Connect with us

Chamarajanagar

ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಪರಿಸರ ಸ್ನೇಹಿ ಮಣ್ಣಿನ ದೀಪಗಳನ್ನು ವಿತರಿಸುವ ಕಾರ್ಯಕ್ರಮ

Published

on

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸ್ತೂರು-2 ಯಳಂದೂರು ತಾಲ್ಲೂಕಿನಲ್ಲಿ ದಿನಾಂಕ 08-11-2023 ರಂದು ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಸಹಯೋಗದಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಪರಿಸರ ಸ್ನೇಹಿ ಮಣ್ಣಿನ ದೀಪಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವು SDMC ಸಮಿತಿಯ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಯುತ ವಿಷಕಂಠಮೂರ್ತಿ ಯವರು ಶಿಕ್ಷಣ ಫೌಂಡೇಶನ್ ವತಿಯಿಂದ ನಮ್ಮ ಶಾಲೆಯ ಮಕ್ಕಳಿಗೆ ತುಂಬಾ ಉಪಯುಕ್ತವಾದ ಹಲವಾರು ಚಟುವಟಿಕೆಗಳನ್ನು ಅಭ್ಯಾಸ ಪುಸ್ತಕಗಳನ್ನು ಕೊಡುವುದರ ಮೂಲಕ ಮಕ್ಕಳಿಗೆ ಸ್ಟಾರ್ ಗಳನ್ನು ಕೊಟ್ಟು ಗ್ರೇಡ್ ಮೂಲಕ ಪ್ರೇರೆಪಿಸುತ್ತಾರೆ ಹಾಗೂ ಕಲಿಕ ಪ್ರಗತಿ ಸಾಧಿಸಲು ಸಹಕರಿಸುತ್ತಾರೆ ಎಂದು ಶ್ಲಾಘಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಸಿದ್ದರಾಜು ರವರು ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ಮಾತನಾಡಿ ದೀಪಾವಳಿ ಹಬ್ಬದಲ್ಲಿ ಶಾಲೆಯ ಮಕ್ಕಳು ಪಟಾಕಿ ನಿಷೇಧಿಸಿ ಹಣತೆಯಿಂದ ಬೆಳಕಿನ ಹಬ್ಬವನ್ನು ಆಚರಿಸಿ ನಮ್ಮ ಪರಿಸರ ಉಳಿಸಬೇಕೆಂದು ಶಪಥ ಮಾಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಫೌಂಡೇಶನ್ ತಾಲ್ಲೂಕು ಸಂಯೋಜಕರಾದ ಗಿರೀಶ್ ಎಸ್ ಕೆ ರವರು ತಮ್ಮ ಸಂಸ್ಥೆಯ ಕಾರ್ಯ ಯೋಜನೆಯನ್ನು ಮಕ್ಕಳಿಗೆ ತಿಳಿಸಿದರು. ಜಿಲ್ಲಾ ಸಂಯೋಜಕರಾದ ನಾಗರಾಜುರವರು ಹಾಜರಿದ್ದರು. SDMC ಸಮಿತಿಯ ಸದಸ್ಯರು ಹಾಜರಿದ್ದರು. ಶಾಲಾ ಶಿಕ್ಷಕರುಗಳು ಹಾಗೂ ಸಮಿತಿಯ ಸದಸ್ಯರುಗಳು ಮತ್ತು ಎಲ್ಲಾ ಮಕ್ಕಳಿಗೂ ಮಣ್ಣಿನ ಹಣತೆಯನ್ನು ನೀಡಿ ದೀಪಾವಳಿ ಹಬ್ಬ ಆಚರಿಸುವಂತೆ ಪ್ರತಿಜ್ಞೆ ಮಾಡಿಸಿದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮದಿನಾಚರಣೆಯ ಕಾರ್ಯಕ್ರಮ

Published

on

ಯಳಂದೂರು ಜೂನ್ 16


ಯಳಂದೂರು ತಾಲ್ಲೂಕಿನ ವೈ.ಕೆ. ಮೋಳೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವ ಸಂಘದ ವತಿಯಿಂದ ಹಾಂಗೂ ಉರಿಲಿಂಗಿಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮಿಗಳ ದಿವ್ಯ ಸಾನಿಧ್ಯ ದಲ್ಲಿ ಆಯೋಜಿಸಲಾಗಿದ್ದ ವಿಶ್ವ ರತ್ನ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ

ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಭಾಗವಹಿಸಿ. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು, ಈ ವೇಳೆ ಚಲನಚಿತ್ರ ನಟ ಚೇತನ್ ಅಹಿಂಸ ರವರು, ಎ.ಎಸ್.ಎಸ್.ಕೆ. ಅಧ್ಯಕ್ಷರಾದ ಸಂದೇಶ್ ರವರು,

ಮುಖಂಡರಾದ ಕಿನಕಹಳ್ಳಿ ರಾಚಯ್ಯ ರವರು, ಕಂದಹಳ್ಳಿ ನಂಜುಂಡಸ್ವಾಮಿ ರವರು, ಲೋಕೇಶ್ ಸಿಗಡಿ, ಮಧು ಮಾಲತಿ ರವರು, ಹಾಗೂ ಡಾ.ಬಿ‌.ಆರ್‌ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Chamarajanagar

ಯಳಂದೂರು:ತಾಲೂಕಿನ ಯರಿಯೂರು ಗ್ರಾಮದಲ್ಲಿ ಕರಾರಸಾ ನಿಗಮದ ಬಸ್ಸುಗಳು ಗ್ರಾಮದಲ್ಲಿ ನಿಲುಗಡೆ ಮಾಡಬೇಕೆಂದುಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ

Published

on

ತಾಲೂಕಿನ ಯರಿಯೂರು ಗ್ರಾಮಸ್ಥರು ಗ್ರಾಮದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಿ
ಗ್ರಾಮದಿಂದ ವಿದ್ಯಾರ್ಥಿಗಳು ಕೂಲಿಕಾರ್ಮಿಕರು ಹಾಗೂ ಸಾರ್ವಜನಿಕರು ದಿನನಿತ್ಯ ಚಾಮರಾಜನಗರ, ಕೊಳ್ಳೇಗಾಲ ಮೈಸೂರು, ಬೆಂಗಳೂರು ಮಲೆ‌ಮಹದೇಶ್ವರ ಬೆಟ್ಟ ಮುಂತಾದ ಸ್ಥಳಗಳಿಗೆ ತೆರಳುತ್ತಾರೆ ಹಾಗೂ ಆ ಸ್ಥಳಗಳಿಂದ ಗ್ರಾಮಕ್ಕೆ ಆಗಮಿಸುತ್ತಾರೆ ಇಂತಹ ಗ್ರಾಮದಲ್ಲಿ ಕರರಾಸಾ ನಿಗಮದ ಬಸ್ಸುಗಳು ನಿಲ್ಲಿಸದೆ ಗ್ರಾಮಸ್ಥರಿಗೆ ಬಹಳ‌ತೊಂದರೆಯಾಗುತ್ತಿದೆ ಎಂದು ಆರೋಪಿ ಪ್ರತಿಭಟನೆ ನಡೆಸಿ .ಗ್ರಾಮಸ್ಥರು ಎಲ್ಲಿಗೆ ಹೋದರು ಯಳಂದೂರಿನಲ್ಲಿ ಇಳಿದು ಮತ್ತೆ ಖಾಸಗಿ ಬಸ್ಸಿನಲ್ಲಿ ಗ್ರಾಮಕ್ಕೆ ಬರಬೇಕಾದ ಸಂದರ್ಭ ಬಂದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆಕೂಗಿ ಪ್ರತಿಭಟನೆ ಮಾಡಿದರು

ವಿಷಯತಿಳಿದ ಸಾರಿಗೆ ಇಲಾಖೆಯ ವಿಭಾಗಾಧಿಕಾರಿಗಳು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಪ್ರತಭಟನಾಕಾರ ಮನವಿಯನ್ನು ಆಲಿಸಿ ಮುಂದಿನ ದಿನಗಳಲ್ಲಿ ಕೋರಿಕೆ ನಿಲುಗಡೆಗೆ ಅವಕಾಶ ಮಾಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಿಂಗರಾಜು, ಚಂದ್ರಶೇಖರ್ ಪ್ರಕಾಶ್ ಕೃಷ್ಣಯ್ಯ ಹಾಗೂ ಗ್ರಾಮಸ್ಥರು ‌ಪ್ರತಿಭಟನೆಯಲ್ಲಿ ಭಾಗವಿಹಿಸಿದರು

Continue Reading

Chamarajanagar

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣಾ ಕಾರ್ಯಕ್ರಮ

Published

on

ಯಳಂದೂರು ಪಂಚಾಯತಿ ಸಭಾಂಗಣದಲ್ಲಿ ಯಳಂದೂರು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣಾ ಕಾರ್ಯಕ್ರಮ ದಲ್ಲಿ

ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಭಾಗವಹಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡಿ, ನಂತರ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡಿದರು.

ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಹೆಚ್.ವಿ. ಚಂದ್ರು ರವರು, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಪ್ರಭಾವತಿ ರಾಜಶೇಖರ್ ರವರು, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಜೆ.ಯೋಗೇಶ್ ರವರು, ಸಿಡಿಪಿಓ ಸಕಲ್ಲೇಶ್ವರ್ ರವರು, ಜಿಲ್ಲಾ ಸಂಯೋಜಕರಾದ ಚೇತನ್ ರವರು ವೃತ್ತ ನಿರೀಕ್ಷಕರಾದ ಶ್ರೀಕಾಂತ್ ರವರು ಉಪಸ್ಥಿತರಿದ್ದರು.

Continue Reading

Trending

error: Content is protected !!