Connect with us

Hassan

ಶಾಂತಿಯುತ ಶೇಕಡ ನೂರರಷ್ಟು ಮತದಾನಕ್ಕೆ, ಸಕಲ ಸಿದ್ಧತೆ, ಸಹಕಾರ ಕೋರಿದ ಡಿಸಿ ಸಿ. ಸತ್ಯಭಾಮ

Published

on

ಹಾಸನ: ಏಪ್ರಿಲ್ ೨೬ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಯ ಸಕಲ ಸಿದ್ಧತಾ ಕಾರ್ಯದಲ್ಲಿದ್ದು ಚುನಾವಣೆಯನ್ನು ಶಾಮತಿಯುತವಾಗಿ, ಸುವ್ಯವಸ್ಥೆಯಿಂದ, ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ಶೇಕಡ ನೂರರಷ್ಟು ಮತದಾನ ನಡೆಸಲು ಎಲ್ಲಾರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ಲೋಕಸಭೆ ಸಾರ್ವತ್ರಿಕ ಚುನಾವಣೆ ೨೦೨೪ ಏಪ್ರಿಲ್ ೨೬ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ರವರೆಗೆ ನಡೆಯವ ಮತದಾನ ಪ್ರಕ್ರಿಯೆಯ ಸಿದ್ಧತೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗಿರುತ್ತದೆ. ೧೬-ಹಾಸನ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ೦೭ ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ೧೨೭-ಕಡೂರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದಿನಾಂಕ: ೦೪.೦೪.೨೦೨೪ ಹಾಗೂ ಪೂರಕ ಪಟ್ಟಿ-೨ ಒಳಗೊಂಡಂತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು ೧೭ ಲಕ್ಷದ ೩೬ ಸಾವಿರದ ೬೧೦ ಮತದಾರರಿರುತ್ತಾರೆ. ಇದರಲ್ಲಿ ೮ ಲಕ್ಷದ ೨೮ ಸಾವಿರದ ೪೦ ಮಹಿಳಾ ಮತದಾರರು ಇದ್ದಾರೆ. ೮ ಲಕ್ಷದ ೬೩ ಸಾವಿರದ ೭೨೭ ಪುರುಷ ಮತದಾರರು ಇದ್ದರೆ ಎಂದರು.

ಫ್ಲೈಯಿಂಗ್ ಸ್ಕ್ವಾಡ್ ಮತ್ತು ಕಣ್ಗಾವಲು ಪಡೆ ವಿವರ: ಪ್ರತಿ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಟ ಮೂರು ತಂಡಗಳಲ್ಲಿ ಪಾಳಿ ಆಧಾರದ ಮೇಲೆ ದಿನದ ೨೪x೭ ಕರ್ತವ್ಯ ನಿರ್ವಹಿಸಲು ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನೇಮಿಸಲಾಗಿದ್ದು, ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊನೆಯ ೭೨ ಗಂಟೆಗಳಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಲು ಹಾಗೂ ನಿಗಾ ನಿರ್ವಹಿಸಲು ಆಯಾ ವ್ಯಾಪ್ತಿಗಳಲ್ಲಿ ೨೪x೭ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿರುತ್ತದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗಡಿ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿನ ೩೧ ಪ್ರತಿ ಚೆಕ್‌ಪೋಸ್ಟ್‌ಗಳಲ್ಲಿಯೂ ಕಟ್ಟು-ನಿಟ್ಟಿನ ಎಚ್ಚರಿಕೆಯ ದೃಷ್ಟಿಯಿಂದ ೩೧ ತಂಡಗಳ ಮುಖ್ಯಸ್ಥರನ್ನು ಪಾಳಿ ಆಧಾರದ ಮೇಲೆ ದಿನದ ೨೪ ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲು ಕಣ್ಗಾವಲು ಪಡೆಯನ್ನು ರಚಿಸಲಾಗುತ್ತಿದ್ದು, ಈ ತಂಡಗಳು ಪ್ರತಿ ಚೆಕ್ ಪೋಸ್ಟ್‌ಗಳಲ್ಲಿ ೨೪*೭ ಪಾಳಿಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.

ದೂರು ನಿವಾರಣಾ ಹಾಗೂ ಚುನಾವಣಾ ಕಂಟ್ರೋಲ್ ರೂಂ ಸ್ಥಾಪನೆ :- ಕಂಟ್ರೋಲ್ ರೂಮ್, ೦೮೧೭೨ -೨೬೨೦೨೮,

ಮತದಾರರ ಸಹಾಯವಾಣಿ/ಕಾಲ್ ಸೆಂಟರ್೧೯೫೦ ಟೋಲ್ ಫ್ರೀ, ಶುಲ್ಕ ರಹಿತ ಸಂಖ್ಯೆ (ಆದಾಯ ತೆರಿಗೆ ಇಲಾಖೆ)೧೮೦೦-೪೨೫-೨೧೧೫,

ದೂರವಾಣಿ ಸಂಖ್ಯೆ (ಆದಾಯ ತೆರಿಗೆ ಇಲಾಖೆ) ೦೮೦-೨೨೮೬೨೩೨೪, ಫ್ಯಾಕ್ಸ್ ಸಂಖ್ಯೆ ೦೮೦-೨೨೮೬೬೯೧೬, ಮೊಬೈಲ್ ಸಂಖ್ಯೆ ೮೨೭೭೪ ೨೨೮೨೫

ವಾಟ್ಸಾಪ್ ಸಂಖ್ಯೆ ೮೨೭೭೪ ೧೩೬೧೪ ವಿವಿರ ನೀಡಬಹುದು ಎಂದು ಹೇಳಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಿಲ್ಲಾ ಮಾಹಿತಿ ಕೇಂದ್ರವೆಂಬ ಮತದಾರರ ಸಹಾಯವಾಣಿ ೧೯೫೦ ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ. ಈ ಕೇಂದ್ರಕ್ಕೆ ಮತದಾರರ/ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದ ಹಾಗೂ ಇತರೆ ಚುನಾವಣೆ ಸಂಬಂಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಈವರೆವಿಗೂ ಒಟ್ಟು ೪೯೯ ಕರೆಗಳು ಸ್ವೀಕರಿಸಲಾಗಿದ್ದು, ಸದರಿ ದೂರುಗಳಿಗೆ ಕಾಲಮಿತಿಯೊಳಗಾಗಿ ಮುಕ್ತಾಯಗೊಳಿಸಲಾಗಿರುತ್ತದೆ.

ಮಾದರಿ ನೀತಿ ಸಂಹಿತೆ ಅನುಷ್ಠಾನ ಕುರಿತು: ಭಾರತ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ನಂತರ ಮಾದರಿ ನೀತಿ ಸಂಹಿತೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಈವರೆವಿಗೂ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಪ್ರಕರಣ ದಾಖಲು ಮಾಡಲಾಗಿರುವ ಹಾಗೂ ನಗದು, ಮದ್ಯ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿರುವ ವಿವರ,

ಜಿಲ್ಲೆಯಲ್ಲಿ ದಿನಾಂಕ: ೧೬.೦೩.೨೦೨೪ ರಿಂದ ದಿನಾಂಕ ೧೫.೦೪.೨೦೨೪ ರವರೆಗೆ ವಶಪಡಿಸಿಕೊಂಡಿರುವ ನಗದು, ಲಿಕ್ಕರ್, ಡ್ರಗ್ಸ್, ಉಚಿತ ಉಡುಗೊರೆಗಳ ವಿವರ,

ವಶಪಡಿಸಿಕೊಂಡಿರುವ ಪ್ರಮಾಣ ನಗzದು ರೂ. ೧,೩೨,೮೦,೫೯೨, ವಶ ಪಡಿಸಿಕೊಂಡ ಮದ್ಯ ೯ ಕೋಟಿ ೭೬ ಲಕ್ಷ ರೂಗಳದಾಗಿದೆ. ಡ್ರಗ್ಸ್ /ನಾರ್ಕೋಟಿಕ್ಸ್ ೦.೧೨೭ಗ್ರಾಂ, ಉಚಿತ ಉಡುಗರೆಯಾಗಿ ಒಟ್ಟು ೫ ಲಕ್ಷ ಮೌಲ್ಯದಾಗಿದೆ ಎಂದರು.

ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ, ಭಾರತ ಚುನಾವಣಾ ಆಯೋಗವು ನೀಡಿರುವ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿಯನ್ನು ಮತದಾನಾಧಿಕಾರಿಗಳಿಗೆ ತೋರಿಸುವುದು ಕಡ್ಡಾಯವಾಗಿದೆ. ಒಂದು ಪಕ್ಷ ಯಾವುದೇ ಕಾರಣದಿಂದ ಸದರಿ ಗುರುತಿನ ಚೀಟಿಯು ಲಭ್ಯವಿಲ್ಲದಿದ್ದಲ್ಲಿ ಪರ್ಯಾಯವಾಗಿ ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಪಾಸ್ ಪೋಟ್, ಡ್ರೈವಿಂಗ್ ಲೇಸೆನ್ಸ್,

ಈ ಕೆಳಕಂಡ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂಬ ಅಂಶವನ್ನು ಮತದಾರರ ಗಮನಕ್ಕೆ ತರಲಾಗಿದೆ. ರಾಜ್ಯ/ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು., ಸಾರ್ವಜನಿಕ ವಲಯದ ಬ್ಯಾಂಕ್ / ಕಿಸಾನ್ ಮತ್ತು ಅಂಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಆದಾಯ ತೆರಿಗೆ ಗುರುತಿನ ಚೀಟಿ, ಆರ್.ಜಿ.ಐ. ಮತ್ತು ಎನ್.ಪಿ.ಆರ್. ರವರು ನೀಡಿರುವ ಭಾವಚಿತ್ರವಿರುವ ಸ್ಮಾರ್ಟ್ ಕಾರ್ಡ್., ಎಂ.ಎನ್.ಆರ್.ಇ.ಜಿ.ಎ. ರವರು ನೀಡಿರುವ ಉದ್ಯೋಗ ಗುರುತಿನ ಚೀಟಿ., ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‌ಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ / ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು, ಎಂಪಿ/ಎಂಎಲ್‌ಎ/ಎಂಎಲ್‌ಸಿ ಗಳಿಗೆ ನೀಡಿರುವ ಗುರುತಿನ ಚೀಟಿಗಳು, ಆಧಾರ್ ಕಾರ್ಡ್ ತೋರಿಸಬಹುದಾಗಿದೆ.

ಇತ್ತೀಚೆಗೆ ನೋಂದಾಯಿತರಾದ ಯುವ ಮತದಾರರಿಗೆ ಮಾಹಿತಿ : ಭಾರತ ಚುನಾವಣಾ ಆಯೋಗದ ವಿನೂತನ ಕಾರ್ಯಕ್ರಮದನ್ವಯ ಪ್ರಥಮ ಬಾರಿಗೆ ಮತದಾನದಲ್ಲಿ ಪಾಲ್ಗೊಳ್ಳುತ್ತಿರುವ ಜಿಲ್ಲೆಯ ಒಟ್ಟು ೨೯೩೬೪ ಯುವ ಮತದಾರರಿಗೆ “ಯುವಕರು ಚುನಾವಣೆಯಲ್ಲಿ ಭಾಗವಹಿಸದರೆ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ” ಎಂಬ ಶೀರ್ಷಿಕೆಯಡಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳವರಿಂದ ಪ್ರತ್ಯೇಕ ವೈಯಕ್ತಿಕ ಪತ್ರ (ಠಿeಡಿsoಟಿಚಿಟiseಜ ಟeಣಣeಡಿs ಣo ಚಿಟಟ ಣhe ಜಿiಡಿsಣ ಣime voಣeಡಿs/ಥಿouಟಿg voಣeಡಿ), ೨) ಮತದಾರರ ಮಾರ್ಗದರ್ಶಿ (ಗಿoಣeಡಿ ಉuiಜe) ೩) ಮತದಾರರ ಮಾಹಿತಿ ಪತ್ರ (ಗಿoಣeಡಿ Iಟಿಜಿoಡಿmಚಿಣioಟಿ Sಟiಠಿ) ಗಳನ್ನು ದಿನಾಂಕ ೧೬.೦೪.೨೦೨೪ ರಿಂದ ದಿ: ೨೫.೦೪.೨೦೨೪ ರ ಒಳಗಾಗಿ ಹಂಚಿಕೆ ಮಾಡಲಾಗುವುದು.

ಶಾಂತ ರೀತಿಯಲ್ಲಿ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಮತ್ತು ಜನತೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಲು ಕೋರಿಕೆ :: ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳು ಉಚಿತ ಉಡುಗೊರೆ, ಆಮಿಷಗಳನ್ನು ತೋರುತ್ತಿರುವುದು, ನಗದು ಹಣ, ವಸ್ತುಗಳನ್ನು ಹಂಚುವುದು ಸೇರಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿರುವುದು ಕಂಡುಬಂದಲ್ಲಿ ಅದರ ವಿರುದ್ಧ ಕ್ರಮ ವಹಿಸಲು ಜಿಲ್ಲೆಯಲ್ಲಿ ೨೪x೭ ಕಂಟ್ರೋಲ್ ರೂಂ ಸ್ಥಾಪಿಸಲಾಗಿರುತ್ತದೆ. ಈ ಕೆಳಕಂಡ ದೂರವಾಣಿ ಸಂಖ್ಯೆಗಳು ಅಥವಾ ಇ-ಮೇಲ್ ಮೂಲಕ ನಮ್ಮೊಂದಿಗೆ ದೂರುಗಳನ್ನು ಹಂಚಿಕೊಳ್ಳಬಹುದಾಗಿದೆ. ದೂರುಗಳನ್ನು / ಮಾಹಿತಿಯನ್ನು ಹಂಚಿಕೊಳ್ಳಬಯಸುವ ವ್ಯಕ್ತಿಗಳ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಸಮಸ್ತ ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಂಡು ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳಲು ವಿನಂತಿಸಿದೆ. ಜಿಲ್ಲೆಯಲ್ಲಿ ಈ ಹಿಂದಿನ ಚುನಾವಣೆಗಳು ಶಾಂತ ರೀತಿಯಲ್ಲಿ ನಡೆಯಲು ರಾಜಕೀಯ ಪಕ್ಷಗಳು ಮತ್ತು ಜನತೆ ಜಿಲ್ಲಾಡಳಿತದೊಂದಿಗೆ ಸಹಕರಿಸಿರುತ್ತಾರೆ. ಅದೇ ರೀತಿ ಈ ಚುನಾವಣೆಯನ್ನು ಶಾಂತಿ ಸುವ್ಯವಸ್ಥಿತ, ಪಾರದರ್ಶಕ ನ್ಯಾಯ ಸಮ್ಮತವಾಗಿ ನಡೆಸಲು ರಾಜಕೀಯ ಪಕ್ಷಗಳ ನಾಯಕರು, ಮತದಾರರು, ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರು ಎಲ್ಲಾ ರೀತಿಯಲ್ಲಿ ಜಿಲ್ಲಾಡಳಿತಕ್ಕೆ ಸಹಕರಿಸುವಂತೆ ಕೋರುತ್ತೇವೆ ಎಂದು ಲೋಕಸಭಾ ಚುನಾವಣೆ ಬಗ್ಗೆ ಮಾಹಿತಿ ನೀಡಿದರು.

ಇದೆ ವೇಳೆ ಅಪರ ಜಿಲ್ಲಾಧಿಕಾರಿ ಶಾಂತಲಾ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಯಶಸ್ವಿಗೊಂಡ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ

Published

on

ಹಾಸನ: ನಗರದ ಪೆನ್ಷನ್ ಮೊಹಲ್ಲಾದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೋಪ್ ಫಾರ್ ಹ್ಯೂಮನಿಟಿ ವೆಲ್ಫೇರ್ ಟ್ರಸ್ಟ್ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಭಾನುವಾರ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದರಲ್ಲಿ ನೂರಾರು ಜನರು ಇದರ ಪ್ರಯೋಜನ ಪಡೆದುಕೊಂಡರು.

ಇದೆ ವೇಳೆ ನಗರಸಭೆ ಸದಸ್ಯ ಅಮೀರ್ ಜಾನ್ ಮಾತನಾಡಿ, ಮನುಷ್ಯನಿಗೆ ಬಿಪಿ, ಶುಗರ್ ಇತರೆ ಏನಿದೆ ಎಂದು ತಿಳಿಯಬೇಕಾದರೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೇ ಮಾತ್ರ ಸರಿಯಾಗಿ ತಿಳಿಯುತ್ತದೆ. ವರ್ಷದಲ್ಲಿ ಒಂದು ಇಲ್ಲವೇ ಎರಡು ಬಾರಿ ದೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಆರೋಗ್ಯ ಇದ್ದರೇ ಸಮಾಜದಲ್ಲಿ ಏನಾದರು ಸಾಧಿಸಬಹುದು ಎಂದರು.

ಸಮಾಜ ಸೇವಕ ಎಸ್.ಎಸ್. ಪಾಷಾ ಮಾತನಾಡಿ, ಒಂದು ಹಳೆ ಹಾಸನ ಎಂದರೇ ಬಸ್ ನಿಲ್ದಾಣದಿಂದ ಒಳಗೆ, ಎಪಿಎಂಸಿಯಿಂದ ಇಲ್ಲಿಗೆ ಬಹುತೇಕರು ಹಳೆ ಹಾಸನದವರು. ಈ ಭಾಗ ನೆಗ್ಲೆಟ್ ಗೆ ಒಳಗಾಗಿದೆ. ಈ ಭಾಗಕ್ಕೆ ಒಂದು ಸಿಟಿ ಬಸ್ ಸೌಕರ್ಯವಿಲ್ಲ. ಗ್ರಂಥಾಲಯವಿಲ್ಲ. ಸರಿಯಾದ ಆಸ್ಪತ್ರೆ ಕೂಡ ಇಲ್ಲ. ಇದ್ದರೂ ನಾಮಕವಸ್ತೆ ಮಾತ್ರ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದರು. ನಾನು ಕೂಡ ಇಲ್ಲೆ ಹುಟ್ಟಿ ಬೆಳೆದವರು, ಇಲ್ಲಿನ ಕಷ್ಟಗಳನ್ನು ಕಂಡಿದ್ದೇವೆ. ಇಲ್ಲಿನ ಜನರಿಗೆ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಖಾಯಿಲೆ ಬಂದ ಮೇಲೆ ಔಷಧಿ ತೆಗೆದುಕೊಳ್ಳುತ್ತೇವೆ. ಆದರೇ ಖಾಯಿಲೆ ಬರುವುದಕ್ಕೆ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತ. ಬೆಳಗಿನ ಸಮಯ ವಾಕ್ ಮಾಡಬೇಕು. ಯಾವಾಗಲೂ ವಾಹನದಲ್ಲೆ ನಾವು ಹೋಗುತಿದ್ದರೇ ನಾನಾ ಖಾಯಿಲೆಗಳು ಉದ್ಭವಿಸುತ್ತದೆ. ನಮ್ಮ ಜೀವನ ಶೈಲಿಯಲ್ಲಿ ಸಲ್ಪ ಬದಲಾವಣೆ ಮಾಡಿಕೊಂಡು ನಡೆಯುವ ಪ್ರವೃತ್ತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಡಾಕ್ಟರ್ ನಾಯೀಮ್ ಸಿದ್ದಿಕಿ ಮಾತನಾಡಿ, ಇಂತಹ ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ಅಗತ್ಯವಿದೆ. ಒಮದು ಸಾಮಾನ್ಯ ಚಿಕಿತ್ಸೆಗಾಗಿ ದೂರದ ಸ್ಥಳಗಳಿಗೆ ದುಂದು ವೆಚ್ಚ ಮಾಡಿಕೊಂಡು ಹೋಗಬೇಕಾಗಿದೆ. ಈ ಶಿಬಿರಕ್ಕೆ ನುರಿತ ವೈದ್ಯರು ಇದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಅಹಮದ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ರಕ್ತದ ಅವಶ್ಯಕತೆ ಇದ್ದಾಗ ಯಾವ ಜಾತಿ ಇರುವುದಿಲ್ಲ. ಒಟ್ಟಾರೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡುವುದು ಒಳ್ಳೆಯ ಉದ್ದೇಶ. ಇದರಲ್ಲಿ ಯುಆವ ಸಂಬಂಧ ಇರುವುದಿಲ್ಲ. ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಿದರೇ ನಮ್ಮ ದೇಹಕ್ಕೆ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಸುಧಾರಿಸುತ್ತದೆ. ದೈಹಿಕವಾಗಿ ಸದೃಢರಾಗಿರುತ್ತೇವೆ ಎಂದರು. ಈ ಉದ್ದೇಶದಲ್ಲಿ ಇಂತಹ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಮೂಳೆ ತಜ್ಞರು ನರರೋಗ ತಜ್ಞರು ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು, ಹೃದ್ರೋಗ ತಜ್ಞರು ಹಾಗೂ ಉಚಿತ ಕನ್ನಡಕ ಸಹಿತವಾಗಿ ಈ ಮೇಲ್ಕಂಡ ಖಾಯಿಲೆಗಳ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೋಪ್ ಫಾರ್ ಹ್ಯೂಮನಿಟಿ ಅಧ್ಯಕ್ಷರಾದಂತಹ ಮುದಸಿರ್, ಹಫೀಜ್ ಹಿದಾಯ್ತುಲ್ಲ ಖಾನ್, ಇಂಡಿಯಾನಾ ಆಸ್ಪತ್ರೆಯ ಡಾಕ್ಟರ್ ಆಫ್ರಿಕಾ ತಾಜ್, ಇಂಡಿಯನ್ ಆಸ್ಪತ್ರೆ, ಹೆಚ್.ಜಿ. ಭರತ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಚೇರ್ಮನ್, ಜಬಿ ಉಲ್ಲಬೇಗ್, ಕಾರ್ಯದರ್ಶಿ ಡಾಕ್ಟರ್ ಕೃತಿ, ನಿ ಡಾಕ್ಟರ್ ಮಹೇಂದ್ರರವರು, ಡಾಕ್ಟರ್ ಶಶಂಕ್, ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಪವನ್ ರಾಜ್ ರವರು ರಾಕೇಶ್ ನೇತ್ರಾಲಯ ಇತರರು ಉಪಸ್ಥಿತರಿದ್ದರು.

Continue Reading

Hassan

ಅಡುಗೆ ಸಿಬ್ಬಂದಿ ಗೆ ಒಂದು ದಿನದ ತರಬೇತಿ ಕಾರ್ಯಾಗಾರ

Published

on

ವರದಿ:- ರಾಜೇಂದ್ರ ಸುಹಾಸ್

ಅರಕಲಗೂಡು:-ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಎ ಮಂಜು ನವರು ಭಾಗವಹಿಸಿದರು. ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿನಿತ್ಯ ಮಕ್ಕಳಿಗೆ ಶುಚಿಯಾದ ರುಚಿಯಾದ ಆಹಾರ ಮಾಡಿಕೊಡುವಂತೆ

ಅಡುಗೆ ಸಿಬ್ಬಂದಿಯರಲ್ಲಿ ಮನವಿ ಮಾಡಿದರು ಹಾಗೂ ಅರವತ್ತು ವರ್ಷ ತುಂಬಿದ ಅಡುಗೆ ಸಿಬ್ಬಂದಿಯವರಿಗೆ ಸನ್ಮಾನಿಸಿ ತಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ಅಭಿನಂದಿಸಿದರು. ಹಾಗೂ ಅಡುಗೆ ಸಹಾಯಕರ ಮಕ್ಕಳು SSLC ಹಾಗೂ PUC ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು..

Continue Reading

Hassan

ಜೆ. ಇ . ಎಸ್ ಕಲೋತ್ಸವ 2024-2025

Published

on

ವರದಿ:-ರಾಜೇಂದ್ರ ಸುಹಾಸ್

ಅರಕಲಗೂಡು: ಪಟ್ಟಣದ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರಾದ ಎ. ಮಂಜು ರವರು ಉದ್ಘಾಟಿಸಿದರು ನಂತರ ಮಾತನಾಡಿ ದೇಶದ ಬದಲಾವಣೆ ಹಾಗೂ ಸಮಾಜದ ಬದಲಾವಣೆಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಆದ್ದರಿಂದ ಎಲ್ಲಾ ಮಕ್ಕಳು, ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು..


ಕಾರ್ಯಕ್ರಮದಲ್ಲಿ ಬಿ.ಇ.ಓ. ಕೆಪಿ. ನಾರಾಯಣ. ಹೆಚ್. ಟಿ ಮಂಜುನಾಥ್. ಎ.ಎಸ್ ಹಿರಣ್ಣಯ್ಯ. ಎ. ಸಿ ರಮೇಶ್ ಚಿಕ್ಕೊನ್ನೆಗೌಡ್ರು. ಕೆ.ಸಿ ಲೋಕೇಶ್. ಎ.ಎನ್ ಪುಟ್ಟಸ್ವಾಮಿ. ಎ. ಜಿ ಸುಬ್ರಹ್ಮಣ್ಯ ಭಾಗವಹಿಸಿದ್ದರು

Continue Reading

Trending

error: Content is protected !!