Connect with us

Hassan

ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ನಿಧನರಾದ ಬೈಕೆರೆ ನಾಗೇಶ್ ಗೆ ಸಂತಾಪ

Published

on

ಹಾಸನ: ಸರಳ ಜೀವಿ, ಸ್ನೇಹ ಜೀವಿ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬೈಕೆರೆ ನಾಗೇಶ್ ಅವರು ಅನಾರೋಗ್ಯದ ಕಾರಣ ಸಾವನಪ್ಪಿದ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ಅರ್ಪಿಸಲಾಯಿತು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮೊದಲು ಎರಡು ನಿಮಿಷ ಮೌನ ಆಚರಿಸಿ ಮಡಿದ ಬೈಕೆರೆ ನಾಗೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಉದ್ದೇಶಿಸಿ ಮಾತನಾಡಿ, ಬೈಕೆರೆ ನಾಗೇಶ್ ಎಂದರೇ ಜಿಲ್ಲೆಗೆ ಅವರು ಪರಿಚಿತರು. ಹಾಸನ ಜಿಲ್ಲೆಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಕುಗ್ರಮಕ್ಕೆ ಕೊಡೆಗೆ, ಅಂತಹ ಅಧಿಕಾರಿ ಬರಬೇಕು ಎನ್ನುವ ಮಟ್ಟಕ್ಕೆ ಅವರು ತಮ್ಮ ಸ್ವಭಾವ ಬೆಳೆಸಿಕೊಂಡಿದ್ದರು. ದೆಹಲಿಯಲ್ಲಿದ್ದರೂ ಕೂಡ ತವರು ಜಿಲ್ಲೆಯನ್ನು ನೆನಪಿಸಿಕೊಳ್ಳುತ್ತಿದ್ದರು. ದೆಹಲಿಗೆ ಹೋದರೇ ನಮ್ಮ ಜಿಲ್ಲೆಯವರೆಂದು ಪ್ರೀತಿಯಿಂದ ಕಾಣುತ್ತಿದ್ದರು. ಅವರ ಸೇವೆ ಶಾಶ್ವತವಾಗಿದೆ ಎಂದು ಇದೆ ವೇಳೆ ನೆನಪಿಸಿಕೊಂಡರು.

ನಂತರದಲ್ಲಿ ಜಿಲ್ಲಾಧ್ಯಕ್ಷರಾದ ಬಾಳ್ಳುಗೋಪಾಲ್, ರಾಜ್ಯ ಪತ್ರಕರ್ತರ ಸಂಘದ ಸದಸ್ಯರಾದ ಹೆಚ್.ಬಿ. ಮದನ್ ಗೌಡ, ರವಿನಾಕಲಗೂಡು, ಕಾರ್ಯದರ್ಶಿ ಬನವಾಸೆ ಮಂಜು, ಉಪಾಧ್ಯಕ್ಷ ನಂಜುಂಡೇಗೌಡ, ಕೆ.ಹೆಚ್. ವೇಣುಕುಮಾರ್, ಮಾಜಿ ಅಧ್ಯಕ್ಷರಾದ ಮಂಜುನಾಥ್, ವೆಂಕಟೇಶ್, ಉದಯಕುಮಾರ್, ಅತೀಖುರ್ ರೆಹಮನ್, ಉದಯರವಿ, ಆನಂದ್ ಇತರರು ಬೈಕೆರೆ ನಾಗೇಶ್ ಬಗ್ಗೆ ತಮ್ಮ ಮನದಾಳದ ಮಾತನ್ನು ತೋಡಿಕೊಂಡರು.

ಮಂಗಳವಾರ ಬೆಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ನಿಧಾನರಾಗಿದ್ದ ನವದೆಹಲಿಯ ಕೇಂದ್ರ ಸರ್ಕಾರಿ ನಿವೃತ್ತ ಅಧಿಕಾರಿ ಬೈಕೆರೆ ನಾಗೇಶ್ ಅವರ ಅಂತಿಮ ಸಂಸ್ಕಾರ ಅವರು ಹುಟ್ಟೂರು ಸಕಲೇಶಪುರ ತಾಲ್ಲೂಕಿನ ಬುಧವಾರದಂದು ಬೈಕೆರೆಯಲ್ಲಿ ನಡೆಯಿತು. ಮೃತರ ನಿವಾಸದಿಂದ ಪಾರ್ಥಿವ ಶರೀರವನ್ನು ಮರೆವಣಿಗೆ ಮೂಲಕ ಅಂತ್ಯ ಸಂಸ್ಕಾರ ಸ್ಥಳಕ್ಕೆ ತರಲಾಯಿತು. ವೀರಶೈವ ನಿಯಮದಂತೆ ಧಾರ್ಮಿಕ ವಿಧಿವಿದಾನ ನಡೆಯಿತು.

ಶಾಸಕರಾದ ಸಿಮೆಂಟ್ ಮಂಜು, ಅರಕಲಗೂಡು ಶಾಸಕ ಎ. ಮಂಜು, ಹಿರಿಯ ಪತ್ರಕರ್ತರದ ಆರ್.ಪಿ. ವೆಂಕಟೇಶ ಮೂರ್ತಿ, ಬಾಳ್ಳು ಗೋಪಾಲ್, ಹೆಚ್. ಬಿ. ಮದನ್ ಗೌಡ, ಜೆ.ಆರ್. ಕೆಂಚೇಗೌಡ, ಕೆ.ಆರ್. ಮಂಜುನಾಥ್, ರವಿನಾಕಲಗೂಡು ಇನ್ನಿತರು ಅಂತಿಮ ದರ್ಶನ ಪಡೆದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹೇಮಾವತಿ ಜಲಾಶಯಕ್ಕೆ ಏರಿಕೆಯಾಗುತ್ತಲೇ ಇರುವ ಒಳಹರಿವು

Published

on

HASSAN-BREAKING

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆ

ಸಕಲೇಶಪುರ, ಆಲೂರು, ಬೇಲೂರು, ಹಾಸನ ಭಾಗದಲ್ಲಿ ಬಾರಿ ಮಳೆ

ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾರಿ ಮಳೆ ಹಿನ್ನಲೆ

ಹೇಮಾವತಿ ಜಲಾಶಯಕ್ಕೆ ಏರಿಕೆಯಾಗುತ್ತಲೆಯಿರುವ ಒಳಹರಿವು

*ಒಳಹರಿವು ಹೆಚ್ಚಾದ ಹಿನ್ನಲೆ‌ 75 ರಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಸಾಧ್ಯತೆ*

ಹೇಮಾವತಿ ನದಿಯ ತಗ್ಗು ಪ್ರದೇಶದ ಮತ್ತು ನದಿಯ ಎರಡು ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ

ಅಲ್ಲದೇ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳವಂತೆ ಸೂಚನೆ

ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರಿಂದ ಸೂಚನೆ

Continue Reading

Hassan

ತಿರುಪತಿಗೆ ಪಾದಯಾತ್ರೆ ಬೆಳೆಸಿದ ಭಕ್ತರು

Published

on

ಹಾಸನ: ಶ್ರೀ ಧರ್ಮಸ್ಥಳ ಪಾದಯಾತ್ರೆ ಸಮಿತಿಯಿಂದ ಪ್ರತಿ ವರ್ಷದಂತೆ ಈವರ್ಷವೂ ಕೂಡ ತಿರುಪತಿಗೆ ಪಾದಯಾತ್ರೆಯನ್ನು ಗುರುವಾರದಂದು ಬೆಳಿಗ್ಗೆ ನಗರದ ಹಾಸನಾಂಬ ದೇವಾಲಯದಲ್ಲಿರುವ ಶ್ರೀ ಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಯಾಣ ಬೆಳೆಸಿದರು.

 

ಪಾದಯಾತ್ರಿಕರಾದ ನಿವೃತ್ತ ತಹಸೀಲ್ದಾರ್ ವಾಸುದೇವಚಾರ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಇಲ್ಲಿಂದ ಬೆಂಗಳೂರು ಮಾರ್ಗವಾಗಿ ಅಲ್ಲಿನ ತಂಡದೊಡನೆ ಹಾಸನಾಂಬೆ ದೇವಾಲಯದ ಶ್ರೀ ಸಿದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಿರುಪತಿ ಪಾದಯಾತ್ರೆಯನ್ನು ಕೈಗೊಂಡಿದ್ದೇವೆ. ದೇಶಕ್ಕೆ, ಸಮಾಜಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ಹಾಗೂ

ಆಧ್ಯಾತ್ಮಿಕ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದೇವೆ. ನಮ್ಮ ಈ ಪಾದಯಾತ್ರೆಯಿಂದ ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂಬುದು ನಮ್ಮ ಮುಖ್ಯ ಪ್ರಾರ್ಥನೆಯಾಗಿದೆ ಎಂದರು. ನಾವು ಹಾಸನದಿಂದ ಮೂರನೇ ವರ್ಷದಲ್ಲಿ ತಿರುಪತಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಲಾಗುತ್ತಿದೆ. ಮಳೆ ಹೆಚ್ಚಿದ್ದರೂ ಗೋವಿಂದನ ಮೇಲೆ ನಂಬಿಕೆ ಇಟ್ಟುಕೊಂಡು ಈ ಪಾದಯಾತ್ರೆ ಬೆಳೆಸಿದ್ದೇವೆ. ಆ ದೇವರ ರಕ್ಷಣೆ ನಮಗೆ

ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಹಾಸನದಿಂದ ಹತ್ತು ಜನರು ಹೊರಟು ಬೆಂಗಳೂರಿನಲ್ಲಿ ೬೦ ಜನರು ಒಟ್ಟಿಗೆ ನಡಿಗೆಯಲ್ಲಿ ಪ್ರಯಾಣ ಬೆಳೆಸುತ್ತೇವೆ ಎಂದು ಹೇಳಿದರು.

ಇದೆ ವೇಳೆ ಪಾದಯಾತ್ರೆಯಲ್ಲಿ ಪಿ.ಡಿ.ಓ. ಹನುಮಂತೇಗೌಡ, ತಿಮ್ಮೇಗೌಡ, ರಂಗಪ್ಪ, ಶಿವಾಜಿ, ದಾಸಪ್ಪ, ಪೊಲೀಸ್ ಹನುಮಂತೇಗೌಡ, ಮಲ್ಲಿಕಾರ್ಜುನ, ಅನಂತರಾಮಯ್ಯ ಇತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Continue Reading

Hassan

ಬಾರಿ ಮಳೆಗೆ ಧರೆಗುರುಳಿದ ಬೃಹತ್ ಗಾತ್ರದ ಮರ

Published

on

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ

ಬಾರಿ ಮಳೆಗೆ ಧರೆಗುರುಳಿದ ಬೃಹತ್ ಗಾತ್ರದ ಮರ

ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ

ಮಳೆ ಬರುತ್ತಿದ್ದ ಕಾರಣ ಇಂದು ಬೆಳಿಗ್ಗೆ ಕ್ರೀಡಾಂಗಣಕ್ಕೆ ಬಾರದ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು

ಫುಟ್ಬಾಲ್ ಕೋರ್ಟ್ ಬಳಿ ಬೆಳೆದಿದ್ದ ಮರ

ಬಾರಿ ಮಳೆ, ಗಾಳಿಗೆ ಧಾರಾಶಾಹಿಯಾದ ಬೃಹತ್ ಗಾತ್ರದ ಮರ

ಕ್ರೀಡಾಪಟುಗಳು ಇಲ್ಲದ ಕಾರಣ ತಪ್ಪಿದ ಬಾರಿ ಅನಾಹುತ

ಜಿಲ್ಲಾ ಕ್ರೀಡಾಂಗಣಕ್ಕೆ ಬರುವ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರ

Continue Reading

Trending

error: Content is protected !!