣಾಹಣಿಯಲ್ಲಿ ಒಂದು ವಿಕೆಟ್‌ಗಳ ಅಂತರದಿಂದ ಲಖನೌ ತಂಡವನ್ನು ಮಣಿಸುವ ಮೂಲಕ ಮೊದಲ ಗೆಲುವು ದಾಖಲಿಸಿ ಶುಭಾರಂಭ ಮಾಡಿತು.
ಇಲ್ಲಿನ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಖನೌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕೆಲಹಾಕಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಸಿ 1 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿತು.
ಲಖನೌ ಪರ ಮಿಚೆಲ್ ಮಾರ್ಷ್ 72(36), ನಿಕೋಲಸ್ ಪೂರನ್ 75(30) ರನ್ ಗಳ ನೆರವಿನಿಂದ ತಂಡ ಇನ್ನೂರರ ಗಡಿ ದಾಟಲು ಸಹಕರಿಸಿದರು. ಮಾರ್ಕ್ರಂ 15, , ಮಿಲ್ಲರ್ 27, ಆಯುಷ್ ಬದೋನಿ 4, ಶಹಬಾಜ್ ಅಹ್ಮದ್ 9, ನಾಯಕ ಪಂತ್, ರವಿ ಬಿಷ್ಣೋಯ್ ಹಾಗೂ ಶಾರ್ದುಲ್ ಠಾಕೂರ್ ಸೇರಿದಂತೆ ಮೂವರು ಬ್ಯಾಟ್ಸ್‌ಮನ್‌ಗಳು ಡಕ್‌ಔಟ್ ಆದರು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಮೂರು, ಕುಲ್ದೀಪ್ ಯಾದವ್ ಎರಡು, ಮುಖೇಶ್ ಕುಮಾರ್ ಹಾಗೂ ವಿಪ್ರಾವ್ ನಿಗಮ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಜೇಕ್ ಫ್ರೆಸರ್ ಕೇವಲ ಒಂದು ರನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಅಭಿಷೇಕ್ ಪೂರೆಲ್ ಡಕ್‌ಔಟ್ ಹೊರನಡೆದರು. ಸಮೀರ್ ರಿಜ್ವಿ ನಾಲ್ಕು ರನ್‌ಗಳಿಗೆ ಸುಸ್ತಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಡೆಲ್ಲಿ ಕೇವಲ 8 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
ಬಳಿಕ ಜೊತೆಯಾದ ಫಾಫ್ ಡು ಪ್ಲೆಸಿ ಹಾಗೂ ನಾಯಕ ಅಕ್ಷರ್ ಪಟೇಲ್ ತಂಡಕ್ಕೆ ಚೇತರಿಕೆ ಆಟವಾಡಿದರು. ಈ ಇಬ್ಬರು ಕ್ರಮವಾಗಿ 29(18) ಮತ್ತು 22(11) ರನ್ ಗಳಿಸಿ ಔಟಾದರು. ನಂತರ ಸ್ಟಬ್ಸ್ 34(22), ವಿಪ್ರಾಜ್ ನಿಗಮ್ 39(15), ಮಿಚೆಲ್ ಸ್ಟಾರ್ಕ್ 2, ಕಲ್ದೀಪ್ ಯಾದವ್ 5 ರನ್ ಗಳಿಸಿ ಔಟಾದರು.
ಆದರೆ ಮತ್ತೊಂದೆಡೆ ಛಲ ಬಿಡದೇ ಬ್ಯಾಟ್ ಬೀಸಿದ ಇಂಪ್ಯಾಕ್ಟ್ ಪ್ಲೇಯರ್ ಅಶುತೋಶ್ ಶರ್ಮಾ ಔಟಾಗದೇ 31 ಎಸತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 66 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮೋಹಿತ್ ಶರ್ಮಾ ಒಂದು ರನ್ ಗಳಿಸಿ ಔಟಾಗದೇ ಉಳಿದರು.
ಲಖನೌ ಪರ ಶಾರ್ದುಲ್ ಠಾಕೂರ್, ಸಿದ್ಧಾರ್ಥ್, ದಿಗ್ವೇಶ್ ಹಾಗೂ ರವಿ ಬಿಷ್ಣೋಯ್ ತಲಾ ಎರಡೆರೆಡು ವಿಕೆಟ್ ಕಬಳಿಸಿದರು.
National
U-19 World Cup| ವೈಭವ್‌ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
ಹರಾರೆ: ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಯಂಗ್ ಇಂಡಿಯಾ ತಂಡ ಇತಿಹಾಸ ಸೃಷ್ಟಿಸಿದೆ. ಅಂಡರ್- 19 ವಿಶ್ವಕಪ್ ಫೈನಲ್‌ನಲ್ಲಿ ಭಾರತ v/s ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್ಗಳಿಂದ ಸೋಲಿಸಿದ್ದು, ಭಾರತ ಸತತ ಆರನೇ ಬಾರಿಗೆ ಅಂಡರ್- 19 ವಿಶ್ವಕಪ್ ಎತ್ತಿಹಿಡಿದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 411 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವೂ 311 ರನ್‌ಗಳಿಗೆ ಆಲೌಟ್ ಆಗುವ ಮೂಲಕ 100 ರನ್ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಈ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಈ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು.

ವೈಭವ್‌ನ ಸ್ಫೋಟಕ ಶತಕ
ಈ ವೇಳೆ ವೈಭವ್ 39 ಎಸೆತಗಳಲ್ಲಿ ವೇದಾಂತ್ ತ್ರಿವೇದಿ ಅವರೊಂದಿಗೆ ಮೂರನೇ ವಿಕೆಟ್‌ಗೆ 89 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವೈಭವ್ ವಿಕೆಟ್ ಪತನವಾದಾಗ ತಂಡದ ಮೊತ್ತ 251 ರನ್ ಆಗಿತ್ತು. ಇದರ ನಂತರ ಉಳಿದ 7 ಆಟಗಾರರು ಸ್ಕೋರ್ ಬೋರ್ಡ್ಗೆ 160 ರನ್ ಸೇರಿಸಿದರು. ವೇದಾಂತ್ 36 ಎಸೆತಗಳಲ್ಲಿ 32 ರನ್ ಗಳಿಸಿದರೆ, ವಿಹಾನ್ ಮಲ್ಹೋತ್ರಾ 36 ಎಸೆತಗಳಲ್ಲಿ 30 ರನ್ ಬಾರಿಸಿದರು. ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್, ಅಂಬ್ರಿಸ್ ಕೇವಲ 18 ರನ್, ಕನಿಷ್ಕ್ ಚೌಹಾಣ್ 20 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್ ಪಡೆದರೆ, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಏಕಾಂಗಿ ಹೋರಾಟ ಮಾಡಿದ ಫಾಕ್ನರ್ ಆಟ ವ್ಯರ್ಥ
ಭಾರತ ನೀಡಿದ 412 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 40.2 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಕ್ಯಾಲೆಬ್ ಫಾಕ್ನರ್ 67 ಎಸೆತಗಳಲ್ಲಿ 115 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಇನ್ನೊಂದು ತುದಿಯಿಂದ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ. ಫಾಕ್ನರ್ ಹೊರತುಪಡಿಸಿ ಬೆನ್ ಡಾಕಿನ್ಸ್ 66 ಮತ್ತು ಬೆನ್ ಮೇಯಸ್ 45 ರನ್‌ಗಳ ಇನ್ನಿಂಗ್ಸ್ ಆಡಿದರು. ನಾಯಕ ಥಾಮಸ್ 31 ರನ್ಗಳನ್ನು ನೀಡಿದರು. ಇಂಗ್ಲೆಂಡ್ ತಂಡ ಉತ್ತಮ ಪಡೆಯಿತ್ತಾದರೂ ಮಧ್ಯಮ ಓವರ್‌ಗಳಲ್ಲಿ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದಾಗಿ ತಂಡಕ್ಕೆ ಬೃಹತ್ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಕೊನೆಗೂ 140 ಕೋಟಿ ಭಾರತೀಯರ ಕನಸು ನನಸಾಗಿದೆ. ಐಸಿಸಿ ಅಂಡರ್-19 ವಿಶ್ವಕಪ್ 2026ರ ಟ್ರೋಫಿಗೆ ‘ಯಂಗ್ ಇಂಡಿಯಾ’ ಮುತ್ತಿಟ್ಟಿದೆ. ಹರಾರೆಯಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 100 ರನ್‌ಗಳ ಭರ್ಜರಿ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
National - International
ನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
T-20 World Cup 2026: 10ನೇ ಆವೃತ್ತಿಯ ಟಿ-20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ನಾಳೆಯಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಮೆಂಟ್‌ನಲ್ಲಿ ಒಟ್ಟು 20 ತಂಡಗಳು ಸ್ಪರ್ಧಿಸಲಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಭಾರತ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
20 ತಂಡಗಳ 4 ಗುಂಪುಗಳು ಯಾವ್ಯಾವು?
ಗುಂಪು -ಎ: ಭಾರತ, ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್, ನಮೀಬಿಯಾ.
ಗುಂಪು- ಬಿ: ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಐರ್ಲೆಂಡ್, ಓಮನ್.
ಗುಂಪು- ಸಿ: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಇಟಲಿ, ನೇಪಾಳ, ಸ್ಕಾಟ್ಲೆಂಡ್.
ಗುಂಪು -ಡಿ: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಕೆನಡಾ, ಯುಎಇ.

ಆತಿಥ್ಯದ ಸ್ಥಳಗಳು ಯಾವ್ಯಾವು?
ಭಾರತ
- ಈಡನ್ ಗಾರ್ಡನ್ಸ್- ಕೋಲ್ಕತ್ತಾ
- ವಾಂಖೆಡೆ ಸ್ಟೇಡಿಯಂ- ಮುಂಬೈ
- ಎಂಎ ಚಿದಂಬರಂ ಸ್ಟೇಡಿಯಂ- ಚೆನ್ನೈ
- ನರೇಂದ್ರ ಮೋದಿ ಕ್ರೀಡಾಂಗಣ- ಅಹಮದಾಬಾದ್
- ಅರುಣ್ ಜೇಟ್ಲಿ ಕ್ರೀಡಾಂಗಣ- ದೆಹಲಿ
ಶ್ರೀಲಂಕಾ
- ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್- ಕೊಲಂಬೊ
- ಆರ್.ಪ್ರೇಮದಾಸ ಕ್ರೀಡಾಂಗಣ- ಕೊಲಂಬೊ
- ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ- ಪಲ್ಲೆಕೆಲೆ
ಟಿ-20 ವಿಶ್ವಕಪ್ ಪಂದ್ಯದ ವೇಳಾಪಟ್ಟಿ ಏನು?
1.ಫೆ. 7 (ಶನಿವಾರ)
- ಪಾಕಿಸ್ತಾನ v/s ನೆದರ್ಲ್ಯಾಂಡ್ಸ್ — ಕೊಲಂಬೊ — ಬೆಳಿಗ್ಗೆ 11:00
- ವೆಸ್ಟ್ ಇಂಡೀಸ್ v/s ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00
- ಭಾರತ v/s ಅಮೆರಿಕ – ಮುಂಬೈ – ಸಂಜೆ 7:00
2.ಫೆ.8 (ಭಾನುವಾರ)
- ನ್ಯೂಜಿಲೆಂಡ್ v/s ಅಫ್ಘಾನಿಸ್ತಾನ – ಚೆನ್ನೈ – ಬೆಳಿಗ್ಗೆ 11:00
- ಇಂಗ್ಲೆಂಡ್ v/s ನೇಪಾಳ – ಮುಂಬೈ – ಮಧ್ಯಾಹ್ನ 3:00
- ಶ್ರೀಲಂಕಾ v/s ಐರ್ಲೆಂಡ್ – ಕೊಲಂಬೊ- ಸಂಜೆ 7:00
3.ಫೆ. 9 (ಸೋಮವಾರ)
- ಸ್ಕಾಟ್ಲೆಂಡ್ v/s ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00
- ಜಿಂಬಾಬ್ವೆ v/s ಓಮನ್ – ಕೊಲಂಬೊ – ಮಧ್ಯಾಹ್ನ 3:00
- ದಕ್ಷಿಣ ಆಫ್ರಿಕಾ v/s ಕೆನಡಾ – ಅಹಮದಾಬಾದ್ – ಸಂಜೆ 7:00
4. ಫೆ.10 (ಮಂಗಳವಾರ)
- ನೆದರ್ಲ್ಯಾಂಡ್ಸ್ v/s ನಮೀಬಿಯಾ — ದೆಹಲಿ — ಬೆಳಿಗ್ಗೆ 11:00
- ನ್ಯೂಜಿಲೆಂಡ್ v/s ಯುಎಇ – ಚೆನ್ನೈ – ಮಧ್ಯಾಹ್ನ 3:00
- ಪಾಕಿಸ್ತಾನ v/s ಅಮೆರಿಕ — ಕೊಲಂಬೊ— ಸಂಜೆ 7:00
5. ಫೆ. 11 (ಬುಧವಾರ)
- ದಕ್ಷಿಣ ಆಫ್ರಿಕಾ v/s ಅಫ್ಘಾನಿಸ್ತಾನ – ಅಹಮದಾಬಾದ್ – ಬೆಳಿಗ್ಗೆ 11:00
- ಆಸ್ಟ್ರೇಲಿಯಾ v/s ಐರ್ಲೆಂಡ್ – ಕೊಲಂಬೊ – ಮಧ್ಯಾಹ್ನ 3:00
- ಇಂಗ್ಲೆಂಡ್ v/s ವೆಸ್ಟ್ ಇಂಡೀಸ್ – ಮುಂಬೈ – ಸಂಜೆ 7:00 ಗಂಟೆಗೆ
6.ಫೆ.12 (ಗುರುವಾರ)
- ಶ್ರೀಲಂಕಾ v/s ಓಮನ್ — ಕ್ಯಾಂಡಿ — ಬೆಳಿಗ್ಗೆ 11:00
- ನೇಪಾಳ v/s ಇಟಲಿ — ಮುಂಬೈ — ಮಧ್ಯಾಹ್ನ 3:00
- ಭಾರತ v/s ನಮೀಬಿಯಾ — ದೆಹಲಿ — ಸಂಜೆ 7:00
7. ಫೆ. 13 (ಶುಕ್ರವಾರ)
- ಆಸ್ಟ್ರೇಲಿಯಾ v/s ಜಿಂಬಾಬ್ವೆ — ಕೊಲಂಬೊ— ಬೆಳಿಗ್ಗೆ 11:00
- ಕೆನಡಾ v/s ಯುಎಇ — ದೆಹಲಿ — ಮಧ್ಯಾಹ್ನ 3:00
- ಅಮೆರಿಕ v/s ನೆದರ್ಲ್ಯಾಂಡ್ಸ್ — ಚೆನ್ನೈ — ಸಂಜೆ 7:00
8. ಫೆ. 14 (ಶನಿವಾರ)
- ಐರ್ಲೆಂಡ್ v/s ಓಮನ್ — ಕೊಲಂಬೊ — ಬೆಳಿಗ್ಗೆ 11:00
- ಇಂಗ್ಲೆಂಡ್ v/s ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00
- ನ್ಯೂಜಿಲೆಂಡ್ v/s ದಕ್ಷಿಣ ಆಫ್ರಿಕಾ – ಅಹಮದಾಬಾದ್ – ಸಂಜೆ 7:00
9. ಫೆ. 15 (ಭಾನುವಾರ)
- ವೆಸ್ಟ್ ಇಂಡೀಸ್ v/s ನೇಪಾಳ – ಮುಂಬೈ – ಬೆಳಿಗ್ಗೆ 11:00
- ಅಮೆರಿಕ v/s ನಮೀಬಿಯಾ — ಚೆನ್ನೈ — 3:00
- ಭಾರತ /vs ಪಾಕಿಸ್ತಾನ – ಕೊಲಂಬೊ- ಸಂಜೆ 7:00
10. ಫೆ.16 (ಸೋಮವಾರ)
- ಅಫ್ಘಾನಿಸ್ತಾನ v/s ಯುಎಇ — ದೆಹಲಿ — ಬೆಳಿಗ್ಗೆ 11:00
- ಇಂಗ್ಲೆಂಡ್ v/s ಇಟಲಿ – ಕೋಲ್ಕತ್ತಾ – ಮಧ್ಯಾಹ್ನ 3:00
- ಆಸ್ಟ್ರೇಲಿಯಾ v/s ಶ್ರೀಲಂಕಾ – ಕ್ಯಾಂಡಿ – ಸಂಜೆ 7:00
11.ಫೆ. 17 (ಮಂಗಳವಾರ)
- ನ್ಯೂಜಿಲೆಂಡ್ v/s ಕೆನಡಾ – ಚೆನ್ನೈ – ಬೆಳಿಗ್ಗೆ 11:00
- ಐರ್ಲೆಂಡ್ v/s ಜಿಂಬಾಬ್ವೆ – ಕ್ಯಾಂಡಿ – ಮಧ್ಯಾಹ್ನ 3:00
- ಸ್ಕಾಟ್ಲೆಂಡ್ v/s ನೇಪಾಳ – ಮುಂಬೈ – ಸಂಜೆ 7:00 ಗಂಟೆಗೆ.
12.ಫೆ. 18 (ಬುಧವಾರ)
- ದಕ್ಷಿಣ ಆಫ್ರಿಕಾ v/s ಯುಎಇ — ದೆಹಲಿ — ಬೆಳಿಗ್ಗೆ 11:00
- ಪಾಕಿಸ್ತಾನ v/s ನಮೀಬಿಯಾ – ಕೊಲಂಬೊ – ಮಧ್ಯಾಹ್ನ 3:00
- ಭಾರತ v/s ನೆದರ್ಲ್ಯಾಂಡ್ಸ್ – ಅಹಮದಾಬಾದ್ – ಸಂಜೆ 7:00
13. ಫೆ.19 (ಗುರುವಾರ)
- ವೆಸ್ಟ್ ಇಂಡೀಸ್ v/s ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00
- ಶ್ರೀಲಂಕಾ v/s ಜಿಂಬಾಬ್ವೆ – ಕೊಲಂಬೊ – ಮಧ್ಯಾಹ್ನ 3:00
- ಅಫ್ಘಾನಿಸ್ತಾನ v/s ಕೆನಡಾ — ಚೆನ್ನೈ — ಸಂಜೆ 7:00
14.ಫೆ. 20 (ಶುಕ್ರವಾರ)
ಆಸ್ಟ್ರೇಲಿಯಾ v/s ಓಮನ್ – ಕ್ಯಾಂಡಿ – ಸಂಜೆ 7:00
Sports
U-19 World Cup: ಫೈನಲ್ ಪಂದ್ಯದಲ್ಲಿ ಸೆಂಚುರಿ ಬಾರಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ
U-19 World Cup: ವೈಭವ್ ಸೂರ್ಯವಂಶಿ, ಕೇವಲ 14 ವರ್ಷ ವಯಸ್ಸಾಗಿದ್ದರೂ ತನ್ನ ಲ್ಲಿರುವ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ನನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಳೆದ ಐಪಿಎಲ್ನಲ್ಲಿ ಘಟಾನುಘಟಿ ಬೌಲರ್ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ವಿಶ್ವಕಪ್ನಲ್ಲೂ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿ ಮಾಡಿದ್ದಾರೆ.
ಹರಾರೆಯಲ್ಲಿ ಇಂದು ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವೈಭವ್ ಅಂಡರ್ 19 ವಿಶ್ವಕಪ್ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಕೇವಲ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್
ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಳಪೆ ಆರಂಭ ಪಡೆಯಿತು. ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ್ದ ಆರಂಭಿಕ ಆರನ್ ಜಾರ್ಜ್ ಈ ಪಂದ್ಯದಲ್ಲಿ ಕೇವಲ 9 ರನ್‌ಗಳಿಗೆ ಔಟಾದರು. ಆದರೆ ಆ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಎಂದಿನಂತೆ ಬೌಂಡರಿ ಸಿಕ್ಸರ್ಗಳ ಮಳೆಗರೆದ ಸೂರ್ಯವಂಶಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
-
Chamarajanagar2 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Chamarajanagar22 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Hassan21 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Kodagu14 hours agoಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ
-
Mandya15 hours agoಫೆ.10 ರಂದು ಹಿಂದು ಸಮಾಜ ಜಾಗೃತಿಗಾಗಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ : ಚಂದನ್
-
Kodagu15 hours agoದೇಶೀಯ ಕ್ರೀಡೋತ್ಸವ ಮತ್ತು ಜಾನಪದ ನಮ್ಮೆಗೆ ಅನುದಾನ ಕೋರಿ ಮನವಿ
-
Mysore15 hours agoಮಹಾರಾಜ ಕಾಲೇಜಿನಲ್ಲಿ ನೆಬೆ 40 ಸಮ್ಮಿಲನ
-
Mandya15 hours agoಪಕ್ಕದ ಮನೆಯವನ ಕಿರುಕುಳಕ್ಕೆ ಬೇಸತ್ತು ತಾಯಿ ಮಗಳು ನೇಣಿಗೆ ಶರಣು..?
