Connect with us

Kodagu

ಈಜಲು ತೆರಳಿದ ವ್ಯಕ್ತಿ ನೀರು ಪಾಲು

Published

on

ಮಡಿಕೇರಿ : ಈಜಲು ತೆರಳಿದ ವ್ಯಕ್ತಿ ನೀರು ಪಾಲಾದ ಘಟನೆ ಹಾರಂಗಿ ಹಿನ್ನೀರು ಹೆರೂರು ಬಳಿ‌ ನಡೆದಿದೆ.
ಬಾಳುಗೋಡು ನಿವಾಸಿ ಬಾಲು (40) ಮೃತ ದುರ್ದೈವಿ.

ಸಂಬಂಧಿಕರ ಮನೆಗೆ ಬಂದಿದ್ದ ಬಾಲು, ಜಾನುವಾರುವಿಗೆ ನೀರು ಕೊಟ್ಟು ನದಿಯತ್ತ ತೆರಳಿದ್ದ. ಬಿಸಿಲ‌ ಬೇಗೆಗೆ ನೀರಿಗಿಳಿದು ಈಜಲು ಮುಂದಾದ ಸಂದರ್ಭದಲ್ಲಿ ಕಾಲಿಗೆ ಮೀನಿನ ಬಲೆ ಸಿಲುಕಿ ನೀರಿನಲ್ಲೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಮೂವರಿಗೆ ಸನ್ಮಾನ

Published

on

ಮಡಿಕೇರಿ : ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆಯಲ್ಲಿ ಇಂದು ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ’ಕೊಡವ ಪುಸ್ತಕ ಪತ್ತಾಯ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂವರನ್ನು ಸನ್ಮಾನಿಸುವ ಸಂದರ್ಭ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ ನಾಣಯ್ಯ, ಉಪಾಧ್ಯಕ್ಷ ಪೊನ್ನಿರ ಗಗನ್ ಉತಯ್ಯ, ಪೊಟ್ಡಂಡ ಗಣೇಶ್, ಕೊಡವ ಸವಿತಾ ಸಮಾಜದ ಮುಖಂಡರುಗಳಾದ ತಪನೇರ ಸಾಬು, ಮಹೇಶ್, ಪೂಣಚ್ಚಿರ ಮನೋಜ್, ತಪಾನೇರ ಮಹೇಶ್, ವೇದಪಂಡ ಬಿದ್ದಪ್ಪ, ಹಲ್ ಚಿರ ದೇವಯ್ಯ ಹಾಗೂ ನಿರ್ದೇಶಕರುಗಳು ಕಕ್ಕಬೆ ಚೋವಂಡ ಜೀಜ, ತೊರೆರ ಪೊನ್ನಕ್ಕಿ, ಕೊಡವ ಕೆಂಬಟ್ಟಿ ಸಮುದಾಯದ ಅಧ್ಯಕ್ಷರಾದ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚಾವರೆ ಕುಟ್ಟಡ ಜೀವನ್, ಕೋಪರೆಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್. ಬಣ್ಣ ಸಮಾಜ ಬಿಕಚಂಡ ಬೆಳ್ಳಿಪ್ಪ, ಅರಮನೆಪಾಲೆ ಸಮಾಜ ದೇವಯ್ಯ, ದಿನೇಶ್, ಮಲೆಯ ಸಮಾಜ ಕಾರ್ಯದರ್ಶಿ ಮಲೆಯಂಡ ಬಿದ್ದಪ್ಪ, ಹ್ಯಾರಿ ಲೋಕೇಶ್ ತಂಡ ಇತರರು ಇದ್ದರು.

Continue Reading

Kodagu

ಕುಟ್ಟ ಪಟ್ಟಣದ ಉದ್ಯಮಿ ಕೇರಳದಲ್ಲಿ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆ: ಪತ್ನಿ, ಮಕ್ಕಳು ಪಾರು

Published

on

ಪೊನ್ನಂಪೇಟೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಉದ್ಯಮಿಯೊಬ್ಬರು, ಕೇರಳದ ವಯನಾಡಿನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡಿದ್ದು, ಇವರ ಪೈಕಿ ಉದ್ಯಮಿ ಸಾವನ್ನಪ್ಪಿದ್ದರೆ, ಪತ್ನಿ ಹಾಗೂ ಮಕ್ಕಳು ಪಾರಾಗಿದ್ದಾರೆ.

ಈ ದುರಂತದಲ್ಲಿ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ. ಇವರ ಪತ್ನಿಗೆ ಗಂಭೀರ ಗಾಯವಾಗಿದ್ದು, ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?
ಉದ್ಯಮಿ ಸಜೀರ್, ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಬಾಪು ಎಂಬಾತ ಸಜೀರ್ಗೆ 20 ಲಕ್ಷ ರೂ. ನೀಡಬೇಕಿತ್ತು. ಸಾಲ ಪಡೆದಿದ್ದ ಬಾಪುನ ಮನೆ ಎದುರೇ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್ ವಿಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆ.

Continue Reading

Kodagu

ಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ

Published

on

ಮಡಿಕೇರಿ: ಗ್ರಾ.ಪಂ. ಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ರಾಜಕೀಯ ರಹಿತವಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದ್ದಾರೆ.

ಕುಂದಚೇರಿ ಗ್ರಾ.ಪಂ. ಚೆಟ್ಟಿಮಾನಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಡಿಜಿಟಲ್ ಗ್ರಂಥಾಲಯ, ಅರಿವು ಕೇಂದ್ರ, ಅಂಚೆ ಕಚೇರಿ ಮತ್ತು ಸಂಜೀವಿನಿ ಒಕ್ಕೂಟದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಗ್ರಾ.ಪಂ ಪ್ರತಿನಿಧಿಗಳು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.


ಕ್ಷೇತ್ರದಾದ್ಯಂತ ನೂತನ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ, ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲು ಸರಕಾರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತಿದೆ. ಇದನ್ನು ಪಂಚಾಯಿತಿ ಪ್ರತಿನಿಧಿಗಳು ಸದುಪಯೋಗಪಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ತಾವು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಗುರಿ ಹೊಂದಿದ್ದು, ಸರ್ವರೂ ಕೈಜೋಡಿಸಬೇಕೆಂದು ಎ.ಎಸ್.ಪೊನ್ನಣ್ಣ ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಚೇರಿ ಗ್ರಾ.ಪಂ. ಯ ಹಿರಿಯ ಸದಸ್ಯ ಹ್ಯಾರಿಸ್ ಅವರು 1982 ರಲ್ಲಿ ಪಂಚಾಯಿತಿಯ ಹಳೆಯ ಕಟ್ಟಡ ನಿರ್ಮಾಣಗೊಂಡಿತು, ಅಂದಿನಿಂದ ಇಂದಿನವರೆಗೆ ನೂತನ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿರುವ ಹಾಲಿ ಶಾಸಕ ಎ.ಎಸ್.ಪೊನ್ನಣ್ಣ, ಮಾಜಿ ಶಾಸಕರು, ಗ್ರಾ.ಪಂ ನ ಉಪಾಧ್ಯಕ್ಷರು, ಆಡಳಿತ ಮಂಡಳಿ, ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಮಾಜಿ ಪ್ರತಿನಿಧಿಗಳು, ಈಗಿನ ಮತ್ತು ಹಿಂದಿನ ಜಿಲ್ಲಾಧಿಕಾರಿಗಳು, ದಾನಿಗಳು, ಜಿ.ಪಂ., ತಾ.ಪಂ., 1994ರಿಂದ ರಚನೆಗೊಂಡ ಆರು ಆಡಳಿತ ಮಂಡಳಿ ಸೇರಿದಂತೆ ಸರ್ವರ ಆಸಕ್ತಿಯಿಂದ ನೂತನ ಕಟ್ಟಡ ನಿರ್ಮಾಣಗೊಂಡು ಇಂದು ಉದ್ಘಾಟನೆಗೊಂಡಿದೆ ಎಂದರು.

ಕುಂದಚೇರಿ ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ

ಶಾಸಕ ಎ.ಎಸ್.ಪೊನ್ನಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್, ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶೇಖರ್, ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್, ಉಪಾಧ್ಯಕ್ಷೆ ಬೇಬಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಂ.ಎಸ್.ಗಂಗಮ್ಮ, ತಾಲೂಕು ಎ.ಡಿ ಹೇಮಂತ್ ಹಾಗೂ ಗುತ್ತಿಗೆದಾರ ಇಸ್ಮಾಯಿಲ್ ಕಾನಾವು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಂಚಾಯಿತಿ ಸದಸ್ಯರಾದ ವಿಶ್ವ ಪ್ರವೀಣ್ ಕುಮಾರ್, ಬಸಪ್ಪ, ಸವಿತ, ನಮಿತ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಪುಷ್ಪಾ, ನೇತ್ರಾವತಿ, ರೂಪ, ಲಕ್ಷ್ಮಿ, ಹೇಮಲತ, ಅನುಜ, ನಯನ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗತಿಸಿ ನಿರೂಪಿಸಿ, ವಂದಿಸಿದರು. ಚೆಟ್ಟಿಮಾನಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಾಡಗೀತೆಯನ್ನು ಹಾಡಿದರು.

Continue Reading

Trending

error: Content is protected !!