Connect with us

Chikmagalur

ಜಿಲ್ಲಾಧಿಕಾರಿ ಕಚೇರಿ ಎದುರು ಅಣಕುಹೋಮ-ಹಲವರು ವಶಕ್ಕೆ

Published

on

* ಡಿಸಿ ಕಚೇರಿ ಮುತ್ತಿಗೆಗೆ ಹಿಂದೂಪರ ಸಂಘಟನೆಯವರಿಂದ ಯತ್ನ
* ಜಿಲ್ಲಾಡಳಿತ ವಿರುದ್ಧ ಘೋಷಣೆ-ಪ್ರತಿಭಟನಾ ಧರಣಿ
ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಬಾಲರಾಮನಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದತ್ತಪೀಠದಲ್ಲಿ ಶ್ರೀರಾಮ ತಾರಕಹೋಮ ನಡೆಸಲು ಜಿಲ್ಲಾಡಳಿತ ಅಡ್ಡಿಪಡಿಸಿದೆ. ಹೋಮ ನಡೆಸುವ ಜಾಗದಲ್ಲಿ ಬೀಗ ಹಾಕಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀರಾಮನ ಚಿತ್ರಪಟವನ್ನಿರಿಸಿ, ಕುಂಡನಿರ್ಮಿಸಿ ಹೋಮನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.


ದತ್ತಪೀಠದ ಹೊರವಲಯದ ಶೆಡ್‌ನಲ್ಲಿ ಶ್ರೀರಾಮತಾರಕ ಹೋಮ ನಡೆಸುವ ವಿಶ್ವಹಿಂದೂಪರಿಷತ್ ಮತ್ತು ಭಜರಂಗದಳದ ನಾಯಕರ ಅವಕಾಶ ಕೋರಿದ್ದು, ಜಿಲ್ಲಾಡಳಿತ ನಿರಾಕರಿಸಿದೆ. ಇದರಿಂದ ಬೇಸರಗೊಂಡು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಮತ್ತು ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಹಾಕಲು ಯತ್ನಿಸಿದಾಗ ಪೊಲೀಸರು ಅದನ್ನು ವಿಫಲಗೊಳಿಸಿದರು.


ಜಿಲ್ಲಾಡಳಿತ ನಡೆ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಟ್ಟಿಗೆಯ ಮೂಲಕ ಹೋಮಕುಂಡವನ್ನಾಗಿಸಿಕೊಂಡು ಕರ್ಪೂರ ಹಚ್ಚುವ ಮೂಲಕ ಅಣಕು ಹೋಮ ನಡೆಸಿದರು. ಜಿಲ್ಲಾಡಳಿತ ವಿರುದ್ಧ ಘೋಷಣೆಕೂಗಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಹೋಮಕುಂಡವನ್ನು ತೆರವುಗೊಳಿಸಿದರು. ಪ್ರತಿಭಟನೆ ನಡೆಸಿದವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

????????????????????????????????????

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

 

ಚಿಕ್ಕಮಗಳೂರು

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading

Chikmagalur

ರಸ್ತೆಗೆ ಬಡಿದ ಸಿಡಿಲು

Published

on

ಮೂಡಿಗೆರೆ : ಜನ್ನಾಪುರದಲ್ಲಿ ಇಂದು ಸಂಜೆ ಗುಡುಗು ಸಿಡಿಲು ಸಮೇತ ಬಿದ್ದ. ಮಳೆಗೆ ಜನ್ನಾಪುರದ ಶುಭ ನಗರದಲ್ಲಿ ಬಾರಿ ಘಾತ್ರದ ಸಿಡಿಲು ಬಡಿದಿದ್ದು ಸಿಡಿಲಿನ ಹೊಡೆತಕ್ಕೆ ರಸ್ತೆಯೇ ಚಿದ್ರವಾಗಿದೆ. ಇ ಸಿಡಿಲಿನ ಹೊಡೆತದ ರಬಸಕ್ಕೆ ಶುಭ ನಗರದ ಗ್ರಾಮಸ್ಥರೆ ಬೆಚ್ಚಿ ಬಿದ್ದಿದ್ದಾರೆ ಎಂದು ಸ್ಥಳೀಯರಾದ ಅವಿನಾಶ್ ಅವರು ತಿಳಿಸಿದ್ದಾರೆ.

ವರದಿ
ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading

Trending

error: Content is protected !!